ಸದಸ್ಯ:RAJ KUMAR BIDAR/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಾಯೇಜರ್ ಗಗನನೌಕೆಗಳ ಪಯಣ:

1977ರಲ್ಲಿ ಅಮೇರಿಕಾದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ನಾಸಾ) 'ವಾಯೇಜರ್ 1' ಮತ್ತು ಅದರ ಅವಳಿ ಗಗನನೌಕೆ 'ವಾಯೇಜರ್ 2' ಹೆಸರಿನ ಎರಡು ಗಗನನೌಕೆಗಳನ್ನು 16 ದಿನಗಳ ಅಂತರದಲ್ಲಿ ಗಗನಕ್ಕೆ ಹಾರಿಬಿಟ್ಟಿತು. ಇವೆರಡೂ ಇನ್ನೂ ತಮ್ಮ ಪಯಣವನ್ನು ಮುಂದುವರೆಸುತ್ತಾ ಸೌರವ್ಯೂಹದಾಚೆಗಿನ ಮಾಹಿತಿಯನ್ನು ನಮಗೆ ರವಾನಿಸುತ್ತಲೇ ಇವೆ. ಇವೆರಡೂ ಗಗನನೌಕೆಗಳು ಮೊದಲಿಗೆ ಗುರು ಮತ್ತು ಶನಿ ಗ್ರಹವನ್ನು ಹಾದು ಹೋಗಿ ನಂತರದಲ್ಲಿ ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳನ್ನು ಹಾದು ಮುಂದೆ ಹೋಗಿವೆ. ಇಲ್ಲಿಂದಾಚೆಗೆ ಅಂತರನಕ್ಷತ್ರ ಪ್ರದೇಶವಿದೆ. ಅಂತರನಕ್ಷತ್ರ ಪ್ರದೇಶದಲ್ಲಿರುವ ಒತ್ತಡದಿಂದಾಗಿ ಸೂರ್ಯನ ಸೌರಮಾರುತಗಳ ವೇಗ ಇಲ್ಲಿ ಕಡಿಮೆಯಾಗುತ್ತದೆ. ಇದನ್ನು ಹೀಲೀಯೋಪಾಸ್ ಪ್ರದೇಶ ಎಂದು ಕರೆಯುತ್ತಾರೆ. ಸೂರ್ಯನಿಂದ ನಮ್ಮ ಭೂಮಿ ಸುಮಾರು 15 ಕೋಟಿ ಕಿಲೋ ಮೀಟರ್ ದೂರದಲ್ಲಿದೆ. ಇದೀಗ ಇವೆರಡೂ ಗಗನನೌಕೆಗಳು ಸೂರ್ಯನಿಂದ 1900 ಕೋಟಿ ಕಿಲೋ ಮೀಟರ್ ದೂರದಲ್ಲಿ ಪಯಣಿಸುತ್ತಿವೆ. ಅಷ್ಟು ದೂರದಲ್ಲಿರುವ ಗಗನನೌಕೆಗಳಿಂದ ನಮ್ಮ ಭೂಮಿಗೆ ಸಂದೇಶ ರವಾನಿಸಲು ಅವುಗಳಿಂದ ಹೊರಡುವ ಸಿಗ್ನಲ್ಗಳು ಬೆಳಕಿನ ವೇಗದಲ್ಲಿ ಚಲಿಸಿ ಭೂಮಿಯನ್ನು 17 ಘಂಟೆಗಳಲ್ಲಿ ತಲುಪುತ್ತವೆ! ಭೂಮಿಯಿಂದ ನಾವು ಎಷ್ಟು ದೂರ ಆಗಸದಾಚೆಗೆ ಪಯಣಿಸಬಹುದು? ಭೂಮಿಯಿಂದ ಗಗನ ನೌಕೆಗಳನ್ನು ನಾವು ಮಂಗಳ ಗ್ರಹಕ್ಕೂ ಕಳುಹಿಸಿ ಅಲ್ಲಿಯ ಚಿತ್ರಗಳನ್ನೆಲ್ಲ ನೋಡುತ್ತಿದ್ದೇವೆ. ಇನ್ನೂ ಮುಂದಕ್ಕೆ ಹೋಗಿ ನಮ್ಮ ಸೌರವ್ಯೂಹವನ್ನು ತೊರೆದು ನಾವು ಆಚೆಗೆ ಪಯಣಿಸಬಹುದೇ? ಸೌರಮಾರುತಗಳ ಪ್ರಭಾವಳಿ ಎಲ್ಲಿಯವರೆಗಿದೆ? ನಮ್ಮ ಸೌರವ್ಯೂಹದ ಆಚೆಗೆ, ನಮ್ಮ ಗೆಲಾಕ್ಸಿಯೊಳಗಿನ ಚಿತ್ರಣ ಹೇಗಿರಬಹುದು? ಇಂತಹ ಇನ್ನೂ ಹಲವು ಪ್ರಶ್ನೆಗಳಿಗೆ ಉತ್ತರ ನೀಡುವ ನಿಟ್ಟಿನಲ್ಲಿ ಅಮೇರಿಕಾದ ಗಗನ ನೌಕೆಗಳಾದ 'ವಾಯೇಜರ್ 1 & ವಾಯೇಜರ್ 2' ಸಹಾಯಕವಾಗುತ್ತಿವೆ. ಆರಂಭದಲ್ಲಿ ಗುರು ಮತ್ತು ಶನಿ ಗ್ರಹಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಉಡಾವಣೆಯಾದ ಈ ನೌಕೆಗಳು ಇದೀಗ ಹಿಂದೆಂದೂ ಕ್ರಮಿಸಿರದ ಅನತಿ ದೂರದ ಗಗನಪ್ರದೇಶಗಳನ್ನು ಶೋಧಿಸುತ್ತಾ ಮಾಹಿತಿ ರವಾನಿಸುತ್ತಿವೆ. ಹೌದು! ಕಳೆದ ವಾರವಷ್ಟೇ ಅವು ಅಂತರನಕ್ಷತ್ರ ಪ್ರದೇಶವನ್ನು ತಲುಪಿವೆ. ನಮ್ಮ ಸೌರವ್ಯೂಹ ಮತ್ತು ನಕ್ಷತ್ರ ಸಮೂಹ: ನಮ್ಮ ಸೌರವ್ಯೂಹವು 'ಕ್ಷೀರಪಥ' ಎಂದು ಕರೆಯಲಾಗುವ ಗೆಲಾಕ್ಸಿ (ನಕ್ಷತ್ರ ಸಮೂಹ) ಯಲ್ಲಿದೆ. ಈ ಗೆಲಾಕ್ಸಿಯಲ್ಲಿ ನಮ್ಮ ಸೂರ್ಯನ ರೀತಿಯ ಸುಮಾರು 10,000 ದಿಂದ 40,000 ಗಳಷ್ಟು ನಕ್ಷತ್ರಗಳಿವೆ ಎಂಬ ಅಂದಾಜಿದೆ. ಈ ನಕ್ಷತ್ರಗಳಿಗೆಲ್ಲ ನಮ್ಮ ಸೌರವ್ಯೂಹದ ತರಹ ಹಲವಾರು ಗ್ರಹಗಳಿವೆ. ನಮ್ಮ ವಿಶ್ವ ಅಥವಾ ಬ್ರಹ್ಮಾಂಡದಲ್ಲಿ ಎಷ್ಟು ನಕ್ಷತ್ರ ಸಮೂಹಗಳಿವೆ? ವಿಶ್ವ ಎಷ್ಟು ವಿಸ್ತಾರವಿದೆ? ಎಂದು ಹೇಳಲಾಗದು. ನಮ್ಮ ನಕ್ಷತ್ರವಾದ ಸೂರ್ಯ ಮತ್ತು ಸೂರ್ಯನಿಗೆ ಹತ್ತಿರುವಿರುವ ಇತರ ನಕ್ಷತ್ರಗಳ ನಡುವಿನ ಜಾಗವನ್ನು 'ಅಂತರನಕ್ಷತ್ರ ಪ್ರದೇಶ' ಎನ್ನುತ್ತಾರೆ. ಈ ಭಾಗ ಪ್ರಾಸ್ಮಾ ಮತ್ತು ಅಯಾನೀಕೃತ ಅನಿಲಗಳಿಂದ ಕೂಡಿದ್ದು, ಇವುಗಳನ್ನು ದೈತ್ಯ ನಕ್ಷತ್ರಗಳು ಮಿಲಿಯಾಂತರ ವರ್ಷಗಳ ಹಿಂದೆ ಇಲ್ಲಿಗೆ ತೂರಿವೆ, ಅಥವಾ ಮಿಲಿಯಾಂತರ ವರ್ಷಗಳ ಹಿಂದೆ ನಕ್ಷತ್ರಗಳ ಸಾವಿನಿಂದ ಇವು ಅಂತರನಕ್ಷತ್ರದಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿವೆ ಎನ್ನಲಾಗಿದೆ. ನಮ್ಮ ಸೌರವ್ಯೂಹ ಅಂದರೆ ಸೂರ್ಯ ಮತ್ತು ಅದರ ಸುತ್ತಲಿನ ಎಂಟು ಗ್ರಹಗಳವರೆಗೆ ಮಾತ್ರ ಅಂದುಕೊಂಡರೂ ಇದರಾಚೆಗಿರುವ ಊಟರ್್ ಮೋಡದವರೆಗೂ ಸೂರ್ಯನ ಗುರುತ್ವವೇ ಪ್ರಭಾವಶಾಲಿ. ಊಟರ್್ ಮೋಡದಾಚೆಗಷ್ಟೆ ಸೂರ್ಯನ ಗುರುತ್ವ ಕ್ಷೀಣಗೊಂಡು ಇತರೆ ನಕ್ಷತ್ರಗಳ ಗುರುತ್ವ ಪ್ರಭಾವಶಾಲಿಯಾಗುತ್ತದೆ. ಊಟರ್್ ಮೋಡ ಅತಿ ವಿಸ್ತಾರ ಪ್ರದೇಶವಾಗಿದ್ದು, ಸೂರ್ಯನಿಂದ 15,000 ಕೋಟಿ ಕಿ.ಮೀ ದೂರದಲ್ಲಿ ಆರಂಭವಾದರೆ ಸುಮಾರು 15 ಲಕ್ಷ ಕೋಟಿ ಕಿ.ಮೀ ವರೆಗೂ ಚಾಚಿದೆ.