ಸದಸ್ಯ:Paldhaneramya/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೀಮೆ ಹುಣಸೆ ಮರದ ವೈಜ್ಞಾನಿಕ ಹೆಸರು ಇಂಗಾಡೂಲ್ಸ್‍. ಇದನ್ನು ದೊರ ಹುಣಸೆ/ಚಕ್ಕುಲಿ ಮರ/ಇಲಾಚಿ ಕಾಯಿ/ಇಲಾಚ್-ಹುಂಚಿ ಎಂದು ಕರೆಯುತ್ತಾರೆ. ಇಥೆಸೆಲೋಬಿಯಮ್ ಡುಲ್ಸೆ ಎಂಬುದು ಬಟಾಣಿ ಕುಟುಂಬದ ಒಂದು ಹೂಬಿಡುವ ಸಸ್ಯವಾಗಿದೆ. ಇದನ್ನು ಹವಾಯಿಯಲ್ಲಿ ಆಕ್ರಮಣಕಾರಿ ಜಾತಿ ಎಂದು ಪರಿಗಣಿಸಲಾಗಿದೆ.[೧]

ವೈಜ್ಞಾನಿಕ ವರ್ಗೀಕರಣ[ಬದಲಾಯಿಸಿ]

ವೈಜ್ಞಾನಿಕ ಹೆಸರು:-ಇಂಗಾಡೋಸ್

ಕುಟುಂಬ  :-ಲೆಗೋಮಿನೋಸಾಯಿ

ಉಪಕುಟುಂಬ  :- ಮಿಮೋಸಿಯ

ಇತರ ಭಾಷೆಗಳಲ್ಲಿ ಇರುವ ಹೆಸರು[ಬದಲಾಯಿಸಿ]

  • 'ತಮಿಳು -ಕೊಡುಕಪುಳಿ ಅಥವಾ ಕೊಡೈಕೈ
  • ಇಂಗ್ಲಿಷ್ - ಮಂಕಿಪಾಡ್
  • ಮಲಯಾಳಂ - ಕಾಯಿಕೊರಕಾಪುಳಿ ಅಥವಾ ಕೊಟ್ಟಾಂಪುಳಿ
  • ಗುಜರಾತಿ -"ಬಖೈ ಅಂಬ್ಲಿ"
  • ಹಿಂದಿ -ಸಿಂಗ್ರಿ

ಸಸ್ಯ ವರ್ಣನೆ[ಬದಲಾಯಿಸಿ]

ಇದೊಂದು ಸಾಮಾನ್ಯ ಪ್ರಮಾಣದ ನಿತ್ಯಹರಿದ್ವರ್ಣದ ಮರವಾಗಿದೆ. ಇದರಲ್ಲಿ ವೃಂತಪರ್ಣದ ಮುಳ್ಳುಗಳು ಜೋಡಿಯಾಗಿರುತ್ತವೆ.ಇದು 10 ರಿಂದ 15 ಮೀ (33 ರಿಂದ 49 ಅಡಿ) ಎತ್ತರವನ್ನು ತಲುಪುವ ಮರ. ಇದರ ಕಾಂಡವು ಸ್ಪಿನ್ ಆಗಿರುತ್ತದೆ ಮತ್ತು ಅದರ ಎಲೆಗಳು ದ್ವಿಗುಣವಾಗಿರುತ್ತವೆ.ಪ್ರತಿಯೊಂದು ಪಿನ್ನಾವು ಒಂದೇ ಅಂಡಾಕಾರದ-ಉದ್ದದ ಎಲೆಗಳನ್ನೂ ಹೊಂದಿದೆ, ಅದು ಸುಮಾರು 2 ರಿಂದ 4 ಸೆಂ.ಮೀ (0.79 ರಿಂದ 1.57 ಇಂಚು) ಉದ್ದವಾಗಿರುತ್ತದೆ ಮೆಕ್ಸಿಕೋದಿಂದ ಭಾರತರಕ್ಕೆ ಬಂದ ಈ ಮರ ಈಗ ಸ್ವಾಭಾವಿಕವಾಗಿ ಬೆಳೆದು ಬಂದಿದೆ. ಇದರ ಹೂ ಬಿಳಿಯ ಬಣ್ಣದಾಗಿದ್ದು ಫೆಬ್ರವರಿ ಮಾರ್ಚ್‍ನಲ್ಲಿ ಕಂಡು ಬರುತ್ತದೆ. ಇದರ ಕಾಯಿ ಸಾಮಾನ್ಯವಾಗಿ ಮೇ ಜೂನ್‍ನಲ್ಲಿ ಮಾಗುತ್ತದೆ. ಈ ಹಣ್ಣುಗಳು ಎಂಟರಿಂದ ಹತ್ತು ಸೆ.ಮೀ ಉದ್ದವಿದ್ದು ತಿರುಚಿಕೊಂಡಿದ್ದ ಹೊಳಪಿನ ನುಣುಪಾದ ಕರಿಯ ಬೀಜಗಳನ್ನು ಹೊಂದಿರುತ್ತದೆ. ಎಳೆ ಹಸಿರು ಕೆಂಪು ಗೆರೆಗಳಿಂದ ಕೂಡಿದ ಕಾಯಿಯ ಸಿಪ್ಪೆ ಅರೆ ಬಿರಿದು ಬೀಜವನ್ನು ಆವರಿಸಿಕೊಂಡಿರುವ ಬಿಳಿ ಕೆನೆ ಬಣ್ಣದ ಸ್ಪಂಜಿನಂತಹ ಖಾದ್ಯ ಬೀಜ ಪತ್ರೆಗಳಿಂದ ಕೂಡಿ ನೋಡಲು ಆಕರ್ಷಣಿಯವಾಗಿರುತ್ತದೆ. ಇದು ಚುರುಕು ಬೆಳೆ ಹೊಂದಿದ್ದು ಚಿಗುರು ಗುಣವೂ ಚೆನ್ನಾಗಿದ್ದು ಎರಡನ್ನು ಸಹಿಸುವ ಮರವಾಗಿದೆ.[೨]


ಉಪಯೋಗಗಳು[ಬದಲಾಯಿಸಿ]

ಆಹಾರವಾಗಿ[ಬದಲಾಯಿಸಿ]

ಬೀಜಕೋಶಗಳು ಒಂದು ಸಿಹಿ ಮತ್ತು ಹುಳಿ ತಿರುಳನ್ನು ಒಳಗೊಂಡಿರುತ್ತವೆ. ಬೀಜದ ಸುತ್ತಲಿನ ಬೀಜಪತ್ರೆ ಮಕ್ಕಳಿಗೆ ಇಷ್ಟ. ಬೀಜದಿಂದ ಉಪಯುಕ್ತ ಎಣ್ಣೆಯೂ ತಯಾರಿಸಬಹುದು.

ಔಷಧವಾಗಿ[ಬದಲಾಯಿಸಿ]

ತೊಗಟೆ ಮತ್ತು ತಿರುಳುಗಳನ್ನು ಸ್ಥಳೀಯ ಜನರು ಗಮ್ ಕಾಯಿಲೆಗಳು, ಹಲ್ಲುನೋವು, ಮತ್ತು ಸಾಮಾನ್ಯವಾಗಿ ರಕ್ತಸ್ರಾವಗಳ ವಿರುದ್ಧ ತಿರುಳು ಮತ್ತು ತೊಗಟೆಯನ್ನು ಬಳಸುತ್ತಾರೆ.ದೀರ್ಘಕಾಲದ ಅತಿಸಾರ, ಮತ್ತು ಕ್ಷಯರೋಗಗಳ ವಿರುದ್ಧವೂ ತೊಗಟೆ ಸಾರವನ್ನು ಬಳಸಲಾಗುತ್ತದೆ.

ಇತರೆ[ಬದಲಾಯಿಸಿ]

ಕರ್ನಾಟಕದಲ್ಲಿ ಇದನ್ನು ಬೇಲಿಗಾಗಿ ಹಾಗೂ ಸೌದೆಗಾಗಿ ಉಪಯೋಗಿಸಲಾಗುತ್ತದೆ. ಸಣ್ಣ ಪುಟ್ಟ ಕೆಲಸಗಳಿಗೆ ಇದನ್ನು ಬಳಸಲಾಗುತ್ತದೆ

ಉಲ್ಲೇಖ[ಬದಲಾಯಿಸಿ]

<reference>

  1. ವನಸಿರಿ, ಅಜ್ಜಂಪುರ ಕೃಷ್ಣಾಸ್ವಾಮಿ. ಮುದ್ರಣ ೨೦೧೪ ,ನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್
  2. https://npgsweb.ars-grin.gov/gringlobal/taxonomydetail.aspx?id=28697