ಸದಸ್ಯ:Niveditha Bhagyanathan/ನನ್ನ ಪ್ರಯೋಗಪುಟ2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲೆಮನ್ ಗ್ರಾಸ್(Lemongrass) ಎಂದು ಕರೆಯಲ್ಪಡುವ ಮಜ್ಜಿಗೆಹುಲ್ಲು ಪೊಸೇಯ್[೧] ಅಥವಾ ಗ್ರ್ಯಾಮೈನೆ ಹುಲ್ಲುಗಳ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ಹೂಬಿಡುವ ಸಸ್ಯಗಳ ಪ್ರಭೇದಕ್ಕೆ ಸೇರಿದ ಈ ಸಸ್ಯವು ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ದ್ವೀಪ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಮಜ್ಜಿಗೆಹುಲ್ಲು ಉಷ್ಣವಲಯದಲ್ಲದೇ ಸಮಶೀತೋಷ್ಣ ಪ್ರದೇಶಗಳಲ್ಲೂ ಬೆಳೆಯುತ್ತದೆ. ಸಸ್ಯವು ಸುಗಂಧ ತೈಲವನ್ನು ಹೊಂದಿರುವುದರಿಂದ ನಿಂಬೆಹಣ್ಣಿನ ವಾಸನೆಯನ್ನು ಹೊರಹೊಮ್ಮಿಸುತ್ತದೆ. ಈ ಸಲುವಾಗಿ ಇದನ್ನು 'ನಿಂಬೆ ಹುಲ್ಲು' ಅಥವಾ 'ಎಣ್ಣೆ ಹುಲ್ಲು' ಎಂದು ಕರೆಯಲಾಗುತ್ತದೆ. ಸಿಮ್ಬೋಪೋಗನ್ ಸಿಟ್ರಾಟಸ್(Cymbopogan Citratus) ಎಂಬುದು ಇದರ ವೈಜ್ಞಾನಿಕ ಹೆಸರು. ಇದನ್ನು ಆಂಡ್ರೋಪೋಗನ್ ಸಿಟ್ರಾಟಸ್(Andropogon citratus) ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಮಜ್ಜಿಗೆಹುಲ್ಲನ್ನು ಪಾಕಶಾಲೆಯ ಪದಾರ್ಥವಾಗಿ ಹಾಗೂ ಔಷಧೀಯ ಸಸ್ಯವಾಗಿ ಹೆಚ್ಚಾಗಿ ಬಳಸಲಾಗುತ್ತದೆ.

ಸಸ್ಯ ವರ್ಣನೆ[ಬದಲಾಯಿಸಿ]

ಮಜ್ಜಿಗೆಹುಲ್ಲು ಸುಮಾರು 2ಮೀ ಉದ್ದ ಬೆಳೆಯುತ್ತದೆ. ಈ ಸಸ್ಯಗಳು ಮೆಜೆಂಟಾ ಬಣ್ಣದ ಕಾಂಡವನ್ನು ಹೊಂದಿರುತ್ತವೆ. ಈ ಸಸ್ಯವು ಹುಲ್ಲುಗಳ ಪ್ರಬೇಧಕ್ಕೆ ಸೇರಿರುವುದರಿಂದ ಹರಡಿಕೊಂಡಂತೆ ಬೆಳೆಯುತ್ತದೆ. ಸಿಮ್ಬೋಪೋಗನ್ ಸಿಟ್ರಾಟಸ್ ಅನ್ನು ಸಾಮಾನ್ಯವಾಗಿ ಹೆಚ್ಚಾಗಿ ಕಾಂಡ ರೂಪದಲ್ಲಿ ಮಾರಾಟ ಮಾಡಲಾಗುತ್ತದೆ.

ಸಾಗುವಳಿಯ ಪ್ರದೇಶಗಳು[ಬದಲಾಯಿಸಿ]

ಮಜ್ಜಿಗೆಹುಲ್ಲನ್ನು ಸೆಯ್ಲಾನ್, ಬರ್ಮಾ, ಮಡಗಾಸ್ಕರ್, ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಅಮೇರಿಕಾದ ಅನೇಕ ಪ್ರದೇಶಗಳಲ್ಲಿ ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತದೆ. ಭಾರತದಲ್ಲೂ ಪಂಜಾಬ್, ಮಹಾರಾಷ್ಟ್ರ, ಬರೋಡಾ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಇದರ ಬೇಸಾಯವನ್ನು ಕಾಣಬಹುದು. ಕನಾ‍ಟಕದ ಮೈಸೂರು ಭಾಗಗಳಲ್ಲೂ ಇದನ್ನು ಹೇರಳವಾಗಿ ಬೆಳೆಯಲಾಗುತ್ತದೆ.


ಇತರ ಭಾಷೆಗಳಲ್ಲಿನ ಹೆಸರು[ಬದಲಾಯಿಸಿ]

ಸಂಸ್ಕೃತ: ಅಭಿಚ್ಛತ್ರಕ

ಹಿಂದಿ: ಅಘ್ಯಾಗಸ್

ಮಲೆಯಾಳಂ: ಸೆನ್ನನಮ್-ಪುಲ್ಲು

ತಮಿಳು: ಚಂಪರಪಲ್

ತೆಲುಗು: ಚಿಪ್ಪ ಗಡ್ಡಿ

ಮರಾಠಿ: ಘಮ್ಜನ್

ಉರ್ದು: ಇಝರ್ ಮಕ್ಕಿ

ಪರ್ಷಿಯನ್: ಸೆಕಶ್ಮೀರಿ

ಉಪಯೋಗಗಳು[ಬದಲಾಯಿಸಿ]

* ಔಷದೀಯ ಉಪಯೋಗಗಳು[ಬದಲಾಯಿಸಿ]

  1. ಮಜ್ಜಿಗೆಹುಲ್ಲು ಆರ್ಯುವೇದ, ಯುನಾನಿ, ಸಿದ್ಧ, ಜನಪದ ಹಾಗೂ ಚೈನೀಸ್ ಪದ್ಧತಿಗಳಲ್ಲಿ ಔಷದೀಯ ಸಸ್ಯವಾಗಿ ಬಳಸುತ್ತಾರೆ.
  2. ಸೂಕ್ಷ್ಮ ಮಾದಳ ಸುವಾಸನೆ ಹೊಂದಿರುವ ಈ ಸಸ್ಯವನ್ನು ಒಣಗಿಸಿ, ಪುಡಿ ಮಾಡಿ ಚೂರ್ಣದ ರೂಪದಲ್ಲೂ ಬಳಸಬಹುದು.
  3. ಮಜ್ಜಿಗೆಹುಲ್ಲಿನಿಂದ ತೈಲ ತಯಾರಿಸಬಹುದಾಗಿದೆ. ಲೆಮನ್‍ ಗ್ರಾಸ್‍ ಆಯಿಲ್(Lemon Grass Oil)ಎಂದು ಇದು ಪ್ರಚುರವಾಗಿದೆ.[೨]. ಈ ತೈಲವನ್ನು ಅನೇಕ ವಷಧಿಗಳನ್ನು ತಯಾರಿಸುವಲ್ಲಿ ಮೂಲಧಾತುವಾಗಿ ಉಪಯೋಗಿಸುತ್ತಾರೆ.
  4. ಸಿಂಬೋಪೋಗನ್ ಸಿಟ್ರಾಟಸ್ ಎಲೆಗಳನ್ನು ಸಾಂಪ್ರದಾಯಿಕ ಔಷಧಿಗಳಲ್ಲಿ ಮೂಲಿಕೆಯಾಗಿ ಬಳಸಲಾಗುತ್ತದೆ.
  5. ಇವುಗಳಲ್ಲಿ ಚಹಾಗಳಲ್ಲೂ ಉಪಯೋಗಿಸುತ್ತಾರೆ. ಈ ಚಹಾ ಕುಡಿಯುವುದರಿಂದ ಕೆಮ್ಮು, ಕಫಾ ಶೀಷ್ರವಾಗಿ ನಿವಾರಣೆಯಾಗುತ್ತದೆ.
  6. ಬ್ರೆಜಿಲ್ ಜಾನಪದ ಔಷಧಿಗಳಲ್ಲಿ ಇದರ ಬಳಕೆ ಹೆಚ್ಚಿದೆ.
  7. ಮಜ್ಜಿಗೆಹುಲ್ಲು ಖಿನ್ನತೆ ಹಾಗೂ ನೋವು ನಿವಾರಿಸುವಲ್ಲಿ ಸಹಕಾರಿ. ಇದು ಆಂಟಿಸೆಪ್ಟಿಕ್ ಹಾಗೂ ಆಂಟಿಫಂಗಲ್ ಗುಣವನ್ನು ಹೊಂದಿರುತ್ತದೆ.
  8. ಇದರ ತೈಲವನ್ನು ನಿಯಮಿತವಾಗಿ ಬಳಸುವುದರಿಂದ ರಕ್ತದೊತ್ತಡ ಹತೋಟಿಗೆ ಬರುತ್ತದೆ.
  9. ಮಜ್ಜಿಗೆಹುಲ್ಲಿನಿಂದ ಮಿಶ್ರಣವನ್ನು ಎಚ್.ಐ.ವಿ/ಏಡ್ಸ್ ರೋಗಿಗಳಲ್ಲಿ ಬಾಯಿ ನೋವಿನ ಚಿಕಿತ್ಸೆಯಲ್ಲಿ ಅಗ್ಗದ ವೆಚ್ಚದಲ್ಲಿ ಬಳಸಲಾಗುತ್ತದೆ.

* ಪಾಕಶಾಲೆಯ ಉಪಯೋಗಗಳು[ಬದಲಾಯಿಸಿ]

  1. ವಿಶಿಷ್ಟ ಸುಗಂಧದ ಗುಣ ಹೊಂದಿರುವ ಇದನ್ನು ಟೀ, ಸೂಪ್ ಹಾಗೂ ಹೆಚ್ಚಾಗಿ ಮಾಂಸಾಹಾರಿ ಅಡುಗೆಗಳಲ್ಲಿ ಹೆಚ್ಚಾಗಿ ಉಪಯೋಗಿಸಲಾಗುತ್ತಿದೆ.
  2. ಆಹಾರ ಹಾಳಾಗುವುದನ್ನು ತಡೆಯಲು ಮಜ್ಜಿಗೆಹುಲ್ಲಿನ ತೈಲ ಸಹಕಾರಿ.
  3. ಸಿಂಬೋಪೋಗ್ ಸಿಟ್ರಾಟಸ್ ಫಿಲಿಫೈನ್ಸ್ ಹಾಗೂ ಇಂಡೋನೇಶಿಯಾಗಳಲ್ಲಿ ಹೇರಳವಾಗಿದ್ದು ಟ್ಯಾಂಗಾಡ್ ಅಥವಾ ಸೆರೆ ಎಂದು ಕರೆಯಲಾಗುತ್ತದೆ. ಇದರ ಪರಿಮಳಯುಕ್ತ ಎಲೆಗಳನ್ನು ವಿಶೇಷವಾಗಿ ಮಾಂಸಾಹಾರ ಅಡುಗೆಗೆಳಲ್ಲಿ ಬಳಸುತ್ತಾರೆ.

* ವಾಣಿಜ್ಯ ಉಪಯೋಗಗಳು[ಬದಲಾಯಿಸಿ]

  1. ಸಾಬೂನು ತಯಾರಿಕೆಯಲ್ಲಿ ಮಜ್ಜಿಗೆಹುಲ್ಲಿನ ತೈಲವನ್ನು ಮುಖ್ಯ ಪದಾರ್ಥವಾಗಿ ಉಪಯೋಗಿಸುತ್ತಾರೆ.
  2. ಅತ್ತರು ತಯಾರಿಸುವಲ್ಲಿ ಸಿಂಬೋಪೋಗನ್ ಸಿಟ್ರಾಟಸ್ ತೈಲ ಉಪಯುಕ್ತ.
  3. ಪುರಾತನ ತಾಳೆಗರಿಯ ಕೃತಿಗಳು ಹಾಗೂ ಲಿಖಿತ ಶಾಸನಗಳು ಹಾಳಾಗದಂತೆ ರಕ್ಷಿಸಲು ಈ ತೈಲದ ಬಳಕೆಯಾಗುತ್ತದೆ.
  4. ಲೋಷನ್, ಕ್ರೀಮ್ ಹಾಗೂ ಮುಖದ ಶುದ್ದೀಕರಣದಂತಹ ತ್ವಚೆ ಉತ್ಪನ್ನಗಳ ಉತ್ಪಾದನೆಯಲ್ಲಿ ಇದನ್ನು ಬಳಸುತ್ತಾರೆ.
  5. ಹೈಡ್ರೋಸ್ಡಮ್ ಶುದ್ದೀಕರಣ ಹಾಗೂ ಘನೀಕರಣ ಪ್ರಕ್ರಿಯೆಗಳಲ್ಲಿ ಇದರ ತೈಲವನ್ನು ನೀರಿನಿಂದ ಬೇರ್ಪಡಿಸಲು ಉಪಯೋಗಿಸುತ್ತಾರೆ.

* ಕೀಟದ ಮೇಲೆ ಪರಿಣಾಮ[ಬದಲಾಯಿಸಿ]

  1. ಮಜ್ಜಿಗೆಹುಲ್ಲಿನ ತೈಲ ಕೀಟನಾಶಕ ಗುಣ ಹೊಂದಿರುವುದರಿಂದ ಬೆಳೆಗಳ ನಡುವೆ ಇದನ್ನು ಹಾಕಲಾಗುತ್ತದೆ. ಇದರಿಂದ ಕೀಟಭಾದೆ ತಪ್ಪುತ್ತದೆ.
  2. ಸೊಳ್ಳೆ ಮುಂತಾದ ಕೀಟಗಳ ಭಾದೆ ತಡೆಗಟ್ಟಲು ಮಜ್ಜಿಗೆಹುಲ್ಲಿನ ತೈಲ ಸಹಕಾರಿ.
  3. ಜೇನುನೊಣಗಳನ್ನು ಆಕರ್ಷಿಸಲೂ ಸಹ ಈ ತೈಲವನ್ನು ಬಳಕೆ ಮಾಡುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. http://envis.frlht.org/
  2. ಹಸುರು ಹೊನ್ನು, ಬಿ. ಜಿ. ಎಲ್ ಸ್ವಾಮಿ, ಕಾವ್ಯಾಲಯ ಪ್ರಕಾಶನ, ಜೆ. ಪಿ. ನಗರ, ಬೆಂಗಳೂರು,