ಸದಸ್ಯ:Nikitha Mavinkere/ನನ್ನ ಪ್ರಯೋಗಪುಟ/cc03

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ರೈಸ್ಟ್ ಯೂನಿವರ್ಸಿಟಿ

ಕ್ರೈಸ್ಟ್ ವಿಶ್ವವಿದ್ಯಾಲಯ ಒಂದು 'ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ' ಇದು ಭಾರತದ ಕರ್ನಾಟಕದಲ್ಲಿನ ಬೆಂಗಳೂರುನಲ್ಲಿದೆ. ಈ ಸಂಸ್ಥೆಯು ೧೯೬೯ ರಲ್ಲಿ ಸ್ಥಾಪಿತಗೊಂಡಿದ್ಧು, ಆಡಳಿತವು ಯಾಜಕ ವರ್ಗದವರಾದ ಕಾರ್ಮಲೈಟ್ಸ್ ಆಫ್ ಮೇರಿ ಇಮ್ಮಾಕ್ಯುಲೇಟ್ (ಸಿಎಂಐ), ಭಾರತದಲ್ಲಿನ ಪ್ರಥಮ ಸ್ಥಳೀಯ ಸಿರಿಯನ್ ಕಥೋಲಿಕ ಧಾರ್ಮಿಕ ಸಭೆಗೆ ಸೇರಿದೆ. ೨೦೦೮ ರಲ್ಲಿ ಈ ಕಾಲೇಜಿಗೆ 'ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ' (ಡೀಮ್ಡ್ ಟು ಬಿ ಯೂನಿರ್ವಸಿಟಿ) ಎಂಬ ಮಾನ್ಯತೆ ದೊರಕಿದೆ. ಭಾರತದಲ್ಲಿ ಈ ಶಿಕ್ಷಣ ಸಂಸ್ಥೆಯು ಅಗ್ರ ಸ್ಥಾನದೆ. ದೇಶದ ಅನೇಕ ಶೀಕ್ಷಣಕ್ಕೆ ಸಂಬಂಧಿಸಿದ ಸಮೀಕ್ಷೆಗಳಲ್ಲಿ ಇದನ್ನು ಉತ್ತಮವಾದ ಶೈಕ್ಷಣಿಕ ಸಂಸ್ಥೆ ಎಂದು ಪಟ್ಟಿ ಮಾಡಲಾಗಿದೆ. ೨೦೧೪ರಲ್ಲಿ ನಡೆದ ಇಂಡಿಯಾ ಟುಡೇ-ನೀಲ್ಸನ್ ಸಮೀಕ್ಷೆಯಲ್ಲಿ ಈ ಸಂಸ್ಥೆಯು ವಿಜ್ಞಾನ, ಕಲಾ, ವಾಣೀಜ್ಯ ಹಾಗೂ ಕಾನೂನು ವಿಭಾಗಗಳಲ್ಲಿ ಹತ್ತು ಸ್ಥಾನಗಳಲ್ಲಿ ಒಂದಾಗಿದೆ. ೨೦೧೪ರ ಇಂಡಿಯಾ ಟುಡೇ-ನೀಲ್ಸನ್ ಸಮೀಕ್ಷೆಯಲ್ಲಿ ಕ್ರೈಸ್ಟ್ ವಿಶ್ವವಿದ್ಯಾಲಯವು ಬಿ.ಬಿ.ಎ. ೧ನೇ ಸ್ಥಾನ, ಕಲಾ ವಿಭಾಗ ೬ನೇ ಸ್ಥಾನ, ವಿಜ್ಞಾನ ವಿಭಾಗ ೪ನೇ ಸ್ಥಾನ ಮತ್ತು ೪ನೇ ಸ್ಥಾನದಲ್ಲಿ ವಾಣಿಜ್ಯ ಹಾಗೂ ಕಾನೂನು ೧೦ನೇ ಸ್ಥಾನಗಳನ್ನು ಪಡೆದಿತ್ತು.

ಕ್ರೈಸ್ಟ್ ವಿಶ್ವವಿದ್ಯಾಲಯದಿಂದ ಬ್ಲಾಕ್-೧, ಬ್ಲಾಕ್-೨ ಹಾಗೂ ಮುಖ್ಯ ಲೈಬ್ರರಿಯ ಮತ್ತು ತಾವರೆಕೆರೆ ಪ್ರದೇಶದ ವೈಮಾನಿಕ ನೋಟ ವಿಶ್ವವಿದ್ಯಾಲಯವು ರಾಷ್ಟ್ರೀಯ ಹಾಗೂ ಅಂರ್ತರಾಷ್ಟ್ರೀಯ ಮಾನ್ಯತೆ ಹೊಂದಿದ ಪದವಿ, ಸ್ನಾತಕೋತ್ತರ ಮತ್ತು ಸಂಶೋಧನಾ ಕಾರ್ಯಕ್ರಮಗಳನ್ನು(ಕೋರ್ಸುಗಳನ್ನು) ತನ್ನ ವಿವಿಧ ವಿಭಾಗಗಳಾದ ಕಾನೂನು, ಬ್ಯುಸಿನೆಸ್ ಆಡ್ಮಿನಿಸ್ಟ್ರೇಷನ್, ವಾಣಿಜ್ಯ, ಮ್ಯಾನೇಜ್ಮೆಂಟ್, ಮಾನವಿಕ, ವಿಜ್ಞಾನ, ಹಾಗೂ ಸಾಮಾಜಿಕ ವಿಜ್ಞಾನಗಳಲ್ಲಿ ಸೇರಿಸಿದೆ. ಇದರ ಜೊತೆಯಲ್ಲಿಯೇ, ಅನೇಕ ವೃತ್ತಿಪರ ಕೋರ್ಸುಗಳೂ ಸೇರಿದಂತೆ ಬ್ಯುಸಿನೆಸ್ ಮ್ಯಾನೇಜ್ಮೆಂಟ್, ಗಣಕ(ಕಂಪ್ಯೂಟರ್) ಅನ್ವಯಗಳು(ಆಪ್ಲಿಕೇಶನ್ಸ್), ಹೊಟೇಲ್ ನಿರ್ವಹಣೆ(ಮ್ಯಾನೇಜ್ಮೆಂಟ್), ಸಮೂಹ ಸಂವಹನ, ಸಮಾಜ ಸೇವೆ, ಎಂಜಿನಿಯರಿಂಗ್ ಮತ್ತು ಪ್ರವಾಸೋದ್ಯಮಗಳನ್ನು ಕಲಿಯುವ ಅವಕಾಶವನ್ನು ಇಲ್ಲಿಗೆ ಬರುವ ವಿದ್ಯಾರ್ಥಿಗಳಿಗೆ ಕಲ್ಪಿಸಿದೆ. ವಿದೇಶದ ವಿದ್ಯಾಥಿ‍ಗಳಿಗೆ ಇದೊಂದು ನೆಚ್ಚಿನ ತಾಣವಾಗಿದ್ದು, ೨೦೧೪ರಲ್ಲಿ ಇಲ್ಲಿಗೆ ಬರುವ ವಿದೇಶೀ ವಿದ್ಯಾರ್ಥಿಗಳ ಸಂಖ್ಯೆ ೨,೩೮೪ಕ್ಕೆ ಏರಿದೆ. ೧೭ ಜೂನ್ ೧೯೭೨ ರಂದು ಕ್ರೈಸ್ಟ್ ಕಾಲೇಜು ಭಾರತದ ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ), ಮಾನ್ಯತೆ ಪಡೆದಿದೆ. ೧೯೯೮ರಲ್ಲಿ ಈ ಸಂಸ್ಥೆಯನ್ನು ಪರೀಕ್ಷಾ ಮಾನ್ಯತೆಗೆ ನ್ಯಾಷನಲ್ ಅಸೆಸ್ಮೆಂಟ್ ಅಂಡ್ ಅಕ್ರಿಡಿಟೇಶನ್ (ಎನ್ಎಎಸಿ), ಒಂದು ಯುಜಿಸಿ-ಅನುದಾನಿತ ಅಂಗ ಸಂಸ್ಥೆ, ಎಂದು ಗುರುತಿಸಲಾಯಿತು. ಮತ್ತೆ ೨೦೦೫ರಲ್ಲಿ ಇದನ್ನು ಮರು-ಮಾನ್ಯತೆಗೆ ಒಳಪಡಿಸಲಾಯಿತು. ಗುಣಮಟ್ಟದ ಶಿಕ್ಷಣಕ್ಕಾಗಿ ರಾಜ್ಯದಲ್ಲಯೇ ಕ್ರೈಸ್ಟ್ ಕಾಲೇಜು ಮೊದಲನೆಯ ಸ್ಥಾನದಲ್ಲಿದೆ. ಕರ್ನಾಟಕಇದನ್ನೇ ಮುಂದೆ ನ್ಯಾಷನಲ್ ಅಸೆಸ್ಮೆಂಟ್ ಅಂಡ್ ಅಕ್ರಿಡಿಟೇಶನ್ (ಎನ್ಎಎಸಿ), ಗುಣಮಟ್ಟದ ಶಿಕ್ಷಣಕ್ಕಾಗಿ ಗುರುತಿಸಿತು. ಪ್ರಸ್ತುತ ಈ ವಿಶ್ವವಿದ್ಯಾಲಯವನ್ನು ಎನ್ಎಎಸಿ-ಯಿಂದ A+ ಮಾನ್ಯತೆಯನ್ನು ಹೊಂದಿದ ಮತ್ತು ಉತ್ಕೃಷ್ಟ ಸಾಧನೆಯ ಸಾಮರ್ಥ್ಯವಿರುವ ಸಂಸ್ಥೆ ಎಂದು ಪರಿಗಣಿಸಲಾಗಿದೆ.

ಕ್ಯಾಂಪಸ್ (ಸಂಸ್ಥೆ ಆವರಣ)[ಬದಲಾಯಿಸಿ]

೨೦೦೦-೨೦೦೨ ದಿಂದ ಮೂರು ವರ್ಷಗಳು ಸತತವಾಗಿ ವಿಶ್ವವಿದ್ಯಾಲಯವನ್ನು 'ಉತ್ತಮ ಕಟ್ಟಡ ಮತ್ತು ಉದ್ಯಾನ' ಹೊಂದಿದ ಆವರಣ ಎಂದು ಬೆಂಗಳೂರು ನಗರ ಕಲಾ ಆಯೋಗವು ಬೆಂಗಳೂರು ಅರ್ಬನ್ ಆರ್ಟ್ಸ್ ಕಮಿಷನ್ ಪ್ರಮಾಣಿಸಿದೆ. ೨೦೧೨ನೇ ವರ್ಷವನ್ನೂ ಸೇರಿಸಿ ೨೪ ನಿರಂತರ ವರರ್ಷಗಳಿಗೆ ಮೈಸೂರು ತೋಟಗಾರಿಕಾ ಇಲಾಖೆಯಿಂದ ನೀಡಲಾಗುವ 'ಅತ್ಯುತ್ತಮ ಸಾಂಸ್ಥಿಕ ಉದ್ಯಾನ' ಎಂಬ ಪ್ರಶಸ್ತಿಯನ್ನು ಈ ವಿಶ್ವವಿದ್ಯಾಲಯವು ಪಡೆದಿರುತ್ತದೆ.[ಸೂಕ್ತ ಉಲ್ಲೇಖನ ಬೇಕು] ಈ ಆವರಣವು ಶೂನ್ಯ ತ್ಯಾಜ್ಯ ಪರಿಸರವನ್ನು ಹೊಂದಿದ್ದು, ಇಲ್ಲಿ ಉಪಯೋಗಿಸಿದ ಕಾಗದ ಹಾಗೂ ದ್ರವ ರೂಪದ ವಸ್ತುಗಳನ್ನು ಮರುಬಳಕೆಯ ವಸ್ತುಗಳನ್ನಾಗಿ ಮಾರ್ಪಡಿಸಲಾಗುತ್ತದೆ. ಗುರುತಿನ ಚೀಟಿ ಹಾಗೂ ಡೆಬಿಟ್ ಕಾರ್ಡ್-ಗಳನ್ನು ಒಂದರಲ್ಲೇ ನಮೂದಿಸಿ ಕ್ಯಾಂಪಸ್-ನಲ್ಲಿ ದ್ರವರೂಪದ ಹಣದ ಉಪಯೋಗವನ್ನು ಕಡಿಮೆ ಮಾಡಲಾಗಿದೆ. ಈ ಗುರುತಿನ ಚೀಟಿ ಹೊಂದಿದ ಸ್ಮಾರ್ಟ್ ಎಟಿಎಂ ಕಾರ್ಡ್-ನ್ನು ಸೌತ್ ಇಂಡಿಯನ್ ಬ್ಯಾಂಕು ಒದಗಿಸುತ್ತದೆ ಸೌತ್ ಇಂಡಿಯನ್ ಬ್ಯಾಂಕ್.

ಶೈಕ್ಷಣಿಕ[ಬದಲಾಯಿಸಿ]

ಕ್ರೈಸ್ಟ್ ವಿಶ್ವವಿದ್ಯಾಲಯ ಪ್ರಮಾಣೀಕೃತ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಮತ್ತು ಸಂಶೋಧನೆ, ಕೋರ್ಸುಗಳನ್ನು ತನ್ನ ಶೈಕ್ಷಣಿಕ ಪರಿಧಿಗೊಳಪಟ್ಟ ವಿಭಾಗಗಳಾದ ಕಾನೂನು ಶಾಲೆ, ಶಿಕ್ಷಣ, ವಿಜ್ಞಾನ, ಸಾಮಾಜಿಕ ವಿಜ್ಞಾನ ಮತ್ತು ವಿವಿಧ ಭಾಷೆಗಳು, ವಾಣೀಜ್ಯ ಮತ್ತು ಮ್ಯಾನೇಜ್ಮೆಂಟ್ ಹಾಗೂ ಎಂಜಿನಿಯರಿಂಗ್-ನಲ್ಲಿ ಶೀಕ್ಷಣವನ್ನು ನೀಡುತ್ತಿದೆ.೨೦೦೫ರಲ್ಲಿ, ಆಗಿನ ಕ್ರೈಸ್ಟ್ ಕಾಲೇಜು (ಪ್ರಸ್ತುತ ಕ್ರೈಸ್ಟ್ ವಿಶ್ವವಿದ್ಯಾಲಯ) ಎನ್ಎಎಸಿಯಿಂದ A+ ಪಡೆದ ದಕ್ಷಿಣ ಬಾರತದಲ್ಲೇ ಪ್ರಥಮ ಹಾಗೂ ಏಕೈಕ ಶೀಕ್ಷಣ ಸಂಸ್ಥೆಯಾಗಿದೆ.

ಪದವಿ ಕೋರ್ಸುಗಳು[ಬದಲಾಯಿಸಿ]

ವಿಶ್ವವಿದ್ಯಾಲಯವು ೪೫ ಪದಿ ಕೋರ್ಸುಗಳನ್ನು ಮಾನವಿಕ, ಸಾಮಾಜಿಕ ವಿಜ್ಞಾನ, ವಿಜ್ಞಾನ, ವಾಣಿಜ್ಯ ಮತ್ತು ಮ್ಯಾನೇಜ್ಮೆಂಟ್, ಕಾನೂನು, ಶಿಕ್ಷಣ, ಹಾಗೂ ಎಂಜಿನಿಯರಿಂಗ್ ವಿಭಅಗಗಳಲ್ಲಿ ಪರಿಚಯಿಸಿದೆ. ಪದವಿ ಕೋರ್ಸುಗಳು ಮೂರು ವರ್ಷಗಳ ಕಾರ್ಯಕ್ರಮವನ್ನು ಹೊಂದಿದ್ದು ಇದರಲ್ಲಿ ಶೀಕ್ಷಣ ಪದವಿ (ಬಿ.ಎಡ್, ಎರಡು ವರ್ಷ), ಹೊಟೇಲ್ ಮ್ಯಾನೇಜ್ಮೆಂಟ್ ಪದವಿ (ಬಿ.ಹೆಚ್.ಎಮ್, ನಾಲ್ಕು ವರ್ಷ), ಕಾನೂನು ಪದವಿ (ಎಲ್.ಎಲ್.ಬಿ, ಐದು ವರ್ಷ), ತಾಂತ್ರಿಕ ಪದವಿ (ಬಿ.ಟೆಕ್, ನಾಲ್ಕು ವರ್ಷ) ಮತ್ತು ಸಮಗ್ರ ಬಿ.ಟೆಕ್ / ಎಮ್.ಟೆಕ್ ಅಥವಾ ಎಂ.ಬಿ.ಎ. (ಐದು ವರ್ಷ)ಆಗಿರುತ್ತದೆ. ಮೂರು ಕೋರ್ಸುಗಳನ್ನು ಅಂದರೆ ಬ್ಯುಸಿನೆಸ್ ಆಡ್ಮಿನಿಸ್ಟ್ರೇಷನ್ (ಬಿ.ಬಿ.ಎ), ವಾಣಿಜ್ಯ ಪದವಿ (ಬಿಕಾಂ), ಕಲಾ ಪದವಿ (ಬಿಎ) ಮತ್ತು ವಿಜ್ಞಾನ ಪದವಿ (ಬಿಎಸ್ಸಿ) ಹೊರತುಪಡಿಸಿ ಮೂರು ಪ್ರಮುಖ ಎಲ್ಲವುದಕ್ಕೂ ಒಂದು ವ್ಯವಸ್ಥೆಯಿಂದ ಕೂಡಿವೆ.