ಸದಸ್ಯ:Nellaivadivoot/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಂಟೋನ್ಮೆಂಟ ಇತಿಹಾಸದ ಒಂದು ಅವಲೋಕನ.[ಬದಲಾಯಿಸಿ]

ಕಂಟೋನ್ಮೆಂಟ್ ಎಂಬುವ ಪದ ಫ್ರೆಂಚ್ ಭಾಷೆಯಿಂದ ಆರಿಸಲಾಗಿದೆ. ಇದರ ಅರ್ಥವೇನೆಂದರೆ 'ಜಿಲ್ಲಾ' ಅಥವಾ' ಪಟ್ಟಣ' ಎಂದು ಅರ್ಥ. ಇವತ್ತಿನ  ಈ ಕಂಟೋನ್ಮೆಂಟ್ ಬ್ರಿಟಿಷ್ ರಾಜರ ಆಳ್ವಿಕೆಯ ಸಮಯದಲ್ಲಿ ''ಮಿಲಿಟರಿ ಕಂಟೋನ್ಮೆಂಟ್" ಎಂದು ಕರೆಯಲಾಗಿತ್ತು. ಕಂಟೋನ್ಮೆಂಟ್ ಸ್ಥಳದಲ್ಲಿ ಬ್ರಿಟಿಷ್ ಸೈನಿಕರ ತಾಕ ಅತಿ ಹೆಚ್ಚಾಗಿರುವುದರಿಂದ "ಪರೇಡ್ ಗ್ರೌಂಡ್" ಮುಖ್ಯ ಸ್ಥಳವಾಗಿದೆ. ಅದರಿಂದ ಇವತ್ತು ಸಹ ಕಂಟೋನ್ಮೆಂಟ್ನ ರಸ್ತೆಗಳಿಗೆ ಮಿಲಿಟರಿ ರೆಜಿಮೆಂಟಿನ ಹೆಸರುಗಳಿವೆ. ಇವುಗಳಲ್ಲಿ ಮುಖ್ಯವಾಗಿ ಹೇಳಬೇಕೆಂದರೆ ಆರ್ಟಿಲರಿ ರೋಡ್, ಇನ್ಫೆಂಟ್ರಿ ರೋಡ್, ಬ್ರಿಗೇಡ್ ರೋಡ್ ಕ್ಯವಲ್ರಿ ರೋಡ್ ಇತ್ಯಾದಿ. ಇಂದಿಗೂ ಸಹ ಕಂಟೋನ್ಮೆಂಟ್ ಬೆಂಗಳೂರಿನ ಇತರ ಭಾಗಗಳಿಂದ  ಭಿನ್ನವಾಗಿದೆ. ಕಂಟೋನ್ಮೆಂಟ್ಇನ ವಿವರಣೆ ಬಗ್ಗೆ ಹೇಳಬೇಕಾದರೆ ಇಲ್ಲಿ ಬಹಳ ಹೆಚ್ಚು ರಕ್ಷಣಾ ಸಂಸ್ಥೆಗಳು ಇದ್ದವು ಹಾಗು ಬ್ರಿಟಿಷರ ಶೈಲಿಯ ಬಂಗಾಳಗಳು ಇದ್ದವು, ರಸ್ತೆಯ ಎರಡು ಬದಿಗಳಲ್ಲಿ ಹಾಗೂ ಸುತ್ತಮುತ್ತ ಎಲ್ಲೂ ನೋಡಿದರು ಗಿಡ ಮರಗಳಿದ್ದವು ಇವು ನೋಡುವವರನ್ನು  ಆಕರ್ಷಿಸುತ್ತದೆ

ಬೆಂಗಳೂರುಕಂಟೋನ್ಮೆಂಟ್

ಕಂಟೋನ್ಮೆಂಟಿನ ನಿರ್ಮಾಣಕ್ಕೆ ಕಾರಣ.[ಬದಲಾಯಿಸಿ]

1799 ರಲ್ಲಿ ಟಿಪ್ಪುಸುಲ್ತಾನನ ಸಾವಿನ ನಂತರ ಬ್ರಿಟಿಷ್ ಪಡೆಗಳನ್ನು ಒಂದು ಸ್ಥಳದಲ್ಲಿ ನಿಲ್ಲಿಸಬೇಕು ಎಂದಾಗ ಮೈಸೂರಿನಲ್ಲಿ ನಿಲ್ಲಿಸಬೇಕಾಗಿತ್ತು ಆದರೆ ಅಲ್ಲಿರುವ ಡ್ಯೂಕ್ ಆಫ್ ವೆಲ್ಲಿಂಗ್ಟನ್ (ಬ್ರಿಟಿಷ್ ಸೈನ್ಯದ ಮಿಲಿಟರಿ ಕಮಾಂಡರ್ ಆಗಿದ್ದರು)ಎಂಬವರು  ಶ್ರೀರಂಗಪಟ್ಟಣವೇ ತಮ್ಮ ಸೈನ್ಯ ಪಡೆಗಳಿಗೆ ಒಳ್ಳೆಯ ಸ್ಥಳವಾಗಿರಬಹುದು ಎಂದು ತಿಳಿದರು. ಆದರೆ ಶ್ರೀರಂಗಪಟ್ಟಣದಲ್ಲಿ ಆ ಸಮಯದಲ್ಲಿ ಮಲೇರಿಯಾ ಎಂಬುವ ಕಾಯಿಲೆ  ಬಹಳ ಹೆಚ್ಚಾಗಿದ್ದರಿಂದ ಶ್ರೀರಂಗಪಟ್ಟಣದಲ್ಲಿ ತಮ್ಮ ಸೈನ್ಯವನ್ನು ನಿಲ್ಲಿಸುವುದು ಸಾಧ್ಯವಾಗಿ ತೋರಲಿಲ್ಲ. ಅದರಿಂದ ಬೆಂಗಳೂರಿಗೆ ಹೋಗಿ ತನ್ನ ಸೈನ್ಯವನ್ನು ನಿಲ್ಲಿಸಬೇಕು ಎಂದು ಯೋಚಿಸುವಾಗ ಅಲ್ಲಿ ನೀರಿನ ಅಭಾವ ಅತಿ ಹೆಚ್ಚಾಗಿರುವುದರಿಂದ ಅಲ್ಲಿಯೂ ಸಹ ಅವರಿಗೆ ಹೋಗಲು ಸಾಧ್ಯವಾಗಲಿಲ್ಲ. ಹಾಗೂ ಡ್ಯೂಕ್ ಆಫ್ ವೆಲ್ಲಿಂಗ್ಟನ್ ರವರು 1804ರಲ್ಲಿ ಭಾರತದಿಂದ ಹೊರಟರು. ಇವರು ಹೋದಮೇಲೆ ಐದು ವರ್ಷಗಳ ನಂತರ ಸುಪ್ರೀಂಕೋರ್ಟ್ ಈ ಬ್ರಿಟಿಷ್ ಸೈನಿಕರನ್ನು ಬೆಂಗಳೂರಿಗೆ ಕಳಿಸಿದರು. ಈ ಸೈನಿಕರನ್ನು ಬೆಂಗಳೂರಿನಲ್ಲಿ ಇರುವ ಅಲಸೂರು ಎಂಬ  ಗ್ರಾಮದಲ್ಲಿ ಇವುಗಳನ್ನು ನಿಲ್ಲಿಸಿದ್ದರು. ಅದರಿಂದ ಐದು ವರ್ಷಗಳ ನಂತರ "1809 ರಲ್ಲಿ ಬೆಂಗಳೂರಿನಲ್ಲಿ ಮಿಲಿಟರಿ ಸೈನಿಕರ ಪಡೆಯ ಅಡಿಪಾಯವಾಯಿತು". ಅದರಿಂದ 1809 ವರ್ಷದಲ್ಲಿ "ಕಂಟೋನ್ಮೆಂಟ್ "ಎಂಬುವ ಸ್ಥಳ ಸ್ಥಾಪಿಸಲಾಯಿತು. ಇಲ್ಲಿ ಬ್ರಿಟಿಷ್ ಸೈನಿಕ ಪಡೆಗಳ ನಿಲ್ದಾಣ ಇರುವುದರಿಂದ ಇದನ್ನು ಕಂಟೋನ್ಮೆಂಟ್ ಎಂದು ಕರೆಯಲಾಗಿದೆ. ಇಲ್ಲಿ ಬ್ರಿಟಿಷ್ ಸೈನಿಕರು ಬಂದಿರುವುದರಿಂದ ಈ ಸ್ಥಳಕ್ಕೆ ಬ್ರಿಟಿಷ್ ಶೈಲಿಯ ಪ್ರಭಾವ ಅತಿ ಹೆಚ್ಚಾಗಿದೆ ಅದರಿಂದ ಇಲ್ಲಿ ಬಹಳ ಹೆಚ್ಚಾಗಿ ಚರ್ಚುಗಳು, ಬಂಗಳಗಳು ಹಾಗೂ ಕಟ್ಟಡಗಳು ಬ್ರಿಟಿಷರ ಶೈಲಿಯಲ್ಲಿ ಇರುತ್ತದೆ.  ಬೆಂಗಳೂರು ಕಂಟೋನ್ಮೆಂಟ್ ಬ್ರಿಟಿಷ್ ರಾಜರ ನಿಯಂತ್ರಣದಲ್ಲಿತ್ತು. ಹಾಗೂ ಬೆಂಗಳೂರು ಪೇಟೆ ಮೈಸೂರು ದರ್ಬಾರಿನ ಆಳ್ವಿಕೆಯಲ್ಲಿತ್ತು. ಆದ್ದರಿಂದ ಕಬ್ಬನ್ ಪಾರ್ಕ್ ಬೆಂಗಳೂರಿನ ಕಂಟೋನ್ಮೆಂಟ್ ಹಾಗೂ ಪೇಟೆಗೂ ವ್ಯತ್ಯಾಸ ಮಾಡುವ ಸ್ಥಳವಾಗಿತ್ತು.


ಇದನ್ನು ನಿರ್ಮಾಣ ಮಾಡುವ ಕಾರಣವೇನು ಎಂದು ನಾವು ತಿಳಿಯುವಾಗ ಇದನ್ನು ಯಾರು ನಿರ್ಮಿಸಿದರು ಎಂದು ನಾವು ತಿಳಿಯಲೇಬೇಕು. 11 ಏಪ್ರಿಲ್ 1800 ಸರ್ ಆರ್ಥರ್ ವೆಲ್ಲೆಸ್ಲಿ ಇವರು ಬ್ರಿಟಿಷ್ ಸೇನೆಯ ಪ್ರಧಾನ ದಂಡನಾಯಕರಾಗಿದ್ರು. ಹಾಗೂ ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧ ನಡೆಸಿದವರು ಇವರು. ಅವರು ಶ್ರೀರಂಗಪಟ್ಟಣದಲ್ಲಿರುವ ಬ್ರಿಟಿಷ್ ಕಮಾಂಡರ್ ಒಬ್ಬರ ಬಳಿ ಬೆಂಗಳೂರಿನಲ್ಲಿ ಕಂಟೋನ್ಮೆಂಟ್ ಅನ್ನು ಸ್ಥಾಪನೆ ಮಾಡಲು ಮಾಹಿತಿಯನ್ನು ಕೇಳಿಕೊಂಡರು. ಆಗ ಕಮಾಂಡರ್ ರವರು ಚನ್ನಪಟ್ಟಣ ಚಿತ್ರದುರ್ಗ ಹಾಗೂ ಬೆಂಗಳೂರನ್ನು ಸಂಭವನೀಯ ಸ್ಥಳವಾಗಿ ಹೇಳಿದ್ದರು. ಇದು ಆದ ನಂತರ ಆಗತಾನೆ 23 ವಯಸ್ಸಾದ ಜಾನ್  ಬ್ಲಾಕ್ ಕಿಸ್ತನ್ ಎಂಬ ಬ್ರಿಟಿಷ್ ಮಿಲಿಟರಿ ಇಂಜಿನಿಯರ್ ರವರು ಬೆಂಗಳೂರಿನ ಕಂಟೋನ್ಮೆಂಟ್ ಸ್ಥಳವನ್ನು ನೋಡಿದಾಗ ಬೆರಗುಗೊಳಿಸುವ ಹಾಗೆ ಕಾಣುತ್ತಿತ್ತು ಇದರಿಂದ ಅವರು ಕಂಟೋನ್ಮೆಂಟ್ ಸ್ಥಳವನ್ನೇ ಬ್ರಿಟಿಷರ ಸೈನಿಕ ಪಡೆಗಳಿಗೆ ನಿಲ್ದಾಣವಾಗಿ ನಿರ್ಮಿಸಲು ಪ್ರಾರಂಭಿಸಿದ್ದರು. ಇವರು ಬರೀ ಕಟ್ಟಡವನ್ನು ನಿರ್ಮಿಸಲು ಯೋಚಿಸದೆ ಇವರು ಬ್ರಿಟಿಷ್ ರಾಜ್ಯದ ಸೈನಿಕ ಆಡಳಿತವನ್ನು ಸಹ ನಿರ್ಮಿಸಲು ಪ್ರಯತ್ನ ಕೊಂಡರು. ಅದರಿಂದ ಅವರು ಎರಡು ರೆಜಿಮೆಂಟ್ ಗಳನ್ನು ಯುರೋಪ್ಯರಿಗೆ, ಹಾಗೂ 5 ರೆಜಿಮೆಂಟ್ಗಳು ಸ್ಥಳೀಯ ಸೈನಿಕರಿಗೆ ಮತ್ತು ಇನ್ನೂ ರೆಜಿಮೆಂಟ್ಗಳನ್ನು ಫಿರಂಗಿಗೆ ಕಟ್ಟಿಸಿದರು ಇವು ಅಲ್ಲದೆ ಸೈನಿಕರಿಗೆ ಆಸ್ಪತ್ರೆಯನ್ನು ಸಹ ಕಟ್ಟಿಸಿದ್ದರು.

  ಕಂಟೋನ್ಮೆಂಟ್ ಅನ್ನು ನಿರ್ಮಾನಿಸಿದವರ ಬಗ್ಗೆ.  [ಬದಲಾಯಿಸಿ]

ಬ್ಲಾಕ್ ಕಿಸ್ತನ್ ಅವರು ಐರ್ಲ್ಯಾಂಡ್ನಲ್ಲಿರುವ ಡಬ್ಲಿನ್ ಎಂಬ ಸ್ಥಳದಲ್ಲಿ ಹುಟ್ಟಿದರು. ಇವರು 1821 ಜನವರಿ13 ಅಂದು ಜನಿಸಿದ್ದರು. ಇವರು ಆರ್ಮಿ ಆಫ್ ಮೆಜೆಸ್ಟಿ ಹಾಗೂ ಈಸ್ಟ್ ಇಂಡಿಯಾ ಕಂಪನಿಯಲ್ಲಿ 1802 ರಿಂದ 1814 ರವರೆಗೂ ಭಾರತದಲ್ಲಿ ಸೇವೆಸಲ್ಲಿಸಿದರು. ಇವರು ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುವ ಮುಂಚೆ ಇವರು ಮಹಾರಾಷ್ಟ್ರ ಮದ್ರಾಸ್ ಹಾಗೂ ಶ್ರೀರಂಗಪಟ್ಟಣದಲ್ಲಿ ಇವರು  ಕೆಲಸವನ್ನು ಮಾಡಿದ್ದಾರೆ. ಬ್ಲಾಕ್ ಕಿಸ್ತನ್  ಎಂಬ ಅವರು ತಮ್ಮ 23 ವಯಸ್ಸಿನಲೆ ಬ್ರಿಟಿಷರ ಗ್ಯಾರಿಸನನ್ನು ನಿರ್ಮಾಣ ಮಾಡುವ ಒಂದು ಮುಖ್ಯವಾದ ಕೆಲಸವನ್ನು ಅವರಿಗೆ ನೀಡಲಾಗಿತ್ತು. ಇದರಿಂದ ಒಂದು ಬಹಳ ಉಚಿತವಾದ ಕಂಟೋನ್ಮೆಂಟ್ ಅನ್ನು ಕಟ್ಟಲು ಬೆಂಗಳೂರಿನ ಅನೇಕ ಸ್ಥಳಗಳಲ್ಲಿ ಹುಡುಕಿದರು. ಕೊನೆಯಲ್ಲಿ ಇವರಿಗೆ ಬೆಂಗಳೂರಿನ ಹವಾಮಾನ ಹಾಗೂ ಅದರ ಹಚ್ಚಹಸಿರಿನ ಗೋಚರತೆ ಇವರನ್ನು ಸೆಳೆಯಿತು. ಆರಂಭಕಾಲದಲ್ಲಿ ಕಂಟೋನ್ಮೆಂಟ್ ಪಶ್ಚಿಮ ಹಲಸೂರು ಅಥವಾ ಅಲಸೂರು ಕೆರೆಯ ಪಕ್ಕದಲ್ಲಿ ಇರಬೇಕು ಎಂದು ನಿರ್ಮಿಸಿದ್ದರು. ನಂತರ ಹಲಸೂರ್ ಅನ್ನು ಅಲ್ಲಿ ಸೇವೆಸಲ್ಲಿಸುವ ಸೈನಿಕರು ಹಾಗೂ ಆ ಸೈನಿಕರಿಗೆ ಸೇವೆಸಲ್ಲಿಸುವ ಸೇವಕರಿಗೆ ವಾಸಿಸುಸ್ಥಳ ಕಟ್ಟಿಸಿದರು. ಕಂಟೋನ್ಮೆಂಟ್ ಅನ್ನು ನಿರ್ಮಿಸಿದವರು ಯಾರು ಎಂದು ಇತ್ತೀಚಿಗೆ ಎಲ್ಲರಿಗೂ ತಿಳಿಯಲಾಗಿದೆ. ಹೇಗೆ ತಿಳಿಯಿತು ಎಂದರೆ ಇವರು 1829 ವರ್ಷದಲ್ಲಿ ಬರೆದು ಬಿಡುಗಡೆ ಆಗಿರುವ ಪ್ರಕಟಣೆ ಒಂದು ಅದರ ಹೆಸರು ಏನೆಂದರೆ "12 ವರ್ಷಗಳ ಮಿಲಿಟರಿ ಸಾಗಸ "ಎಂಬ ಪ್ರಕಟನೆ ಆಂಗ್ಲದಲ್ಲಿ "12  ಇಯರಸ್  ಆಫ್ ಮಿಲಿಟರಿ ಅಡ್ವೆಂಚರ್" ಎಂದು ಅದನ್ನು ಬಿಡುಗಡೆ ಮಾಡಿದ್ದಾರೆ. ಇದರಿಂದ ಯಾರಿಗೂ ಇವರ ಬಗ್ಗೆ ತಿಳಿಯಲಿಲ್ಲ. ಆದರೆ ಇವರು" 20 ವರುಷಗಳ ರಿಟೈರ್ಮೆಂಟ್" ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದಾಗ ಅದರಲ್ಲಿ ತನ್ನ ಮಿಲಿಟರಿ ಸಾಹಸದ ಪುಸ್ತಕವನ್ನು ಬರೆದಿರುವುದು ಎಂದು ಈ ಪುಸ್ತಕದಲ್ಲಿ ಉಲ್ಲೇಖಿಸಿದಾರೆ. ಇದನ್ನು ಸಹ ಆಂಗ್ಲ ಭಾಷೆಯಲ್ಲಿ "20 ಇಯರಸ್ ಇನ್ ರಿಟೈರ್ಮೆಂಟ್" ಎಂದು ಪ್ರಕಟಣೆ ಮಾಡಿದ್ದಾರೆ. ಮತ್ತೆ ಈ ಪುಸ್ತಕ ಇವರ ಜೀವನಚರಿತ್ರೆಯಾಗಿದೆ. ಜೀವನಚರಿತ್ರೆಯಲ್ಲಿ ಅವರು ಕಂಟೋನ್ಮೆಂಟ್ ಇನ್ನ ಮೇಲೆ ಇಟ್ಟಿರುವ ತಮ್ಮ ಪ್ರೀತಿ ಹಾಗೂ ಅನುರಾಗವನ್ನು ಬಹಳ ಚಂದವಾಗಿ ವರ್ಣಿಸಿದ್ದಾರೆ. ಇವರು ಇದರಲ್ಲಿ ಮುಖ್ಯವಾಗಿ ಹೇಳಿದ್ದು ಏನೆಂದರೆ" ಬೆಂಗಳೂರು ತನ್ನ ಸೌಂದರ್ಯ ಮಾತ್ರ ಅಲ್ಲದೆ ತನ್ನ ಒಟ್ಟಲತೆಯನ್ನು ಸಹ ಹೆಚ್ಚು ಮಾಡಿದೆ ಇದರಿಂದ ಈಗ ಈ ಕಂಟೋನ್ಮೆಂಟ್ ಭಾರತದಅ ತಿದೊಡ್ಡ ಮತ್ತು ಅತ್ಯುತ್ತಮವಾದ ಕಂಟೋನ್ಮೆಂಟ್ ಆಗಿದೆ."ಹಾಗೂ ಇವತಿನ ಶಿವಾಜಿನಗರಿನ ಹೆಸರಾದ  "ಬ್ಲಾಕ್ಪಾಲೆ" ಎಂಬುವ ಹೆಸರು ಈ ಕಂಟೋನ್ಮೆಂಟನ್ನು ನಿರ್ಮಾಣ ಮಾಡಿದ ಜಾನ್ ಬ್ಲಾಕ್ ಇಸ್ಟಂ ಅವರ ಹೆಸರಿನಿಂದ ಬಂದಿರಬಹುದು ಎಂಬುದು ಒಂದು ಚರ್ಚೆಯಾಗಿಯೇ ಇನ್ನೂ ಉಳಿದಿದೆ.

ಕಂಟೋನ್ಮೆಂಟ್ನ ಅಭಿವೃದ್ಧಿಯ ನೋಟ.[ಬದಲಾಯಿಸಿ]

ಕಂಟೋನ್ಮೆಂಟ್ ಅಭಿವೃದ್ಧಿಯ ಹೆಸರಿನಲ್ಲಿ ಬಹಳ ವೇಗವಾಗಿ ವಿಸ್ತರಿಸಲು ಶುರುವಾಯಿತು ಸುಮಾರು ಇಪ್ಪತ್ತು ಗ್ರಾಮಗಳನ್ನು  ಕಂಟೋನ್ಮೆಂಟ್ನ ಒಳಗೆ ಸೇರಿಸಿದರು ಹಾಗೂ 8000 ಕಾಲಾಳುಪಡೆ ಮತ್ತು ಅಶ್ವದಳದ ರೆಜಿಮೆಂಟನ್ನು ನಿಲ್ಲಿಸಿದ್ದರು. ಹಾಗೂ ಹೊಸ ಆಸ್ಪತ್ರೆಗಳು ಹಾಗೂ ಕಟ್ಟಡಗಳು ನಿರ್ಮಾಣವಾಗಲು ಶುರುವಾಯಿತು. ಈಗ ಬೆಂಗಳೂರಿನ ಕಂಟೋನ್ಮೆಂಟ್ನ ವಿಸ್ತರಣೆ ಹೇಗಿತ್ತು ಎಂದರೆ ಪಶ್ಚಿಮ ದೆಸೆಯಲ್ಲಿ ರೆಸಿಡೆನ್ಸಿ ಹಾಗೂ ಪೂರ್ವ ದಿಸೆಯಲ್ಲಿ ಬಿನ್ನಮಂಗಳ ಉತ್ತರ ದಿಸೆಯಲ್ಲಿ  ಟ್ಯಾನರಿಸ್ ಹಾಗೂ ದಕ್ಷಿಣ ದಿಸೆಯಲ್ಲಿ ಅಗರಂ. "ಪ್ರದೇಶದ ಪ್ರಕಾರ ನೋಡುವಾಗ ಭಾರತದಲ್ಲೇ ಅತಿದೊಡ್ಡ ಬ್ರಿಟಿಷರ ಮಿಲಿಟರಿ ಕಂಟೋನ್ಮೆಂಟ್ ಅಂದರೆ ನಮ್ಮ ಬೆಂಗಳೂರಿನ ಕಂಟೋನ್ಮೆಂಟ್ ಎನ್ನಬಹುದು". ಇದರಿಂದ ಇದನ್ನು "ಸಿವಿಲ್ ಅಂಡ್ ಮಿಲಿಟರಿ ಸ್ಟೇಷನ್" ಎಂದು ಹೇಳುತ್ತಾರೆ. ಈ ಅಭಿವೃದ್ಧಿ ಮುಖ್ಯವಾಗಿ ವಲಸೆ ಕಾರ್ಮಿಕರು ಹಾಗೂ ನೆರೆಯ ರಾಜ್ಯಗಳ ಜನರನ್ನು ಇಲ್ಲಿ ಬಂದು ಜೀವನ ನಡೆಸಲು ಸೆಳೆಯುತ್ತದೆ. ಬೆಂಗಳೂರು ಕಂಟೋನ್ಮೆಂಟ್ ಅತಿವೇಗವಾಗಿ ಮೈಸೂರು ರಾಜ್ಯದಲ್ಲೇ ಬಹಳ ದೊಡ್ಡವಾದ ನಗರವಾಗಿತ್ತು. ಬೆಂಗಳೂರು ಪೇಟೆಯಲ್ಲಿ ಅತಿ ಹೆಚ್ಚಿನ ಕನ್ನಡಿಗರ ಜನಸಂಖ್ಯೆ ಇತ್ತು ಹಾಗೂ ಬೆಂಗಳೂರಿನ ಕಂಟೋನ್ಮೆಂಟ್ ಸ್ಥಳದಲ್ಲಿ ವಿವಿಧ ಸ್ಥಳಗಳಿಂದ ಬಂದಿರುವ ಜನರು ವಾಸಿಸುತ್ತಿದ್ದರು. ಇದರಲ್ಲಿ ನಮ್ಮ ನಾಡಿನ ರಾಜ್ಯಗಳಿಂದ ಹಾಗೂ ಅಂತರಾಷ್ಟ್ರೀಯ ಜನಸಂಖ್ಯೆ ಸಹ ಇಲ್ಲಿ ವಾಸಿಸುತ್ತಿದ್ದರು. ಈ ಕಂಟೋನ್ಮೆಂಟ್ ಸ್ಥಳ ಅತಿ ಹೆಚ್ಚು ಮದ್ರಾಸ್ ಪ್ರೆಸಿಡೆನ್ಸಿ ಇಂದ ತಮಿಳ್ ಮಾತನಾಡುವವರನ್ನು ಬಹಳ ಹೆಚ್ಚಾಗಿ ಸೆಳೆಯಿತು. ಜನಸಂಖ್ಯೆ ಹೆಚ್ಚಾಗಿದ್ದರಿಂದ ಹಾಗೂ ವ್ಯಾಪಾರ ಹೆಚ್ಚಾಗಿದ್ದರಿಂದ ಇದರ ಪ್ರತಿಕ್ರಿಯೆಯಾಗಿ "ಎಂ. ಜಿ" ರೋಡ್ ಸ್ಥಾನವಾಗಿತ್ತು ಇದನ್ನು ಆಗ "ಸೌತ್ ಪರೇಡ್ "ಎಂದು ಕರೆಯಲಾಗಿತ್ತು. ಇದರ ಪಕ್ಕದಲ್ಲಿ "ಮೂಟಚೆರಿ" ಎಂಬ ಸ್ಥಳವಿತ್ತು ಅಲ್ಲಿ ತಮಿಳುನಾಡಿನಿಂದ ಉತ್ತರ ಮತ್ತು ದಕ್ಷಿಣ ಆರ್ಕೊಟ್ ಇಂದ ಬಂದಿರುವ ಜನರು ಇದ್ದರು.1883 ರಲ್ಲಿ ಹಲವಾರು ಟೌನಗಳು ಸೇರ್ಪಡೆಯಾಯಿತು ಇದರಲ್ಲಿ ಬಹಳ ಮುಖ್ಯವಾದ ರಿಚ್ಮಂಡ್,  ಬೆನ್ಸನ್, ಕ್ಲೀವ್ಲ್ಯಾಂಡ್ ಸೇರ್ಪಡೆಯಾಯಿತು. ಹಾಗೂ ಬೆಂಗಳೂರಿನ ಪೇಟೆಯಿಂದ ಬೆಂಗಳೂರಿನ ಕಂಟೋನ್ಮೆಂಟ್ಗೆ ಬರಲು ಅಥವಾ ಕಂಟೋನ್ಮೆಂಟ್ನಿ ಇಂದ ಪೇಟೆಗೆ ಬರಲು ಒಂದು ರೀತಿಯ ತೆರಿಗೆಯನ್ನು  ಕಟ್ಟಬೇಕಾಗಿತ್ತು.

1863 ವರ್ಷದಲ್ಲಿ ಬೆಂಗಳೂರು ಕಂಟೋನ್ಮೆಂಟಗೆ ಮುನಿಸಿಪಲ್ ಕಾರ್ಪೋರೇಷನ್ ಸ್ಥಾಪನೆ ಆಯಿತು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ಕಂಟೋನ್ಮೆಂಟ್ ಮುನೀಸಿಪಲ್ ಕಾರ್ಪೋರೇಶನ್ ಬೆಂಗಳೂರು ಪೇಟೆ ಕೋಟೇಷನ್ ಬಳಿ ವಿಲೀನಗೊಂಡು "ಬೆಂಗಳೂರು ಮಾನಗರ ಕಾರ್ಪೊರೇಷನ್" ಎಂದು ಹೆಸರಾದಇವತ್ತು ಈ ಕಾರ್ಪೊರೇಷನ್ ಅನ್ನೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಂದು ಕರೆಯಲಾಗಿದೆ.ಬೆಂಗಳೂರಿನ ಪೇಟೆ ಹಾಗೂ ಬೆಂಗಳೂರಿನ ಕಂಟೋನ್ಮೆಂಟ್ ಇನ ಜನಸಂಖ್ಯೆ 1898 ವರ್ಷದಲ್ಲಿ ಬಹಳ ಕಡಿಮೆಯಾಗತೊಡಗಿತ್ತು ಇದಕ್ಕೆ ಕಾರಣವೇನೆಂದರೆ ಆ ಸಮಯದಲ್ಲಿ ಸಾಂಕ್ರಾಮಿಕ ರೋಗವು ಭುಗಿಲೆದ್ದಿತು. ಈ ಸಮಯದಲ್ಲಿ ಆರೋಗ್ಯ ಸೌಲಭ್ಯಗಳು ಹಾಗೂ ನೈರ್ಮಲ್ಯ  ಸೌಲಭ್ಯಗಳನ್ನು ಏರ್ಪಡಿಸಲಾಗಿತ್ತು. ಆದ್ದರಿಂದ ಈ ಸ್ಥಳಗಳಲ್ಲಿ ಆರೋಗ್ಯ ಸೌಲಭ್ಯಗಳ ವ್ಯವಸ್ಥೆಗಳು ಸಹ ಹೆಚ್ಚಾದವು. ಇದಕ್ಕೆ ಉದಾಹರಣೆಯಾಗಿ ಅಲ್ಲಿ ಕಟ್ಟುವ ಹೊಸ ಮನೆಗಳಲ್ಲಿ ನೈರ್ಮಲ್ಯ ಸೌಲಭ್ಯವನ್ನು ಸೇರಿಸಿ ಕಟ್ಟಿದ್ದವು. ಹಾಗೂ ರೋಗದ ಸಮಯದಲ್ಲಿ ದೂರವಾಣಿ ಮಾರ್ಗಗಳು ಸಹ ಬಳಕಕ್ಕೆ ಬಂದಿದ್ದವು. ರೋಗದ ಸಮಯದಲ್ಲಿ ರೋಗಿಗಳನ್ನು ನೋಡಿಕೊಳ್ಳಲು ಒಂದು ಆರೋಗ್ಯ ಅಧಿಕಾರಿ ಹಾಗೂ ನಾಲ್ಕು ವಾರ್ಡ್ಗಳು ಸಹ ಮಾಡಿದ್ದರು. ಇದರ ಕೂಡಲೇ "ವಿಕ್ಟೋರಿಯಾ ಹಾಸ್ಪಿಟಲ್" ಸಹ ಉದ್ಘಾಟಿಸಲಾಯಿತು. "ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ಬೆಂಗಳೂರು ಕಂಟೋನ್ಮೆಂಟ್ ಬೆಂಗಳೂರು ಪೇಟೆಯ ಜೊತೆಗೆ ಸೇರಿ ಮೈಸೂರು ರಾಜ್ಯಕ್ಕೆ ಸೇರಿತು."


ಉಲೇಖನಗಳು.[ಬದಲಾಯಿಸಿ]

<r>https://en.wikipedia.org/wiki/Bangalore_Cantonment#:~:text=Bangalore%20was%20part%20of%20the,were%20added%20to%20the%20cantonment.</r>

<r>https://karnatakahistory.blogspot.com/2013/05/bangalore-cantonment-its-origin-growth.html</r>

<r> https://bengaluru.citizenmatters.in/295-bangalore-cantonment-295 </r>

<r>https://www.thehindu.com/features/friday-review/history-and-culture/tracing-the-architect-of-the-cantonment/article2946227.ece</r>

<r>http://ramubangalore.blogspot.com/2013/04/the-man-who-designed-cantonment.html</r>

<r>https://economictimes.indiatimes.com/magazines/panache/date-with-history-in-1864-first-train-chugged-from-cantonment-to-jolarpettai/articleshow/59900418.cms?from=mdr</r>

<r>https://timesofindia.indiatimes.com/city/bengaluru/a-platform-for-the-troops/articleshow/68234872.cms</r>