ಸದಸ್ಯ:Mohit.R1910150

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಪರಿಚಯ[ಬದಲಾಯಿಸಿ]

ನಮಸ್ಕಾರ ನನ್ನ ಹೆಸರು ಮೋಹಿತ್ .ಆರ್. ಬೆಂಗಳೂರಿನಲ್ಲಿಯೆ ಹುಟ್ಟು ಬೆಳೆದಿದ್ದೇನೆ. ನನ್ನ ಮಾತೃಭಾಷೆ ತೆಲುಗು ಆದರೆ ಕನ್ನಡವೇ ಅತ್ಯಂತ ಬಲ್ಹ ಭಾಷೆ. ನಾನು ನನ್ನ ದ್ವಿತೀಯ ಪಿ.ಯು.ಸಿ ವಿಧ್ಯಾಭ್ಯಾಸವನ್ನು ಬೆಂಗಳೂರಿನ ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಮುಗಿಸಿದ್ದೇನೆ. ಈಗ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಇದೇ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. thumb

ಶಾಲಾ  ಮತ್ತು ಕಾಲೇಜು[ಬದಲಾಯಿಸಿ]

ನಾನು ನನ್ನ ಶಾಲಾ ವಿದ್ಯಾಭ್ಯಾಸವನ್ನು 'ಶ್ರೀ ಸರಸ್ವತಿ ವಿದ್ಯಾ ಮಂದಿರ' ಯಂಬ ಶಾಲೆಯಲ್ಲಿ ಮುಗಿಸಿದೆ. ಅತ್ಯಂತ ತುಂಟ ಮತ್ತು ಬಹಳ ಪ್ರಿಯಕರ ವಿದ್ಯಾರ್ಥಿಯಾಗಿದ್ದೆ.ನಾನು ಶಾಲೆಯ ನಾಯಕನಾಗಿ ಆಯ್ಕೆಯಾಗಿದ್ದೆ.ನಾನು ನನ್ನ ಸ್ನೇಹಿತ ಇಬ್ಬರು ಸೇರಿಕೊಂಡು ಎಂದೂ ಮಾಡಿರದ ವಿಷಯಗಳನ್ನು ಪರಿಗಣಿಸಿ ಅನೇಕ ಸುಧಾರಣೆಗಳನ್ನು ತಂದೆವು.ಶಾಲಾ ದಿನಗಳು ಎಂದೂ ಮರೆಯಲಾಗದ ಕ್ಷಣಗಳು. ಇದೇ ಕ್ರೈಸ್ಟ್ ಕಾಲೇಜಿನಲ್ಲಿ ಇದ್ದುದ್ದರಿಂದ ವಿಷವಿದ್ಯಾಲಯದ ಚಟುವಟಿಕೆಗಳನ್ನು ಕಂಡು ಇದೆ ಕಾಲೇಜಿನಲ್ಲಿ ಓದುವ ಹಂಬಲದಿಂದ ಹೆಚ್ಚಿನ ಅಂಕಗಳನ್ನುಗಳಿಸಲು ಪ್ರಯತ್ನ ಪಟ್ಟೆನು.ವಿದ್ಯಾಭ್ಯಾಸದ ಜೊತೆಯಲ್ಲಿ ಇತರ ಚಟುವಟಿಕೆಗಳಲ್ಲಿ ಭಾಗಿಯಾಗುವುದರಲ್ಲಿ ನನಗೆ ಬಹಳ ಆಸಕ್ತಿ ಪಿ.ಯು.ಸಿ ದಿನಗಳಲ್ಲಿ ನಾನು ಬಹಳ ಉತ್ಸಾಹಪೂರಕವಾಗಿ ಇದ್ದೆನು. ಯಾವುದೇ ಕೆಲಸಗಳನ್ನು ಪ್ರಕಟಿಸಿದ ಕೂಡಲೇ ನಾನು ಸ್ವಯಂಪ್ರೇರಣೆಯಿಂದ ಎಲ್ಲವುದರಲ್ಲೂ ಭಾಗಿಯಾಗುತಿದ್ದೆ.ಆಗ ತುಂಬ ಕಷ್ಟವೆನಿಸಿತು ಆದರೆ ಈಗ ಅವುಗಳು ನನ್ನ ಬೆಳವಣಿಗೆಗೆ ಎಷ್ಟು ಸಹಾಯ ಮಾಡಿದವು ಎಂದು ಗೊತ್ತಾಗಿದೆ. ಬಹಲಷ್ಟು ಕಾಲೇಜುಗಳಲ್ಲಿ ನಮ್ಮ ಕಾಲೇಜಿನ ಪರವಾಗಿ ಸ್ಪರ್ಧಿಸಿ ಬಹುಮಾನಗಳನ್ನು ಗೆದ್ದೆನು. ಕಾಲೇಜಿನ ಅತ್ಯಂತ ಪ್ರಸಿದ್ದ ಗುಂಪು 'ವಿದ್ಯಾರ್ಥಿ ಬೆಳವಣಿಗಾ ಕಚೇರಿ'(swo) ನಲ್ಲಿ ಸೆರ್ಪಡೆಯಾದೆ. ಈ ಕೇಂದ್ರವು ನಾನು ಎಂದೂ ಹಿಂದಿರುಗಿಸಲಾಗದಷ್ಟು ನೆನಪುಗಳನ್ನು,ವಿಷಯಗಳನ್ನು,ಕ್ರಿಯಾಶೀಲತೆಯನ್ನು ನನಗೆ ಒದಗಿಸಿತು. ನಾನು 20 ಜನರ ಪೈಕಿ ಆಯ್ಕೆಯಾಗಿ ಮುಖ್ಯ ಸದಸ್ಯನಾಗಿದ್ದೆ. ನನ್ನ ತರಗತಿಯ ಕೊಠಡಿಯಲ್ಲಿ ಕಲಿತದ್ದು ಬಹಳ ಕಡಿಮೆ,swo ಕಚೇರಿಯಲ್ಲಿ ಕಲಿತದ್ದೆ ಅತಿ ಹೆಚ್ಚು. ಹೀಗೆ ನನ್ನ ಸಾಧನೆಗಳನ್ನು ಪರಿಗಣಿಸಿ ನನ್ನ ಒಂದು ಚಿತ್ರಣವನ್ನು ಸಾಮಾಜಿಕ ಜಾಲತಾಣಗಳಲ್ಲಿ,youtube, ಹಾಗು ಸಭಾಂಗಣದಲ್ಲಿ ಎಲ್ಲರಿಗೂ ಪ್ರದರ್ಶಿಲಾಗಿತ್ತು.ನನ್ನ ಹೆಸರು 3000 ಮಂದಿಗೆ ಗೊತ್ತಾಗುವಂತೆ ಮಾಡಿತು. ಇದು ನಾನು ನನ್ನ ಜೀವನ ಪರಿಯಂತ ಹೆಮ್ಮೆ ಪಡುವ ವಿಚಾರ.

ನನ್ನ ಚಟುವಟಿಕೆಗಳು ಮತ್ತು ಕ್ರಿಯಾಶೀಲತೆ[ಬದಲಾಯಿಸಿ]

ನಾನು ಒಬ್ಬ ಕಲಾವಿದ ಕೂಡ ಹೌದು. ಚಿಕ್ಕವಯ್ಯಸ್ಸಿನಿಂದಲೂ ಚಿತ್ರ ಬಿಡಿಸುವುದರಲ್ಲಿ ಬಹಳ ಆಸಕ್ತ. ಇಸ್ಕಾನ್ ನಡೆಸಿದ ರಾಜ್ಯ ಮಟ್ಟದ ಕಲಾ ಸ್ಪರ್ಧೆಯಲ್ಲಿ ಇಡೀ ರಾಜ್ಯಕ್ಕೆ ಮೊದಲ ಬಹುಬಾನವನ್ನು ಪಡೆದುದರಿಂದ ಇಸ್ಕಾನ್ ದೇವಸ್ಥಾನದವರು ನನ್ನನ್ನು ಸನ್ಮಾನಿಸಿದರು. ಆ ಸಂಧರ್ಭ ನನ್ನ ಈ ವರೆಗಿನ ಜೀವನದಲ್ಲಿ ದೊಡ್ಡ ಸಾಧನೆ. ಕಾಮೆರ್ಸ್ ವಿಷದಲ್ಲೂ ಸಹ ನನಗೆ ಆಸಕ್ತಿ ಇರುವುದರಿಂದ ಇವೆರಡರ ಮಧ್ಯೆ ನನ್ನ ವ್ಯಾಸಂಗಕ್ಕೆ ಯಾವ ವಿಭಾಗ ಆಯ್ಕೆ ಮಾಡಿಕೊಳ್ಳುವುದು ಎಂಬ ಚಿಂತೆ ಹತ್ತನೇ ತರಗತಿ ಆದಮೇಲೂ, ಪಿಯುಸಿ ಮುಗಿಸಿದ ನಂತರವೂ ಇತ್ತು. ಈ ಗುಂಗಿನಲ್ಲಿ ವಿಶ್ವವಿದ್ಯಾಲಯದಲ್ಲಿ ಕಾಮರ್ಸ್ ವಿಭಾಗ ಆಯ್ಕೆ ಮಾಡಿ ಜೊತೆಯಲ್ಲಿ ನನ್ನ ಕಲೆಯನ್ನು ಹೆಚಿಸಿಕೊಳ್ಳಲು ನಿರ್ಧರಿಸಿಧೇನೆ.ಒಬ್ಬ ಲೇಖಕ ತನ್ನ ಅಂತರಂಗ ಅನುಭವಿಸುವ ಹಾಗು ತಾನು ಅನುಭವಿಸುವ ಅಂದ ಚಂದವನ್ನು ಕಾಗದ ಮೇಲೆ ಬರಯುತಾನೆ, ಹಾಡುಗಾರ ಹಾಡಿನ ಮೂಲಕ ವ್ಯಕ್ತಪಡಿಸುತಾನೆ, ಅಂತೆಯೇ ಚಿತ್ರಕಾರ ಹಲವಾರು ಬಣ್ಣಗಳ ಮುಲಕ ಅವುಗಳ್ಳನು ಚಿತ್ರಿಸುವನು.ಈ ವಿಷಯ ನನ್ನನ್ನು ಬಹಳ ಆಕರ್ಷಿಸಿತು. ನೂರಾರು ಬಣ್ಣಗಳಲ್ಲಿ ನನಗೆ ಇಷ್ಟವಾದ ಬಣ್ಣ 'ಕಪ್ಪು' ಬಣ್ಣ.ಏಕೆಂದರೆ ಒಂದೊಂದು ಬಣ್ಣಕ್ಕೂ ಒಂದೊಂದು ವಿಶಿಷ್ಟತೆ ಇರುತ್ತದೆ ಎನ್ನಲಾಗುತ್ತದೆ.ಅಂತೆಯೇ ಈಯಲ್ಲಾ ಬಣ್ಣಗಳನ್ನು,ಅವುಗಳ ವಿಶಿಷ್ಟವನ್ನು ಕೂಡಿಸಿದರೆ ಹೀಗೆ ಕಪ್ಪು ಬಣ್ಣವಾಗುತ್ತದೆಯ್ಯೋ ಅಂತಹ ಎಲ್ಲಾ ವಿಷಯಗಳನ್ನು ಸಂಪಾದಿಸಿ ಒಳ್ಳೆಯ ವ್ಯಕ್ತಿ ಆಗಬೇಕೆಂದು ನನ್ನ ಹಂಬಲ.

ವಯಕ್ತಿಕ ಅಭಿಪ್ರಾಯಗಳು[ಬದಲಾಯಿಸಿ]

ಮಾಡುವ ಕೆಲಸಗಳಲ್ಲಿ ಕಷ್ಟಪಟ್ಟು ಹಾಗೂ ಅವುಗಳಿಂದ ಬರುವ ಕಲಿಕೆಯನ್ನು ಹಂಬಲಿಸುವ ನಾನು ಯಾವುದೇ ಅವಕಾಶ ಬಂದಾಗ ತಪ್ಪದೆ ಅವುಗಳನ್ನು ಸದುಪಯೋಗ ಪಡೆಸಿಕೊಳ್ಳುವೆನು.ನಾನು ಒಂದು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವ. ಈ ಮಟ್ಟಕ್ಕೆ ಕಷ್ಟ ಪಟ್ಟು,ಇಂತಹ ದೊಡ್ಡ ವಿಷವಿದ್ಯಾಲಯದಲ್ಲಿ ಪ್ರವೇಶ ಪಡೆದಿರುವುದು ನನಗೆ ಒಂದು ಹೆಮ್ಮೆಯ ವಿಷಯ. ಅಂತೆಯೇ ಇದೆ ರೀತಿ ಕಷ್ಟ ಪಟ್ಟು ಉನ್ನತ ಸ್ಥಾನಕ್ಕೆ ಬೆಳೆದು ನನ್ನನು ಸಾಕಿ ಬೆಳೆಸಿದ ತಂದೆ ತಾಯಿಯರನ್ನು ಗೌರವದಿಂದ ನೋಡಿಕೊಳುವುದು ನನ್ನ ಗುರಿ.ಇತರ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಒಬ್ಬ ವಿದ್ಯಾರ್ಥಿಯಲ್ಲಿ ಇರಬೇಕಾದ ಮುಖ್ಯ ಗುಣ ಎಂದು ಅಭಿಪ್ರಾಯಪಟ್ಟಿಧೇನೆ. ಇವುಗಳ ಮುಲಕ ಸಾಕಷ್ಟು ವಿಷಯಗಳನ್ನು ನಾನು ಕಲಿತೆನು. ಒಬ್ಬ ಆದರ್ಶ ವ್ಯಕ್ತಿಯಾಗಿ ಜೀವಿಸಬೇಕೆಂದು ಸದಾ ಆಶಿಸುತೇನೆ. ಅನೇಕ ರೀತಿಯಲ್ಲಿ ನನಗೆ ಸಹಾಯ ಮಾಡುವ ಪೋಷಕರು, ಗುರುಗಳು, ಈ ವಿದ್ಯಾಲಯ ಹಾಗೂ ದೇಶಕ್ಕೆ ಒಂದಿಷ್ಟು ನನ್ನ ಕಡೆಯಿಂದ ಹಿಂದಿರುಗಿ ಕೊಡಬೇಕೆಂಬ ಗುಣ ನನದಾಗಿದೆ. ಇವುಗಲ್ಲೆಲ್ಲವನ್ನು ಮನದಲ್ಲಿಟ್ಟುಕೊಂಡು, ಒಳ್ಳೆಯ ವ್ಯಕ್ತಿತ್ವ ಬೆಳಸಿಕೊಳ್ಳಬೇಕೆಂಬುದೆ ನನ್ನ ಆಶಯ.

ಧನ್ಯವಾದಗಳು. ಮೋಹಿತ್.ಆರ್. 1910150 1 bcom A