ಸದಸ್ಯ:KruthiRaj.G/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾಗರ ಹಾವು ಎಲಪಫ಼ಿಡೆ ಕುಟುಂಬಕ್ಕೆ ಸೇರಿದ ಒಂದು ವಿಷಕಾರಿ ಸರ್ಪ.

ನಾಗರ ಹಾವು

ನಾಗರ ಹಾವುಗಳು ಅತ್ಯಂತ ಆಧುನಿಕ ಸರೀಸ್ರುಪಗಳು. ನಾಗರ ಹಾವುಗಳು ಭೂಮಿ,ಮರಗಳು,ತಾಜಾ ನೀರು ಇರುವ ತಾಣಗಳಲ್ಲಿ ಕಂಡುಬರುತ್ತವೆ.ನಾಗರಹಾವು ವಾತಾವರಣಕ್ಕೆ ತಕ್ಕಂತೆ ತನ್ನ ದೇಹದ ಉಷ್ಣತೆಯನ್ನು ಹೆಚ್ಚು ಅಥವಾ ಕಡಿಮೆ ಮಾಡಿಕೊಳ್ಳಬಹುದು.ಹಾವುಗಳು ಅಂಟಾರ್ಟಿಕಾ ಖಂಡ ಹೊರತು ಪಡಿಸಿ ಬೇರೆ ಎಲ್ಲಾ ಖಂಡಗಳಲ್ಲು ಕಂಡುಬರುತ್ತವೆ.ನಾಗರ ಹಾವುಗಳು ಭಾರತ ಸೇರಿದಂತೆ ಚೀನಾ, ಬಾಂಗ್ಲಾದೇಶ, ಭೂತಾನ, ಕಾಂಬೋಡಿಯಾ, ನೇಪಾಲ, ಸಿಂಗಾಪುರ, ಥೈಲ್ಯಾಂಡ್ ಮುಂತಾದ ಏಷ್ಯಾ ಖಂಡದ ಭಾಗಗಳಲ್ಲಿ ಕಂಡುಬರುತ್ತವೆ.


ನಾವು ಭಾರತಿಯರು ನಾಗರ ಹಾವುಗಳಿಗೆ ಪೂಜ್ಯ ಸ್ಥಾನವನ್ನು ಕೊಡುತ್ತೇವೆ.ಇದು ಭಾರತೀಯರ ಸಂಪ್ರದಾಯ. ನಾಗರ ಹಾವು ಹಲವಾರು ಪ್ರಾಚೀನ ಹಾಗು ಆಧುನಿಕ ಸಂಸ್ಕ್ರುತಿಗಳಲ್ಲಿ ಒಂದು ಮಹತ್ವಪೂರ್ಣ ಸ್ಥಾನವನ್ನು ಹೊಂದಿದೆ.ನಾಗರ ಹಾವುಗಳನ್ನು ನಾಗ ದೇವ/ದೇವತೆಯ ರೂಪದಲ್ಲಿ ಪೂಜಿಸಿ ಆರಾಧಿಸಲಾಗುತ್ತದೆ.ಪುರಾತನ ಹಾಗು ಧಾರ್ಮಿಕ ಗ್ರಂಥಗಳಲ್ಲಿ ನಾಗರ ಹಾವುಗಳ ಉಲ್ಲೆಖ ಇವೆ.ಹಿಂದೂ ಧರ್ಮದ ಪುರಾಣಗಳಲ್ಲಿ ಕಂಡುಬರುವಂತೆ ನಾಗರ ಹಾವು ಶಿವನ ಕೊರಳಿನಲ್ಲಿ ಆಭರಣವಾಗಿ ವಿಜ್ರುಂಭಿಸುತ್ತದೆ.ಗಣೇಶನ ಉದರ ಹರಿದಾಗ ಹಾವಿನಿಂದ ತನ್ನ ಹೊಟ್ಟೆಯನ್ನು ಕಟ್ಟಿಕೊಂಡನು.ಇದನ್ನು ಉಪವಿತಮ್ ಎಂದು ಕರೆಯಲಾಗುತ್ತದೆ ಹಾಗು ಸತ್ವವನ್ನು ಪ್ರತಿಬಿಂಬಿಸುತ್ತದೆ. ಹಾಗೆಯೆ ವಿಷ್ಣುವಿನ ಹಾಸಿಗೆಯಾಗಿಯೂ ನಾಗರ ಹಾವು ಕಂಡುಬರುತ್ತದೆ. ಸಮುದ್ರ ಮಂಥನ ಮಾಡುವುದರಲ್ಲಿಯು ನಾಗರಹಾವಿನ ಪಾತ್ರವನ್ನು ಉಲ್ಲೆಖಿಸಿದ್ದಾರೆ. ಹೀಗೆ ನಾಗರ ಹಾವಿನ ಪಾತ್ರ ನಮ್ಮ ಪುರಾಣಗಳಲ್ಲಿ ಹಾಸು-ಹೊಕ್ಕಾಗಿದೆ.

ಹಿಂದೂ ಪುರಣಗಳಲ್ಲಿ ಕಂಡುಬರುವಂತೆ ನಾಗರ ಹಾವುಗಳ ವಾಸಸ್ಥಾನ 'ಪಾತಾಳಲೋಕ'.ಪಾತಾಳಲೋಕದ ಕೆಳಭಾಗದಲ್ಲಿ ನಾಗಲೋಕವಿರುವುದೆಂದು ನಂಬಿಕೆ ಇದೆ.ಇಲ್ಲಿ ಎಲ್ಲ ಸರ್ಪಗಳು ವಾಸಿಸುತ್ತವೆ,ಈ ಎಲ್ಲಾ ನಾಗರಹಾವುಗಳಿಗೆ ಒಡೆಯ 'ನಾಗರಾಜ' ಎನ್ನುವರು.ಹಲವಾರು ಸನ್ನಿವೆಶಗಳಲ್ಲಿ ದೇವ-ದೇವತೆಗಳು ನಾಗ ವೇಶವನ್ನು ಧರಿಸಿರುವ ಉದಾಹರಣೆಗಳೂ ಇವೆ.

ನಾಗರ ಹಾವಿನ ವಿಗ್ರಹಗಳು

ಭಾರತೀಯರು ಆಧುನಿಕ ಕಾಲದಲ್ಲೂ ಸರ್ಪಗಳಿಗೆ ವಿಷೇಶ ಸ್ಥಾನ-ಮಾನವನ್ನು ನೀಡಿದ್ದೇವೆ. ಹಿಂದು ಧರ್ಮದವರು ನಾಗರಹಾವು ಹಾಗು ಸರ್ಪಗಳನ್ನು ಶ್ರಾವಣ ಮಾಸದ ಐದನೇ ದಿನದಂದು 'ನಾಗರ ಪಂಚಮಿ' ಎಂದು ಆಚರಿಸುತ್ತೇವೆ[೧].ಇದು ಬಹಳ ಮಹತ್ವವಾದ ಹಬ್ಬವಾಗಿದೆ.ಈ ದಿನದಂದು ನಾಗರ ಹಾವನ್ನು ಪೂಜಿಸಲಾಗುತ್ತದೆ. ಈ ದಿನದಂದು ಮಹಿಳೆಯರು ನಾಗರ ಹಾವಿಗೆ ಹಾಲನ್ನು ಎರೆದು ವಿಷೇಶ ಪೂಜೆ ಸಲ್ಲಿಸುತ್ತಾರೆ. ನಾಗರ ಹಾವನ್ನು ಹಾಲು,ಸಿಹಿ ತಿನಿಸುಗಳು, ದೀಪಗಳ ಅಲಂಕಾರದಿಂದ ಪೂಜಿಸುತ್ತಾರೆ. ನಾಗರ ಹಾವಿನ ಬೆಳ್ಳಿಯ ವಿಗ್ರಹ ಅಥವಾ ಮರ,ಗೋಡೆಗಳ ಮೇಲಿನ ನಾಗರ ಹಾವಿನ ಕೆತ್ತನೆಗಳಿಗೆ ಹಾಲು ಹಾಗು ನೀರಿನಿಂದ ಸ್ನಾನ ಮಾಡಿಸಲಾಗುತ್ತದೆ. ಹಾಗೂ ವಾಚನಗಳನ್ನು ಜಪಿಸಿ ಪೂಜೆ ಸಲ್ಲಿಸಲಾಗುತ್ತದೆ. ಈ ದಿನದಂದು ಭಕ್ತರು ಉಪಸವನ್ನಿಟ್ಟು ಬ್ರಹ್ಮಣರಿಗೆ ಊಟವನ್ನು ಬಡಿಸುತ್ತಾರೆ.ಈ ಹಬ್ಬದ ದಿನ ಬಹಳ ಮುಖ್ಯವಾದ ದಿನವಾಗಿರುತ್ತದೆ.

ನಾಗರ ಪಂಚಮಿ ಆಚರಣೆ

ಒಂದು ಸಮಯದಲ್ಲಿ ಸರ್ಪಗಳ ಆರಾಧನೆ ಬಹಳ ವ್ಯಾಪಕವಾಗಿ ಅನೇಕ ವಿಧಗಳಲ್ಲಿ ಕಂಡುಬರುತ್ತಿದ್ದವು.ಹಿಂದೂ ಹಾಗು ಬೌದ್ಧ ಧರ್ಮಗಳಲ್ಲಿ ನಾಗರಹಾವುಗಳನ್ನು ಉನ್ನತ ಸ್ಥಾನಗಳಲ್ಲಿ ಸೂಚಿಸುತ್ತಾರೆ.ನಂಬಿಕೆಗಳಲ್ಲದೆ ಹಲವಾರು ಮೂಢ ನಂಬಿಕೆಗಳಿಗೂ ನಾಗರ ಹಾವುಗಳು ಪಾಲಗಿವೆ. ಸಾಮಾನ್ಯವಾಗಿ ನಾಗರ ಹಾವುಗಳು 'ಕಾಳ' ಎಂದರೆ ಸಾವು,ಸಮಯ ಅಥವಾ ಮರಣವನ್ನು ಸೂಚಿಸುತ್ತದೆ. ನಾಗರ ಹಾವು ಮರಣ,ಅನಿಷ್ಚಿತ ಸಾವುಗಳನ್ನು ಸೂಚಿಸುತ್ತವೆ ಎಂಬ ಮೂಢನಂಬಿಕೆಯೂ ಇದೆ. ಕೆಲವು ನಂಬಿಕೆಗಳಾ ಪ್ರಕಾರ ನಾಗರ ಹಾವಿನ ಸೇಡು ಹನ್ನೆರಡು ವರುಷಗಳ ವರೆಗು.ಹಾವನ್ನು ಆಕಸ್ಮಿಕವಾಗಿಯೂ ಕೊಲ್ಲುವುದು ಅಪಾಯಕಾರಿ ಎಂದು ನಂಬಿಕೆ.

      ನಾಗರ ಹಾವುಗಳು ಸುಮಾರು ೧೬-೧೮ ಅಡಿ ಉದ್ದದ ವರೆಗು ಇರುತ್ತವೆ ಹಾಗು ವಿಶ್ವದ ಉದ್ದದ ವಿಷ-ಪೂರಿತ ಹಾವುಗಳೆಂದು ಹೆಸರಾಗಿವೆ.ಇವುಗಳು ೨೦-೨೮ ಪೌಂಡ್ ತೂಕವಾಗಿರುತ್ತವೆ.ನಾಗರ ಹಾವುಗಳ ಆಹಾರ ಕ್ರಮವು ಅಧಿಕವಾಗಿ ಇತರೆ ಹಾವುಗಳನ್ನು ಒಳಗೊಂಡಿವೆ.ವಿಷಕಾರಿಯಲ್ಲದ ಇತರೆ ಹಾವುಗಳನ್ನು ನಾಗರ ಹಾವುಗಳು ಸೇವಿಸುತ್ತವೆ.ಈ ಆಹಾರದ ಕೊರತೆ ಉಂಟಾದಾಗ ನಾಗರ ಹಾವುಗಳು ಹಲ್ಲಿಗಳು ಹಾಗು ಇತರೆ ಸಣ್ಣ ಪುಟ್ಟ ಜೀವಿಗಳನ್ನು ಆಹಾರವಾಗಿ ಸೇವಿಸುತ್ತವೆ.
      ಜನಸಾಮಾನ್ಯರಲ್ಲಿ ಇರುವ ನಂಬಿಕೆಗಳ ಪ್ರಕಾರ ನಾಗರ ಹಾವು ಹಾಲನ್ನು ಕುಡೀಯುತ್ತವೆ ಎಂಬುದಿದೆ[೨].ಇದಲ್ಲದೆ ನಾಗರ ಹಾವುಗಳು ಸಂಗೀತವನ್ನು ಕೇಳಿಸಿಕೊಳ್ಳಬಹುದು ಎಂಬುವ ಮಾತಿದೆ.ಹಾವಾಡಿಗನ ಪುಂಗಿಯ ಶಬ್ದವನ್ನು ಕೇಳಿ ಹಾವು ನರ್ತಿಸುತ್ತದೆ ಎಂಬುದು ಸುಳ್ಳು.ಹಾವುಗಳಿಗೆ ಶ್ರವಣವಲ್ಲಿ ಆಲಿಸುವ ಶಕ್ತಿ ಇಲ್ಲವೆಂಬುದು ತಿಳಿದುಬಂದಿರುತ್ತದೆ.ಹೀಗೆ ನಂಬಿಕೆಗಳ ಜೊತೆಗೆ ಹಲವಾರು ಮೂಢ ನಂಬಿಕೆಗಳಿಗೂ ನಾಗರ ಹಾವು ಭಾಗಿಯಾಗಿದೆ.

ಉಲ್ಲೇಖನಗಳು[ಬದಲಾಯಿಸಿ]

  1. https://en.wikipedia.org/wiki/Nag_Panchami
  2. https://bro4u.com/blog/8-myths-about-snakes-in-india-which-are-scientifically-untrue/