ಸದಸ್ಯ:K.R Roshith/ನನ್ನ ಪ್ರಯೋಗಪುಟ/1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಂ.ಎಲ್.ಎಮ್ಮೆಟ್[ಬದಲಾಯಿಸಿ]

  ಎಂ.ಎಲ್.ಎಮ್ಮೆಟ್ ರವರು ರೀಡಿಂಗ್ , ಬರ್ಕ್ಷೈರ್, ಇಂಗ್ಲೆಂಡಿನಲ್ಲಿ ಜನಿಸಿದರು.ರೀಡಿಂಗ್ ,ಇಂಗ್ಲೆಂಡಿನ ಒಂದು ಐತಿಹಾಸಿಕ ನಗರ, ಥೆಂಸ್ ಹಾಗು ಕೆನ್ನಿಟ್ ನದಿಗಳ ತೀರದಲ್ಲಿದೆ. ತಮ್ಮ ವಿದ್ಯಾಭ್ಯಾಸವನ್ನು ಅಲ್ಲಿಯೆ ಪಡೆದು ನಂತರ ತಮ್ಮ ಕುಟುಂಬದೊಡನೆ ಆಸ್ಟ್ರೇಲಿಯಾದಲ್ಲಿ ನೆಲೆಸಿದರು.೧೯೬೭ರ 'ಮಿಡಲ್ ಈಸ್ಟ್ ವಾರ್' ಸಂದರ್ಭದಲ್ಲಿ ಸೂಯೆಜ್ ಕಾಲುವೆಯ ಮೂಲಕ ಕೊನೆಯ ಹಡಗಿನಲ್ಲಿ ಆಸ್ಟ್ರೇಲಿಯಾಗೆ ಆಗಮಿಸುತ್ತಾರೆ. ಅಡಿಲೇಡ್ ಮಕ್ಕಳ ಆಸ್ಫತ್ರೆ ಮತ್ತು ರಾಯಲ್ ಅಡಿಲೇಡ್ ಆಸ್ಫತ್ರೆಯಲ್ಲಿ ನೋಂದಾಯಿತ ನರ್ಸಾಗಿ ತರಬೇತಿಯನ್ನು ಪಡೆದರು.ಮುಂದೆ ತೀವ್ರ ನೀಗಾ ಕೋರ್ಸಗಳನ್ನು ಮುಗಿಸಿ , ರಾಯಲ್ ಅಡಿಲೇಡ್ ಆಸ್ಫತ್ರೆಯ ತೀವ್ರ ನೀಗಾ ಘಟಕ, ರಕ್ತನಾಳ ನೀಗಾ ಘಟಕ, ಹೀಗೆ ಮುಂತಾದ ಘಟಕಗಳಲ್ಲಿ ಸೇವೆಯನ್ನು ಸಲ್ಲಿಸುತ್ತಾರೆ.ರಜಾದಿನಗಳ ಬಿಡುವಿನಲ್ಲಿ ,ನೆತ್ತರಸೇರ್ವೆಯಲ್ಲಿ ರಕ್ತಪಿಶಾಚಿಯಾಗಿ; ಹಾಕರ್ ಮತ್ತು ಜಿಲ್ಲಾ ಆಸ್ಪತ್ರೆ ಗಳಲ್ಲಿ ವ್ಯವಸ್ಥಾಪಿಕೆಯಾಗಿ; ಆಷ್ಫರ್ಡ್, ಕ್ಯಾಲ್ವರಿ, ಫ಼್ಲಿಂಡರ್ಸ್, ಮೊಡ್ಬರಿ, ಹಾಗೂ ರಿಪಟ್ರಿಯೇಶನ್ ಆಸ್ಪತ್ರೆಗಳಲ್ಲಿ ದಾದಿಯಾಗಿ ಕೆಲಸ ಮಾಡಿ , ತಮ್ಮ ಕಲಾ ಪದವಿಯನ್ನು ಅಡಿಲೇಡ್ ವಿಶ್ವವಿದ್ಯಾಲಯದಿಂದ ಪಡೆದರು. ಪುನಃ  ಅಡಿಲೇಡ್ ಮಕ್ಕಳ ಆಸ್ಫತ್ರೆಗೆ ತೆರಳಿ , ಎರಡು ವರ್ಷ ಅವದಿಯ ಗೌರವ ಪದವಿಯನ್ನು ಪಡೆಯುತ್ತಾರೆ. ಅಲ್ಲಿ ನಾಲ್ಕು ವರ್ಷ ಅಪಘಾತ ವಲಯದ ಹಿರಿಯ ಅರ್.ಎಚ್ ಆಗಿ ದುಡಿಯುತ್ತಾರೆ. ಪ್ರೊ.ಕೆನ್ ರುಥ್ವೆನ್ ರವರ ಬಳಿ ಸಾಹಿತ್ಯಿಕ  ಸಿದ್ದಾಂತಗಳನ್ನು ಮತ್ತು ಟೊಮ್ ಶ್ಯಾಪ್ಕಾಟ್, ಆಂಡ್ರ್ಯೂ ಟೇಲರ್ ರವರ ಬಳಿ  ಕವನ ಹಾಗು ಪೊಯಟ್ಕ್ಸ್ ಅಧ್ಯಯನವನ್ನು ಮಾಡುತ್ತಾರೆ. ಇವರು ಪಿಎಚ್.ಡಿ ಪದವಿಯನ್ನು ತೆಗೆದುಕೊಳ್ಳಲು ಮುಂದದಾಗ, ಕಾಮನ್ವೆಲ್ತ್ ವಿದ್ಯಾರ್ಥಿವೇತನ ಲಭಿಸಿ, ಅಡಿಲೇಡ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಗಳನ್ನು ಮಾಡುತ್ತಾ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಾರೆ. ಕೊನೇಯದಾಗಿ ಮಾಧ್ಯಮ ಅಧ್ಯಾಯನ ಕ್ಷೇತ್ರದಲ್ಲಿ ದುಡಿದು, ೨೦೦೫ರಲ್ಲಿ ನಿವೃತ್ತಿಯಾಗುತ್ತಾರೆ. ಅವರು ಶಿಕ್ಷಣದಲ್ಲಿ ಡಿಪ್ಲೊಮಾವನ್ನು ದಕ್ಷಿಣ ಆಸ್ಟ್ರೇಲಿಯಾ ವಿಶ್ವವಿದ್ಯಾಲಯ ದಿಂದ, ಇಂಗ್ಲೀಷ್ ನಲ್ಲಿ ವಿಶೇಷ ಪದವಿ, ಗಣಕ ವಿಜ್ಞಾನ ಮತ್ತು ವಿನ್ಯಾಸ ಪದವಿಗಳನ್ನು ಪಡೆದಿದ್ದಾರೆ. ಆಸ್ಟ್ರೇಲಿಯಾದ ಪ್ರಮುಕ ರೇಡಿಯೋ ಸಂಸ್ಥೆ ಇವರಿಗೆ ತರಭೇತಿ ನೀಡಿ, ಐದು ವರ್ಷಗಳ ಕಾಲ (೧೯೭೭-೧೯೮೨)ಚಲನಚಿತ್ರ ವಿಮರ್ಶಕಿಯಾಗಿ ಆಯ್ಕೆಮಾಡಿಕೊಳ್ಳುತ್ತಾರೆ ಮತ್ತೆ ೨೦೦೫ರಲ್ಲಿ ಅಡಿಲೇಡ್ ರೇಡಿಯೋದಲ್ಲಿ ಪುನ್ಃ ತರಭೇತಿಯನ್ನು ಪಡೆಯುತ್ತರೆ.ಕಾನೂನು ಸೇವೆಗಳ ಆರ್ಹ ಮಧ್ಯವರ್ತಿಯಾಯೂ ಸೇವೆಸಲ್ಲಿಸಿದ್ದರೆ.
 ಎಮ್ಮೆಟ್ ರವರು ೨೦೦೫ ರಲ್ಲಿ ಎಫ್.ಎಸ್.ಪಿ ಸಂಸ್ಥೆಯನ್ನು ಪುನ್ಃ ಸೇರಿ ಸಂಚಾಲಕಿ ಮತ್ತು ಖಾಜಾಂಕಿಯಾಗುತ್ತಾರೆ. ಈ ಹುದ್ದೆಗೆ ಏರುವ ಮೊದಲು ಆ ಸಂಸ್ಥೆಯಲ್ಲಿಯೇ ಪಬ್ಲಿಷಿಂಗ್ ಅಧಿಕಾರಿ, ಪ್ರಚಾರ ಅಧಿಕಾರಿ, ಮಾರ್ಗದರ್ಶಿ ಕೋ-ಆಡಿನೇಟರ್, ಆರ್ಟ್ ಗ್ಯಾಲರಿ ಕೋ-ಆಡಿನೇಟರ್, ಕವಿಗಳ ಏರ್ ಕೋ-ಆಡಿನೇಟರ್ ಆಗಿ ಸೇವೆಸಲ್ಲಿಸಿದ್ದಾರೆ.ಇವರು ಗಿಟನೊ ಅಲಿಯೋ ರವರೊಡನೆ ಸಹ-ಸಂಪಾದಕಿಯಾಗಿ ಕೂಡಿ 'ರಿವೈರ್ಡ್ ಎಫ್.ಎಸ್.ಪಿ  ೩೨ ಆಂಥಾಲಜಿ' ಕೃತಿಯನ್ನು ಸಂಪಾದಿಸಿದ್ದಾರೆ. ಇವರ 'ಸ್ನ್ಯಾಚಿಂಗ್ ಟಂಮ್' ಕವಿತೆಗೆ ,ಕವಿ ಕೆನ್ ಬೋಲ್ಟನ್ ಮೆಚ್ಚುಗೆ ವ್ಯಕ್ತ ಪಡಿಸಿ 'ನಿವ್ ಪೊಯಟ್ ೧೪' ಪುಸ್ತಕದಲ್ಲಿ ರಾಬ್ ಹಾರ್ಡಿ ಮತ್ತು ಥಾಮಸ್ ಸಲ್ಲಿವಾನ್ ಕವಿಗಳೊಂದಿಗೆ ಪ್ರಕಟಿಸುವಂತೆ ಕೊರುತಾರೆ.
 ಇವರು ವೃತ್ತಿಪರ ಸಂಪಾದಕಿ, ಪುಸ್ತಕ ವಿಮರ್ಶಕಿ, ಬರಹಗರ್ತಿ ಹಾಗು ಕವಾಯಿತ್ರಿ. ಸಾಹಿತ್ಯ ಕ್ಷೇತ್ರಕ್ಕೆ ಇವರ ಕೊಡುಗೆಗಳು.'ದಿ ಫ಼ೊರ್ಸ್ಸೆನಿಕ್ ಸೈನ್ಸ್ ಅಫ್ ಗ್ರಿಫ್';'ಸೋನ್ನೆಟ್ ಫ಼ಾರ್ ಎ ಸುಸೈಡ್';'ತುರ್ಕಿಶ್  ಎಸ್ಎಂವೈಆರ್ನ';'ಬವೇರಿಯನ್ ಆಂಟ್' ಮುಂತಾದವು.

[೧] [೨]

  1. http://friendlystreetpoets.org.au/poetry/sample-of-poets/emmett/
  2. https://en.wikipedia.org/wiki/M._L._Emmett