ಸದಸ್ಯ:Ganeshbhatkoppalatota/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಂಪಕಮಾಲೆ[ಬದಲಾಯಿಸಿ]


ಕನ್ನಡದ ಖ್ಯಾತಕರ್ಣಾಟವೃತ್ತಗಳಲ್ಲಿ ಚಂಪಕಮಾಲಾವೃತ್ತವು ೨೧ ಅಕ್ಷರಗಳಿರುವ ವೃತ್ತವಾಗಿದೆ. ಪಂಪ,ರನ್ನ ಮೊದಲಾದ ಹಲವಾರು ಕವಿಗಳ ಕಾವ್ಯಗಳಲ್ಲಿ ಕಂಡುಬರುತ್ತದೆ.
ಇದರಲ್ಲಿ ನ-ಜ-ಭ-ಜ-ಜ-ಜ-ರ ಎಂಬ ಏಳು ಅಕ್ಷರಗಣಗಳಿರುತ್ತವೆ.
ಚಂಪಕಮಾಲೆ
U U U| U _ U| _ UU| U _ U| U _ U| U_ U|_ U _ |
ನಜಭ | ಜಜಂಜ| ರಂಬಗೆ|ಗೊಳುತ್ತಿ| ರೆ ಚಂಪ|ಕಮಾಲೆ|ಯೆಂದಪರ್

ಹರಿಹರನ "ಗಿರಿಜಾಕಲ್ಯಾಣ" ಮಹಾಪ್ರಬಂಧದಿಂದ ಚಂಪಕಮಾಲಾವೃತ್ತಕ್ಕೆ ಒಂದು ಉದಾಹರಣೆ-
ಕರಮೆಸೆದತ್ತು ಕೌಮುದಿಯ ಬಿತ್ತು ಚಕೋರದ ತುತ್ತು ನೀರಜೋ-
ತ್ಕರದ ವಿಪತ್ತು ತಾರೆಗಳ ತೊತ್ತು ಸುಧಾಂಬುಧಿಯೊತ್ತು ಜಾರಸುಂ-
ದರಿಯರ ಮಿತ್ತುಮಂಬರಪುಳಿಂದಿಯ ಮೂಗಿನ ನತ್ತು ನೋಡಲ-
ಚ್ಚರಿಯೆನಿಸಿತ್ತು ಮೂಡುದೆಸೆಯಿಂದೆಸೆದತ್ತು ಸುಧಾಂಶುಮಂಡಲಂ||