ಸದಸ್ಯ:Chithraksha.N/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾರುಕಟ್ಟೆ ಮೌಲ್ಯನಿರ್ಣಯ https://kn.wikipedia.org/s/fna ಲೆಕ್ಕ ಪರಿಶೋದನೆ ಎಂದರೆ : ಮೊಂಟಗೊಮರಿ ಅವರ ಪ್ರಕಾರ "ಯಾವುದೊಂದು ವ್ಯವಹಾರಿ ಸಂಸ್ಧೆ ಯು ಅಥವಾ ಇತರ ಸಂಸ್ಥೆ ಯ ಹಣಹಾಸಿನ ವ್ಯವಹಾರಗಳನ್ನು ಮತ್ತು ಅವುಗಳಿಂದ ಪರಿಣಾಮವನ್ನು ಕಂಡು ಹಿಡಿದು ಅವುಗಳ ಬಗ್ಗೆ ವರದಿ ಸಲ್ಲಿಸಲು ಆ ಸಂಸ್ಥೆ ಯ ಲೆಕ್ಕದ ಪತ್ರಗಳನ್ನು ಮತ್ತು ದಾಖಲೆ ಪತ್ರಗಳನ್ನು ಸುವ್ಯ ವಸ್ಥಿತವಾಗಿ ಪರಿಶೀಲುವುದೇ ಲೆಕ್ಕ ಪರಿಶೋದನೆಯಾಗಿದೆ. ಮಾರುಕಟ್ಟೆ ಮೌಲ್ಯನಿರ್ಣಯ ಅಥವಾ ನ್ಯಾಯೋಚಿತ ಮೌಲ್ಯದ ಲೆಕ್ಕಗಾರಿಕೆ ಎಂಬುದು ಸ್ವತ್ತು ಅಥವಾ ಹೊಣೆಗಾರಿಕೆಯ ಪ್ರಸಕ್ತ ಮಾರುಕಟ್ಟೆ ಬೆಲೆಯನ್ನು ಆಧರಿಸಿದ ಒಂದು ಸ್ವತ್ತು ಅಥವಾ ಹೊಣೆಗಾರಿಕೆಯ ಮೌಲ್ಯಕ್ಕೆ ಸಂಬಂಧಿಸಿರುವ, ಅಥವಾ ಅದೇ ರೀತಿಯ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳಿಗೆ ಸಂಬಂಧಿಸಿರುವ, ಅಥವಾ ವಸ್ತುನಿಷ್ಠವಾಗಿ ಮೌಲ್ಯ ನಿರ್ಣಯಿಸಲ್ಪಟ್ಟ ಮತ್ತೊಂದು "ನ್ಯಾಯೋಚಿತ" ಮೌಲ್ಯವನ್ನು ಆಧರಿಸಿರುವ ಲೆಕ್ಕಗಾರಿಕೆಗೆ ಉಲ್ಲೇಖಿಸಲ್ಪಡುತ್ತದೆ. ನ್ಯಾಯೋಚಿತ ಮೌಲ್ಯದ ಲೆಕ್ಕಗಾರಿಕೆಯು 1990ರ ದಶಕದ ಆರಂಭದಿಂದಲೂ USನ ಸಾರ್ವತ್ರಿಕವಾಗಿ ಸಮ್ಮತಿಸಲಾದ ಲೆಕ್ಕಗಾರಿಕೆಯ ತತ್ತ್ವಗಳ (ಜೆನರಲಿ ಅಕ್ಸೆಪ್ಟೆಡ್‌ ಅಕೌಂಟಿಂಗ್‌ ಪ್ರಿನ್ಸಿಪಲ್ಸ್‌-GAAP) ಒಂದು ಭಾಗವಾಗಿದೆ, ಮತ್ತು ಅಲ್ಲಿಂದೀಚೆಗೆ ಹೆಚ್ಚಿನ ಪ್ರಮಾಣದಲ್ಲಿ ಅದು ಬಳಕೆಗೊಳಗಾಗುತ್ತಾ ಬಂದಿದೆ. ಮಾರುಕಟ್ಟೆಯ ಸ್ಥಿತಿಗತಿಗಳು ಬದಲಾದಂತೆ, ಮಾರುಕಟ್ಟೆ ಮೌಲ್ಯನಿರ್ಣಯದ ಲೆಕ್ಕಗಾರಿಕೆಯು ಆಯವ್ಯಯ ಪಟ್ಟಿಯ ಮೇಲಿನ ಮೌಲ್ಯಗಳು ಆಗಿಂದಾಗ್ಗೆ ಬದಲಾವಣೆಯಾಗುವಂತೆ ಮಾಡಬಲ್ಲದು. ಇದಕ್ಕೆ ಪ್ರತಿಯಾಗಿ, ಒಂದು ಸ್ವತ್ತು ಅಥವಾ ಹೊಣೆಗಾರಿಕೆಯ ಮೂಲ ವೆಚ್ಚ/ಬೆಲೆಯ ಮೇಲೆ ಆಧರಿಸಲ್ಪಟ್ಟಿರುವ ಕಡತದ ಮೌಲ್ಯವು ಅತ್ಯಂತ ಸ್ಥಿರವಾಗಿರುತ್ತದೆಯಾದರೂ, ಅದು ಹಳತಾದದ್ದಾಗಬಹುದು ಮತ್ತು ಕರಾರುವಾಕ್ಕಾಗಿಲ್ಲದ್ದಾಗಬಹುದು. ಸ್ವತ್ತುಗಳು ಮತ್ತು ಹೊಣೆಗಾರಿಕೆಗಳ "ಮೂಲಭೂತ" ಮೌಲ್ಯಗಳಿಂದ ಮಾರುಕಟ್ಟೆ ಬೆಲೆಗಳು ಒಂದುವೇಳೆ ಮಾರ್ಗವನ್ನು ಬದಲಾಯಿಸಿದಲ್ಲಿ, ಮಾರುಕಟ್ಟೆ ಮೌಲ್ಯನಿರ್ಣಯದ ಲೆಕ್ಕಗಾರಿಕೆಯೂ ಸಹ ಕರಾರುವಾಕ್ಕಾಗಿಲ್ಲದ ಸ್ಥಿತಿಯನ್ನು ತಲುಪಬಹುದು. ಏಕೆಂದರೆ, ಪ್ರಾಯಶಃ ತಪ್ಪಾದ ಮಾಹಿತಿಯ ಕಾರಣದಿಂದಾಗಿ ಅಥವಾ ಅತಿಯಾದ-ಆಶಾವಾದ ಮತ್ತು ಅತಿಯಾದ-ನಿರಾಶಾವಾದದ ನಿರೀಕ್ಷೆಗಳ ಕಾರಣದಿಂದಾಗಿ, ಸ್ವತ್ತುಗಳಿಂದ ಬರುವ ಆದಾಯ ಹಾಗೂ ಹೊಣೆಗಾರಿಕೆಗಳಿಂದ ಬರುವ ವೆಚ್ಚಗಳ ಭವಿಷ್ಯದ ಮೌಲ್ಯವನ್ನು ಸಮಷ್ಟಿಯಲ್ಲಿ ಮತ್ತು ಕರಾರುವಾಕ್ಕಾಗಿ ಮೌಲ್ಯಮಾಪನ ಮಾಡಲು ಖರೀದಿದಾರರು ಹಾಗೂ ಮಾರಾಟಗಾರರು ಅಸಮರ್ಥರಾಗಬಹುದು.

ಇತಿಹಾಸ ಮತ್ತು ಅಭಿವೃದ್ಧಿ ಮಾರುಕಟ್ಟೆ ಮೌಲ್ಯನಿರ್ಣಯ ದ ಪರಿಪಾಠವು ಲೆಕ್ಕಗಾರಿಕೆಯ ಒಂದು ಸಾಧನವಾಗಿ 20ನೇ ಶತಮಾನದಲ್ಲಿನ ಮುಮ್ಮಾರಿಕೆಯ ಸರಕುಗಳ ವಿನಿಮಯ ಕೇಂದ್ರಗಳಲ್ಲಿನ ವ್ಯಾಪಾರಿಗಳ ಸಮುದಾಯದಲ್ಲಿ ಮೊದಲಿಗೆ ಅಭಿವೃದ್ಧಿಪಡಿಸಲ್ಪಟ್ಟಿತು. ಸಾಂಪ್ರದಾಯಿಕ ವಿನಿಮಯ ವ್ಯಾಪಾರಗಾರಿಕೆಯ ವಿಭಾಗಗಳಿಂದ ದೂರವುಳಿದಿದ್ದ ದೊಡ್ಡ ಬ್ಯಾಂಕುಗಳು ಮತ್ತು ಸಂಸ್ಥೆಗಳಿಗೆ 1980ರ ದಶಕದವರೆಗೆ ಈ ಪರಿಪಾಠವು ಹಬ್ಬಿರಲಿಲ್ಲ, ಮತ್ತು 1990ರ ದಶಕದಲ್ಲಿ ಪ್ರಾರಂಭಗೊಂಡ ಮಾರುಕಟ್ಟೆ ಮೌಲ್ಯನಿರ್ಣಯ ಲೆಕ್ಕಗಾರಿಕೆಯು ಹಗರಣಗಳನ್ನು ಉಂಟುಮಾಡಲು ಶುರುಮಾಡಿತು. ಮೂಲ ಪರಿಪಾಠವನ್ನು ಅರ್ಥಮಾಡಿಕೊಳ್ಳಬೇಕೆಂದರೆ, ಓರ್ವ ಮುಮ್ಮಾರಿಕೆಯ ಸರಕುಗಳ ವ್ಯಾಪಾರಿಯು ಒಂದು ಸ್ಥಾನವನ್ನು ಪಡೆಯುವಾಗ ವಿನಿಮಯ ಕೇಂದ್ರದಲ್ಲಿ ಒಂದು "ಠೇವಣಿ ಹಣ" ಎಂದು ಕರೆಯಲ್ಪಡುವ ಹಣವನ್ನು ಠೇವಣಿಯಾಗಿ ಹೂಡುತ್ತಾನೆ ಎಂಬುದನ್ನು ಪರಿಗಣಿಸಿ. ನಷ್ಟಕ್ಕೆ ಪ್ರತಿಯಾಗಿ ವಿನಿಮಯ ಕೇಂದ್ರವನ್ನು ರಕ್ಷಿಸಿಕೊಳ್ಳುವ ಆಶಯ ಇದರ ಹಿಂದಿರುತ್ತದೆ. ಪ್ರತಿ ವ್ಯಾಪಾರಗಾರಿಕೆಯ ದಿನದ ಅಂತ್ಯದ ವೇಳೆಗೆ, ಕರಾರು ತನ್ನ ಪ್ರಸಕ್ತ ಮಾರುಕಟ್ಟೆ ಮೌಲ್ಯದಲ್ಲಿ ಮೌಲ್ಯನಿರ್ಣಯಕ್ಕೆ ಒಳಗಾಗಿರುತ್ತದೆ. ಒಂದು ವೇಳೆ ವ್ಯಾಪಾರಿಯು ವ್ಯವಹಾರವೊಂದರ ಗೆಲ್ಲುವ ಪಕ್ಷದಲ್ಲಿದ್ದರೆ, ಆ ದಿನದಂದು ಅವನ ಕರಾರು ಮೌಲ್ಯದಲ್ಲಿ ಹೆಚ್ಚಳ ಕಂಡಿದೆ ಎಂದರ್ಥ, ಮತ್ತು ವಿನಿಮಯ ಕೇಂದ್ರವು ಈ ಲಾಭವನ್ನು ಅವನ ಖಾತೆಗೆ ಪಾವತಿಸುತ್ತದೆ. ಮತ್ತೊಂದೆಡೆ, ಒಂದು ವೇಳೆ ಅವನ ಕರಾರಿನ ಮಾರುಕಟ್ಟೆ ಬೆಲೆಯು ಕುಸಿದಲ್ಲಿ, ಠೇವಣಿ ಇಡಲ್ಪಟ್ಟ ಠೇವಣಿ ಹಣವನ್ನು ಹೊಂದಿರುವ ಅವನ ಖಾತೆಗೆ ವಿನಿಮಯ ಕೇಂದ್ರವು ಖರ್ಚು ವಿಧಿಸುತ್ತದೆ. ಒಂದು ವೇಳೆ ಈ ಖಾತೆಗಳ ಶಿಲ್ಕುಮೊತ್ತವು ಸ್ಥಾನವನ್ನು ಕಾಯ್ದುಕೊಂಡು ಹೋಗುವಲ್ಲಿ ಅಗತ್ಯವಾಗಿರುವ ಠೇವಣಿಗಿಂತ ಕಡಿಮೆಯಾಗಿರುವುದು ಕಂಡುಬಂದಲ್ಲಿ, ಸದರಿ ವ್ಯಾಪಾರಿಯು ತನ್ನ ಸ್ಥಾನವನ್ನು ಕಾಯ್ದುಕೊಳ್ಳಲು ಖಾತೆಗೆ ತತ್ಕ್ಷಣದಲ್ಲಿ ಹೆಚ್ಚುವರಿ ಠೇವಣಿ ಹಣವನ್ನು ಪಾವತಿಸುವುದು ಅತ್ಯಗತ್ಯವಾಗಿರುತ್ತದೆ (ಒಂದು "ಠೇವಣಿ ಹಣದ ಕರೆ" ಎಂದು ಇದಕ್ಕೆ ಹೆಸರು). ಒಂದು ಉದಾಹರಣೆಯಾಗಿ ಹೇಳುವುದಾದರೆ, ಚಿಕಾಗೊ ವಾಣಿಜ್ಯ ವಿನಿಮಯ ಕೇಂದ್ರವು ಸದರಿ ಪ್ರಕ್ರಿಯೆಯನ್ನು ಒಂದು ಹೆಜ್ಜೆ ಮುಂದಕ್ಕೆ ತೆಗೆದುಕೊಂಡುಹೋಗಿ, ದಿನವೊಂದಕ್ಕೆ ಎರಡು ಬಾರಿ , ಅಂದರೆ ಬೆಳಗ್ಗೆ 10:00 ಗಂಟೆ ಮತ್ತು ಮಧ್ಯಾಹ್ನ 2:00 ಗಂಟೆಗೆ ಸ್ಥಾನಗಳ ಕುರಿತಾದ ಮೌಲ್ಯನಿರ್ಣಯಗಳನ್ನು ಮಾರುಕಟ್ಟೆಗೆ ತಿಳಿಸುತ್ತದೆ.[೧]