ಸದಸ್ಯ:Chandana.R. Gowda/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಕುಟುಂಬ

ಅಂತರಗಂಗೆ

ನನ್ನ ಹೆಸರು ಚಂದನ.ಆರ್.ನಾನು ದಿನಾಂಕ ೧೮/೧೦/೧೯೯೯ ರಂದು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಚಿಕ್ಕ ಇಗ್ಗಲೂರು ಎಂಬ ಗ್ರಾಮದಲ್ಲಿ ಜನಿಸಿದೆನು.ನನ್ನ ತಂದೆಯ ಹೆಸರು ರಾಮಚಂದ್ರಪ್ಪ ಹಾಗೂ ತಾಯಿಯ ಹೆಸರು ವೆಂಕಟಲಕ್ಷ್ಮಮ್ಮ. ವೃತ್ತಿಯಲ್ಲಿ ನನ್ನ ತಂದೆ ಕೇಬಲ್ ಆಯೋಜಕರು ಮತ್ತು ವ್ಯವಸಾಯ ಮಾಡುತ್ತಾರೆ ಹಾಗೂ ನನ್ನ ತಾಯಿ ಗೃಹಿಣಿ. ನಮ್ಮ ಮನೆಯಲ್ಲಿ ನಾನು ನನ್ನ ತಂದೆ, ತಾಯಿ, ಅಕ್ಕ ಮತ್ತು ತಂಗಿ ಸೇರಿ ಒಟ್ಟು ೫ ಮಂದಿ ಇದ್ದೇವೆ. ನನ್ನ ಅಕ್ಕನ ಹೆಸರು ಶುಭ, ಆಕೆ ಈಗ ಅಂತಿಮ ವರ್ಷದ ಅಭಿಯಂತ್ರಿಕರಣ ಮಾಡುತ್ತಿದ್ದಾರೆ. ನನ್ನ ತಂಗಿಯ ಹೆಸರು ಅರ್ಚನ, ಆಕೆ ಈಗ ಪ್ರಥಮ ಪದವಿ ಪೂರ್ವ ವಿಶ್ವವಿದ್ಯಾಲಯ ಮಾಡುತ್ತಿದ್ದಾರೆ.ನಮ್ಮ ಮಾತೃಭಾ‌ಷೆ ಕನ್ನಡ.

ಹವ್ಯಾಸಗಳು

ನನ್ನ ದಿನನಿತ್ಯದ ಹವ್ಯಾಸಗಳೆಂದರೆ ಕಥೆ ಪುಸ್ತಕಗಳನ್ನು ಓದುವುದು ಅದರಲ್ಲೂ ವಿಶೇಷವಾಗಿ ಭಯಾನಕ ಕಥೆಗಳನ್ನು ಓದುವುದು ಇಷ್ಟ ನನಗೆ. ದೂರದರ್ಶನವನ್ನು ನೋಡುತ್ತೇನೆ ವಿಶೇಷವಾಗಿ ಕಾರ್ಟೂನ್ ಚಾನಲ್ಗಳನ್ನು ನೋಡುತ್ತೇನೆ. ನನಗೆ ದೂರದ ಸ್ಥಳಗಳಿಗೆ ಪ್ರಯಾಣಿಸಲು ಇಷ್ಟ. ನನ್ನ ನೆಚ್ಚಿನ ಸ್ಥಳಗಳೆಂದರೇ ಕನ್ಯಾಕುಮಾರಿ, ವಂಡರ್ ಲಾ,ಮಹಾರಾಷ್ಟ್ರ ಮುಂತಾದವುಗಳು. ಪ್ರಪಂಚದಾದ್ಯಂತ ಪ್ರಯಾಣಿಸುವುದು ನನ್ನ ಬಯಕೆ. ನನ್ನ ಉಚಿತ ಸಮಯದಲ್ಲಿ ಕ್ರಾಫ಼್ಟ್ ಮಾಡುತ್ತೇನೆ.

ವಿದ್ಯಾಭ್ಯಾಸ ಹಾಗೂ ಪುರಸ್ಕಾರಗಳು

ಜೋಗ ಜಲಪಾತ ಕರ್ನಾಟಕ

ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಶ್ರಿ ಬಾಪೂಜಿ ವಿದ್ಯಾ ಸಂಸ್ಥೆ ಹಾಗೂ ನನ್ನ ಪ್ರೌಢ ಶಿಕ್ಷಣವನ್ನು ಸ್ವಾಮಿ ವಿವೇಕಾನಂದ ಪ್ರೌಢ ಶಾಲೆಯಲ್ಲಿ ಮುಗಿಸಿದೆನು. ನಾನು ೧೦ನೇ ತರಗತಿಯಲ್ಲಿ ಶೇಕಡ ೯೨%ನಿಂದ ಉತ್ತೀರ್ಣವಾದೆನು. ನಾನು ಪ್ರಥಮ ದರ್ಜೆಯಲ್ಲಿ ಉತ್ತಿರ್ಣವಾದ ಕಾರಣ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ನಂತರ ನನ್ನ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾವಿದ್ಯಾಪೀಠದಲ್ಲಿ ಓದಿ ದ್ವೀತಿಯ ಪದವಿ ಪುರ್ವ ವಿಶ್ವವಿದ್ಯಾಲಯದಲ್ಲಿ ಶೇಕಡ ೯೬%ನಿಂದ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ಕಾರಣ ಹಲವಾರು ಸಂಘ ಸಂಸ್ಥೆಗಳಿಂದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ಮಾನವ ಹಕ್ಕುಗಳ ಜನ ಜಾಗೃತಿ ಸಮಿತಿ, ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿ.ಇ.ರಾಮೇಗೌಡ ಚಾರಿಟಬಲ್ ಟ್ರಸ್ಟ್ ಇನ್ನು ಮುಂತಾದ ಸಂಘ ಸಂಸ್ಥೆಗಳಿಂದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ಹೀಗಾಗಿ ನನ್ನ ಭಾವಚಿತ್ರವನ್ನು ಕೋಲಾರ ಪತ್ರಿಕೆ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಿಸಲಾಯಿತು. ಈ ಸಾಧನೆಯನ್ನು ಕಂಡು ನನ್ನ ಪೋಷಕರು ಹಾಗೂ ನನ್ನ ಕುಟುಂಬಸ್ಥರೆಲ್ಲರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು, ಹೀಗಾಗಿ ನನಗೂ ತುಂಬ ಸಂತೋಷವಾಯಿತು.

ಉನ್ನತ ಶಿಕ್ಷಣ

ನಂತರ ನನ್ನ ಮುಂದಿನ ವಿದ್ಯಾಭ್ಯಾಸವನ್ನು ಉತ್ತಮ ವಿಶ್ವ ವಿದ್ಯಾಲಯದಲ್ಲಿ ಮುಂದುವರಿಸಬೇಕೆಂಬ ಆಸೆಯಿತ್ತು. ನನಗೆ ಮೊದಲಿನಿಂದಲೂ ಬೆಂಗಳೂರಿನ ಕ್ರಿಸ್ತ ವಿಶ್ವವಿದ್ಯಾನಿಲಯದಲ್ಲಿ ಓದಬೇಕೆಂಬ ಹಂಬಲವಿತ್ತು ಹೀಗಾಗಿ ನನ್ನ ಪೋಷಕರು ಒಪ್ಪಿ ಅದೇ ವಿಶ್ವ ವಿದ್ಯಾನಿಲಯಕ್ಕೆ ಸೇರಿಸಲು ನಿರ್ಧರಿಸಿದರು. ನಂತರ ನನಗೆ ವಾಣಿಜ್ಯಶಾಸ್ತ್ರಕ್ಕೆ ಪ್ರವೇಶ ದೊರಕಿತು. ನಾನು ಇಚ್ಛಿಸಿದ ವಿಶ್ವ ವಿದ್ಯಾನಿಲಯದಲ್ಲಿ ಪ್ರವೇಶ ದೊರಕಿದ್ದಕ್ಕೆ ಬಹಳ ಸಂತೋಷವಾಯಿತು.

ಗುರಿ

ನನ್ನ ಮುಂದಿನ ಗುರಿ ಚಾರ್ಟರ್ಡ್ ಅಕೌಂಟೆಂಟ್ ಆಗುವುದು. ಈ ಗುರಿಯನ್ನು ಸಾಧಿಸಲು ನಾನು ಬಹಳ ಶ್ರಮ ಪಡುತ್ತಿದ್ದೇನೆ.

ಸ್ಫೂರ್ತಿ

ನನ್ನ ಆದರ್ಶ ಮಾದರಿಯು ಮೊದಲಿಗೆ ನನ್ನ ತಂದೆ ತಾಯಿ ನಂತರ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ.ಅವರ ಶ್ರಮದಿಂದ ಪ್ರಸಿದ್ದಿಯಾದ ವ್ಯಕ್ತಿ ಅವರು. ಸ್ವಾತಂತ್ರ್ಯ ಹೋರಾಟಗಾರರಲ್ಲಿ ನನಗೆ ಭಗತ್ ಸಿಂಗ್ ರವರು ಸ್ಪೂರ್ತಿಯಾಗಿದ್ದಾರೆ. ಅವರು ನಮ್ಮ ದೇಶದ ಸಲುವಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಮಹಾನ್ ವ್ಯಕ್ತಿ. ನನಗೆ ಹಳೆ ಹಾಡುಗಳನ್ನು ಹಾಗೂ ಈಗಿನ ಹೊಸ ಹಾಡುಗಳನ್ನು ಕೇಳುವುದೆಂದರೆ ಬಹಳ ಇಷ್ಟ. ನನಗೆ ಕ್ರೀಡೆಗಳಲ್ಲಿ ಕ್ರಿಕೇಟ್, ಕಬಡ್ಡಿ, ಚೆಸ್, ಮುಂತಾದ ಆಟಗಳು ಇಷ್ಟ. ನನಗೆ ಬಣ್ಣಗಳಲ್ಲಿ ಕಪ್ಪು ಬಣ್ಣ ಇಷ್ಟ.

ಪ್ರಪಂಚವು ಬಹಳಷ್ಟು ವಿಶಾಲವಾಗಿದೆ ಒತ್ತಾಯವಾಗಿ ಯಾರ ಜೊತೆಯೂ ಬದುಕುವ ಪ್ರಯತ್ನ ಮಾಡಬೇಡಿರಿ.

ನಿಮ್ಮನ್ನೇ ಗೌರವಿಸುವವರು ನಿಮ್ಮನ್ನೇ ಹುಡುಕಿಕೊಂಡು ಬರುತ್ತಾರೆ.

**************************************************************************************************************************************