ಸದಸ್ಯ:Chaithali C Nayak/ನನ್ನ ಪ್ರಯೋಗಪುಟ2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚೌಳಿಕೆರೆ ಗಣಪತಿ ದೇವಸ್ಥಾನ,ಬಾರಕೂರು[ಬದಲಾಯಿಸಿ]

ಚೌಳಿಕೆರೆ ಗಣಪತಿ ದೇವಸ್ಥಾನವು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರ್ಕೂರಿನಲ್ಲಿದೆ.ಚೌಳಿಕೆರೆ ಗಣಪತಿ ದೇವಾಲಯವನ್ನು ೯೦೦ ವರ್ಷಗಳ ಹಿಂದೆ ಚೋಳರ ಕಾಲದಲ್ಲಿ ನಿರ್ಮಿಸಲಾಯಿತು. ಬೈರಾಗಿ ಗಣಪತಿ ದೇವಸ್ಥಾನವನ್ನು ಸಂಪೂರ್ಣವಾಗಿ ಕಲ್ಲಿನಿಂದ ಕೆತ್ತಲಾಗಿದ್ದು ಓರೆಯಾದ ಕಲ್ಲಿನ ಛಾವಣಿ ಮತ್ತು ಕೆತ್ತಿದ ಕಲ್ಲಿನ ಕಂಬಗಳನ್ನು ಹೊಂದಿದೆ. ಈ ದೇವಾಲಯದ ಕಲ್ಲಿನ ಗೋಡೆಗಳು ಮತ್ತು ಬೃಹದಾಕಾರದ ರಚನೆಗಳು ಇಲ್ಲಿನ ಇತಿಹಾಸದ ಕುರಿತು ಹೇಳುತ್ತದೆ.

ಇತಿಹಾಸ[ಬದಲಾಯಿಸಿ]

ಬೈರಾಗಿ ಗಣಪತಿ ದೇವಾಲಯವನ್ನು ಚೋಳ ರಾಜವಂಶದಿಂದ ನಿರ್ಮಿಸಲಾಯಿತು. ಆದ್ದರಿಂದ ಈ ಪ್ರದೇಶವನ್ನು ಚೌಳಿಕೆರೆ ಎಂದು ಕರೆಯಲಾಯಿತು.