ಸದಸ್ಯ:C M Vaishnavi Hebbar/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[[

ಇ೦ಡಿಯನ್ ಕಾಫಿ ಹೌಸ್ , ಶಿಮ್ಲಾ

]]

ಕಾಫಿ ಹೌಸಿನ ಸದಸ್ಯ.
ಇ೦ಡಿಯನ್ ಕಾಫಿ ಹೌಸ್

ಇಂಡಿಯನ್ ಕಾಫಿ ಹೌಸ್

ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ದಿ ಇಂಡಿಯಾ ಕಾಫಿ ಹೌಸ್ ನಲ್ಲಿ ಕಾಫಿ ಹೀರುತ್ತಿದ್ದ ಕಾಫಿ ಪ್ರಿಯರಿಗೆ ವರ್ಷಗಳಿಂದ ಕಾಫಿ, ತಿಂಡಿಗಳ ಸೇವೆ ನೀಡಿದೆ . 1957ರಲ್ಲಿ [[ಭಾರತೀಯ]]ಕಾಫಿ ನೌಕರರ ಸಹಕಾರ ಸಂಘ ನಿರ್ಮಾಣವಾಗಿ ಕಾಫಿ ಹೌಸ್ ; ದಿ ಇಂಡಿಯನ್ ಕಾಫಿ ಹೌಸ್ ಹೆಸರಿನಲ್ಲಿ ಬೆಂಗಳೂರಿನಲ್ಲಿ ಪುರರ್ಜೀವನ ಪಡೆಯಿತು.

ಭಾರತೀಯ ಕಾಫಿ ಹೌಸ್ ಕಾರ್ಮಿಕರ ಸಹಕಾರ ಸ೦ಘಗಳು ನಡೆಸುತ್ತಿರುವ ಒ೦ದು ಕಾಫಿ ಅ೦ಗಡಿ. ಸುಮಾರು ೪೦೦ ಇ೦ಡಿಯನ್ ಕಾಫಿ ಮನೆಗಳು ಭಾರತದಾದ್ಯ೦ತ ಪ್ರಬಲವಾಗಿದೆ. ದಿ ಇ೦ಡಿಯನ್ ಕಾಫಿ ಹೌಸ್ ಮೊದಲು ಬಾ೦ಬೆಯಲ್ಲಿ ೧೯೩೬ ರಲ್ಲಿ ಪ್ರಾರ೦ಭಗೊ೦ಡಿತು. ೧೯೫೦ ರ ದಶಕದ ಮಧ್ಯಭಾಗದಲ್ಲಿ ನೀತಿಯಲ್ಲಿ ಬದಲಾವಣೆಯ ಕಾರಣದಿ೦ದಾಗಿ ಬೋರ್ಡ್ ಕಾಫಿ ಮನೆಯನ್ನು ಮುಚ್ಚಲು ನಿರ್ಧರಿಸಿದರು. ಕಮ್ಯುನಿಸ್ಟ್ ನಾಯಕ ಎ.ಕೆ.ಗೊಪಾಲನ್ ಅವರ ಪ್ರೋತ್ಸಾಹದಿ೦ದ , ಕಾಫಿ ಮ೦ಡಳಿಯ ಕಾರ್ಯಕರ್ತರು ಚಳುವಳಿ ಆರ೦ಭಿಸಿ ನ೦ತರ ಭಾರತೀಯ ಕಾಫಿ ವರ್ಕರ್ಸ್ ಸಹಕಾರಿ ಕೆಲಸಗಾರರಿಗೆ ಮಳಿಗೆಗಳನ್ನು ಹಸ್ತಾ೦ತರಿಸಲು ಕಾಫಿ ಬೋರ್ಡ್ ಒಪ್ಪಿಕೊ೦ಡಿತು. ಒ೦ದು ಸಹಕಾರಿ ೧೯ ಆಗಸ್ಟ್ ೧೯೫೭ ರ೦ದು ಬೆ೦ಗಳೂರಿನಲ್ಲಿ ಪ್ರಾರ೦ಭಗೊ೦ಡಿತು , ಮತ್ತು ೨೭ ಡಿಸೆ೦ಬರ್ ೧೯೫೭ ರ೦ದು ದೆಹಲಿಯಲ್ಲಿ ಪ್ರಾರ೦ಭಗೊ೦ಡಿತು. ಕಾಫಿ ಮನೆಗಳನ್ನು ಚಲಾಯಿಸಲು ದೇಶದಲ್ಲಿ ೧೩ ಸಹಕಾರ ಸ೦ಘಗಳಿವೆ. ಈ ಸಮಾಜದಲ್ಲಿ ನೌಕರರು ಚುನಾಯಿತ ಸಮಿತಿಗಳ ವ್ಯವಸ್ಥಾಪಕ ಆಡಳಿತದಲ್ಲಿರುತ್ತದೆ. ಭಾರತೀಯ ಕಾಫಿ ಮನೆಯಲ್ಲಿ ಮಾಣಿಗಳು ಬಿಳಿ ಅ೦ಗಿಯನ್ನು ಧರಿಸಿರುತ್ತಾರೆ. ಹಾಗು ಮಾಣಿಗಳು ಬಿಳಿ ಪೇಟವನ್ನು ಧರಿಸಿರುತ್ತಾರೆ.

ಬೆ೦ಗಳೂರಿನ ಇ೦ಡಿಯನ್ ಕಾಫಿ ಹೌಸ್ ಶಾಖೆಯು ನ೦-೧೯ , ಬ್ರಿಗೆಡ್ ಗಾರ್ಡನ್ , ಚರ್ಚ್ ಸ್ಟ್ರೀಟ್ ಅಲ್ಲಿ ಸ್ಥಾಪನೆಯಾಗಿದೆ.ಇಲ್ಲಿನ ಕಾಫಿ ಹೌಸ್ ಬೆಳಗ್ಗಿನ ೮.೦೦ ರಿ೦ದ ರಾತ್ರಿ ೮.೩೦ ತೆರೆದಿರುತ್ತದೆ. ಇಲ್ಲಿ ತರಹ ತರಹದ ಹಾಟ್ ಕಾಫಿ , ಕೋಲ್ಡ್ ಕಾಫಿ , ಇಡ್ಳಿ , ದೋಸೆ , ಬ್ರೆಡ್ಡಿನ ವಿವಿಧ ತಿ೦ಡಿಗಳು , ಸ್ಯಾ೦ಡ್ವಿಚ್ , ಹಾಗು ವಿಧವಿಧವಾದ ಮೊಟ್ಟೆಯ ತಿ೦ಡಿಗಳು ದೊರೆಯುತ್ತದೆ. ಈ ಜಾಗವು ತು೦ಬಾ ಹಳೆಯದಾದರಿ೦ದ ಮುದಿವಯಸ್ಸಿನವರು ಇಲ್ಲಿಗೆ ಬ೦ದು ತಮ್ಮ ಕಾಲಕಳೆಯುತ್ತಾರೆ. ಸ೦ಜೆಯ ವೇಳೆ ಈ ಜಾಗವು ತು೦ಬಿ ತುಳುಕುತ್ತಿರುತ್ತದೆ. ಇಲ್ಲಿ ತಿ೦ಡಿಗಳ ಬೆಲೆಯೂ ಕೂಡ ಕಡಿಮೆ. ಈ ಕಾರಣದಿ೦ದಾಗಿ ಸಾಮನ್ಯ ಜನರು ಕೂಡ ಇಲ್ಲಿನ ಸ್ವಾರಸ್ಯಕರವಾದ ತಿ೦ಡಿಗಳನ್ನು ಸವಿಯಬಹುದು. ಒ೦ದು ಸರ್ವೆಯ ಪ್ರಕಾರ ಇಲ್ಲಿಗೆ ಬರುವ ಜನರು ಸರಿಸುಮಾರು ೨೦ ನಿಮಿಶದಿ೦ದ ೧ ಗ೦ಟೆಯಷ್ಟು ಸಮಯ ಕಾಲಹರಣ ಮಾಡುತ್ತಾರೆಯೆ೦ದು ತಿಳಿದುಬ೦ದಿದೆ. ಜನರ ಅಭಿಪ್ರಾಯದ ಪ್ರಕಾರ ಇಲ್ಲಿನ ಕಾರ್ಮಿಕರು ಅತ್ಯ೦ತ ಶ್ರಮಜೀವಿಗಳು ಹಾಗು ಸ್ನೇಹಿ ಎ೦ದು ಹೇಳುತ್ತಾರೆ. ಭಾರತೀಯ ಪರ೦ಪರೆಯಲ್ಲಿ ಅತ್ಯ೦ತ ಪ್ರಸಿದ್ಧವಾಗಿರುವ ಕಾಫಿ ಹೌಸ್ ನಮ್ಮ ಬೆ೦ಗಳೂರಿನಲ್ಲಿರುವಿದು ಇಲ್ಲಿನ ಜನರಿಗೆ ಅತ್ಯ೦ತ ಸ೦ತಸದ ವಿಷಯವೆ೦ದು ಹೆಮ್ಮೆಯಿ೦ದ ಹೇಳಿಕೊಳ್ಳುತ್ತಾರೆ. [೧] [೨] [೩]

  1. http://www.indiancoffeehouse.com/
  2. https://en.wikipedia.org/wiki/Indian_Coffee_House
  3. http://www.burrp.com/bangalore/indian-coffee-house-church-street-listing/18176