ಸದಸ್ಯ:Bhumikar1940552/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ನನ್ನ ಹೆಸರು ಭೂಮಿಕಾ.

ನನ್ನ ಜನ್ಮದಿನಾಂಕ ೦೧-೦೮-೨೦೦೧ ಹಾಗೂ ಬೆಂಗಳೂರಿನಲ್ಲಿ ಜನಿಸಿದ್ದೇನೆ.ನನ್ನ ತಂದೆಯ ಹೆಸರು ರೇಣುಕಾ ಪ್ರಸಾದ್ ಹಾಗೂ ತಾಯಿಯ ಹೆಸರು ಜ್ಯೋತಿ.ನನ್ನ ಅಕ್ಕನ ಹೆಸರು ನಿಶಾ.ನನ್ನ ಬಾಲ್ಯ ಜೀವನವನ್ನು ಬೆಂಗಳೂರಿನಲ್ಲಿ ಕಳೆದಿದ್ದರೂ,ಬೇಸಿಗೆ ರಜೆಯಲ್ಲಿ ಹಳ್ಳಿ ಸೊಗಡಿನಲ್ಲಿ ಕಳೆದ ಕ್ಷಣಗಳು ತುಂಬಾ ಖುಷಿ ಕೊಡುತ್ತದೆ.ನನ್ನ ಪ್ರಾಥಮಿಕ ಶಿಕ್ಷಣ ಹಾಗೂ ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಮಾರ್ಟಿನ್ ಲೂಥರ್ ಪಬ್ಲಿಕ್ ಶಾಲೆಯಲ್ಲಿ ಮುಗಿಸಿದೆ,ನಾನು ಎಸ್ಸೆಸ್ಸೆಲ್ಸಿಯಲ್ಲಿ ಶೇಕಡಾ ತೊಂಬತ್ತು ಎಂಟು ಅಂಕಗಳನ್ನು ಪಡೆದು ಉತ್ತೀರ್ಣನಾಗಿದ್ದೇನೆ.ಹಾಗೂ ನಾನು ನನ್ನ ಮುಂದಿನ ಶಿಕ್ಷಣವನ್ನು ಕುಮಾರನ್ಸ್ ಪದವಿ ಪೂರ್ಣ ಕಾಲೇಜಿನಲ್ಲಿ ಮುಗಿಸಿದ್ದೇನೆ,ಹಾಗೂ ದ್ವಿತೀಯ ಪದವಿ ಪೂರ್ವ ಪರೀಕ್ಷೆಯಲ್ಲಿ ಶೇಕಡ ಎಂಬತ್ತು ರಷ್ಟು ಅಂಕ ಪಡೆದು ಉತ್ತೀರ್ಣನಾಗಿದ್ದೇನೆ.



ನನಗೆ ಬಾಲ್ಯದಿಂದಲೂ ವೈದ್ಯಕೀಯ ಶಿಕ್ಷಣದ ಕಡೆಗೆ ತುಂಬಾ ಆಸಕ್ತಿ ಇತ್ತು. ಏನೇ ಆದರೂ ನನ್ನ ಗುರಿ ಒಂದೇ ಅದು ವೈದ್ಯಕೀಯ ಶಿಕ್ಷಣ. ಮೊದಲ ಬಾರಿಗೆ ವೈದ್ಯಕೀಯ ಶಿಕ್ಷಣದ ಕಡೆಗೆ ಹೋಗುವ ದಾರಿಯಲ್ಲಿ ನಾನು ಸೋತಿದ್ದೇನೆ,ಸೋತರೂ ಆತ್ಮ ವಿಶ್ವಾಸವನ್ನು  ಕಳೆದುಕೊಂಡಿಲ್ಲ.ಕಷ್ಟಪಟ್ಟು ಪ್ರಯತ್ನಿಸಿ ನನ್ನ ಗುರಿಯನ್ನು ತಲುಪುತ್ತೇನೆ ಎಂಬ ಆತ್ಮವಿಶ್ವಾಸವಿದೆ.


ತಂದೆ ತಾಯಿಯೇ ಮೊದಲ ಗುರು ವೆಂಬಂತೆ ಅವರಿಂದ ದಿನ ಕಲಿಯುವುದು ಇದ್ದೇ ಇದೆ.ನನ್ನ ತಂದೆಯೇ ನನಗೆ ಮೊದಲ ಸ್ಫೂರ್ತಿ.ಅವರಿಂದ ಕಲಿತದ್ದು ಬಹಳಷ್ಟಿದೆ,ಮುಖ್ಯವಾಗಿ ಸಹನೆ ಮತ್ತು ತಾಳ್ಮೆಯನ್ನು ಕಲಿತಿದ್ದೇನೆ.ನನ್ನ ತಂದೆಯ ತಾಳ್ಮೆ ಅಮ್ಮನ ಸರಳತೆ ನನಗೆ ತುಂಬಾ ಇಷ್ಟವಾಗುತ್ತದೆ.ನನ್ನ ತಾಯಿಯ ಸರಳತೆಯಿಂದ ಜೀವನದ ಪಾಠಗಳನ್ನು ಕಲಿಯುತ್ತಿದ್ದೇನೆ.ನನ್ನ ತಾಯಿಯೂ ವಸ್ತ್ರ ವಿನ್ಯಾಸಕರು,ಹಲವಾರು ವಿಧವಿಧದ ಉಡುಪುಗಳನ್ನು ಪ್ರಯೋಗ ಮಾಡುವ ಹವ್ಯಾಸ ನನ್ನದು.ಬಾಲ್ಯದಿಂದಲೂ ಕನ್ನಡವನ್ನು ಬರೆಯಲು ಹಾಗೂ ಓದಲು ಕಷ್ಟವಾದರೂ,ಪ್ರಯತ್ನದಲ್ಲಿ ಹಿಂದುಳಿದಿಲ್ಲ.ನನ್ನ ಗಮನ ಬರೀ ನನ್ನ ಗುರಿ ತಲುಪುವ ಕಡೆಗೆ ಇಲ್ಲದೇ, ಹಲವಾರು ಸಹಪಠ್ಯ ಚಟುವಟಿಕೆಗಳಲ್ಲೂ ಭಾಗವಹಿಸುತ್ತಿದ್ದೆ.ನೃತ್ಯ, ಸಂಗೀತ, ಪುಸ್ತಕಗಳನ್ನು ಓದುವುದು, ನನ್ನ ಹವ್ಯಾಸಗಳು.ಸುಮಾರು ಹತ್ತು ವರ್ಷಗಳಿಂದ ನೃತ್ಯವನ್ನು ಕಲಿಯುತ್ತಿದ್ದೇನೆ.ಒಳಾಂಗಣ ಆಟಗಳಲ್ಲದೆ ಹೊರಾಂಗಣ ಆಟಗಳಲ್ಲೂ ಹೆಚ್ಚು ಆಸಕ್ತಿಯನ್ನು ಹೊಂದಿದ್ದೇನೆ.



ಹಂತದ ಭಯವಿದ್ದರೂ ನೃತ್ಯ, ನಟನೆ, ಬೆಕ್ಕು ನಡಿಗೆಯಲ್ಲೂ ಆಸಕ್ತಿ ಹೊಂದಿದ್ದೇನೆ.ನೃತ್ಯ ಸಂಪುಟದಲ್ಲಿ ಭಾಗವಹಿಸಿರುವ ಅನುಭವವಿದೆ.ಬಾಲ್ಯದಿಂದಲೂ ಹಲವಾರು ಹಂತದ ನೃತ್ಯ ಪ್ರದರ್ಶನವನ್ನು ನೀಡಿರುವ ಅನುಭವವಿದೆ.


ಹೆಣ್ಣು ಮಕ್ಕಳು ಮನೆ ಹೊರ
ಗೆ ಎಲ್ಲೂ ಹೋಗಬಾರದು ಎಂಬ ಭಾವನೆಯನ್ನು ಮೀರಿ ಏನಾದರೂ ಹೆಚ್ಚು ಸಾಧನೆ ಮಾಡಬೇಕೆಂಬ ಆಸಕ್ತಿಯನ್ನು ಹೊಂದಿದ್ದೇನೆ.ಹಲವಾರು ದೂರದ ಪ್ರದೇಶಗಳಲ್ಲಿ ಆಸ್ಪತ್ರೆಯ ಕೊರತೆಯಿಂದ,ಸರ್ಕಾರಿ ವೈದ್ಯರ ಕೊರತೆಯಿಂದ, ಜನರು ಸಮಸ್ಯೆಗೆ ಒಳಗಾಗುವ ವಿಷಯಗಳನ್ನು ನಾನು ಓದಿದ್ದೇನೆ ಇದಕ್ಕಾಗಿ ವೈದ್ಯಕೀಯ ಶಿಕ್ಷಣವನ್ನು ಮಾಡಿ ನಾನು ಇಂಥ ಜನರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದ್ದೇನೆ.ಸ್ತ್ರೀರೋಗತಜ್ಞೆ ಆಗಬೇಕೆಂಬ ಆಸೆ ಹೊಂದಿದ್ದೇನೆ.ಹಳ್ಳಿ ಪ್ರದೇಶಗಳಲ್ಲಿ ಹೆಣ್ಣುಮಕ್ಕಳ ಜನ್ಮವನ್ನು ವಿರೋಧಿಸುವ ಸಮಾಜದಲ್ಲಿ,ಮೂಢನಂಬಿಕೆಗಳನ್ನು ಹೋಗಲಾಡಿಸಿ,ಜನರಲ್ಲಿ ಸಾಮಾಜಿಕ ಜಾಗೃತಿಯನ್ನು ಮೂಡಿಸುವ ಕೆಲಸ ಮಾಡಬೇಕೆಂದು ಆಸಕ್ತಿಯಿದೆ.


ನುಡಿದಂತೆ ನಡೆದುಕೊಳ್ಳುತ್ತೇನೆ ಎಂಬ ವಿಶ್ವಾಸವಿದೆ.ಇಡೀ ದೇಶವನ್ನು ಬದಲಾಯಿಸುತ್ತೇನೆ ಎಂಬ ಮಾತು ಅಸಾಧ್ಯವಾದದ್ದು ; ಬದಲಾವಣೆಗೆ ಮೂಲ ನಮ್ಮಲ್ಲಿದೆ ,ಮೊದಲು ನಾವು ಬದಲಾಗಬೇಕು!.

ನಾನು ಹುಟ್ಟಿದ್ದು ಬೆಳೆದಿದ್ದು ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ .ಬೆಂಗಳೂರಿನ ಹಲವಾರು ಸ್ಥಳಗಳಲ್ಲಿ,ಬೆಂಗಳೂರಿನ ಪ್ರಮುಖ ಸ್ಥಳಗಳೆಂದರೆ ಉಚ್ಚ ನ್ಯಾಯಾಲಯ ಹಾಗೂ ವಿಧಾನಸೌಧ.


ಕರ್ನಾಟಕ ಉಚ್ಚ ನ್ಯಾಯಾಲಯ -[ಬದಲಾಯಿಸಿ]


ನನ್ನ ತಂದೆ ವಕೀಲ ವೃತ್ತಿ ಆದ್ದರಿಂದ ಅವರು ಕರ್ನಾಟಕ ಹೈಕೋರ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ . ಇದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿದೆ .ಇದನ್ನು ಕರ್ನಾಟಕ ಹೈಕೋರ್ಟ್ ಅಥವಾ ಕರ್ನಾಟಕ ಉಚ್ಚ ನ್ಯಾಯಾಲಯ ಎಂದು ಕರೆಯಲಾಗುತ್ತದೆ .ಇದನ್ನು ಹಿಂದೆ ಮೈಸೂರು ಹೈಕೋರ್ಟ್ ಎಂದು ಕರೆಯಲಾಗುತ್ತಿತ್ತು. ಅಧಾರ ಕಚೇರಿ ಎಂದು ಕರೆಯಲ್ಪಡುವ ಕೆಂಪು ಇಟ್ಟಿಗೆ ಕಟ್ಟಡದಿಂದ ಹೈಕೋರ್ಟ್ ಕಾರ್ಯ ನಿರ್ವಹಿಸುತ್ತಿದೆ .ಇದು ಕರ್ನಾಟಕದ ಶಾಂಗ ಸ್ಥಾನವಾಗಿರುವ ವಿಧಾನಸೌಧದ ಮುಂದೆ ಇದೆ .

ಚಿಕ್ಕಮಗಳೂರು -[ಬದಲಾಯಿಸಿ]

ನಾನು ಚಿಕ್ಕಮಗಳೂರು ಸ್ಥಳೀಯ.ಚಿಕ್ಕಮಗಳೂರಿನಲ್ಲಿ ಹಲವಾರು ಪ್ರವಾಸೋದ್ಯಮ ಸ್ಥಳಗಳಿವೆ.ಅದರಲ್ಲಿ ಪ್ರಮುಖ ಸ್ಥಳಗಳೆಂದರೆ ಮುಳ್ಳಯ್ಯಂಗಿರಿ ಬೆಟ್ಟ ದೇವಸ್ಥಾನ, ಹೆಬ್ಬೆ ಫಾಲ್ಸ್, ಕುದುರೆ ಮುಖ ಹಾಗೂ ಭದ್ರಾ ವನ್ಯಜೀವಿ ಅಭಯಾರಣ್ಯ .


ಮುಳ್ಳಯ್ಯನಗಿರಿ ಬೆಟ್ಟ :[ಬದಲಾಯಿಸಿ]

.

ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಶ್ಚಿಮ ಘಟ್ಟದ ಬಾಬಾ ಬಡಗೇರಿ ಬೆಟ್ಟ ಸಾಲಿನಲ್ಲಿರುವ ಒಂದು ಶಿಖರ .ಎತ್ತರದಲ್ಲಿರುವ ಮುಳ್ಳಯ್ಯಂಗಿರಿ ಕರ್ನಾಟಕದ ಅತ್ಯುನ್ನತ ಪ್ರವಾಸಿ ಶಿಖರವಾಗಿದೆ .ಅಲ್ಲದೆ ಇದು ಹಿಮಾಲಯ ಮತ್ತು ನೀಲಗಿರಿ ಬೆಟ್ಟಗಳ ನಡುವಣ ಪ್ರದೇಶದಲ್ಲಿನ ಅತಿ ಎತ್ತರದ ಪರ್ವತವೂ ಸಹ ಹೌದು .ಈ ಬೆಟ್ಟದ ಮೇಲ್ಭಾಗದಲ್ಲಿ ಮಳೆಯ ಸ್ವಾಮಿ ದೇವಾಲಯವಿದೆ .ಮುಲ್ಲೆ ನಿಗಿರಿ ರಾಜ್ಯದ ಅತಿ ಎತ್ತರದ ಶಿಖರ .ಪುರಾತನ ಇತಿಹಾಸ ಇರುವ ಮುಳ್ಳಿನ ಗುಡ್ಡಕ್ಕೆ ,ಈಶ್ವರ ದೇವರ ಇರುವ ಸ್ಥಳ .ಧಾರ್ಮಿಕ ಹಾಗೂ ಪ್ರಾಕೃತಿಕ ನೆಲೆವೀಡು .

ಹೆಬ್ಬೆ ಜಲಪಾತ :[ಬದಲಾಯಿಸಿ]

.

ಇದು ಪ್ರಸಿದ್ಧ ಗಿರಿಧಾಮ , ಈ ಜಲಪಾತವು ಕಾಫಿ ಎಸ್ಟೇಟ್ ಒಳಗೆ ಇದೆ. ಚಾರಣದ ಆಯ್ಕೆ ಲಭ್ಯವಿದೆ ಆದರೆ ಈ ಸ್ಥಳವು ವಿಶೇಷವಾಗಿ ಮಳೆಗಾಲದಲ್ಲಿ ಲೀಚ್ ಗಳಿಂದ ತುಂಬಿರುತ್ತದೆ .ಹೆಬ್ಬೆ ಜಲಪಾತವೂ ಎರಡು ಹಂತದಲ್ಲಿದೆ ಎತ್ತರದಿಂದ ಕೆಳಕ್ಕೆ ಇಳಿದು ದೊಡ್ಡ ಹೆಬ್ಬೆ ಮತ್ತು ಚಿಕ್ಕ ಹೆಬ್ಬೆ ಸಣ್ಣ ಜಲಪಾತ .

ಕುದುರೆಮುಖ :[ಬದಲಾಯಿಸಿ]

.

"ಕುದುರೆಯ ಮುಖ"ದ ಹಾಗೆ ಕಾಣಿಸುವ ಪರ್ವತ ಶ್ರೇಣಿಯ ಕುದುರೆ ಮುಖ . ಈ ಸುಂದರ ಗಿರಿಧಾಮ ಚಿಕ್ಕಮಗಳೂರಿನಲ್ಲಿ .ಅರಬ್ಬಿ ಸಮುದ್ರ ದೂರದಲ್ಲಿ ಕಾಣಿಸುತ್ತದೆ .ಈ ವಿಶಾಲ ಹಾಗೂ ಅಗಲವಾಗಿ ಹಬ್ಬಿದ ಸುಂದರವಾದ ಪರ್ವತ ಶ್ರೇಣಿಗಳು ,ಗುಹೆಗಳು ಕಂದಕ, ಹಳ್ಳ ಕೊಳ್ಳ ,ಮತ್ತು ಚಿಕ್ಕ ದೊಡ್ಡ ಬೆಟ್ಟಗಳಿಂದ ಕೂಡಿದ.ಕಿರಿದಾದ ಬೆಟ್ಟಗಳು ಕಾಡಿನ ಕಾಲು ದಾರಿಯಲ್ಲಿ ನಡೆದು ಸಾಗಿದರೆ ಪಕ್ಕದಲ್ಲಿ ಜುಳುಜುಳು ಹರಿಯುವ ಶುದ್ಧ ತಿಳಿ ನೀರಿನ ಸದ್ದು . ಎಲ್ಲೆಡೆ ಕಾಣುವ ಹಸಿರು ಹುಲ್ಲು ಗಿಡ ಮರಗಳು ಚಿಲಿಪಿಲಿ ಕೂಗುವ ಪಕ್ಷಿಗಳ ಸಂಕುಲ .ಹೆಸರು ಗೊತ್ತಿಲ್ಲದ ಅದೆಷ್ಟೋ ಗಿಡಮರ ,ಬಳ್ಳಿಗಳು, ಹೂ ಕಾಯಿಗಳು ,ಬಣ್ಣ ಬಣ್ಣದ ನೆಲೆ ಮಣ್ಣುಗಳು ಇಲ್ಲಿನ ವಿಶೇಷಗಳಲ್ಲೊಂದು .


ಭದ್ರಾ ವನ್ಯಜೀವಿ ಅಭಯಾರಣ್ಯ -[ಬದಲಾಯಿಸಿ]

ಅಭಯಾರಣ್ಯವೂ ಮುತ್ತೋಡಿ ಹಳ್ಳಿಯ ಸಮೀಪ ಇರುವುದರಿಂದ ಇದಕ್ಕೆ ಮುತ್ತೋಡಿ ಅಭಯಾರಣ್ಯ ಎಂದು ಕರೆಯುತ್ತಾರೆ .ಅಭಯಾರಣ್ಯವೂ ಮುಳ್ಳಯ್ಯನಗಿರಿ ,ಹೆಬ್ಬೆ ಗಿರಿ ಹಾಗೂ ಬಾಬಾ ಗುಡಗೇರಿ ಬೆಟ್ಟಗಳಿಂದ ಸುತ್ತುವರಿದಿದ್ದು, ಭದ್ರಾ ನದಿಯ ಉಪನದಿಯ ಹಾದು ಬರುತ್ತದೆ .ಭದ್ರಾ ಅಣೆಕಟ್ಟು ಜಲಾನಯನ ಪ್ರದೇಶ ಹೊಂದಿದ್ದು ಸುಂದರ ನಿಸರ್ಗವನ್ನು ಒಳಗೊಂಡಿದೆ .೧೯೫೧ ರಲ್ಲಿ ಮೈಸೂರು ಸರ್ಕಾರ ಆಳ್ವಿಕೆಯಲ್ಲಿ ಈ ಜಾಗವನ್ನು ಜಾಗವಾಗಿ ವನ್ಯಜೀವಿ ಅಭಯಾರಣ್ಯ ಎಂದು ಅಭಿವ್ಯಕ್ತಿಗೊಳಿಸಲಾಗಿತ್ತು.