ಸದಸ್ಯ:Akashgr/WEP 2018-19

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಾಲ್ಯ[ಬದಲಾಯಿಸಿ]

ರಮಣ್ ಘೋಷ್ ಅವರು ೧೯೪೨ ಆಗಸ್ಟ್ ೧೫ ರಂದು ಉತ್ತರ ಪ್ರದೇಶದ ಬರೇಲಿಯಲ್ಲಿ ಜನಿಸಿದರು. ಇವರು ಬ್ಯಾಡ್ಮಿಂಟನ್ ಆಟಗಾರ ಹಾಗು ಅರ್ಜುನ ಪ್ರಶಸ್ತಿ ವಿಜೇತ ದೀಪು ಘೋಷ್ ಅವರ ಕಿರಿಯ ಸಹೋದರ. ಕ್ರೀಡೆಯನ್ನು ಪ್ರೋತ್ಸಾಹಿಸುವ ಕುಟುಂಬದಲ್ಲಿ ಜನಿಸಿದ ಇವರು, ಬ್ಯಾಡ್ಮಿಂಟನ್ ಆಟವನ್ನು ಬಹಳ ಚಿಕ್ಕ ವಯಸಿನಲ್ಲಿ ಆಡಲು ಶುರುಮಾಡಿದರು. ಇದರಿಂದ ಅವರಿಗೆ ಉತ್ತಮ ಕ್ರೀಡಾಪಟುವಾಗಲು ಸಾಧ್ಯವಾಯಿತು.

BADMINTON

ವೃತ್ತಿಜೀವನ[ಬದಲಾಯಿಸಿ]

ರಮಣ್ ಘೋಷ್ ಅವರು ೧೯೫೮ ರಲ್ಲಿ ಬಂಗಾಳ ಜೂನಿಯರ್ ಚಾಂಪಿಯನ್ ಶಿಪ್ ಜಯಿಸಿದರು. ನಂತರ ಜೂನಿಯರ್ ನ್ಯಾಷನಲ್ ಸ್ಪರ್ಧೆಯಲ್ಲಿ ದಿನೇಶ್ ಖನ್ನ ಅವರ ವಿರುದ್ಧ ಸೆಮಿಫೈನಲ್ ನಲ್ಲಿ ಪರಾಭವಗೊಂಡರು. ರಮಣ್ ಅವರು ೧೯೬೧ ರಲ್ಲಿ ರೈಲ್ವೇಸ್ ತಂಡವನ್ನು ಸೇರಿಕೊಂಡು ೧೯೬೯ ರವರೆಗೂ ಅದೇ ತಂಡವನ್ನು ಪ್ರತಿನಿಸಿಧರು. ರಮಣ್ ಅವರು ಭಾರತದ ಬ್ಯಾಡ್ಮಿಂಟನ್ ಆಟದ ಡಬಲ್ಸ್ ವಿಭಾಗದಲ್ಲಿ ಬಹಳ ಪ್ರಶಸ್ತಿ ಜಯಿಸಿದರು. ಡಬಲ್ಸ್ ವಿಭಾಗದಲ್ಲಿ ರಮಣ್ ಅವರಿಗೆ ಏಳು ಪ್ರಶಸ್ತಿಗಳು ದೊರೆತಿದೆ. ರಮಣ್ ಅವರು ತಮ್ಮ ಸಹೋದರ ದೀಪು ಘೋಷ್ ಅವರ ಜೊತೆಗೂಡಿ ಡಬಲ್ಸ್ ಆಟವಾಡಿದ್ದಾರೆ. ೧೯೬೪-೬೫ ರಲ್ಲಿ ಇವರ ಜೋಡಿ ಸೀನಿಯರ್ ನ್ಯಾಷನಲ್ ನಲ್ಲಿ ಪ್ರಶಸ್ತಿ ಜಯಿಸಿತು. ಇವರ ಜೋಡಿ ಡಬಲ್ಸ್ ವಿಭಾಗದಲ್ಲಿ ಸುಮಾರು ನಾಲ್ಕು ಪ್ರಶಸ್ತಿಗಳನ್ನು ಜಯಿಸಿದ್ದಾರೆ. ರಮಣ್ ಘೋಷ್ ಅವರಿಗೆ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಲು ಸಾಧ್ಯವಾಗದೆ ಇರುವುದು ಒಂದು ದೊಡ್ಡ ಕೊರಗು.

ಸಾಧನೆ[ಬದಲಾಯಿಸಿ]

ರಮಣ್ ಅವರು ೧೯೬೦ ಹಾಗು ೧೯೭೦ ರ ದಶಕದಲ್ಲಿ ಬ್ಯಾಡ್ಮಿಂಟನ್ ಆಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಆಗಿನ ಭಾರತದ ಬ್ಯಾಡ್ಮಿಂಟನ್ ಆಟದಲ್ಲಿ ಫಿಟ್ ಆಟಗಾರರಾಗಿದ್ದಿರು.೧೯೬೧ ರಿಂದ ೧೯೭೭ ರವರೆಗೂ ೧೬ ವರ್ಷಗಳ ಕಾಲ ಭಾರತ ತಂಡದ ಸದಸ್ಯರಾಗಿದ್ದರು. ರಮಣ್ ಅವರು ಭಾರತ ತಂಡವನ್ನು ಪಾಕಿಸ್ತಾನ ವಿರುದ್ಧ ೧೯೬೧ ರಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಮೊದಲ ಬಾರಿ ಪ್ರತಿನಿಧಿಸಿದರು. ಅವರು ೧೯೭೭ ರಲ್ಲಿ ನಡೆದ ಏಷಿಯನ್ ಚಾಂಪಿಯನ್ಷಿಪ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಅವರ ಹದಿನಾರು ವರ್ಷಗಳ ಬ್ಯಾಡ್ಮಿಂಟನ್ ಆಟದಲ್ಲಿ ಭಾರತ ತಂಡವನ್ನು ನಾಲ್ಕು ಬಾರಿ ಥಾಮಸ್ ಕಪ್, ೪ ಏಷಿಯನ್, ಎರಡು ಇಂಗ್ಲೆಂಡ್ ಚಾಂಪಿಯನ್ ಷಿಪ್, ಎರಡು ಏಷಿಯನ್ ಗೇಮ್ಸ್ ಹಾಗು ಹಲವಾರು ಪ್ರಮುಖ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದಾರೆ. ೨೩ ನ್ಯಾಷನಲ್ ಗಳನ್ನು ರಾಮನ್ ಅವರು ಆಡಿದ್ದಾರೆ. ೧೯೭೪ ರಲ್ಲಿ ಪಾಕಿಸ್ತಾನ ತಂಡವನ್ನು ಥಾಮಸ್ ಕಪ್ ನಲ್ಲಿ ಸೋಲಿಸಿದ ಭಾರತ ತಂಡದ ಸದಸ್ಯರಾಗಿದ್ದರು. ಇವರ ಸಾಧನೆಗೆ ೧೯೭೪ ರಲ್ಲಿ ಅರ್ಜುನ ಪ್ರಶಸ್ತಿ ದೊರೆತಿದೆ.

ಉಲ್ಲೇಖಗಳು[ಬದಲಾಯಿಸಿ]

[೧] [೨]

  1. https://en.wikipedia.org/wiki/Raman_Ghosh
  2. https://www.revolvy.com/topic/Raman%20Ghosh