ಸದಸ್ಯ:ಪ್ರಮಥ ಹೆಗಡೆ ಕಡೆಮನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೊಸ್ತೋಟ ಗಜಾನನ ಭಾಗವತರು.





"ಜೀವನ"

೧೯೪೨ ರಲ್ಲಿ ಹನುಮಂತಿ ಹೊಸ್ತೋಟದಲ್ಲಿ ಗಣಪತಿ ಭಟ್ಟ ಹಾಗೂ ಮಹಾದೇವಿ ದಂಪತಿಯವರ ೨ನೇ ಮಗನಾಗಿ ಜನಿಸಿದರು.ಅಣ್ಣ ಹೊಸ್ತೋಟ ಮಂಜುನಾಥ ಭಾಗವತರು, ತಮ್ಮ ಶಂಕರ ನಾರಾಯಣ ಭಟ್ಟ,ಅಕ್ಕ ಭವಾನಿ ತಂಗಿ ಚಂದ್ರಾವತಿ.ಬಾಲ್ಯದಲ್ಲೇ ತಂದೆ ತಾಯಿಯರನ್ನು ಕಳೆದುಕೊಂಡ ಇವರಿಗೆ ಅಕ್ಕನ ಮನೆಯೇ ಆಶ್ರಯವಾಯಿತು .


"ಶಿಕ್ಷಣ"

೪ ನೇ ತರಗತಿಯವರೆಗೆ ನೆಗ್ಗು ಶಾಲೆಯಲ್ಲಿ ಕಲಿತು ಬಳಿಕ ದಿ‌.ಕೆರೆಮನೆ ಶಿವರಾಮ ಹೆಗಡೆಯವರಲ್ಲಿ ಯಕ್ಷಗಾನವನ್ನು ಕಲಿತರು.ತಿಪ್ಪಣ್ಣ ನಾಯಕರಿಂದ ಮದ್ದಳೆ - ಚೆಂಡೆಯನ್ನು ಕಲಿತರು‌.ಚಂಡೆಯನ್ನು ಅಣ್ಣ ಮಂಜುನಾಥ ಭಟ್ಟರ ಪದ್ಯಕ್ಕೆ ಚೆನ್ನಾಗಿ ಚೆಂಡೆ ನುಡಿಸುತ್ತಿದ್ದರು.ಮುಂದೆ ಭಾಗವತ,ವೇಷಧಾರಿ,ವಾದಕ, ಅರ್ಥಧಾರಿ, ಯಕ್ಷಗಾನ ಕವಿ, ಪ್ರಸಂಗಕಾರ, ಚುಟುಕು ರಚನೆಕಾರರಾದರು.

"ಯಕ್ಷಗಾನ ಶಿಬಿರಗಳಲ್ಲಿ ಶಿಕ್ಷಕರಾಗಿ"

೧೭ ಕ್ಕೂ ಹೆಚ್ಚು ಶಾಲೆಗಳಲ್ಲಿ ೩೧ ಕ್ಕೂ ಹೆಚ್ಚು ತರಬೇತಿ ನೀಡಿದರು.

"ಪ್ರಸಂಗ ರಚನೆಕಾರರಾಗಿ"

ಕಲ್ಪನಾ ವಿಲಾಸ

ಸಾಧ್ವಿ ಜಯಂತಿ

ವೃಕ್ಷ ಮಹಾತ್ಮೆ

ವೃಕ್ಷಮಾಹಾತ್ಮೆ ಅತ್ಯಂತ ಉತ್ತಮ ಪ್ರಸಂಗವಾಗಿದೆ.


"ಬ್ರಹ್ಮಚಾರಿಯಾಗಿ"

ಭಾಗವತರು ತನ್ನ ಅಣ್ಣನಂತೆ ಬ್ರಹ್ಮಚಾರಿಗಳಾಗಿದ್ದು,ಮನೆ- ಮನೆಗಳಲ್ಲಿ ವಾಸ ಮಾಡಿದವರಾಗಿದ್ದು ; ಅಲ್ಲಿಯ ಮಕ್ಕಳಿಗೆ ಯಕ್ಷಗಾನವನ್ನು ಭೋಧಿಸಿದರು.ಮನೆಯ ಹುಡುಗರ ಬಾಯಲ್ಲಿ "ಭಾಗೋತಜ್ಜರು" ಎಂದೇ ಖ್ಯಾತಿ ಪಡೆದರು‌.


"ಪ್ರಶಸ್ತಿ"

೧.ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

೨.ಕೆರೆಮನೆ ಶಂಭೂ ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಪ್ರಶಸ್ತಿ

೩.ಯಕ್ಷಗಾನ ಅಕಾಡೆಮಿ ಪ್ರಶಸ್ತಿ

೪.ಯಕ್ಷಸಿರಿ ಪ್ರಶಸ್ತಿ

೫.ಕರಾವಳೀ ಯಕ್ಷಗಾನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ.


"ನಿಧನ"

ಇವರು ೨೦೨೦ ಎಪ್ರಿಲ್ ೧೧ ರಂದು ಹೃದಯಾಘಾತದಿಂದ ನಿಧನರಾದರು.

‌"ಬಾಹ್ಯ ಕೊಂಡಿಗಳು"

https://api.whatsapp.com/send?phone=&text=Hi,%20Pramath%20Hegde%20need%20more%20information%20about%20Pramath%20Hegde.%20please%20contact%20me.