ಸದಸ್ಯ:ಡಾ. ಸತೀಶ್ ಪಾಟೀಲ್/ನನ್ನ ಪ್ರಯೋಗಪುಟ2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಾವಿತ್ರಿ ಮಿತ್ರ[ಬದಲಾಯಿಸಿ]

ಸಾವಿತ್ರಿ ಮಿತ್ರ ಅವರು ಅಖಿಲ ಭಾರತೀಯ ತೃಣಮೂಲ ಕಾಂಗ್ರೆಸ್[೧] ನ ಮಹಿಳಾ ರಾಜಕಾರಣಿ. ಪಶ್ಚಿಮ ಬಂಗಾಳದ ಮಂತ್ರಿಮಂಡಲದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಸಮಾಜ ಕಲ್ಯಾಣ ಖಾತೆಯ ಮಂತ್ರಿಯಾಗಿದ್ದರು. 2011 ರಿಂದ 2016 ರವರೆಗೆ ಪಶ್ಚಿಮ ಬಂಗಾಳದ ಮಾಣಿಕ್ ಚೌಕ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿಯೂ ಚುನಾಯಿತರಾಗಿದ್ದಾರೆ. ಅಲ್ಲದೆ 2021ರಲ್ಲೂ ಇದೇ ಪಕ್ಷದಿಂದ ಮರು ವಿಜಯಿಯಾಗಿದ್ದಾರೆ.

ರಾಜಕೀಯ ಜೀವನ[ಬದಲಾಯಿಸಿ]

ಆರಂಭದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿದ್ದರು. 1991 ರಿಂದ 2011 ರ ಅವಧಿಯಲ್ಲಿ ಇದೇ ಪಕ್ಷದಿಂದ ವಿಧಾನಸಭಾ ಚುನಾಣೆಗೆ ನಿಂತು ಪರಾಜಿತರಾದರು. ಬಳಿಕ ತೃಣಮೂಲ ಕಾಂಗ್ರೆಸ್ ಸೇರ್ಪಡೆಗೊಂಡರು. ಮಾಲ್ಡಾ ಜಿಲ್ಲೆಯ ಆರೈದಂಗಾ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕಿಯಾಗಿ ಆಯ್ಕೆಯಾದರು. ತಮ್ಮ ಸಮೀಪ ಸ್ಪರ್ದಿಯಾದ ಸಿಪಿಐ(ಎಂ)ನ ರತ್ನ ಭಟ್ಟಾಚಾರ್ಯ ವಿರುದ್ಧ 64,641 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವನ್ನು ಸಾಧಿಸಿದರು. ರತ್ನ ಭಟ್ಟಾಚಾರ್ಯ ಅವರು ಕೇವಲ 6217 ಮತಗಳನ್ನು ಮಾತ್ರ ಪಡೆದರು.

ಮಂತ್ರಿಯಾಗಿ ಕರ್ತವ್ಯ[ಬದಲಾಯಿಸಿ]

ಮಮತಾ ಬ್ಯಾನರ್ಜಿಯವರ ಮಂತ್ರಿ ಮಂಡಲದಲ್ಲಿ ಇದ್ದ 34 ಮಂತ್ರಿಗಳಲ್ಲಿ ಇವರೂ ಒಬ್ಬರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಖಾತೆಯನ್ನು ಇವರು ನಿರ್ವಹಿಸಿದರು. ಇದು ಕ್ಯಾಬಿನೇಟ್ ದರ್ಜೆಯ ಖಾತೆಯಾಗಿತ್ತು. ಆರಂಭದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ನಿಂತು ಇದೇ ತೃಣಮೂಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿರುದ್ಧ ಸೋಲು ಅನುಭವಿಸಿದ್ದರು. ವೆಸ್ಟ್ ಬೆಂಗಾಲ್ ಪೀಪಲ್ಸ್ ಕಾಂಗ್ರೆಸ್ ಕಮಿಟಿಯ (WBPCC) ಉಪಾಧ್ಯಕ್ಷರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು. ಸದ್ಯ ಕಾಂಗ್ರೆಸ್ ಜೊತೆಗಿನ ಸಂಬಂಧ ಹಳಸಿದೆ. ಪಸ್ತುತ ಸಾವಿತ್ರಿ ಮಿತ್ರ ಅವರು ನೀರಾವರಿ ಮತ್ತು ಅಂತರ ಜಲಮಾರ್ಗ ಖಾತೆಯನ್ನೂ ಸಣ್ಣ ಮತ್ತು ಅತಿಸಣ್ಣ ಉದ್ಯಮ ಹಾಗೂ ಜವಳಿ ಖಾತೆಯನ್ನೂ ನಿರ್ವಹಿಸುತ್ತಿದ್ದಾರೆ. ಇವರ ಮಾನಸ್ ಭುನಿಯಾ ಕಾರ್ಯಕ್ರಮ ಸಾಕಷ್ಟು ಪ್ರಸಿದ್ಧಿಯನ್ನು ಹೊಂದಿದೆ. ಇವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ನಿವೃತ್ತಿ ಹೊಂದಿದ ಬಳಿಕವೂ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರನ್ನು ಮೊದಲಿಗೆ ವಜಾ ಮಾಡಿದರು. ಸಮಗ್ರ ಮಕ್ಕಳ ಕಲ್ಯಾಣ ಅಭಿವೃದ್ಧಿ ಸೇವೆ ಅಡಿಯಲ್ಲಿ ನೂತನವಾಗಿ ಉದ್ಯೋಗಗಳನ್ನು ನೇಮಕ ಮಾಡಿಕೊಂಡರು. ವಿವಿಧ ಜಿಲ್ಲೆಗಳಲ್ಲಿ ಹಲವಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಅರೆಕಾಲಿಕ ನೌಕರರನ್ನು ಖಾಯಮಾತಿ ಮಾಡಿದರು. ಮಮತಾ ಬ್ಯಾನರ್ಜಿಯವರ ಅಣತಿಯಂತೆ ಈ ನೇಮಕಾತಿಯು ಪೂರ್ವಾನ್ವಯವಾಗುವಂತೆ ಆದೇಶ ಹೊರಡಿಸಿದರು. ಮಮತಾ ಬ್ಯಾನರ್ಜಿಯವರನ್ನು ಹೊರತು ಪಡಿಸಿದರೆ ಅವರ ಮಂತ್ರಿ ಮಂಡಲದಲ್ಲಿರುವ 38 ಮಂತ್ರಿಗಳಲ್ಲಿ ಮತ್ತೊಬ್ಬ ಮಹಿಳೆಯೆಂದರೆ ಅದು ಸಾವಿತ್ರಿ ಮಿತ್ರ ಮಾತ್ರ.. 2014ರಲ್ಲಿ ಮಂತ್ರಿಮಂಡಲದಿಂದ ಹೊರಗುಳಿದಿದ್ದ ಇವರನ್ನು ಮರಳಿ ಮಂತ್ರಿಯಾಗಿ ಮಾಡಲಾಯಿತು.. ಆದರೆ ಯಾವುದೇ ಖಾತೆಯನ್ನು ನೀಡಲಿಲ್ಲ.

ಉಲ್ಲೇಖಗಳು[ಬದಲಾಯಿಸಿ]

https://en.wikipedia.org/wiki/Trinamool_Congress

  1. https://en.wikipedia.org/wiki/Trinamool_Congress