ಸದಸ್ಯ:ಅಮೃತ/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಸರ ಹಬ್ಬ[ಬದಲಾಯಿಸಿ]

ಹಬ್ಬಗಳು ಭಾರತಿಯ ಸಂಸ್ಕ್ರಿತಿಯ ಮುಖ್ಯ ಅಂಗ. ಭಾರತೀಯರು ಆಚರಿಸುವ ಎಲ್ಲ ಹಬ್ಬಗಳ ಮಹತ್ವ ಬಹಳ. ನಮ್ಮ ಸಂಸ್ಕ್ರಿತಿಯನ್ನು ಉಳಿಸಿ ಬೆಳಸುವ ಒಂದು ಮುಖ್ಯ ಕೆಲಸವನ್ನು ಹಬ್ಬಗಳು ಮಾಡುತ್ತವೆ. ನಮ್ಮಲ್ಲಿನ ವಿವಿಧತೆಯಲ್ಲಿನ ಏಕತೆಯ ಸಂಕೆತ ಈ ಹಬ್ಬಗಳು. ಈ ಎಲ್ಲ ಹಬ್ಬಗಳಲ್ಲಿ ಒಂದು ದಸರ ಹಬ್ಬ. ನವರಾತ್ರಿ,ದುರ್ಗ ಪೂಜ ಅಥವ ದಸರ ಹಬ್ಬ ಎಂಬ ಹೆಸರುಗಳಿಂದ ಕೂಡ ಪ್ರಸಿದ್ಧವಾಗಿದೆ. ಅದರಲ್ಲಿಯೂ ಮೈಸೂರು ದಸರ ವಿಶ್ವದೆಲ್ಲೆಡೆ ಖ್ಯಾತಿಯನ್ನು ಹೊಂದಿದೆ.ಈ ಸಂಭ್ರಮವನ್ನು ವೀಕ್ಶಿಸಲು ಹೊರ ದೇಶಗಳಿಂದ ಜನ ಸಾಗರವೇ ಹರಿದು ಬರುತ್ತದೆ. ಒಂಬತ್ತು ದಿನಗಳ ಕಾಲ ನಡೆಯುವ ಉತ್ಸವ, ಹತ್ತನೆಯ ದಿನದಂದು ಜಂಬೂ ಸವಾರಿಯ ಅದ್ದೂರಿ ಮೆರವಣಿಗೆಯಲ್ಲಿ ಸುಂದರವಾಗಿ ಕೊನೆಗೊಳ್ಳುತ್ತದೆ. ಮೈಸೂರು ರಾಜರ ಕಾಲದಿಂದ ನಡೆದುಕೊಂಡು ಬರುತ್ತಿರುವ ಈ ಹಬ್ಬ ಅರಮನೆಯ ಹಿರಿಮೆ ಹಾಗು ಘನತೆಯ ಪ್ರತೀಕವಾಗಿದೆ.

Mysore palace illuminated




ದಸರ ಗೊಂಬೆ ಹಬ್ಬ[ಬದಲಾಯಿಸಿ]

ದಸರಾ ಹಬ್ಬಕ್ಕೂ ಗೊಂಬೆಗಳಿಗೂ ಅವಿನಾಭಾವ ಸಂಬಂಧವಿದೆ. ದಸರಾ ಎಂದರೆ ಗೊಂಬೆ ಹಬ್ಬವೂ ಹೌದು. ನವರಾತ್ರಿಯ ಮೊದಲ ದಿನವೇ ಬೆಂಗಳೂರು ಮತ್ತು ಮೈಸೂರು ಪ್ರದೇಶಗಳ ಎಲ್ಲಾ ಮನೆಗಳಲ್ಲೂ ದಸರಾ ಗೊಂಬೆಗಳ ದೃಶ್ಯ ವೈಭವ ಕಾಣಸಿಗುತ್ತವೆ. ರಾಜ ರಾಣಿಯರ ಗೊಂಬೆಗಳ ಜೊತೆಗೆ ಇನ್ನಿತರ ಪೌರಾಣಿಕ ಮತ್ತು ಜಾನಪದ ಪಾತ್ರಗಳ ಗೊಂಬೆಗಳನ್ನು ಕಲಾತ್ಮಕವಾಗಿ ಕೂರಿಸಿ ಅದಕ್ಕೆ ಚೆಂದನೆಯ ಅಲಂಕಾರ ಮಾಡಿ, ವಿದ್ಯುದ್ದೀಪಗಳನ್ನು ಅಳವಡಿಸಿ ಪೂಜೆ ಮಾಡುವುದು ದಸರಾ ಹಬ್ಬದ ಒಂದು ಭಾಗವಾಗಿದೆ.

A Ramayana scene at a Golu dolls display, Hanuman, Lakshmana, Rama, Sita


ಸಾಂಪ್ರದಾಯಿಕ ಶೈಲಿಯ ಗೊಂಬೆ ಜೋಡಣೆಯಲ್ಲಿ ಯಾವುದಾದರೂ ಪುರಾಣ ಕಥೆಗಳು, ಐತಿಹಾಸಿಕ ಕಥೆಗಳು, ವಿವಿಧ ಹಬ್ಬ, ಉತ್ಸವಗಳು, ಮದುವೆ ಮುಂತಾದ ಆಚರಣೆಗಳು, ನೃತ್ಯ, ಕಲೆ, ಜಂಬೂ ಸವಾರಿ ಮುಂತಾದ ದೃಶ್ಯಗಳು ಬರುವಂತೆ ಗೊಂಬೆಗಳನ್ನು ಕೂರಿಸಲಾಗುತ್ತದೆ. ಇಲ್ಲಿ ರಾಮ, ಸೀತೆ, ರಾಧೆ, ಕೃಷ್ಣ, ಹನುಮಂತ, ಆನೆ, ಕುದುರೆ, ಅರಮನೆ, ರಾಕ್ಷ ಸರು, ಋುಷಿ, ಮುನಿಗಳನ್ನು ಹೋಲುವ ಗೊಂಬೆಗಳು ಅತಿ ಸಾಮಾನ್ಯ. ಇವುಗಳು ನಮ್ಮ ಶ್ರೀಮಂತ ಪರಂಪರೆಯನ್ನು ಸಾರುತ್ತವೆ ಎಂಬ ಕಾರಣಕ್ಕೆ ಇದನ್ನು ಬಹುತೇಕ ಮನೆಯಲ್ಲಿ ಇಡುತ್ತಾರೆ. [೧]


ಬೊಂಬೆಗಳನ್ನು ಜೋಡಿಸುವ ಕ್ರಮ[ಬದಲಾಯಿಸಿ]

ಬೊಂಬೆಗಳನ್ನು ಇಡುವಲ್ಲಿ ಮೊದಲ ಆದ್ಯತೆ ಪಟ್ಟದ ಗೊಂಬೆಗಳಿಗೆ. ಅವುಗಳನ್ನು ಆದಷ್ಟೂ ಎದ್ದು ಕಾಣುವಂತೆ ಮಧ್ಯದಲ್ಲಿಡುತ್ತಾರೆ. ಈ ಬೊಂಬೆಗಳ ನಡುವೆ ಏನನ್ನೂ ಇಡಬಾರದು. ಬೊಂಬೆಗೆ ಇಡುವ ಕಲಶವನ್ನು ಅದರ ಮುಂದಿನ ಸಾಲಿನಲ್ಲಿ ಬರುವಂತೆ ಇಡಬೇಕು. ನಂತರ ನಾವು ಇಡಲು ಬಯಸುವ ಇತರ ಗೊಂಬೆಗಳಲ್ಲಿ ಹಳೆಯ ಹಾಗೂ ಈಗಿನ ಗೊಂಬೆಗಳನ್ನು ಆದಷ್ಟೂ ಬೇರ್ಪಡಿಸಿ, ಪಟ್ಟದ ಗೊಂಬೆಗಳ ಅಕ್ಕ ಪಕ್ಕದಲ್ಲಿ ನನಮಗೆ ಬೇಕಾದ ರೀತಿ ಜೋಡಿಸಬಹುದು. ಅದಷ್ಟೂ ನಾವು ಜೋಡಿಸಿಡುವ ಬೊಂಬೆಗಳಿಗೆ ಒಂದು ಥೀಮ್‌ ಇದ್ದರೆ ಚೆನ್ನ್ನ. ಅಂದರೆ ಪೌರಾಣಿಕ ಹಾಗೂ ದೇವರ ಗೊಂಬೆಗಳನ್ನು ಒಂದೆಡೆ, ಇತರ ಪ್ರಾಣಿ ಪಕ್ಷಿಗಳು ಒಂದು ಕಡೆ, ಇತ್ತೀಚಿನ ಗೊಂಬೆಗಳನ್ನು ಬೇರೆ ಬೇರೆಯಾಗಿ ಜೋಡಿಸಿದರೆ ಉತ್ತಮ.[೨]

ಆಧುನಿಕ ಗೊಂಬೆಗಳ ಟ್ರೆಂಡ್‌[ಬದಲಾಯಿಸಿ]

ಈಗ ಗೊಂಬೆಗಳು ಮತ್ತು ಗೊಂಬೆಗಳ ಸೆಟ್‌ಗೂ ಆಧುನಿಕ ಸ್ಪರ್ಶ ನೀಡುವ ಟ್ರೆಂಡ್‌ ಎಲ್ಲೆಡೆ ಕಂಡು ಬರುತ್ತಿದೆ. ಈಗಿನ ಯುವ ಪೀಳಿಗೆ ಗೊಂಬೆಗಳನ್ನು ಆಧುನಿಕ ಜೀವನ ಶೈಲಿಗೆ ತಕ್ಕಂತೆ ಕೂರಿಸುತ್ತಿದ್ದಾರೆ. ಈಗಿನ ಗೊಂಬೆ ಮನೆಗಳಲ್ಲಿ ಕಂಪ್ಯೂಟರ್‌ ಸೆಟ್‌, ಮೊಬೈಲ್‌, ಐಪ್ಯಾಡ್‌, ಪ್ಲಾಸ್ಮ ಟೀವಿ, ಕಾರು, ಬೈಕ್‌, ವಿಮಾನ, ರಾಕೆಟ್‌, ಪ್ರಧಾನ ಮಂತ್ರಿ, ರಾಷ್ಟ್ರಪತಿ, ಮುಖ್ಯಮಂತ್ರಿ, ಜನಪ್ರಿಯ ಕ್ರಿಕೆಟ್‌, ಸಿನಿಮಾ ತಾರೆಯರನ್ನು ಹೋಲುವ ಗೊಂಬೆಗಳು ಕಾಣಸಿಗುತ್ತವೆ. ಕೆಲವರು ಎಲ್ಲಾ ಧರ್ಮದವರ ಜೀವನಶೈಲಿಯನ್ನು ಸಾರುವ ಗೊಂಬೆಗಳನ್ನೂ ಇಡುತ್ತಾರೆ. ಈಗಿನ ಗೊಂಬೆ ಮನೆಗಳಲ್ಲಿ ಲ್ಯಾಪ್‌ಟಾಪ್‌ ಹಿಡಿದುಕೊಂಡು ಕೆಲಸ ಮಾಡುವ ಜನರು, ವೈದ್ಯರು, ಸ್ಕೂಟರ್‌ ಮೇಲೆ ಕುಳಿತ ಮಹಿಳೆಯರು, ಮನೆ ಕಟ್ಟುವ ಎಂಜಿನಿಯರ್‌ಗಳು, ಪಿಜ್ಜಾ ಅಂಗಡಿಗಳು, ಟ್ರೈನು, ಶಾಪಿಂಗ್‌ ಮಾಲ್‌ಗಳು ಕಾಣಸಿಗುತ್ತವೆ. ಈಗಿನ ದೈನಂದಿನ ಬದುಕಿನಲ್ಲಿ ಕಾಣಿಸಿಕೊಳ್ಳುವ ಪಾತ್ರಗಳ ಗೊಂಬೆಗಳನ್ನು ಜನರು ಇಷ್ಟಪಡುತ್ತಿದ್ದಾರೆ.


References[ಬದಲಾಯಿಸಿ]

{{reflist}}

  1. https://vijaykarnataka.indiatimes.com/lifestyle/article/about-dasara-doll-festival/articleshow/66194187.cms
  2. https://vijaykarnataka.indiatimes.com/lifestyle/article/things-to-keep-in-mind-before-arrange-dasara-gombe/articleshow/66081788.cms