ಸದಸ್ಯರ ಚರ್ಚೆಪುಟ:Gaana Mundiyolanda

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೆಂಪು ಚಿಟ್ಟು ಕೋಳಿ

ಇದೊಂದು ನಾಚಿಕೆ ಸ್ವಭಾವದ ನೆಲ ಹಕ್ಕಿ. ಈ ಹಕ್ಕಿಗೆ ಆಂಗ್ಲ ಭಾಷೆಯಲ್ಲಿ ರೆಡ್ ಸ್ಪರ್ ಫೌಲ್ ಎಂದು ಕರೆಯುತ್ತಾರೆ. ಇಲ್ಲಿ ಸ್ಪರ್ ಎಂದರೆ ಚುಚ್ಚುಮುಳ್ಳು ಎಂದು ಅರ್ಥ. ಈ ಕೋಳಿಯ ಕಾಲಿನಲ್ಲಿ ಹಿಮ್ಮುಖವಾಗಿರುವ ಚೂಪಾಅ ಮುಳ್ಳುಗಳು ಇರುವುದರಿಂದ ಈ ಹೆಸರು ಬಂದಿದೆ. ಗಾತ್ರದಲ್ಲಿ ನಾಡಕೋಳಿಯ ಸುಮಾರು ಮುಕ್ಕಾಲು ಪಾಲಿನಷ್ಟಿದೆ. ಇದು ಊರ ಕೋಳಿಯ ಸೋದರ ಸಂಬಂಧಿ ಎಂದು ಹೇಳಬಹುದು. ಕನ್ನಡದಲ್ಲಿ ಇದರ ಹೆಸರು ಕೆಂಪು ಚುಕ್ಕಿ ಕೋಳಿ.

ಇದರ ಮೈಮೇಲೆ ಕಪ್ಪು ಚುಕ್ಕೆಗಳಿರುವ ಕಂದು ಬಣ್ಣ ಇದೆ. ಹಳದಿ ಮಿಶ್ರಿತ ತಿಳಿಗೆಂಪು. ಗಂಡಿನಲ್ಲಿ ೨ ರಿಂದ ೪ ಹೆಣ್ಣಿನಲ್ಲಿ ೧ ಅಥವಾ ೨ ಹಿಮ್ಮುಖವಾದ ಚೂಪಾದ ಮುಳ್ಳುಗಳಿವೆ. ಕಣ್ಣು ಹಾಗೂ ಕಣ್ಣಿನ ಸುತ್ತ ಕೆಂಪು ಬಣ್ಣ ಇದೆ. ಕಾಲುಗಳೂ ಕೆಂಪು. ಹೆಣ್ಣಿಗೆ ತಿಳಿ ಕೆಂಗಂದು ಮೇಲ್ಮೈ ಮೇಲೆ ಅಡ್ಡ ಪಟ್ಟಿಗಳಿವೆ. ತುಳು ಭಾಷೆಯಲ್ಲಿ ಈ ಹಕ್ಕಿಗೆ ಕೇಂಕಣ್ ಎಂದು ಕರೆಯುತ್ತಾರೆ. ಅದರ ಕಣ್ಣು ಮತ್ತು ಕಣ್ಣಿನ ಸುತ್ತ ಕೆಂಪು ಇರುವುದರಿಂದ ಈ ಹೆಸರು ಬಂದಿದೆ.

ಕರಾವಳಿಯಲ್ಲಿರುವ ಬೋವು ಮರದ ಹಾಡಿಗಳಲ್ಲಿ ಈ ಪಕ್ಷಿಗಳು ಜೋಡಿಯಾಗಿ ಕಾಣಲು ಸಿಗುತ್ತವೆ. ಬಹಳ ಸೂಕ್ಷ್ಮ ಹಾಗೂ ನಾಚಿಕೆ ಸ್ವಭಾವದ ಕಾರಣ ಮನುಷ್ಯರ ಸುಳಿವು ಸಿಕ್ಕಿದ ತಕ್ಷಣ ವೇಗವಾಗಿ ಓಡಿ ಮರೆಯಾಗುವುದು. ಇದು ಸ್ಥಳೀಯ ಹಕ್ಕಿ. ನಮ್ಮ ನಾಡಕೋಳಿಯ ಹಾಗೇ ಮೂರ್ನಾಲ್ಕು ಮರಿಗಳೊಂದಿಗೆ ಓಡುವುದು.

ಕೆಂಪು ಚಿಟ್ಟುಕೋಳಿಗಳು ಹಾರಾಡುವುದಕ್ಕಿಂತ ನೆಲದಲ್ಲಿ ಓಡುವುದೇ ಹೆಚ್ಚು. ಅದೊಂದು ವೇಗದ ಓಟಗಾರ. ಕೊಲವೊಮ್ಮೆ ಇತರ ಪ್ರಾಣಿಗಳ ಸುಳಿವು ಸಿಕ್ಕರೆ ಇದ್ದಲ್ಲೆ ಸದ್ದಿಲ್ಲದೆ ಕುಳಿತುಕೊಂಡು ಬಿಡುವುದು. ಪ್ರಾಣಿ ಇನ್ನೂ ಹತ್ತಿರ ಬಂದರೆ ಇದ್ದಕ್ಕಿದ್ದಂತೆ ಎದ್ದು ಸದ್ದು ಮಾಡುತ್ತ ಹಾರಿ ಹೋಗುವುದು.

ನಾಡ ಕೋಳಿಯ ಹಾಗೆ ಇದಕ್ಕು ದಪ್ಪ ಕೊಕ್ಕು, ಹೆಚ್ಚು ದೂರ ಹಾರಲಾರದ ದುಂಡಾದ ರೆಕ್ಕೆಗಳಿವೆ. ನೆಲದಲ್ಲಿ ಓಡುತ್ತ ಅಲ್ಲಿ ಹರಡಿದ ಒಣ ತರಗೆಲೆಗಳನ್ನು ಕಾಲಿನಿಂದ ಕೆದಕಿ ಅವಿತುಕೊಂಡಿರುವ ಹುಳಹುಪ್ಪಟೆಗಳನ್ನು, ಬೀಜಗಳನ್ನು ತಿನ್ನುತ್ತವೆ. ಒಣ ತರಗೆಲೆಗಳನ್ನು ಕೆದಕಲು ಅನುಕೂಲವಾಗುವಂತೆ ಅವುಗಳ ಉಗುರುಗಳು ಬಲಿಷ್ಠವಾಗಿವೆ. ಕ್ರಿಮಿಕೀಟ, ಕಾಳುಬೀಜ, ಎಲೆಚಿಗುರು ಅದರ ಪ್ರಮುಖ ಆಹಾರ.

ನರಿ, ಕಾಡುಬೆಕ್ಕು, ಮುಂಗುಸಿ ಇವೆಲ್ಲ ಚಿಟ್ಟು ಕೋಳಿ ಇದರ ನೈಸರ್ಗಿಕ ಶತ್ರುಗಳು. ಕೆಲವು ಕಳ್ಳಬೇಟೆಗಾರರು ಅವುಗಳನ್ನು ನೆಟ್ ಬಳಸಿ ಹಿಡಿದು ಕೊಂದು ತಿನ್ನುತ್ತಾರೆ.

ಇದರ ವೈಜ್ಞಾನಿಕ ಹೆಸರು Galloperdix Spadicea.


                                                                              ಮಳೆಬಿಲ್ಲು

ಮಳೆಬಿಲ್ಲು (ಅಥವಾ ಕಾಮನಬಿಲ್ಲು) ಎಂಬುದೊಂದು ದೃಗ್ವೈಜ್ಞಾನಿಕ ಮತ್ತು ಪವನಶಾಸ್ತ್ರದ ವಿದ್ಯಮಾನವಾಗಿದ್ದು, ಭೂಮಿಯ ವಾತಾವರಣದಲ್ಲಿನ ಸಣ್ಣಹನಿಗಳ ಮೇಲೆ ಸೂರ್ಯನು ಬೆಳಗಿದಾಗ ಆಕಾಶದಲ್ಲಿ ಬೆಳಕಿನ ಬಣ್ಣಗಳ ಪಟ್ಟಿಯೊಂದು ಕಾಣಿಸುವಂಥ ಪರಿಣಾಮವನ್ನು ಇದು ಉಂಟು ಮಾಡುತ್ತದೆ. ಒಂದು ಬಹುವರ್ಣದ ಬಿಲ್ಲಿನ ಸ್ವರೂಪವನ್ನು ತಳೆಯುವ ಇದು ತನ್ನ ಹೊರಗಿನ ಭಾಗದಲ್ಲಿ ಕೆಂಪು ಬಣ್ಣವನ್ನೂ ಒಳಗಿನ ವಿಭಾಗದಲ್ಲಿ ನೇರಿಳೆ ಬಣ್ಣವನ್ನೂ ಹೊಂದಿರುತ್ತದೆ.

ಒಂದು ಅಖಂಡವಾಗಿರುವ ಬಣ್ಣಗಳ ರೋಹಿತವನ್ನು (ಬಣ್ಣಗಳ ಪಟ್ಟಿಯನ್ನು) ಒಂದು ಮಳೆಬಿಲ್ಲು ವ್ಯಾಪಿಸಿಕೊಳ್ಳುತ್ತದೆ; ಇದರ ವಿಶಿಷ್ಟ-ವಿಸ್ಪಷ್ಟ ಪಟ್ಟಿಗಳು ಮಾನವನ ವರ್ಣ ಕಲ್ಪನಾಚಿತ್ರದ ಒಂದು ಕಲಾಕೃತಿಯಂತೆ ಭಾಸವಾಗುತ್ತವೆ. ಇಂಗ್ಲಿಷ್‌ನಲ್ಲಿ ಅತ್ಯಂತ ಸಾಮಾನ್ಯವಾಗಿ ಉಲ್ಲೇಖಿಸಲಾಗುವ ಮತ್ತು ನೆನಪಿಸಿಕೊಳ್ಳಲಾಗುವ ಶ್ರೇಣಿಯು ನ್ಯೂಟನ್‌ನ ಸಪ್ತಾಂಶಕವಾದ ಕೆಂಪು (red), ಕಿತ್ತಳೆ (orange), ಹಳದಿ (yellow), ಹಸಿರು (green), ನೀಲಿ (blue), ಊದಾನೀಲಿ (indigo) ಮತ್ತು ನೇರಿಳೆಯ (violet) ರೀತಿಯಲ್ಲಿ ಇರುತ್ತದೆ (ಶ್ರೇಣಿಯ ಕ್ರಮವನ್ನು Roy G. Biv- ರೀತಿಯ ನೆನಪಿನ ಸಾಧನಗಳಿಂದ ಜನಪ್ರಿಯವಾಗಿ ಕಂಠಪಾಠ ಮಾಡಲಾಗುತ್ತದೆ). ಮಳೆಯನ್ನು ಹೊರತುಪಡಿಸಿ ನೀರಿನ ಇತರ ಸ್ವರೂಪಗಳಿಂದಲೂ ಮಳೆಬಿಲ್ಲುಗಳು ರೂಪುಗೊಳ್ಳಬಹುದಾಗಿದ್ದು, ಮಂಜು, ತುಂತುರು ಹನಿ, ಮತ್ತು ಇಬ್ಬನಿ ಈ ಸ್ವರೂಪಗಳಲ್ಲಿ ಸೇರಿವೆ.

ಗೋಚರತ್ವ ಅಲೆಗಳಿಂದ ಸೃಷ್ಟಿಸಲ್ಪಟ್ಟ ತುಂತುರು ಹನಿಯಲ್ಲಿಯೂ ಮಳೆಬಿಲ್ಲುಗಳು ರೂಪುಗೊಳ್ಳಬಹುದು (ತುಂತುರು ಹನಿ ಬಿಲ್ಲುಗಳು ಎಂದು ಇವನ್ನು ಕರೆಯಲಾಗುತ್ತದೆ) ನ್ಯೂಜಿಲೆಂಡ್‌ನ ಮರೇಟಾಯ್‌ನಲ್ಲಿ ಒಂದು ತೀವ್ರ ವರ್ಷಧಾರೆಯ ನಂತರ ಸೂರ್ಯನ ಬೆಳಕು ತೂರಿಕೊಂಡು ಬಂದಾಗ ಕಂಡ ಮಳೆಬಿಲ್ಲು.

ಗಾಳಿಯಲ್ಲಿ ನೀರಿನ ಹನಿಗಳು ಇದ್ದು, ಒಂದು ಕೆಳಮಟ್ಟದ ಉನ್ನತಿಯ ಕೋನದಲ್ಲಿ ಅವುಗಳ ಹಿಂಭಾಗದಿಂದ ಸೂರ್ಯನ ಬೆಳಕು ಹೊಳೆಯುತ್ತಿರುವ ಸಂದರ್ಭದಲ್ಲೆಲ್ಲಾ ಮಳೆಬಿಲ್ಲುಗಳನ್ನು ವೀಕ್ಷಿಸಲು ಸಾಧ್ಯವಿದೆ. ಮಳೆಯನ್ನು ಸುರಿಸುತ್ತಿರುವ ಮೋಡಗಳಿಂದಾಗಿ ಅರ್ಧದಷ್ಟು ಆಕಾಶವು ಇನ್ನೂ ಗಾಢತೆಯಿಂದ ಅಥವಾ ಮಸುಕಿನಿಂದ ಕೂಡಿದ್ದಾಗ ಮತ್ತು ಸೂರ್ಯನ ದಿಕ್ಕಿನಲ್ಲಿ ಆಕಾಶವು ನಿಚ್ಚಳವಾಗಿರುವ ತಾಣವೊಂದರಲ್ಲಿ ವೀಕ್ಷಕನಿದ್ದಾಗ,

ಅತ್ಯಂತ ನಯನ ಮನೋಹರವಾದ ಮಳೆಬಿಲ್ಲಿನ ಪ್ರದರ್ಶನಗಳು ಸಂಭವಿಸುತ್ತವೆ. ಇದರ ಪರಿಣಾಮವಾಗಿ ಒಂದು ಪ್ರಕಾಶಿಸುವ ಮಳೆಬಿಲ್ಲು ಹೊರಹೊಮ್ಮುತ್ತದೆ ಮತ್ತು ಅದು ಕತ್ತಲಾಗಿರುವ ಹಿನ್ನೆಲೆಯೊಂದಿಗೆ ಒಂದು 

ವೈದೃಶ್ಯವನ್ನು ತೋರಿಸುತ್ತದೆ.

ಜಲಪಾತಗಳು ಅಥವಾ ಕಾರಂಜಿಗಳ ಸಮೀಪದಲ್ಲಿಯೂ ಮಳೆಬಿಲ್ಲಿನ ಪರಿಣಾಮವನ್ನು ಸಾಮಾನ್ಯವಾಗಿ ಕಾಣಬಹುದು. ಇದರ ಜೊತೆಗೆ, ಸೂರ್ಯಪ್ರಕಾಶದಿಂದ ಬೆಳಗುತ್ತಿರುವ ದಿನವೂಂದರ ಅವಧಿಯಲ್ಲಿ ಗಾಳಿಯೊಳಗೆ ನೀರಿನ ಸಣ್ಣಹನಿಗಳನ್ನು ಚೆದುರಿಸುವ ಮೂಲಕವೂ ಈ ಪರಿಣಾಮವನ್ನು ಕೃತಕವಾಗಿ ಸೃಷ್ಟಿಸಬಹುದು. ಅಪರೂಪಕ್ಕೆಂಬಂತೆ, ಒಂದು ಚಂದ್ರನ ಬಿಲ್ಲು ಎಂದು ಕರೆಯಲ್ಪಡುವ ಚಾಂದ್ರ /ಇಂದ್ರಚಾಪ ಅಥವಾ ರಾತ್ರಿವೇಳೆಯ ಮಳೆಬಿಲ್ಲನ್ನು ಗಾಢವಾಗಿ ಬೆಳದಿಂಗಳು ಬೆಳಗುವ ರಾತ್ರಿಗಳಂದು ಕಾಣ ಬಹುದು. ಕಡಿಮೆ ಮಟ್ಟದ ಬೆಳಕಿನಲ್ಲಿ ಬಣ್ಣಕ್ಕೆ ಸಂಬಂಧಿಸಿದ ಮಾನವನ ದೃಷ್ಟಿಯ ಗ್ರಹಿಕೆಯು ಕಳಪೆಯಾಗಿರುವುದರಿಂದ ಚಂದ್ರನ

ಬಿಲ್ಲುಗಳು ಬಿಳಿ ಬಣ್ಣದಲ್ಲಿರುವಂತೆ ಅನೇಕ ವೇಳೆ ಗ್ರಹಿಸಲ್ಪಡುತ್ತವೆ.[೧] ಒಂದು ಚೌಕಟ್ಟಿನಲ್ಲಿ ಮಳೆಬಿಲ್ಲೊಂದರ ಸಂಪೂರ್ಣ ಅರ್ಧವೃತ್ತವನ್ನು ಛಾಯಾಚಿತ್ರದಲ್ಲಿ ಸೆರೆಹಿಡಿಯುವುದು ಕಷ್ಟಕರ; ಏಕೆಂದರೆ ಇದಕ್ಕಾಗಿ 84°ಯಷ್ಟಿರುವ 

ಒಂದು ನೋಟದ ಕೋನವು ಅಗತ್ಯವಾಗಿರುತ್ತದೆ. ಒಂದು 35 ಮಿ.ಮೀ. ಬಿಂಬಗ್ರಾಹಿ (ಕ್ಯಾಮರಾ) ಆದಲ್ಲಿ, 19 ಮಿ.ಮೀ.ನಷ್ಟು ನಾಭಿ ದೂರವನ್ನು (ಫೋಕಲ್‌ ಲೆಂತ್‌) ಹೊಂದಿರುವ ಒಂದು ಮಸೂರ ಅಥವಾ ಕಡಿಮೆ ವಿಶಾಲ-ಕೋನದ

ಮಸೂರವು ಇದಕ್ಕೆ ಬೇಕಾಗಬಹುದು. ಒಂದು ಸಮಗ್ರ ನೋಟಕ್ಕೆ ಹಲವಾರು ಬಿಂಬಗಳನ್ನು ಲಗತ್ತಿಸಿ ಹೊಲಿಗೆ ಹಾಕುವುದಕ್ಕೆ ಸಂಬಂಧಿಸಿದ ಶಕ್ತಿಯುತವಾದ ತಂತ್ರಾಂಶವು ಈಗ ಲಭ್ಯವಿರುವುದರಿಂದ, ಅತಿಕ್ರಮಿಸುವ
ಚೌಕಟ್ಟುಗಳ ಸರಣಿಯೊಂದರಿಂದ ಸಮಗ್ರ ಚಾಪದ, ಅಷ್ಟೇ ಏಕೆ, ದ್ವಿತೀಯಕ ಬಿಲ್ಲುಗಳ ಬಿಂಬಗಳನ್ನು ಯುಕ್ತವಾದ ರೀತಿಯಲ್ಲಿ ಸುಲಭವಾಗಿ ಸೃಷ್ಟಿಸಬಹುದು. ವಿಮಾನವೊಂದರಿಂದ ಓರ್ವರು ಮಳೆಬಿಲ್ಲಿನ ಸಮಗ್ರ
ವೃತ್ತವನ್ನು ನೋಡುವ ಸದವಕಾಶವನ್ನು ಹೊಂದಬಹುದಾಗಿದ್ದು, ಇಲ್ಲಿ ವಿಮಾನದ ನೆರಳು ಕೇಂದ್ರಭಾಗದಲ್ಲಿರುತ್ತದೆ. ಈ ವಿದ್ಯಮಾನ ಮತ್ತು ಪ್ರಭಾಮಂಡಲದ ನಡುವೆ ಗೊಂದಲ ಹುಟ್ಟಿಕೊಳ್ಳುವ ಸಾಧ್ಯತೆಯಿರುತ್ತದೆಯಾದರೂ,
ಒಂದು ಪ್ರಭಾಮಂಡಲವು ಸಾಮಾನ್ಯವಾಗಿ ಸಾಕಷ್ಟು ಸಣ್ಣದಾಗಿದ್ದು, ಕೇವಲ 5–20°ಯಷ್ಟು ಪ್ರಮಾಣಕ್ಕೆ ವ್ಯಾಪಿಸುತ್ತದೆ. ಉತ್ತಮವಾಗಿರುವ ಗೋಚರತ್ವದ ಸ್ಥಿತಿಗತಿಗಳಲ್ಲಿ (ಉದಾಹರಣೆಗೆ, ಮಳೆಬಿಲ್ಲಿನ ಹಿಂಭಾಗದಲ್ಲಿ ಒಂದು 

ಗಾಢವಾದ ಮೋಡವಿರುವುದು), ಎರಡನೇ ಚಾಪವನ್ನು ನೋಡಲು ಸಾಧ್ಯವಿದ್ದು, ಇದರಲ್ಲಿನ ಬಣ್ಣಗಳ ಜೋಡಣಾಕ್ರಮವು ತಿರುಗು-ಮುರುಗಾಗಿರುತ್ತದೆ. ನೀಲಿ ಆಕಾಶದ ಹಿನ್ನೆಲೆಯಲ್ಲಾದರೆ, ಎರಡನೇ ಚಾಪವು ಎಷ್ಟುಬೇಕೋ

ಅಷ್ಟು ಗೋಚರವಾಗುತ್ತದೆ.

ಉಕ್ಕು

'ಸ್ಟೀಲ್' ಎಂದು ಇಂಗ್ಲೀಷ್ ಭಾಷೆಯಲ್ಲಿ ಕರೆಯಲ್ಪಡುತ್ತದೆ. ಇದು ಕಬ್ಬಿಣ ಮತ್ತು ಇಂಗಾಲದ ಮಿಶ್ರಲೋಹವಾಗಿದೆ. ಉಕ್ಕಿನಲ್ಲಿ ಇಂಗಾಲದ ಪ್ರಮಾಣವು ಒಟ್ಟು ತೂಕದಲ್ಲಿ 2.1% ಇದೆ. ಇದು ಪ್ರಾಚೀನ ಕಾಲದಿಂದಲೂ ವಿವಿಧ ಕ್ಷೇತ್ರಗಳಲ್ಲಿ ಬಳಕೆಯಲ್ಲಿರುವ ಒಂದು ಜನಪ್ರಿಯ ಲೋಹ. ಪ್ರಪಂಚದಲ್ಲಿ ಉಕ್ಕನ್ನು ವಾರ್ಷಿಕವಾಗಿ ಸುಮಾರು 1.30 ಬಿಲಿಯನ್ ಟನ್ನುಗಳಷ್ಟನ್ನು ಉತ್ಪಾದಿಸಲಾಗುತ್ತದೆ. ಆಧುನಿಕ ಉಕ್ಕನ್ನು ವಿವಿಧ ರೀತಿಯ ಗ್ರೇಡ್ಗಳ ಮೂಲಕ ಇದಕ್ಕಾಗಿಯೇ ಇರುವ 'ಪ್ರಮಾಣಗಳ ಸಂಸ್ಥೆ'ಗಳು ಗುರುತಿಸುತ್ತವೆ.

ನಿರೂಪಣೆ

   ಕಬ್ಬಿಣದ ಒಂದು ರೂಪವಾದ ಇದು ಕನಿಷ್ಟ ಒಂದು ಮೇರೆಯ ಉಷ್ಣತೆಯಲ್ಲಿ ಸಾಗಬಡಿಯತಕ್ಕದ್ದಾಗಿದೆ. ಅಲ್ಲದೆ, ಇದರ ಜತೆಗೆ ಇದು 

ಎರಡರಲ್ಲಿ ಒಂದೂ, ಆರಂಭದ ಸಾಗಬಡಿಯತಕ್ಕ ವಸ್ತುವನ್ನಾಗಿ ಎರಕ ಹೊಯ್ಯಬಹುದು. ಅಥವಾ ಒಮ್ಮೆಗೆ ತಣ್ಣಗೆ ಮಾಡುವುದರಿಂದ, ಹೆಚ್ಚು ಗಡಸಾಗುವಿಕೆಯ ಸಾಮರ್ಥ್ಯವಿರುವಿದು. ಇಲ್ಲವೇ, ಎರಕ ಹೊಯ್ಯಬಹುದು ಮತ್ತು ಗಡಸಾಗುವಿಕೆಯ ಸಾಮರ್ಥ್ಯ ಎರಡೂ ಇರುವುದು. ಉಕ್ಕಿನಲ್ಲಿ ಇಂಗಾಲದ ಪ್ರಮಾಣವು ಒಟ್ಟು ತೂಕದಲ್ಲಿ 2.1% ಇದೆ. ಇದಕ್ಕಿಂತ ಹೆಚ್ಚಿಗೆ ಇಂಗಾಲದ ಪ್ರಮಾಣವು ಇದ್ದರೆ, ಅದರಲ್ಲಿರುವ ಇತರೆ ವಸ್ತುಗಳನ್ನು ಅವಲಂಬಿಸಿ ಅದನ್ನು 'ಬೀಡು ಕಬ್ಬಿಣ(ಕ್ಯಾಸ್ಟ್ ಐರನ್)' ಎಂದು ಕರೆಯುತ್ತಾರೆ. ಇದಕ್ಕಿಂತ ಕಮ್ಮಿ ಇದ್ದರೆ, ಲೋಹವು ಮೃದು ಮತ್ತು ದುರ್ಭಲವಾಗುವುದು. ಇಂಗಾಲದ ಪ್ರಮಾಣವು ಬಹಳ ಕಡಿಮೆ ಇದ್ದು, ಸ್ಲಾಗ್ನ ಪ್ರಮಾಣ ಹೆಚ್ಚಿಗೆ ಇದ್ದರೆ ಅದನ್ನು 'ಹದಮಾಡಿದ ಕಬ್ಬಿಣ (ರಾಟ್ ಐರನ್)' ಎಂದು ಕರೆಯುತ್ತಾರೆ. ಉಕ್ಕಲ್ಲಿ ಕೆಲವು ಗುಣಗಳನ್ನು ಅಭಿವೃದ್ಧಿಪಡಿಸಲು, ಅಗತ್ಯಕ್ಕೆ ತಕ್ಕಂತೆ ಮ್ಯಾಂಗನೀಸ್, ನಿಕ್ಕ್ಲ್,

ಕ್ರೋಮಿಯಮ್, ಮಾಲಿಬ್ಡೆನಮ್, ಬೋರಿಯಂ, ಟಿಟಾನಿಯಂ, ವ್ಯನಡಿಯಂ ಮತ್ತು ನಿಯೋಬಿಯಂ ಮುಂತಾದ ಇತರೆ ಲೋಹಗಳನ್ನು
ಸೇರಿಸುವುದಲ್ಲದೆ, ಗಂಧಕ, ರಂಜಕ ಮತ್ತು ಸಿಲಿಕಾನ್ ಮುಂತಾದ ಮೂಲ ವಸ್ತುಗಳು ಹಾಗು ಆಮ್ಲಜನಕ ಮತ್ತು ಸಾರಜನಕವನ್ನು ಸ್ವಲ್ಪ 

ಪ್ರಮಾಣದಲ್ಲಿ ಸೇರಿಸಿ ಮಿಶ್ರಲೋಹ(ಅಲಾಯ್)ವನ್ನು ತಯಾರಿಸಿ ಬಳಸುತ್ತಾರೆ.

ಉಕ್ಕಿನ ತಯಾರಿಕೆಯ ಚರಿತ್ರೆ

   ಉಕ್ಕು ಒಂದು ಪುರಾತನ ಲೋಹ ಮತ್ತು ಬ್ಲೂಮರಿಗಳಲ್ಲಿ ನಡೆಸುವಲ್ಲಿ ಅಥವಾ ಕಬ್ಬಿಣದ ಅದುರನ್ನು ಕರಗಿಸಿ ಪ್ರತ್ಯೇಕಿಸುವ ಜಾಗದಲ್ಲಿ
ತಯಾರಿಸಲಾಗುತ್ತಿತ್ತು. ಸುಮಾರು 4000 ವರ್ಷಗಳ ಹಿಂದಿನ ಅನಾಟೋಲಿಯ ಪ್ರಾಚ್ಯವಸ್ತುವಿನ ಜಾಗದಲ್ಲಿ ಉತ್ಖನನದಲ್ಲಿ ದೊರೆತಿರುವ 

ಉಕ್ಕಿನ ಕವಚದ ಚೂರು ಹಿಂದಿನ ಉಕ್ಕಿನ ತಯಾರಿಕೆಯ ಕುರುಹು ಎಂದು ತಿಳಿಯಬಹುದಾಗಿದೆ. ಇದಾದನಂತರ, ಪೂರ್ವ ಆಪ್ರಿಕಾದಲ್ಲಿರುವ ಉಕ್ಕು ಕ್ರಿ.ಪೂ. 400 ಕ್ಕೆ ಕೊಂಡಯ್ಯುವುದು. ಕ್ರಿ.ಪೂ. 4ನೇ ಶತಮಾನದ ಆಯುಧಗಳಾದ ಪಲ್ಕಾಟಗಳನ್ನು ಲಬೇರಿಯನ್ ಪೆನಿನ್ಸುಲಿಯದಲ್ಲಿ ತಯಾರಿಸಲಾಗುತಿತ್ತು. ನೋರಿಕ್ ಉಕ್ಕನ್ನು ರೋಮನ್ ಸೈನ್ಯದಲ್ಲಿ ಬಳಸಲಾಗುತ್ತಿತ್ತು. ಕ್ರಿ.ಪೂ. 650 ರಲ್ಲಿ ಸ್ಪಾರ್ಟಾದಲ್ಲಿ ಉಕ್ಕನ್ನು ಬಹಳಷ್ಟು

ಪ್ರಮಾಣದಲ್ಲಿ ಬಳಸಲಾಗುತ್ತಿತ್ತು.
   ವೇರಿಂಗ್ ರಾಜ್ಯದ ಚೈನಾದವರಲ್ಲಿ(ಕ್ರಿ.ಪೂ. 403-221) ಆರಿಸುವಂತಹ ಗಡಸು(ಕ್ವೆಂಚ್ ಹಾರ್ಡ್ನಂಡ್) ಉಕ್ಕು ಇತ್ತು. ಚೈನಾದ ಹ್ಯಾನ್ ವಂಶದ(ಕ್ರಿ.ಪೂ. 202-ಕ್ರಿ.ಶ.220)ವರು ಹದಮಾಡಿದ ಕಬ್ಬಿಣದ ಜತೆ ಎರಕದ ಕಬ್ಬಿಣವನ್ನು ಕರಗಿಸಿ ಇಂಗಾಲಯುಕ್ತ ಮಾಧ್ಯಮಿಕ ಉಕ್ಕನ್ನು ತಯಾರಿಸುತ್ತಿದ್ದರು. 2000 ವರ್ಷಗಳ ಹಿಂದೆ ಪೂರ್ವ ಆಪ್ರಿಕಾದ ಹಯಾ ದವರು 1802 ಸೆಲ್ಸಿಯಸ್ ನಲ್ಲಿ ಇಂಗಾಲಯುಕ್ತ ಉಕ್ಕನ್ನು ತಯಾರಿಸುವ ಭಟ್ಟಿಯನ್ನು ಆವಿಷ್ಕರಿಸಿದ್ದರು. ಭಾರತ ಉಪಖಂಡದಲ್ಲಿ ಹೆಚ್ಚಿನ ಇಂಗಾಲಯುಕ್ತ ಉಕ್ಕಿನ ತಯಾರಿಕೆಯ ಬಗ್ಗೆ ಸಾಕ್ಷಿ ಯು ಶ್ರೀಲಂಕಾದ ಸಮನಲವೇವ ಎಂಬಲ್ಲಿ ದೊರಕುವುದು.
   ಕ್ರಿ.ಶ. ಐದನೇ ಶತಮಾನದಲ್ಲಿ ಚೈನಾದವರು 'ವುಟ್ಜ್' ಉಕ್ಕನ್ನು ತಯಾರಿಸುವ ತಂತ್ರಜ್ಞಾನವನ್ನು ಭಾರತದಿಂದ ಆಮದು ಮಾಡಿಕೊಂಡು, ತಮ್ಮ ಉಕ್ಕನ್ನು ಕಮ್ಮಾರಿಕೆ(ಪೋರ್ಜ್) ಮಾಡುವ ವಿಧಾನದ ಜತೆಗೆ ಅಳವಡಿಸಿಕೊಂಡಿದ್ದರು. ಶ್ರಿಲಂಕಾದಲ್ಲಿ ಈ ಮೊದಲು ಉಕ್ಕಿನ ತಯಾರಿಕೆಯಲ್ಲಿ ಮುಂಗಾರು ಮಾರುತಗಳನ್ನು ಉಪಯೋಗಿಸಿಕೊಳ್ಳುವ ಅಪೂರ್ವ ಭಟ್ಟಿಗಳನ್ನು ಇಂಗಾಲಯುಕ್ತ ಉಕ್ಕನ್ನು ತಯಾರಿಸಲು ಅಳವಡಿಸಿಕೊಂಡಿದ್ದರು. 'ವುಟ್ಜ್' ಉಕ್ಕನ್ನು 'ಡಮಸ್ಕಸ್' ಉಕ್ಕು ಎಂದು ಕರೆಯಲಾಗುತ್ತದೆ. ಇದು ಬಹಳ ಬಾಳಿಕೆ ಬರುವ ವಸ್ತು ಎಂದು ಮತ್ತು ಅದರ ಹರಿತಕ್ಕೆ ಒಳಪಡುವ ಸಾಮರ್ಥ್ಯಕ್ಕೆ ಜನಪ್ರಿಯವಾಗಿದೆ.
   ಇದನ್ನು ಬಹಳಷ್ಟು ವಸ್ತುಗಳನ್ನು ಉಪಯೋಗಿಸಿ ಇತರೆ ಲೇಶಧಾತುಗಳ ಜತೆಗಳ ಸೇರಿಸಿ ಉತ್ಪಾದಿಸಲಾಗುತ್ತಿತ್ತು. ಇದು ಕಬ್ಬಿಣವು ಮುಖ್ಯ ಭಾಗವಾಗಿರುವ ಒಂದು ಮಿಶ್ರಲೋಹವಾಗಿತ್ತು. ಇತ್ತೀಚಿನ ಅಧ್ಯಯನಗಳು, ಇಂಗಾಲದ ನ್ಯಾನೋ ಟ್ಯೂಬ್ಗಳು ಅವುಗಳ ರಚನೆಯಲ್ಲಿ ಇರುವ ಬಗ್ಗೆ, ಅವುಗಳ ಗುಣಲಕ್ಷಣಗಳ ದಂತ ಕತೆಗಳ ಬಗ್ಗೆ ಕಾರಣಗಳನ್ನು ಕೊಡುತ್ತವೆ. ಆಕಾಲದ ತಂತ್ರಜ್ಞಾನದಲ್ಲಿ ಇದು ಆಕಸ್ಮಿಕವಾಗಿ ಉತ್ಪಾದಿತವಾದಂತೆ ತೋರುವುದೇ ವಿನಾ ಬೇಕೆಂದು ರಚಿಸಿದ್ದಲ್ಲ. ನೈಸರ್ಗಿಕ ಗಾಳಿಯನ್ನು ಮರ ಗಳನ್ನು ಉಪಯೋಗಿಸಿ ಕಬ್ಬಿಣವಿರು ಮಣ್ಣನ್ನು ಕಾಯಿಸಲಾಗುತ್ತಿತ್ತು.
   ಪ್ರಾಚೀನ ಸಿಂಹಳಿಯರು, ಪ್ರತಿ ಎರೆಡು ಟನ್ನ್ ಅದುರಿಗೆ ಒಂದು ಟನ್ನ್ ಉಕ್ಕನ್ನು ಉತ್ಪಾದಿಸುತಿದ್ದರು. ಈ ತರಹದ ಒಂದು ಭಟ್ಟಿಯು ಶ್ರಿಲಂಕಾದ ಸಮನಲವೇವ ದಲ್ಲಿ ಕಂಡಿಬಂದಿರುವುದಲ್ಲದೆ, ಪ್ರಾಚ್ಯವಸ್ತು ಶಾಸ್ತ್ರಜ್ಞರು ಪ್ರಾಚೀನರಂತೆ ಉಕ್ಕನ್ನು ತಯಾರಿಸುವಲ್ಲಿ ಸಫಲರಾಗಿದ್ದಾರೆ.

ಮೆರ್ವ್ನಲ್ಲಿ ಮೂಸೆಯಲ್ಲಿ, ಮೂಸೆ ಉಕ್ಕನ್ನು(ಕ್ರುಸಿಬಲ್ ಸ್ಟೀಲ್), ಶುದ್ಧ ಕಬ್ಬಿಣ ಮತ್ತು ಇಂಗಾಲವನ್ನು ಕಾಯಿಸಿ ಮತ್ತು ತಣ್ಣಗಾಗಿಸುವ ಮೂಲಕ ಪಡೆಯುತ್ತಿದ್ದರು. 11ನೇ ಶತಮಾನದಲ್ಲಿ ಸಾಂಗ್ ಚೈನಾದಲ್ಲಿ, 'ಬೆರ್ಗಾನೆಸ್ಕ್ಯು' ಎಂಬ ವಿಧಾನದಲ್ಲಿ ಕೀಳಾಗೀರುವ ಮತ್ತು ಸಜಾತೀಯವಲ್ಲದ ಉಕ್ಕನ್ನು ಹಾಗು ಆಧುನಿಕ 'ಬಿಸೆಮೆರ್ ಸಂಸ್ಕರಣೆ' ವಿಧಾನಕ್ಕೆ ಪೂರ್ವಬಾವಿ ಯಾದಂತೆ ಪುನಃ ಪುನಃ ಕಮ್ಮಾರಿಕೆ(ಪೋರ್ಜಿಂಗ್) ಮಾಡುವ ಮೂಲಕ ಪಾಲುಪಾಲಾದ ಡಿಕಾರ್ಬೊರೈಜೇಶನ್ನ್ನು ಉಪಯೋಗಿಸಿ ಮುಕ್ತ ಬೆಂಕಿಯ(ಕೋಲ್ಡ ಬ್ಲಾಸ್ಟ್)ಲ್ಲಿ ಉಕ್ಕನ್ನು ತಯಾರಿಸಿರುವ ಬಗ್ಗೆ ಸಾಕ್ಷಿ ಇದೆ.