ಸದಸ್ಯರ ಚರ್ಚೆಪುಟ:Ashwinivoddur/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪತ್ರ ಪ್ರೀತಿಯ ಅಪ್ಪ ! ಮಕ್ಕಳಾದ ನಮಗಾಗಿ ಹಗಲಿರೂಳೂ ಬೆವರು ಹರಿಸಿ ದುಡಿವ, ಎದೆಯಲ್ಲಿ ಪ್ರೀತಿಯ ಸಾಗರ ಬಚ್ಚಿಟ್ಟಿರುವ, ಸಾದಾ ನಮ್ಮ ಒಳಿತನ್ನೇ ಬಯಸುವ ನಿಮಗೆ ಫಾದರ್ಸ್ ಡೇ ಅಂದ್ರೆ ‘ ಅಪ್ಪಂದಿರ ದಿನ’ ದಂದು ಕೋಟಿ ಕೋಟಿ ನಮನಗಳು. ಇಡೀ ಕುಟುಂಬದ ನಿರ್ವಹಣೆ ಹೊತ್ತಿರುವ ನಿನ್ನ ಜವಾಬ್ದಾರಿ ದೊಡ್ಡದು. ಸದಾ ತಂಟೆ ಮಾಡುವ ಮಕ್ಕಾಳಾದ ನಮ್ಮನ್ನು ನಿಭಾಯಿಸುವುದಂತು ಸುಲಭದ ಕೆಲಸವಲ್ಲ.ಹಾಗಾಗಿ ನೀನು ಮಾಡುವ ಸಿಟ್ಟು- ಸಿಡುಕು, ಬೈಗುಳ- ಗದರಿಕೆ ಇವೆಲ್ಲಾ ಸಹಜವೇ. ಇದೆಲ್ಲದರ ಹಿಂದೆ ಗಾಂಭೀರ್ಯದ ಮುಖವಾಡ ಸರಿಸಿದರೆ, ಮಕ್ಕಳಿಗಾಗಿ ಮಿಡಿದ-ತುಡಿವ ಮನ ಇದೆ ಅಂತ ನಮಗೆ ಗೊತ್ತು. ಆದರೆ ನೀನು ನಮಗೆ ಇನ್ನು ಹತ್ತಿರವಾಗಲು ಸಾಧ್ಯಾವಿದೆ. ಯಾಕೆಂದರೆ ಸಾಮಾನ್ಯವಾಗಿ ಶೇಕಡಾ ಎಂಭತ್ತರಷ್ಟು ಅಪ್ಪಂದಿರು ಮಾಡುವ ತಪ್ಪುಗಳನ್ನೇ ನೀನು ಮಾಡುತ್ತಾ ನಮ್ಮಿಂದ ದೂರ ನಿಲ್ತೀಯಾ. ಹಾಗಾಗೋದು ಬೇಡ ಅಂತಿದ್ರೆ ಈ ಕೆಳಗಿವವುಗಳನ್ನು ನೀನು ಮಾಡಬೇಡ…. ಪ್ಲೀಸ್! ಎಲ್ಲರೇದುರು ಬೈಯುವುದು ಮೂದಲಿಸುವುದು… ಈ ವಯಸ್ಸಲ್ಲಿ ನಾನು ಹೇಗಿದ್ದೆ. ಈ ಮಕ್ಕಳು ಅದರ ಕಾಲು ಭಾಗ ಮಾಡಲ್ಲ. ವರಿಗೆ ಸಿಕ್ಕಿರೋ ಸುಖ ಹೆಚ್ಚಗಿದೆ ಬರೀ ದಂಡ’ ಈ ರೀತಿ ನೀನು ಬೇರೆಯವರ ಹತ್ರ ಹೇಳಿದಾಗ ನನಗೆ ದುಃಖದ ಜತೆ ನಾಚಿಕೆ, ಅಪಮಾನನೂ ಆಗುತ್ತೆ. ನೀನು ತುಂಬಾ ಜಾಣ ಇದ್ದೀರಬಹುದು. ಆದರೆ ನಾವೆಲ್ಲಾ ಹಾಗೆ ಆಗಲು ಸಾಧ್ಯಾವೆ ? ನಮಗೆ ನಮ್ಮದೇ ಆದ ಶಕ್ತಿಗಳು- ದೌರ್ಬಲ್ಯಗಳೂ ಇವೆ. ಎಲ್ಲರನ್ನೂ ನಿನ್ನೂಂದಿಗೆ ಹೋಲಿಸಲು ಆಗುತ್ತಾ? ಪದೇ ಪದೇ ಈ ರೀತಿ ಹೇಳ್ತಾ ಇದ್ರೆ. ಎಲ್ಲೋ ನಾವು ಅದನ್ನೇ ನಂಬ್ತೀವಿ. ನಮ್ಮ ಆತ್ಮವಿಶ್ವಾಸ ಕಡಿಮೆ ಆಗುತ್ತೆ. ಅಷ್ಟಕ್ಕೊ ನಿಜ ಹೇಳ್ಲಾ ? ಅಜ್ಜ ಹೇಳ್ತಾರೆ ನಮ್ಮ ವಯಸ್ಸಿನಲ್ಲಿ ನೀನು ತುಂಬಾ ಪುಂಡ ಅಗಿದ್ದೆಯಂತೆ! ಹಾಗಂತ ನೀನು ಬೈಯಲೇಬಾರದು ಅಂತಲ್ಲ. ತಿದ್ದುವ ಹಕ್ಕು ನಿಂಗಿದೆ. ಆದರೆ ಎಲ್ಲರೆದುರು ಅಪಹಾಸ್ಯ ಮಾಡಬೇಡ. ಸಮಾಧಾನದಿಂದ ಒಬ್ಬರೇ ಇದ್ದಾಗ ಹೇಳಪ್ಪಾ!. ನಮ್ಮ ಮಾತನ್ನು ಕೇಳುವುದು ನಾವು ಶಾಲೆ ಓದು, ಆಟ, ಗೆಳೆಯರು ಹೀಗೆ ಯಾವುದೇ ವಿಷಯ ಹೇಳಿದ್ರು ನೀನು ಕೇಳಿಸಿಕೊಳ್ಳೋದೇ ಇಲ್ಲ, ಟ.ವಿ. ನೋಡ್ತಾ. ಪೇಪರ್ ಓದ್ತಾ ಹೂಂಹುಟ್ಟುದಕ್ಕೂ, ಹತ್ತಿರ ಕುಳಿತು ನಮ್ಮ ಕಣ್ಣಲ್ಲಿ ಕಣ್ಣಿಟ್ಟು ಆಸಕ್ತಿಯಿಂದ ಕೇಳುವುದಕ್ಕೂ ವ್ಯತ್ಯಸವಿದೆ ಅಲ್ವಾ? ಇದು ನಮಗೆ ಅರ್ಥವಾಗುತ್ತೆ. ನೀನು ಹೀಗೆ ಮಾಡೋದ್ರಿಂದಾ ನಮಗೂ ಎಷ್ಟೋ ಸಲ ಹೇಳುವ ಆಸಕ್ತಿ ಇರಲ್ಲ.ಕಡೆಗೆ ನೀನು ಪರಕೀಯ ಅನ್ನಿಸಲಿಕ್ಕೆ ಶುರು ಆಗುತ್ತೆ. ಹಾಗಾಗೋಕೆ ಬಿಡಬೇಡಪ್ಪ! ನಮ್ಮೊಂದಿಗೆ ಆಟ –ಹರಟೆ- ಓದು : ಅಮ್ಮ ತುಂಬಾ ಕಿರಿಕಿರಿ ಮಾಡಿದ ಮೇಲೆ ಕಾಟಾಚಾರಕ್ಕೆ ಅಂತ ಮಾತ್ರ ನೀನು ಏನೋ ಆಟ ಆಡ್ತಿಯಾ, ಓದ್ತೀಯಾ, ನೀನಾಗೇ ಖಷಿಯಿಂದ ಆಟಕ್ಕೆ ಬರೋದೆ ಇಲ್ಲ ಯಾಕಪ್ಪ? ಯಾವಾಗ್ಲೂ ಕೆಲಸ, ಟಿವಿ ಕಂಪ್ಯೂಟರ್ ಅಂತ ನೇಪ ಹೇಳ್ತಿಯಾ.ನಮಗೂ ನಿನ್ನ ಜತೆ ಕ್ರಿಕೆಟ್,ಟೆನಿಸ್, ಆಡಬೇಕು, ಪಾರ್ಕ ಗೆ ಹೋಗಬೇಕು ಅಂತ ಆಸೆ ಇದೆ. ನಮಗೂ ಒಂದಿಷ್ಟು ಸಮಯ ಕೋಡ್ತಿಯಾ ?. ಪ್ರೀತಿ ತೋರಿಸೊದು : ನಾವು ಏನೇ ಸಾಧಿಸಲಿ ಒಳ್ಳೇ ಕೆಲಸ ಮಾಡಲಿ ನಿನ್ನ ಮುಖದಲ್ಲಿ ಚಿಕ್ಕ ನಗು ಅಷ್ಟೇ! ಅಮ್ಮನ ಹಾಗೇ ನೀನ್ಯಾಕೆ ನಮ್ಮನ್ನು ಅಪ್ಪಿ ಮುದ್ದಿಸೋದಿಲ್ಲ? ನೀನು ಬೆನ್ನು ತಟ್ಟಿದ್ರೆ ತಲೆ ಸವರಿದ್ರೆ, ಜಾಣ ಮಗು ಅಂತ ಅಪ್ಪಿಕೊಂಡ್ರೆ ನಮಗೇಷ್ಟು ಖುಷಿ ಆಗುತ್ತೆ ಗೋತ್ತಾ? ಈ ರೀತಿ ಪ್ರೀತಿ ತೋರಿಸಿದ್ರೆ ಮಕ್ಕಳು ಹಾಳಾಗ್ತಾರೆ ಅಂತ ಹೇದರಿಕೇನಾ ? ಇಲ್ಲಪ್ಪಾ, ನಿನ್ನ ಪ್ರೀತಿ ನಮಗೆ ಹೆಚ್ಚಿನ ಶಕ್ತಿ ನೀಡುತ್ತೆ!. ಅಮ್ಮನನ್ನು ಬೈಯೋದು : ಪರೀಕ್ಷೆಯಲ್ಲಿ ಕಡಿಮೆ ಮಾರ್ಕ್ ಬಂದರೆ, ಜಗಳ ಆಡಿದ್ರೆ, ಸುಳ್ಳು ಹೇಳಿದ್ರೆ ನಿನ್ನ ಬಾಯಿಂದ ಬರೋ ಮೊದಲ ವಾಕ್ಯ- ಲೇ! ನಿನ್ನ ಮಕ್ಕಳು ಏನು ಮಾಡಿದ್ದಾರೆ ನೋಡು! ನನ್ನ ಮಾತು ಕೇಳಿದ್ರೆ ಹೀಗಾಗ್ತಿತ್ತಾ? ನಿನ್ನ ಮುದ್ದಿನ ಪ್ರಭಾವ’ ಅಂದರೆ ಕಡಿಮೆ ಅಂಕ ಗಳಿಸಿದರೆ ನಾವು ಅಮ್ಮನ ಮಕ್ಕಳು! ಅದೇ ಒಳ್ಳೆಯ ಕೆಲಸ ಮಾಡಿದಾಗ ‘ ನನ್ನ ಮಕ್ಕಳು! ಅಂತೀಯಾ. ತಪ್ಪು ಮಾಡಿದಾಗ ನಮ್ಮನ್ನು ಬೈದರೆ ಸರಿ. ಆದರೆ ಅಮ್ಮನ ಮೇಲೆ ರೋಫ್ ಹಾಕ್ತಿಯಲ್ಲ. ಆಗ ಬೇಸರದ ಜತೆ ನಿನ್ನ ಬಗ್ಗೆ ಅಸಾಧ್ಯಾ ಸಿಟ್ಟು ಕೂಡಾ ಬರುತ್ತೆ.ನಾವು ಎಂದಿದ್ದರೊ. ಏನೇ ಮಾಡಿದರೂ ನಿಮ್ಮಿಬ್ಬರ ಮಕ್ಕಳೇ ಅಲ್ವ…? ನಿನ್ನ ಬಗ್ಗೆ ಹೇಳುವುದು.. ಯಾವಗಲೂ ನಮ್ಮ ಕಾಲದಲ್ಲಿ ಹೀಗಿರಲಿಲ್ಲ. ನಾನು ಚಿಕ್ಕವನಿದ್ದಾಗ ಹಾಗೆ ಮಾಡ್ತಿದೆ. ಹೀಗೆ ಮಾಡ್ತಿದ್ದೆ. ಅಂತ ಹೇಳ್ತಾನೇ ಇರ್ತೀಯಾ ನಿಜ. ಅದನ್ನು ಕೇಳಿ ಕೇಳಿ ಜೋರಾಗಿದೆ. ಅದರಲ್ಲಿ ಅರ್ಧಕ್ಕರ್ಧ ಸುಳ್ಳು ಅಂತ ನಮಗೂ ಗೊತ್ತು-ನಿಮಗೂ ಗೊತ್ತು. ಅದರ ಬದಲು ಕಷ್ಟ ಆದಗ ಏನು ಮಾಡಿದೆ. ಯಾವಾಗ ತಪ್ಪು ಮಾಡಿದೆ.ಅದರಿಂದ ಏನಾಯ್ತು ಇಂತಹ ಸತ್ಯ ವಿಷಯಗಳನ್ನು ತಿಳಿಸು. ಅದರಿಂದ ನಾವೂ ಕಲಿಯಲು ಅನೂಕೂಲ ಆಗುತ್ತೆ. ವಿಲಿಯಂ ಶೇಕ್ಸ್ ಪಿರರ್ ಎನು ಹೇಳ್ತಾನೆ ಗೋತ್ತಾ ಅಪ್ಪ ? ತನ್ನ ಮಕ್ಕಳ ಮನವನ್ನು ಅರಿತಿರುವವ ಬುದ್ಧಿವಂತ ತಂದೆ’ ಅಂತೆ ಆದರೆ ಮಕ್ಕಳ ಮನಸ್ಸಿನಲ್ಲಿ ಏನಿದೆ ಅಂತ ಅರ್ಥ ಮಾಡಿಕೋದು ಅಷ್ಟೊಂದು ಸುಲಭ ಅಲ್ಲ. ಹಾಗಗಿ ಈ ಪತ್ರ! ಇವೆಲ್ಲಾ ತೀರ ಸಣ್ಣ ಮಾಮುಲು ವಿಷಯ ಅನ್ನಿಸಿದ್ರೂ ದೊಡ್ಡ ವಿಷಯಗಳೇ ನಮ್ಮ ಪಾಲಿಗೆ! ಹಾಗಾಗಿ ಒಂದು ಸಲ ಯೋಚನೆ ಮಾಡು. ತಪ್ಪಿದ್ದಲ್ಲಿ ಕ್ಷಮಿಸಿಬಿಡು. ಮಕ್ಕಳಾದ ನಮ್ಮ ಬದುಕಿನಲ್ಲಿ ಅಮ್ಮನ ಬೆಚ್ಚನೆ ಮಡಿಲಿನಷ್ಟೇ ಅಪ್ಪನ ಬಲಿಷ್ಟ ಹೆಗಲೂ ಬೇಕು. ಫಾದರ್ಸ್ ಡೇ ಶುಭಾಷಯಗಳು ಪ್ರೀತಿಯಿಂದ, ಮಕ್ಕಳು.