ಸಂತ ಮೇರಿ ಕೆಥೆಡ್ರಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಂಗಳೂರಿನ ರೋಮನ್ ಕ್ಯಾಥಲಿಕ್ ಚರ್ಚ್ಗಳಲ್ಲಿ ಲ್ಯಾಟಿನ್ ರೀತಿರಿವಾಜುಗಳಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಅದೇ ನೇರದಲ್ಲಿ ಕೇರಳದಿಂದ ಉದರಂಭರಣಕ್ಕಾಗಿ ಬೆಂಗಳೂರಿಗೆ ಬಂದ ಕೆಲ ಸಿರಿಯನ್ ಕಥೋಲಿಕರು ವಿಭಿನ್ನ ರೀತಿರಿವಾಜುಗಳನ್ನು ನಡೆಸುವುದರಿಂದ ತಮ್ಮದೇ ಚರ್ಚುಗಳನ್ನು ಕಟ್ಟಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಸಿರಿಯನ್ ಪೂಜಾಪದ್ಧತಿ ೧೯೩೬ರಷ್ಟು ಹಿಂದೆಯೇ ಪ್ರಾರಂಭವಾಯಿತು. ಆ ಪದ್ಧತಿಯನ್ನು ಪಾಲಿಸುವ ಹಲವಾರು ಜಾಕೊಬೈಟ್ ಸಿರಿಯನ್ ಆರ್ಥೊಡಾಕ್ಸ್ ಚರ್ಚ್ಗಳು ಬೆಂಗಳೂರಿನಲ್ಲಿವೆ. ಅವುಗಳಲ್ಲಿ ಮುಖ್ಯವಾದುದು ಕ್ವೀನ್ಸ್ ರಸ್ತೆಯಲ್ಲಿರುವ ಸಂತ ಮೇರಿ ಕೆಥೆಡ್ರಲ್.