ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ)
ಸಂತ ಅಲೋಶಿಯಸ್ | |
---|---|
ಧ್ಯೇಯ | Lucet et Ardet (Latin) |
ಧ್ಯೇಯ (ಕನ್ನಡ) | ಸ್ಫೂರ್ತಿಗಾಗಿ ಹೊಳೆಯಿರಿ (ಆಂಗ್ಲದಲ್ಲಿ ಧ್ಯೇಯ: Shine to Enkindle) |
ಸ್ಥಾಪನೆ | 1880 |
ಪ್ರಕಾರ | ಖಾಸಗಿ ಸಂಶೋಧನೆ ಲಾಭರಹಿತ ಸಹ-ಶಿಕ್ಷಣ ವಿಶ್ವವಿದ್ಯಾಲಯ |
ಕುಲಪತಿಗಳು | Rev. Fr. Dionysius Vaz SJ |
ಉಪಕುಲಪತಿಗಳು | Rev. Dr. Praveen Martis SJ |
ಪದವಿ ಶಿಕ್ಷಣ | 5436 |
ಸ್ನಾತಕೋತ್ತರ ಶಿಕ್ಷಣ | 1587 |
ಸ್ಥಳ | MSS ರಸ್ತೆ (ಹಿಂದೆ ಲೈಟ್‌ಹೌಸ್ ಬೆಟ್ಟದ ರಸ್ತೆ ಎಂದು ಕರೆಯಲಾಗುತ್ತಿತ್ತು), ಕೋಡಿಯಾಲ್ ಬೈಲ್, ಮಂಗಳೂರು, ಕರ್ನಾಟಕ, ಭಾರತ |
ಆವರಣ | ನಗರ, 37 ಎಕರೆ |
ಅಂತರಜಾಲ ತಾಣ | Official website |
ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ) ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಹೃದಯ ಭಾಗದಲ್ಲಿದೆ. ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಈ ಕಾಲೇಜು ಪ್ರಮುಖವಾದುದು ಎಂದು ಗುರುತಿಸಿಕೊಂಡಿದೆ. ಇತ್ತೀಚೆಗೆ ನ್ಯಾಕ್ ೩.೬೨ ಅಂಕ ಪಡೆದು ಉತ್ತಮ ಶ್ರೇಣಿಯಲ್ಲಿ ಮಾನ್ಯತೆ ಪಡೆದು, ರಾಜ್ಯದ ಪ್ರಮುಖ ೫ ಸಂಸ್ಥೆಗಳಲ್ಲಿ ಒಂದೆಂದು ಗುರುತಿಸಿಕೊಂಡಿದೆ. ದೇಶದ ೧೦೦ ಕಾಲೇಜುಗಳಲ್ಲಿ ಸಂತ ಅಲೋಶಿಯಸ್ ಕಾಲೇಜು ಗುರುತಿಸಿಕೊಂಡಿದೆ.
ಕಾಲೇಜಿನ ಚರಿತ್ರೆ
[ಬದಲಾಯಿಸಿ]ಸಂತ ಅಲೋಶಿಯಸ್ ಕಾಲೇಜು 1880ರಲ್ಲಿ ಆರಂಭವಾಯಿತು. ಸಂತ ಅಲೋಶಿಯಸ್ ಕಾಲೇಜು ಎಂಬ ಹೆಸರಿನಲ್ಲಿ ಆರಂಭವಾದ ಈ ಸಂಸ್ಥೆಯು ಪ್ರಾಥಮಿಕ, ಮಾಧ್ಯಮಿಕ, ಪ್ರೌಢ, ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಹೀಗೆ ಹಲವು ಸಂಸ್ಥೆಗಳನ್ನು ಹೊಂದಿದೆ. ಈ ಕಾಲೇಜಿಗೆ ೧೩೬ ವರ್ಷಗಳ ಇತಿಹಾಸವಿದೆ. 2007ರಲ್ಲಿ ಸಂತ ಅಲೋಶಿಯಸ್ ಕಾಲೇಜು ಸ್ವಾಯತ್ತ ಸಂಸ್ಥೆಯಾಗಿ ಬೆಳೆದು ನಿಂತಿದೆ.
ಜನವರಿ 19, 2024ರಿಂದ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಮತ್ತು ಕೇಂದ್ರ ಶಿಕ್ಷಣ ಸಚಿವಾಲಯವು ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿಗೆ (ಸ್ವಾಯತ್ತ) ವಿಶ್ವವಿದ್ಯಾಲಯದ ಡೀಮ್ಡ್ ಸ್ಥಾನಮಾನವನ್ನು ಅನುಮೋದಿಸಿದೆ.[೧]ಪ್ರಸ್ತುತ ಈ ಕಾಲೇಜಿನ ಪದವಿ ತರಗತಿಗಳಲ್ಲಿ 7000ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ.
ಸಂತ ಅಲೋಶಿಯಸ್ ಕಾಲೇಜು ಈಜುಕೊಳ
[ಬದಲಾಯಿಸಿ]ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ)ದಲ್ಲಿರುವ ಶಾಲಾ ವ್ಯವಸ್ಥೆಗಳು
[ಬದಲಾಯಿಸಿ]ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ)ದಲ್ಲಿ 8 ಶಾಲಾ ವ್ಯವಸ್ಥೆಗಳಿವೆ.
- ಭೌತಿಕ ವಿಜ್ಞಾನಗಳ ಶಾಲೆ
- ಜೀವ ವಿಜ್ಞಾನಗಳ ಶಾಲೆ
- ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ಶಾಲೆ
- ಕಲೆ ಮತ್ತು ಮಾನವಿಕ ಶಾಲೆ
- ವಾಣಿಜ್ಯ, ಹಣಕಾಸು ಮತ್ತು ಲೆಕ್ಕಪತ್ರ ಶಾಲೆ
- ವ್ಯಾಪಾರ ಮತ್ತು ನಿರ್ವಹಣೆಯ ಶಾಲೆ
- ಭಾಷೆ ಮತ್ತು ಸಾಂಸ್ಕೃತಿಕ ಅಧ್ಯಯನಗಳ ಶಾಲೆ
- ವೃತ್ತಿಪರ ಅಧ್ಯಯನಗಳ ಶಾಲೆ
ಶಾಲಾ ವ್ಯವಸ್ಥೆಯ ಅಡಿಯಲ್ಲಿಇರುವ ನಿಕಾಯಗಳು(Faculties)
[ಬದಲಾಯಿಸಿ]ಭೌತಿಕ ವಿಜ್ಞಾನಗಳ ಶಾಲೆ
[ಬದಲಾಯಿಸಿ]- ಭೌತಶಾಸ್ತ್ರ (UG & PG)
- ರಸಾಯನಶಾಸ್ತ್ರ (UG & PG)
- ಗಣಿತ ಶಾಸ್ತ (UG & PG)
- ಸಂಖ್ಯಾಶಾಸ್ತ್ರ (UG)
- ವಿದ್ಯುನ್ಮಾನ (UG)
ಜೀವ ವಿಜ್ಞಾನಗಳ ಶಾಲೆ
[ಬದಲಾಯಿಸಿ]- ಸೂಕ್ಷ್ಮಜೀವಶಾಸ್ತ್(UG)
- ಜೀವ ರಸಾಯನಶಾಸ್ತ್ರ(UG & PG)
- ಜೀವತಂತ್ರಜ್ಞಾನ(UG & PG)
- ಪ್ರಾಣಿಶಾಸ್ತ್(UG)
- ಸಸ್ಯಶಾಸ್ತ್(UG)
- ಆಹಾರ ವಿಜ್ಞಾನ(UG & PG)
ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ಶಾಲೆ
[ಬದಲಾಯಿಸಿ]- ಕಂಪ್ಯೂಟರ್ ಅಪ್ಲಿಕೇಶನ್‌ಗಳು(UG & PG)
- ಕಂಪ್ಯೂಟರ್ ಅನಿಮೇಶನ್(UG)
- ಕಂಪ್ಯೂಟರ್ ವಿಜ್ಞಾನ ಮತ್ತು ಡೇಟಾ ವಿಜ್ಞಾನ(UG)
- ಸಾಫ್ಟ್ವೇರ್ ತಂತ್ರಜ್ಞಾನ(PG)
- ಬಯೊಇನ್ಫೊರ್ಮಟಿಕ್ಸ್(PG)
- ಬಿಗ್ ಡೇಟಾ ಅನಾಲಿಟಿಕ್ಸ್ ಮತ್ತು ಡೇಟಾ ವಿಜ್ಞಾನ(PG)
ಕಲೆ ಮತ್ತು ಮಾನವಿಕ ಶಾಲೆ
[ಬದಲಾಯಿಸಿ]- ಇತಿಹಾಸ(UG)
- ಅರ್ಥಶಾಸ್ತ್(UG & PG)
- ರಾಜಕೀಯ ವಿಜ್ಞಾನ(UG)
- ಸಮಾಜಶಾಸ್ತ (UG)
- ಸಮಾಜಕಾರ್ಯ (UG & PG)
- ಮನೋವಿಜ್ಞಾನ(UG & PG)
- ಪತ್ರಿಕೋದ್ಯಮ ಮತ್ತು ದೃಶ್ಯ ಸಂವಹನ(UG & PG)
- ದೈಹಿಕ ಶಿಕ್ಷಣ(UG)
ವಾಣಿಜ್ಯ, ಹಣಕಾಸು ಮತ್ತು ಲೆಕ್ಕಪತ್ರ ಶಾಲೆ
[ಬದಲಾಯಿಸಿ]- ವಾಣಿಜ್ಯ(UG & PG)
ವ್ಯಾಪಾರ ಮತ್ತು ನಿರ್ವಹಣೆಯ ಶಾಲೆ
[ಬದಲಾಯಿಸಿ]- ವ್ಯಾಪಾರ ಆಡಳಿತ(UG & PG)
ಭಾಷೆ ಮತ್ತು ಸಾಂಸ್ಕೃತಿಕ ಅಧ್ಯಯನಗಳ ಶಾಲೆ
[ಬದಲಾಯಿಸಿ]- ಇಂಗ್ಲೀಷ್ ಭಾಷೆ (UG & PG)
- ಇಂಗ್ಲೀಷ್ ಸಾಹಿತ್ಯ(UG & PG)
- ಹೆಚ್ಚುವರಿ ಇಂಗ್ಲೀಷ್(UG)
- ಕನ್ನಡ(UG)
- ಕನ್ನಡ ಸಾಹಿತ್ಯ(UG)
- ಹಿಂದಿ(UG)
- ಹಿಂದಿ ಸಾಹಿತ್ಯ(UG)
- ಸಂಸ್ಕ್ರತ(UG)
- ಕೊಂಕಣಿ(UG)
- ಮಲಯಾಳಮ್(UG)
- ಫ್ರೆಂಚ್(UG)
ವೃತ್ತಿಪರ ಅಧ್ಯಯನಗಳ ಶಾಲೆ
[ಬದಲಾಯಿಸಿ]- ಚಿಲ್ಲರೆ ನಿರ್ವಹಣೆ (UG)
- ಅನಿಮೇಷನ್ ಮತ್ತು ಮಲ್ಟಿಮೀಡಿಯಾ(UG)
- ಸಾಫ್ಟ್‌ವೇರ್ ಅಭಿವೃದ್ಧಿ(UG)
- ನವೀಕರಿಸಬಹುದಾದ ಇಂಧನ ನಿರ್ವಹಣೆ(UG)
- ಕ್ರೀಡೆ, ಚಿಕಿತ್ಸೆ ಮತ್ತು ಪೋಷಣೆ (UG)
ಛಾಯಾಂಕಣ
[ಬದಲಾಯಿಸಿ]-
St Aloysius Chapel
-
St Aloysius Deemed to be University Building
ಉಲ್ಲೇಖಗಳು
[ಬದಲಾಯಿಸಿ]- ↑ News Bureau, The Hindu (ಜನವರಿ 25, 2024). "St. Aloysius College gets Deemed-to-be-University status" – via www.thehindu.com.