ವಿಷಯಕ್ಕೆ ಹೋಗು

ಶ್ರೀನಿವಾಸ ಜೋಕಟ್ಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀನಿವಾಸ ಜೋಕಟ್ಟೆ
ಶ್ರೀನಿವಾಸ ಜೋಕಟ್ಟೆಯವರ ವಿರಚಿತ ೨೫ ಮತ್ತು ೨೬ ನೆಯ ಪುಸ್ತಕಗಳನ್ನು ಮೈಸೂರ್ ಅಸೋಸಿಯೇಷನ್ ನ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಯಿತು.
ಜನನ
ಶ್ರೀನಿವಾಸ, ತಂದೆ : ಡಾ.ಐ.ವಿ.ರಾವ್, ತಾಯಿ: ಗಿರಿಜಾ ರಾವ್.

ಮಂಗಳೂರು ಜಿಲ್ಲೆಯ ಜೋಕಟ್ಟೆಯಲ್ಲಿ ಜನನ.
ರಾಷ್ಟ್ರೀಯತೆಭಾರತೀಯ
ಇತರೆ ಹೆಸರುಜೋಶ್ರೀ, ಶ್ರೀಜೋ
ವಿದ್ಯಾಭ್ಯಾಸಬಿ.ಕಾಂ
ವೃತ್ತಿ(ಗಳು)ಮುಂಬಯಿನಗರದ ಕನ್ನಡ ದೈನಿಕ, 'ಕರ್ನಾಟಕ ಮಲ್ಲ' ದ ಉಪಸಂಪಾದಕ, ಕರ್ನಾಟಕ ಸಂಘ, ಮುಂಬಯಿನ, ಮುಖ ಪತ್ರಿಕೆ, 'ಸ್ನೇಹ ಸಂಬಂಧ' ಮೊದಲಾದ ಪತ್ರಿಕೆಗಳ ಸಂಪಾದಕ, ಕರ್ನಾಟಕ ಹಲವಾರು ಮಾಸಿಕ, ವಾರಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಾರೆ.
ಗಮನಾರ್ಹ ಕೆಲಸಗಳುಎಲ್ಲಾ ವಿಧದ ಲೇಖನಗಳಲ್ಲೂ ಪ್ರಸಿದ್ಧರು. ವಿಶೇಷವಾಗಿ ಪ್ರವಾಸ ಲೇಖನಗಳು.
ಸಂಗಾತಿಶ್ರೀಮತಿ ಜಯಲಕ್ಷ್ಮಿ ಜೋಕಟ್ಟೆ

'ಶ್ರೀನಿವಾಸ ಜೋಕಟ್ಟೆಯವರು' ಒಬ್ಬ ಪತ್ರಕರ್ತ, ಸಾಹಿತಿ, ಸಂದರ್ಶಕ, ಅಂಕಣಕಾರರೆಂದು ಗುರುತಿಸಿಕೊಂಡಿದ್ದಾರೆ. ಮುಂಬಯಿ ನಗರದ ಪ್ರಮುಖ ಕನ್ನಡ ದಿನಪತ್ರಿಕೆ,'ಕರ್ನಾಟಕ ಮಲ್ಲ'ದ ಉಪಸಂಪಾದಕರಾಗಿ ದುಡಿಯುತ್ತಿದ್ದಾರೆ. ಅವರ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತವೆ. ಕೆಲವು ಪತ್ರಿಕೆಗಳಿಗೆ ಅವರು ತಮ್ಮ ಕಾವ್ಯನಾಮಗಳಾದ 'ಜೋಶ್ರೀ', 'ಶ್ರೀಜೋ', ಮೊದಲಾದ ಹೆಸರುಗಳಿಂದಲೂ ಬರೆಯುತ್ತಿದ್ದಾರೆ. ಪ್ರವಾಸಕಥನಗಳನ್ನು ಬರೆಯುತ್ತಾರೆ. ೨೦೧೩, ರ, ಸೆಪ್ಟೆಂಬರ್, ತಿಂಗಳಿನಲ್ಲಿ ಪ್ರಕಟವಾದ 'ತುಷಾರ ಮಾಸ ಪತ್ರಿಕೆ'ಯಲ್ಲಿ ಪ್ರಕಟವಾದ 'ಜಗತ್ತಿನ ಏಕೈಕ ಹಿಂದೂ ರಾಷ್ಟ್ರ ನೇಪಾಲ', ಆ ದೇಶದ ಇತಿಹಾಸ, ಮೇಲ್ಮೈಲಕ್ಷಣ, ಜನಜೀವನ, ಹಿಂದೂ ಬೌದ್ಧಮತಗಳ ಸಾಮರಸ್ಯತೆ, ಆಧುನಿಕ ನೇಪಾಳದ ವಿವರಗಳು, ಬ್ರಿಟಿಷರಿಂದ ಸ್ಥಾಪಿಸಲಾದ ಅಂಚೆ ವ್ಯವಸ್ಥೆ, ಹ್ಯಾಂಡ್ ಪ್ರಿಂಟಿಂಗ್, ದೈನಿಕಗಳು,ಟೆಲಿಫೋನ್, ಟೆಲಿಗ್ರಾಂ, ರೇಡಿಯೋ, ಮೊಬೈಲ್, ಇಂಟರ್ನೆಟ್ ವ್ಯವಸ್ಥೆಗಳ ಉಗಮದ ವಿವರಗಳಿವೆ. 'ಮುಂಬಯಿ ಅಂಡರ್ವರ್ಲ್ಡ್ ನಿಂದ ನೇಪಾಲಕ್ಕೆ' ನೇರ ಕೊಂಡಿ ಇರುವ ಬಗ್ಗೆ ಸಾಧ್ಯತೆಗಳ ಮಾಹಿತಿಗಳಿವೆ. []

ಜನನ ಮತ್ತು ಜೀವನ

[ಬದಲಾಯಿಸಿ]

ಶ್ರೀನಿವಾಸ ಜೋಕಟ್ಟೆಯವರು, 'ಡಾ. ಐ.ವಿ.ರಾವ್' [] ಹಾಗೂ ಗಿರಿಜಾ ವಿ. ರಾವ್ ದಂಪತಿಗಳ ಪುತ್ರನಾಗಿ ಮಂಗಳೂರು ಜಿಲ್ಲೆಯ ಜೋಕಟ್ಟೆಗ್ರಾಮದಲ್ಲಿ[] ೧೯೬೪ ರ, ಜುಲೈ ೪ ರಂದು ಜನಿಸಿದರು. ಐ.ವಿ.ರಾವ್ ರವರು, ಆಯುರ್ವೇದ ವೈದ್ಯರು. 'ಆನೆಕಾಲು ರೋಗ' ಎಂಬ ಕಿರುಹೊತ್ತಿಗೆಯನ್ನು ಬರೆದು, ಪ್ರಕಟಿಸಿ ಊರಿನಲ್ಲಿ ಜನಜಾಗೃತಿಯನ್ನು ತಂದಿದ್ದರು. ಶ್ರೀನಿವಾಸರಿಗೆ, ಒಬ್ಬ ತಮ್ಮ, ಒಬ್ಬ ತಂಗಿ ಹಾಗೂ ಒಬ್ಬ ಅಕ್ಕ ಇದ್ದಾರೆ. ಪತ್ನಿ ಜಯಲಕ್ಷ್ಮಿ ಜೋಕಟ್ಟೆಯವರ ವಿದ್ಯಾರ್ಹತೆ ಬಿ.ಕಾಂ.

ಸಾಹಿತ್ಯ ಕೃಷಿ

[ಬದಲಾಯಿಸಿ]
  • ೭೪ ನೆಯ ಅಖಿಲ ಭಾರತ ಕನ್ನಡಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
  • ಬಿಜಾಪುರದ ನವರಸಪುರ ಕವಿಗೋಷ್ಠಿ ಸಹಿತ ಅನೇಕ ಕವಿಗೋಷ್ಠಿಗಳಲ್ಲಿ ಕವನವಾಚನಮಾಡಿದ ಹೆಗ್ಗಳಿಕೆಗೆ ಪಾತ್ರರು.
  • ಸನ್. ೧೯೮೮ಲ್ಲಿ ’ಉರಿದವರು’ ಎಂಬ ಎಂ.ಎಸ್.ವೇದಾರವರ ಕಥೆಯನ್ನು ರಂಗರೂಪಾಂತರ ಮಾಡಿ ಅದು ಮುಂಬಯಿನ ಮಾಹಿಮ್ ಉಪನಗರದಲ್ಲಿರುವ 'ವಿಶ್ವೇಶ್ವರಯ್ಯ ಸಭಾಂಗಣ'ದಲ್ಲಿ ಪ್ರದರ್ಶನಗೊಂಡಿತ್ತು.
  • ೨೦೦೮-೧೦ 'ಪೋಲಿಸ್ ನ್ಯೂಸ್ ವಾರ ಪತ್ರಿಕೆ'ಯಲ್ಲಿ ಮುಂಬಯಿನ ಅಂಡರ್ ವರ್ಲ್ಡ್ ಧಾರಾವಾಹಿಗಳು ಪ್ರಕಟವಾಗಿವೆ.
  • ಮುಂಬಯಿ-ಮಂಗಳೂರು ಆಕಾಶವಾಣಿಗಳಲ್ಲಿ ಕಥಾಕವನ ವಾಚನ ಮಾಡುತ್ತಿದ್ದರು.
  • ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಸಂಕಲನ ’ಗದ್ದರ್’ ೧೯೯೨ ರಲ್ಲಿ, ಆಯ್ಕೆಗೊಂಡಿದೆ.
  • ಬಾಂಬೆ ಸ್ಪೋಟ ಮತ್ತು ನೇತ್ರಳ ಹುಟ್ಟುಹಬ್ಬ ೧೯೯೩ ರಲ್ಲಿ ಪ್ರಕಟಿತವಾಗಿವೆ.
  • 'ಗಾಯ' ೨೦೧೧ ರಲ್ಲಿ ಕವನಗಳು ಆಯ್ಕೆಗೊಂಡಿದ್ದು ಪ್ರಕಟವಾಗಿವೆ.
  • ಕರ್ನಾಟಕ ಸಾಹಿತ್ಯ ಅಕಾಡೆಮಿಯ ೩೧-೧೦-೮೮ ರಿಂದ, ೦ ೬-೧೧ ೮೮ ರ ತನಕ ಬಳ್ಳಾರಿಯಲ್ಲಿ ಆಯೋಜಿಸಲಾಗಿದ್ದ ಸಣ್ಣಕತೆಗಗಳ ಕಮ್ಮಟದಲ್ಲಿ ಮುಂಬಯಿನ ಅಭ್ಯರ್ಥಿಯಾಗಿ ಭಾಗವಹಿಸಿದ್ದರು.
  • ೨೦೦೧ ’ತುಷಾರ ವಾರಪತ್ರಿಕೆ’ಯ ವಿಮರ್ಶಕ ಟಿ.ಪಿ.ಅಶೋಕ ಗುರುತಿಸಿದ ೧೯೯೪ ರ ಕೆಲವು ಮುಖ್ಯ ಪ್ರಕಟಣೆಗಳಲ್ಲಿ ’ಕ್ಷಮಿಸಿ ಈ ಚಿತ್ರಕ್ಕೆ ಹೆಸರಿಲ್ಲ’ ಎಂಬ ಕವನ ಸಂಕಲನ ಒಳಗೊಂಡಿದೆ.

ಪ್ರಶಸ್ತಿ, ಬಹುಮಾನಗಳು

[ಬದಲಾಯಿಸಿ]

[ಸೂಕ್ತ ಉಲ್ಲೇಖನ ಬೇಕು]

  • ಮುಸ್ಲಿಂ ನಾಗರಿಕ ಕ್ರಿಯಾ ಸಮಿತಿ 'ಆಲ್ ಅಝ್ ಹರ್' ’ಜೋಕಟ್ಟೆ ಸುಪುತ್ರ' ಬಿರುದು’ ಕೊಟ್ಟು ಸನ್ಮಾನಿಸಿದೆ.
  • ಉದಯವಾಣಿ ಪತ್ರಿಕೆ ಗುರುತಿಸಿದ ’ಪುಸ್ತಕ ಪ್ರತಿಷ್ಠೆ’ ವಾರ್ಷಿಕ ಉತ್ತಮ ಪುಸ್ತಕಗಳಲ್ಲಿ 'ಗಾಂಧಿಯಿಂದ ಗಾವ್ಲಿ ತನಕ’ ಗುರುತಿಸಲ್ಪಟ್ಟಿದೆ.
  • ೨೦೦೩ ರಲ್ಲಿ ಉದಯವಾಣಿ ಈ ವರ್ಷದ ಪುಸ್ತಕ ಪ್ರತಿಷ್ಠೆ ಕಥಾಸಂಕಲನ ವಿಭಾಗದಲ್ಲಿ ಗುರುತಿಸಲ್ಪಟ್ಟಿದೆ.
  • ದಕ್ಷಿಣ ಕನ್ನಡ ಜಿಲ್ಲೆಯ ೪ ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಸಾಹಿತ್ಯ ಸ್ಪರ್ಧೆ ಜನವರಿ ೧೯೮೮ ರಲ್ಲಿ, 'ಹೊಸಹೆಜ್ಜೆ 'ಕಥೆಗೂ 'ಸಾಕ್ಷಿ' ಕವನಕ್ಕೂ ಎರಡೂ ವಿಭಾಗಗಳಲ್ಲಿ ಪ್ರಥಮ ಬಹುಮಾನ ದೊರೆತಿದೆ.
  • ತರಂಗ ವಾರಪತ್ರಿಕೆಯಲ್ಲಿ ’ಚಕ್ರವ್ಯೂಹ’ ಕಥೆ, (ಆಗಸ್ಟ್,೭ ೧೯೮೮) ತಿಂಗಳ ಬಹುಮಾನಿತ ಕಥೆಯಾಗಿ ಆಯ್ಕೆಗೊಂಡಿತ್ತು.
  • ಬಜಪೆ ಜೇಸೀಸ್ ರವರು ಏರ್ಪಡಿಸಿದ್ದ ಸಾಹಿತ್ಯ ಸ್ಪರ್ಧೆಯಲ್ಲಿ ’ಹೀಗೊಬ್ಬ ಗೋಪಾಲ’ಕತೆಗೆ ದ್ವಿತೀಯ ಬಹುಮಾನ ದೊರೆಯಿತು.
  • 'ಈ ದೇಶದ ತುಂಬಾ’ ಕವಿತೆಗೆ ಪ್ರಥಮ ಬಹುಮಾನ ಸಿಕ್ಕಿತು.
  • ಮದ್ರಾಸಿನ ಲಹರಿ ಪತ್ರಿಕೆಯ ಕಥಾ ಸ್ಪರ್ಧೆಯಲ್ಲಿ 'ಕೊನೆಯ ಸದ್ದು' ಕಥೆಗೆ ತೃತೀಯ ಬಹುಮಾನ ದೊರೆಯಿತು.
  • ಉಡುಪಿಯ ಹಿರಿಯ ಸಾಂಸ್ಕೃತಿಕ ಸಂಸ್ಥೆ ಕಲಾವೃಂದದ ೪೪ ನೆಯ ವಾರ್ಷಿಕೋತ್ಸವದ ಕಥಾ ಸ್ಪರ್ಧೆಯಲ್ಲಿ ’ಪ್ರಶ್ನೆಗಳ ನಡುವೆ’ ಕತೆಗೆ ತೃತಿಯ ಬಹುಮಾನ,
  • ಸಂಕ್ರಮಣ ಪತ್ರಿಕೆಯ ಸಾಹಿತ್ಯ ಸ್ಪರ್ಧೆ ೧೯೯೦ ರಲ್ಲಿ ’ಅಮ್ಮನ ನಿರೀಕ್ಷೆ ಮತ್ತು ನನ್ನ ಕವಿತೆ’ಗೆ ಬಹುಮಾನ. ’ಗೌಳಿ ಪತನ ಫಲ’, ಕವಿತೆಗೆ ಸ್ಪರ್ಧೆಯಲ್ಲಿ ಬಹುಮಾನ ೨೦೦೩,
  • ’ಗಣಪನ ಸದ್ದು’ ಕವಿತೆ ೨೦೧೨ ರಲ್ಲಿ ಬಹುಮಾನ ದೊರೆಯಿತು.
  • ಮಾಸ್ತಿ ಜನ್ಮ ಶತಾಭ್ದಿಯ ಸಮಯದಲ್ಲಿ ಹೊರನಾಡು ಕನ್ನಡಿಗರಿಗಾಗಿ ಆಯೋಜಿಸಿದ್ದ ಕಥಾ ಸ್ಪರ್ಧೆಯಲ್ಲಿ ’ಜುಲಾಬು’ ಕಥೆಗೆ ತೃತಿಯ ಬಹುಮನ ೧೯೯೨,
  • ಬೆಂಗಳೂರಿನ ಪತ್ರಕರ್ತರ ವೇದಿಕೆ ಕೊಡಮಾಡುವ ’ಹೂಗಾರ ಸ್ಮಾರಕ ಮಾಧ್ಯಮ ಪ್ರಶಸ್ತಿ’(೨೦೦೫), ದೊರೆಯಿತು.
  • ’ಮುಂಬಯಿನ ಐಡಿಯಲ್ ಜರ್ನಲಿಸ್ಟ್ ಅಸೋಸಿಯೇಷನ್’ ವತಿಯಿಂದ ಸ್ವಾತಂತ್ರ್ಯಸಂಗ್ರಾಮಕ್ಕೆ ೧೫೦ ವರ್ಷ ತುಂಬಿದಸಂದರ್ಭದಲ್ಲಿ ’ಪತ್ರಕಾರ್ ರತ್ನ ಪ್ರಶಸ್ತಿ (೨೦೦೭)’ ಸಿಕ್ಕಿತು.
  • ಕಲಾಜಗತ್ತು ಮುಂಬಯಿ ಆಯೋಜಿಸಿದ ’ಬೊಂಬಾಯಿಡ್ ತುಳುನಾಡು’ ಸಂದರ್ಭದಲ್ಲಿ ’ತುಳುನಾಡ ಪ್ರಶಸ್ತಿ’ (೨೦೦೮), ದೊರೆಯಿತು.
  • ನಂದಳಿಕೆಯ ಕವಿ ಮುದ್ದಣ ಸ್ಮಾರಕ ಮಿತ್ರ ಮಂಡಳಿ (ರಿ) ’ರಜತ ಹಬ್ಬದ ಪುರಸ್ಕಾರ’(೨೦೦೪), ಕ್ಕೆ ಭಾಜನರಾದರು.
  • ತನ್ನಕವನ ಸಂಕಲನ ’ಕ್ಷಮಿಸಿ ಈ ಚಿತ್ರಕ್ಕೆ ಹೆಸರಿಲ್ಲ’ ಕೃತಿಗೆ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ (೧೯೯೯), ದೊರೆಯಿತು.
  • ತನ್ನ ಕವನಗಳ ಸಂಕಲನ ’ಮಾಯಾಲೋಕದ ಒಳಗುಟ್ಟುಗಳು’ ಕೃತಿಗೆ ೨೦೧೨ ರಲ್ಲಿ ’ಸಾಹಿತ್ಯ ಸೇತು ಪ್ರಶಸ್ತಿ’ ಸಿಕ್ಕಿತು. [೧][ಶಾಶ್ವತವಾಗಿ ಮಡಿದ ಕೊಂಡಿ]
  • ಇದೇ ಕೃತಿಗೆ ೨೦೧೧ ರ ’ಸಂಕ್ರಮಣ ಸಾಹಿತ್ಯ ಸ್ಪರ್ಧೆ’ಯ ವಿಮರ್ಶಾ ವಿಭಾಗದಲ್ಲಿ ಬಹುಮಾನ, ’ಕೊನೆಯ ಸದ್ದು’ ಕಥಾಸಂಕಲನಕ್ಕೆ ’ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ’ದ ೨೦೦೭ ನೇ ವರ್ಷದ ಪ್ರಶಸ್ತಿ ಇತ್ಯಾದಿಗಳು ಸಂದಿವೆ.
  • ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ,[]'ಮುಂಬಯಿ ಅಂಡರ್ ವರ್ಲ್ಡ್ ಕೃತಿ' (ತನಿಖಾ ವಿಭಾಗದ ಕೃತಿ)ಗೆ ದೊರಕಿದೆ.
  • ನಗರದ ಐವರು ಸಾಹಿತಿಗಳಿಗೆ ವಿಶ್ವೇಶ್ವರಯ್ಯ ಸಾಹಿತ್ಯ ಪುರಸ್ಕಾರ[ಶಾಶ್ವತವಾಗಿ ಮಡಿದ ಕೊಂಡಿ]
  • ಅವಧಿ, ಡೈಲಿ ಬುಕ್, ಶ್ರೀನಿವಾಸ ಜೋಕಟ್ಟೆಯವರ, 'ಮುಂಬಯಿ ಅಂಡರ್ ವರ್ಲ್ಡ್ ಪುಸ್ತಕ'ಕ್ಕೆ'ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯಪ್ರಶಸ್ತಿ ಪ್ರಶಸ್ತಿ' ಪ್ರದಾನ ಮಾಡಲಾಯಿತು.ಡಾ. ಬಿ.ಜನಾರ್ಧನ ಭಟ್,
  • ನವೆಂಬರ್,೨,೨೦೧೪ ರಂದು,'ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್,'(ಪ) 'ಗಿರಿಜಾ ಪಯ್ಯಡೆ ಸಭಾಗೃಹ'ದಲ್ಲಿ 'ಪತ್ರಕಾರ್ ಸಾಮ್ರಾಟ್' ಬಿರುದನ್ನು ಪ್ರದಾನಿಸಿ ವಿಶೇಷ ಸನ್ಮಾನ ಮಾಡಲಾಯಿತು.
  • ಉದಯವಾಣಿ, Sep 22, 2015, ಶ್ರೀನಿವಾಸ ಜೋಕಟ್ಟೆ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ,[ಶಾಶ್ವತವಾಗಿ ಮಡಿದ ಕೊಂಡಿ]
  • 'ಕ್ರಿಯಾಶೀಲ ಪತ್ರಕರ್ತ ಸಾಹಿತಿ ಶ್ರೀನಿವಾಸ ಜೋಕಟ್ಟೆಯವರ ಕೃತಿ ಬಿಡುಗಡೆ'. ನ್ಯೂಸ್ ಕನ್ನಡ- ಸುದ್ದಿಯಾಚೆಗಿನ ಸತ್ಯ. ೧೮-೦೯-೨೦೧೬. ಸಚಿತ್ರ ವರದಿ : ರೋನ್ಸ್ ಬಂಟ್ವಾಳ್,ಮುಂಬಯಿನಗರದ ಮತ್ತೋರ್ವ ಅಂತರ್ಜಾಲದ ಸುಪ್ರಸಿದ್ಧ ಪತ್ರಕರ್ತರು[ಶಾಶ್ವತವಾಗಿ ಮಡಿದ ಕೊಂಡಿ]

ಪುಸ್ತಕಗಳು

[ಬದಲಾಯಿಸಿ]
  • 'ಪರದಾಟ' (ಕಿರು ಕವನಗಳು)
  • 'ಪರಾವಲಂಬಿ ಕಥೆ'
  • 'ಕ್ಷಮಿಸಿ ಈಚಿತ್ರಕ್ಕೆ ಹೆಸರಿಲ್ಲ' (ಕವನಗಳು)
  • 'ಹೃದ್ ಗತ' (ಕಥೆಗಳು)
  • 'ಗಾಂಧಿಯಿಂದ ಗಾವ್ಲಿಯವರೆಗೆ' (ಲೇಖನಗಳು)
  • 'ಕೊನೆಯ ಸದ್ದು' (ಕಥೆಗಳು)
  • 'ಕಾಲಿಗೆ ಚಕ್ರ ಕನಸಿಗೆ ಕಣ್ಣು ಪ್ರವಾಸ' (ಪ್ರವಾಸ ಕಥನಗಳು)
  • 'ಮಾಯಾಲೋಕದ ಒಳಗುಟ್ಟುಗಳು' (ಲೇಖನ)
  • 'ಸಂಚಾರ ಸಾಗರ ಮತ್ತು ಮಿಲೇನಿಯಂ ಸೂರ್ಯ'
  • 'ಬದಲಾದ ಮುಖಗಳು' (ಲೇಖನಗಳು)
  • 'ಸ್ಫಟಿಕದ ಶಲಾಕೆಯಂತೆ' (ಸಂದರ್ಶನ)
  • 'ಬ್ರಾಮ್ಹಕ ಜಗತ್ತು' (ಲೇಖನ)
  • ' ಹಿಂದೂ ರಾಷ್ಟ್ರ- ನೇಪಾಳ' (ಪ್ರವಾಸ ಕಥನ)
  • 'ದೇವಕಿಯ ಪತ್ರಗಳು' (೨೧ ಕಥೆಗಳ ಸಂಕಲನ)
  • 'ಮುಂಬಯಿನ ಅಂಡರ್ ವರ್ಲ್ಶ್ ಧಾರಾವಾಹಿಗಳು'
  • 'ಕಾಲಗರ್ಭಕ್ಕೆ ಪಾತಾಳಗರಡಿ': ಈ ಪುಸ್ತಕ ೨೦೧೨ ರಲ್ಲಿ ಬಿಡುಗಡೆಯಾಯಿತು.
  • ವಾಸ್ತವ', ಹಾಗೂ 'ಹಿಮವರ್ಷ' ಕಾದಂಬರಿಗಳ ಲೋಕಾರ್ಪಣೆ, []
  • ಶ್ರೀನಿವಾಸ ಜೋಕಟ್ಟೆ ಅವರ ಎರಡು ಕೃತಿಗಳ ಬಿಡುಗಡೆ: ‘ಮುಂಬಯಿ ಮಿಂಚು’ ಮತ್ತು ‘ಜೋಕಟ್ಟೆ ಸಮಗ್ರ ಕತೆಗಳು’[]

ಸಂಪಾದಿತ ಕೃತಿಗಳು

[ಬದಲಾಯಿಸಿ]
  • 'ಬೆಳ್ಳಿ ಬೆಳಗು' ಕಾಂತಾವರ ಕನ್ನಡ ಸಂಘ ಬೆಳ್ಳಿಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾದ ಲೇಖನ ಸಂಕಲನ.
  • ವಿಚಾರ ಭಾರತಿ -(ಲೇಖನ)
  • ದಂಡೆ (ಕಥೆಗಳು)
  • ಪದ್ಮಸವಿ-ಅಭಿನಂದನಾ ಗ್ರಂಥ

ಉಲ್ಲೇಖಗಳು

[ಬದಲಾಯಿಸಿ]
  1. 'ಕೆಮ್ಮಣ್ಣು.ಕಾಂ' Two Books of Srinivas Jokatte, released', October 19, 2012
  2. "ಆಕರ ಗ್ರಂಥ", ಆಯುರ್ವೇದ ಭೂಷಣ, ಸಮಾಜ ಬಂಧು, ಡಾ.ಐ.ವಿ.ರಾವ್ ಜೋಕಟ್ಟೆ-'ಜೋಶ್ರೀ', ಕನ್ನಡ ಸಂಘ ಕಾಂತಾವರದ ಪ್ರಕಟಣೆ, ಕಾರ್ಕಳ,ಉಡುಪಿ ಜಿಲ್ಲೆ.
  3. "ಜೋಕಟ್ಟೆ ಗ್ರಾಮ". Archived from the original on 2019-01-11. Retrieved 2016-08-15.
  4. 'ಸ್ನೇಹ ಸಂಬಂಧ',ಅಕ್ಟೋಬರ್, ೨೦೧೪, ಶ್ರೀನಿವಾಸ ಜೋಕಟ್ಟೆಯವರಿಗೆ 'ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಪ್ರದಾನ', ಪುಟ-೨೯
  5. www.suddi9.com/ ಶ್ರೀನಿವಾಸ ಜೋಕಟ್ಟೆ ಅವರ ಅಪರಿಚಿತ ವಾಸ್ತವ–ಹಿಮ ವರ್ಷ ಕೃತಿಗಳ ಬಿಡುಗಡೆ Tue, Apr 4th, 2017
  6. ಶ್ರೀನಿವಾಸ ಜೋಕಟ್ಟೆ ಅವರ ಎರಡು ಕೃತಿಗಳ ಬಿಡುಗಡೆ: ‘ಮುಂಬಯಿ ಮಿಂಚು’ ಮತ್ತು ‘ಜೋಕಟ್ಟೆ ಸಮಗ್ರ ಕತೆಗಳು’ ವಿಶ್ವಧ್ವನಿ, ಪೇಜಾವರ ಹರಿಯಪ್ಪ

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
  1. 'ಜೈಲ್ ಇಂಡಸ್ಟ್ರಿ', ಶ್ರೀನಿವಾಸ ಜೋಕಟ್ಟೆ, ಸುಧಾ, ಅಕ್ಟೋಬರ್, ೨೩, ೨೦೧೪, ಪು.೧೬ & ೩೮, Archived 2014-09-25 ವೇಬ್ಯಾಕ್ ಮೆಷಿನ್ ನಲ್ಲಿ.
  2. 'ನೇಸರು ಪತ್ರಿಕೆಯ ಚಿತ್ತಾಲರ ಸಂಸ್ಮರಣಾ ಸಂಚಿಕೆ', 'ಚಿರಂತನ ಚಿತ್ತಾಲ,'ನೆನಪಿನ ಅಭಿಷೇಕ,ಅಕ್ಷರಗಳ ಕಂಬನಿ, ಪು.೭-೯,ಶ್ರೀನಿವಾಸ ಜೋಕಟ್ಟೆ.'
  3. ಸುದ್ದಿ, Mon, Apr 18th, 2016 ಪತ್ರಕರ್ತ ಶ್ರೀನಿವಾಸ ಜೋಕಟ್ಟೆ `ಡ್ರ್ಯಾಗನ್ ಮತ್ತು ಗಂಗಾಜಲ’ ಕೃತಿ ಬಿಡುಗಡೆ
  4. "ಈ ರಾತ್ರಿಗಳ ಜೊತೆ ನಮಗೆ ಪ್ರೀತಿ ಯಾಕಿಲ್ಲ ಮತ್ತು ಇತರ ಕವಿತೆಗಳು" (ಹಿಂದಿ ಮೂಲ : ವಿಜಯಕುಮಾರ್, ಕನ್ನಡಕ್ಕೆ ಮುಕುಂದ ಜೋಶಿ),'ಸಂಬಂಧ',ಜೂನ್,೨೦೧೬, ಪುಟ.೧೨. ಕೃತಿ ವಿಶ್ಲೇಷಣೆ : ಶ್ರೀನಿವಾಸ ಜೋಕಟ್ಟೆ.
  5. ಉದಯವಾಣಿ,೦೩-೦೮-೨೦೧೬,ಪು.೧೨,'ಸಾಹಿತ್ಯ ಸಮುದಾಯವನ್ನು ಬೆಸೆಯುತ್ತದೆ'. ವಿದುಷಿ ಸರೋಜಾ ಶ್ರೀನಾಥ್ ರವರ 'ಮೈಸೂರಿನಿಂದ ಮೌಂಟ್ ಟಾಂಬೋರವರೆಗೆ'ಕೃತಿ ಬಿಡುಗಡೆ ಸಮಾರಂಭದಲ್ಲಿ ಡಾ.ಜಿ.ಎನ್.ಉಪಾಧ್ಯ. ಶ್ರೀನಿವಾಸ ಜೋಕಟ್ಟೆಯವರು ಕೃತಿಯನ್ನು ಬಿಡುಗಡೆಗೊಳಿಸಿದರು
  6. ನೇಸರು, ಪು.೧೮, "ಜಾಗತಿಕಮಾಸ್ತಿ ಸ್ಮರಣಾರ್ಥಸಣ್ಣ ಕಥೆಗಳ ಸ್ಪರ್ಧೆ ೨೦೧೬" ರ ತೀರ್ಪುಗಾರರ ಅನಿಸಿಕೆ-ಶ್ರೀನಿವಾಸ ಜೋಕಟ್ಟೆ
  7. ಶ್ರೀನಿವಾಸ ಜೋಕಟ್ಟೆ ಹಾಗೂ ಜಯಲಕ್ಷ್ಮಿಯವರ ಜೊತೆ ಅಹೋರಾತ್ರ ನಡೆಸಿದ ಸಂವಾದದ ವೀಡಿಯೋ(ಫೇಸ್ಬುಕ್ ವತಿಯಿಂದ)
  8. ಮೈಸೂರ್ ಅಸೋಸಿಯೇಷನ್,ಮಾಟುಂಗ ಮುಂಬಯಿನಲ್ಲಿ,ಶ್ರೀನಿವಾಸ ಜೋಕಟ್ಟೆಯವರ ಏಕಕಾಲಕ್ಕೆ ಬಿಡುಗಡೆಗೊಂಡ ಮೂರು ಕೃತಿಗಳು. ಸಾಹಿತಿ ಜೋಕಟ್ಟೆ ಒಬ್ಬ ಸೃಜನಶೀಲ ಬರಹಗಾರ-ವಿಕ್ರಾಂತ ಊರ್ವಾಳ್
  9. ಏಕಕಾಲಕ್ಕೆ ಬಿಡುಗಡೆಗೊಂಡ ಸಾಹಿತಿ ಜೋಕಟ್ಟೆಯವರ ಮೂರು ಕೃತಿಗಳು. ಕೆಮ್ಮಣ್ಣು,ರೋನ್ಸ್ ಬಂಟ್ವಾಳ್, ೧೭,ಡಿಸೆಂಬರ್,೨೦೧೭
  10. ನಾಗಸುಧೆ, ಜಗಲಿಗೆ ಬಂದ ಪುಸ್ತಕ,ಊರಿಗೊಂದು ಆಕಾಶ, ಕವಿತೆಗಳು, ಕರ್ನಾಟಕ ಮಲ್ಲ, ಪು.೬, ೪, ಮೇ, ೨೦೧೯, (ನ್ಯೂಜರ್ಸಿಯ 'ಬ್ರಿಡ್ಜ್ ವಾಟರ್ ನ ಖುಷಿಯಲಿ ಪ್ರಕಾಶ ಕಡಿಮೆ)
  11. 'ಸದಾನಂದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ರುವಾರಿ', ಪ್ರಶಸ್ತಿವಿಜೇತ ರಂಗಕರ್ಮಿ ತೊಂಬತ್ತರ ಸದಾನಂದ ಸುವರ್ಣ, ಕರ್ನಾಟಕ ಮಲ್ಲ,ಪುಟ-೮,ಶ್ರೀನಿವಾಸ ಜೋಕಟ್ಟೆ, ೨೦, ಗುರುವಾರ, ಜನವರಿ, ೨೦೨೨ Archived 2022-01-21 ವೇಬ್ಯಾಕ್ ಮೆಷಿನ್ ನಲ್ಲಿ.