ಶಿವಕೋಟ್ಯಾಚಾರ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಶಿವಕೊಟ್ಯಾಚಾರ್ಯ ಇಂದ ಪುನರ್ನಿರ್ದೇಶಿತ)

ಪಂಪಯುಗದಲ್ಲಿ ರಚಿತದವಾದ ಒಂದೇ ಒಂದು ಗದ್ಯ ಗ್ರಂಥವೆಂದರೆ ‘’ವಡ್ಡಾರಾಧನೆ’’. ಇದನ್ನು ರಚಿಸಿದವನು ಶಿವಕೋಟ್ಯಾಚಾರ್ಯನು. ಇವನ ಕಾಲವು ಸುಮಾರು ಕ್ರಿ.ಶ. ೯೨೦ ರ ಸನಿಹದಲ್ಲಿದೆ.

ಶಿವಕೋಟ್ಯಾಚಾರ್ಯ-ಗದ್ಯಾನುವಾದ ಶ್ರೇಷ್ಠ ಜೈನ ಕವಿಯಾದ ಶಿವಕೋಟ್ಯಾಚಾರ್ಯನು ಹಳೆಗನ್ನಡದಲ್ಲಿ ಸುಂದರವಾದ ಗದ್ಯ ಕಾವ್ಯವನ್ನು ರಚಿಸಿದನು.ಈ ಕಥಾ ಗ್ರಂಥದಲ್ಲಿ ೧೯ ಮಹಾತ್ಮರ ಜೀವನ ಕಥೆಗಳಿವೆ. ಕಥಾಕೋಶವೆಂದೇ ಈ ಗ್ರಂಥ ಪ್ರಸಿದ್ದವಾಗಿದೆ.ಈ ಕಾವ್ಯವು 10 ನೇ ಶತಮಾನದ ನಂತರದಲ್ಲಿಯೇ ರಚಿತವಾಗಿರಬೇಕೆಂದು ವಿಮರ್ಶಕರು ತಿಳಿದಿದ್ದಾರೆ. ವಡ್ಡಾರಾಧನೆ ಎಂದರೆ ವೃದ್ದರ, ಜ್ಞಾನಿಗಳ, ಜೈನ ಯತಿಗಳ ಜೀವನ ಸಾಧನೆಗಳಿಗೆ ಕೊಡುವ ಗೌರವವಾಗಿರುವದು.ಈ ವಡ್ಡಾರಾಧನೆಯ ಕಥೆಗಳಲ್ಲಿ ಜೀವ ತುಂಬಿದ ಶಿವಕೋಟ್ಯಾಚಾರ್ಯ ಬೇರೆ ಬೇರೆ ರೀತಿಯಿಂದ ಕಥೆಯನ್ನು ಹೇಳಿದ್ದಾನೆ. ನೀತಿ, ಚರಿತ್ರೆ, ದರ್ಮ, ವ್ಯವಹಾರ ಹೀಗೆ ಹಲವು ವಿಷಯಗಳು ಈ ಕಥೆಗಳಲ್ಲಿವೆ. ಧಾರ್ಮಿಕ ಉದ್ದೇಶದಿಂದ ರಚಿತವಾದ ಈ ಕೃತಿ ಹಳೆಗನ್ನಡದ ಒಂದು ಉತ್ತಮ ಕೃತಿಯಾಗಿರುವುದು.ಇದು ಒಂದು ಅದ್ಭುತ ಕಾವ್ಯ. ವಡ್ಡಾರಾಧನೆ-ಆರಾಧನಾ-ಕರ್ಣಾಟ-ಟೀಕೆ ವಿಭಿನ್ನ ಕೃತಿಗಳು.

ಬಾಹ್ಯ ಕೊಂಡಿ[ಬದಲಾಯಿಸಿ]

  1. http://kannadadeevige.blogspot.com/2015/10/blog-post_6.html
  2. http://siri-kannada.in/pustaka/shivakotyacharya/ Archived 2015-10-07 ವೇಬ್ಯಾಕ್ ಮೆಷಿನ್ ನಲ್ಲಿ.

ಉಲ್ಲೇಖ[ಬದಲಾಯಿಸಿ]