ವಿಯೋಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಯೊಲಿನ್ ಮತ್ತು ವಿಯೋಲ

ವಿಯೋಲ (ಫ್ರೆಂಚ್: ಆಲ್ಟೊ,ಜರ್ಮನ್:ಬ್ರ್ಯಾಟ್‌ಶೆ)ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ ಶೈಲಿಯಲ್ಲಿ ಬಳಸುವ ಒಂದು ತಂತಿ ವಾದ್ಯ. ವಯೊಲಿನ್‌‌ ಜಾತಿಗೆ ಸೇರಿದ ಈ ವಾದ್ಯ ನೋಡಲು ವಯೊಲಿನ್‌ನಂತೆ ಕಂಡರೂ ವಯೊಲಿನ್‌‌ಗಿಂತ ಆಕಾರದಲ್ಲಿ ಸ್ವಲ್ಪ ದೊಡ್ದದು. ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ ಶೈಲಿಯ ತಂತಿವಾದ್ಯ ಕೃತಿಗಳಲ್ಲಿ ಸಾಮಾನ್ಯವಾಗಿ ಮೇಲಿನ ಸ್ಥಾಯಿಯ ಸ್ವರಗಳನ್ನು ನುಡಿಸಲು ವಯೊಲಿನ್‌‌ ಬಳಸುತ್ತಾರೆ , ಮಧ್ಯ ಸ್ಥಾಯಿಯ ಸ್ವರಗಳನ್ನು ನುಡಿಸಲು ವಿಯೋಲ ಮತ್ತು ತಗ್ಗಿನ ಸ್ಥಾಯಿಯ ಸ್ವರಗಳನ್ನು ನುಡಿಸಲು ಚೆಲ್ಲೊ ಅಥವಾ ಡಬ್ಬಲ್ ಬೇಸ್ ಬಳಸುತ್ತಾರೆ.

೧೭ ಇಂಚಿನ ವಿಯೋಲ ನುಡಿಸುತ್ತಿರುವ ಕಲಾವಿದ

ಆಕಾರ ಮತ್ತು ರಚನೆ[ಬದಲಾಯಿಸಿ]

ವಿಯೋಲವನ್ನು ಕೂಡ ವಯೊಲಿನ್‌‌ ನಿರ್ಮಾಣದಲ್ಲಿ ಬಳಸುವ ಸಾಮಗ್ರಿಗಳು ಮತ್ತು ಉಪಕರಣಗಳನ್ನೆ ಬಳಸಿ ರಚಿಸಲಾಗುತ್ತದೆ. ವಿಯೋಲ ನಿರ್ದಿಷ್ಟ ಅಳತೆಯನ್ನು ಹೊಂದಿರದೆ ಸಾಮಾನ್ಯವಾಗಿ ವಯೊಲಿನ್‌‌‌ಗಿಂತ ಒಂದರಿಂದ ನಾಲ್ಕು ಇಂಚುಷ್ಟು ಉದ್ದವಾಗಿರುತ್ತದೆ. ವಾದ್ಯದಿಂದ ಹೊರ ಹೊಮ್ಮುವ ಧ್ವನಿಗೆ ಹೆಚ್ಚು ಪ್ರಾಶಸ್ತ್ಯ ಕೊಡುವುದರಿಂದ ನಿರ್ಧಿಷ್ಟ ಆಳತೆಗಳು ಮತ್ತು ಆಕಾರಗಳಲ್ಲಿ ಈ ವಾದ್ಯ ಕಾಣಸಿಗುವುದಿಲ್ಲ. ವಯೊಲಿನ್‌‌‌ನಂತೆಯೆ ಇದಕ್ಕೂ ಮೆಟ್ಟಿಲುಗಳಿಲ್ಲ(ಫ್ರೆಟ್ ರಹಿತ) ಮತ್ತು ಇದನ್ನೂ ಕೂಡ ಕಮಾನಿನ ಸಹಾಯದಿಂದ ನುಡಿಸಲಾಗಿತ್ತದೆ. ವಯೊಲಿನ್‌‌‌ನಂತೆಯೆ ಇದರ ಕಮಾನು ಕೂಡ ಕುದರೆ ಬಾಲದ ರೋಮದಿಂದ ನಿರ್ಮಸಲಾಗುತ್ತದೆ ಆದರೆ ಇದರ ಉದ್ದ ವಯೊಲಿನ್‌‌ ಕಮಾನಿಗಿಂತ ಸ್ವಲ್ಪ ಕಮ್ಮಿ ಮತ್ತು ಇದರ ತೂಕ ವಯೊಲಿನ್‌‌ ಕಮಾನಿಗಿಂತ ಹೆಚ್ಚು. ವಿಯೋಲ ವಯೊಲಿನ್‌‌ನಂತೆಯ ನಾಲ್ಕು ತಂತಿಗಳನ್ನು ಹೊಂದಿದ್ದೂ, ಇದರ ತಂತಿಗಳು ವಯೊಲಿನ್‌‌ ತಂತಿಗಳಿಗಿಂತ ತುಸು ಹೆಚ್ಚು ದಪ್ಪವಾಗಿವೆ. ವಿಯೋಲ ವಾದನ ಅದರ ಆಕಾರ ಮತ್ತು ರಚನೆಯ ಕಾರಣದಿಂದಾಗಿ ವಯೊಲಿನ್‌‌ ವಾದನಕ್ಕಿಂತ ಸ್ವಲ್ಪ ಹೆಚ್ಚು ತ್ರಾಸದಾಯಕ.


"https://kn.wikipedia.org/w/index.php?title=ವಿಯೋಲ&oldid=1048421" ಇಂದ ಪಡೆಯಲ್ಪಟ್ಟಿದೆ