ವಿಮಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಮಾನ ಅಥವಾ ಇಂಗ್ಲೀಷಿನ ಏರೋಪ್ಲೇನ್ ಎಂಬುದು ಗಾಳಿಯಲ್ಲಿ ತೇಲುವ ಒಂದು ಸಂಚಾರೀ ಮಾಧ್ಯಮ. ವಿಮಾನವನ್ನು ಗಾಳಿಯಲ್ಲಿ ಹಾರಾಡಲು ಸೂಕ್ತವಾದ ರೀತಿಯಲ್ಲಿ ನಿರ್ಮಿಸಲಾಗಿರುತ್ತದೆ. ಉದ್ದವಾದ ದೇಹ ಮತ್ತು ಪಕ್ಕದಲ್ಲಿ ೨ ರೆಕ್ಕೆಗಳನ್ನು ಹೊಂದಿದ್ದು, ಪಕ್ಷಿಯನ್ನು ಹೋಲುತ್ತದೆ. ಇದು ಮುಖ್ಯವಾಗಿ ಎಂಜಿನ್ ಮತ್ತು ಪ್ರೊಪೆಲ್ಲರ್-ಗಳನ್ನು ಹೊಂದಿದ್ದು, ಬಿಸಿ ಗಾಳಿಯ ಒತ್ತಡದಿಂದ ಆಕಾಶಕ್ಕೆ ಹಾರುವಲ್ಲಿ ಸಫಲವಾಗುತ್ತದೆ. ಅಲ್ಲದೆ ವಿಮಾನಚಾಲಕನಿಗೆ ವಿಮಾನ ನಡೆಸಲು ಸರಿಯಾದ ತರಬೇತಿ ನೀಡಲಾಗಿರುತ್ತದೆ. ಗಗನದಲ್ಲಿ ಹಕ್ಕಿಗಳ ಹಾರಾಟವನ್ನು ಗಮನಿಸಿ ಅಂತೆಯೇ ಹಾರುವ ಮಾಧ್ಯಮವೊಂದನ್ನು ಕಂಡುಹುಡುಕಲು ೧೮ನೇ ಶತಮಾನದಿಂದಲೂ ಹಲವು ಸಕ್ರಿಯ ಪ್ರಯತ್ನಗಳು ನಡೆಯುತ್ತಿದ್ದವು. ಅವುಗಳಲ್ಲಿ ಮುಖ್ಯವಾದ ಪ್ರಯತ್ನಗಳು ಕೆಳಗೆ ಬರೆಯಲ್ಪಟ್ಟಿದೆ.

ಒಟ್ಟೊ ಲಿಲಿಯೆನ್ತಾಲ್ (೧೮೯೧)[ಬದಲಾಯಿಸಿ]

ಈತ ಜರ್ಮನಿಯ ಒಬ್ಬ ಅಭಿಯಂತರನಾಗಿದ್ದನು. ಈತ ಉಡಾವಣಾ ಶಾಸ್ತ್ರ (ಏರೋಡೈನಾಮಿಕ್ಸ್) ಮತ್ತು ಹಾರುವ ಉಪಕರಣಗಳ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದನು. ಮತ್ತು ಈತ ಮೊದಲ ಹಾರುವ ಸಾಧನ ಅಥವಾ ಗ್ಲೈಡರನ್ನು ವಿನ್ಯಾಸ ಗೊಳಿಸಿದನು. ಈತ ನಿರ್ಮಿಸಿದ ಗ್ಲೈಡರ್ ಒಬ್ಬ ವ್ಯಕ್ತಿ ಕುಳಿತುಕೊಂಡು ಸಾಕಷ್ಟು ದೂರದವರೆಗೆ ಹಾರುವಲ್ಲಿ ಸಫಲವಾಗಿತ್ತು. ಈತ ೨೫೦೦ಕ್ಕೂ ಹೆಚ್ಚು ಪ್ರಾಯೋಗಿಕ ಹಾರಾಟಗಳನ್ನು ನಡೆಸಿದ್ದನು. ಆದರೆ ಕೊನೆಗೆ ಅಂತಹ ಒಂದು ಪ್ರಯೋಗ ನಡೆಸುವಾಗ ಗಾಳಿಯ ಅತಿ ವೇಗದಿಂದ ಕೆಳಗೆ ಬಿದ್ದು ಮರಣಿಸಿದನು.

ಸ್ಯಾಮ್ಯುಯೆಲ್ ಲ್ಯಾನ್ಗಲೀ (೧೮೯೧)[ಬದಲಾಯಿಸಿ]

ಈತ ಒಬ್ಬ ಭೌತಶಾಸ್ತ್ರ ಮತ್ತು ಬಾಹ್ಯಾಕಾಶ ಸಂಶೋಧಕನಾಗಿದ್ದನು. ಉಗಿ ಇಂಜಿನುಗಳು ಮತ್ತು ಪ್ರೊಪೆಲ್ಲರುಗಳನ್ನು ಬಳಸಿ ಹಲವು ಪ್ರಯೋಗಗಳನ್ನು ಮಾಡಿದನು. ಈತ ವಿಮಾನದ ಮಾದರಿಯೊಂದನ್ನು ನಿರ್ಮಿಸಿದನು ಹಾಗೂ ಅದನ್ನು ಏರೋಡ್ರೋಮ್ ಎಂದು ಕರೆದನು. ಅದು ಉಗಿ ಎಂಜಿನನ್ನು ಹೊಂದಿತ್ತು. ೧೮೯೧ರಲ್ಲಿ ಈತನ ಮಾದರಿ ವಿಮಾನ ೩/೪ ಮೈಲಿಯಷ್ಟು ದೂರ ಹಾರುವಲ್ಲಿ ಸಫಲವಾಗಿತ್ತು.

ಆಕ್ಟೇವ್ ಚಾನುಟೆ (೧೮೯೪)[ಬದಲಾಯಿಸಿ]

ಈತ ಒಬ್ಬ ಸಫಲ ಅಭಿಯಂತರನಾಗಿದ್ದು ವಿಮಾನ ಸಂಶೋಧನೆ ಈತನ ಹವ್ಯಾಸವಾಗಿತ್ತು. ಈತ ೧೮೯೪ರಲ್ಲಿ "Progress in Flying Machines" ಎಂಬ ಪುಸ್ತಕವನ್ನು ಮುದ್ರಿಸಿದನು. ಈ ಪುಸ್ತಕವು ವಿಮಾನ ನಿರ್ಮಾಣದ ಎಲ್ಲಾ ತಾಂತ್ರಿಕ ವಿವರಗಳನ್ನು ಹೊಂದಿತ್ತು. ಮುಂದೆ ರೈಟ್ ಸಹೋದರರ ವಿಮಾನ ಆವಿಷ್ಕಾರಕ್ಕೆ ಈ ಪುಸ್ತಕವೇ ಭದ್ರ ಬುನಾದಿಯಾಯಿತು.

ರೈಟ್ ಸಹೋದರರು (೧೯೦೩)[ಬದಲಾಯಿಸಿ]

ರೈಟ್ ಸಹೋದರರು ವಿಮಾನದ ಆನ್ವೇಷಣೆಗೆ ಕಾರಣಕರ್ತರು. ೧೭ ಡಿಸೆಂಬರ್ ೧೯೦೩ ರಂದು ರೈಟ್ ಸಹೋದರರು ತಮ್ಮ ಮೊದಲ ವಿಮಾನ ಹಾರಾಟಕ್ಕೆ ಪ್ರಯತ್ನಿಸಿದರು. ಈ ಹಾರಾಟವನ್ನು ಅಂತರ ರಾಷ್ಟ್ರೀಯ ವಿಮಾನ ಸಂಸ್ಥೆಯು [Fédération Aéronautique Internationale (FAI)] ಗಮನಿಸಿತು. ಅಲ್ಲದೆ ಮೊದಲ ಸಮರ್ಪಕ ಹಾರಾಟವೆಂಬ ಬಿರುದನ್ನೂ ಪಡೆಯಿತು.

ವಿಮಾನಯಾನದ ಇತಿಹಾಸ[ಬದಲಾಯಿಸಿ]

ನೋಡಿ: ವಿಮಾನಯಾನದ ಇತಿಹಾಸ

ಉಲ್ಲೇಖ[ಬದಲಾಯಿಸಿ]

"https://kn.wikipedia.org/w/index.php?title=ವಿಮಾನ&oldid=930001" ಇಂದ ಪಡೆಯಲ್ಪಟ್ಟಿದೆ