ವಿಕಿಪೀಡಿಯ:ಪ್ರಯೋಗ ಶಾಲೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
೧೦ ನೌಟಿಕಲ್ ಮೈಲಿ ( ಕಿ.ಮಿ)

[ಬದಲಾಯಿಸಿ] ಕೆ.ಆರ್.ರವಿಕಿರಣ್

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಇತ್ತೀಚೆಗೆ ಕೇಳಿಬರುತ್ತಿರುವ ಹೆಸರು ಕೆ.ಆರ್.ರವಿಕಿರಣ್. ಕವಿ, ಕಥೆಗಾರನಾಗಿ ಗುರುತಿಸಿಕೊಳ್ಳುತ್ತಿರುವ ಇವರು ದೊಡ್ಡಬಳ್ಳಾಪುರದವರು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರವಿಕಿರಣ್ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಸಾಹಿತ್ಯ, ಪತ್ರಿಕೋದ್ಯಮ ವಿಷಯಗಳನ್ನು ಓದಿಕೊಂಡಿರುವ ವ್ಯಕ್ತಿ. ಮೂಲತಃ ದೊಡ್ಡಬಳ್ಳಾಪುರದ ಶ್ರೀದೇವರಾಜ ಅರಸ್ ವ್ಯವಹಾರ ನಿವ೯ಹಣಾ ಮಹಾವಿದ್ಯಾಲಯದಲ್ಲಿ ಆಂಗ್ಲ ಭಾಷಾ ಸಹ ಪ್ರಾಧ್ಯಾಪಕರಾಗಿರುವ ಇವರು ಪತ್ರಕತ೯ರಾಗಿಯೂ ಹೆಸರು ಮಾಡಿದ್ದಾರೆ. 7-7-1984ರಲ್ಲಿ ಜನಿಸಿದ ಅವರ ತಂದೆ ಕೆ.ವಿ.ರಾಮೖಷ್ಣ, ತಾಯಿ ಗೌರಿ. ಬೆಂಗಳೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಯಲ್ಲಿ 3 ಚಿನ್ನದ ಪದಕಗಳನ್ನು ಪಡೆದು ನಂತರ ಎಂ.ಎ ಇಂಗ್ಲಿಷ್ ಅಧ್ಯಯನ ಮಾಡಿದರು. ಜೊತೆಗೆ ಬಿಇಡಿ ಮತ್ತು ಎಂ.ಫಿಲ್ ಪದವಿಯನ್ನೂ ಪಡೆದಿದ್ದಾರೆ. ವಿದ್ಯಾಥಿ೯ ದೆಸೆಯಲ್ಲೇ ಸಾಹಿತ್ಯ ರಚನೆಯ ಘೀಳು ಬೆಳೆಸಿಕೊಂಡು ಹಲವಾರು ಕೖತಿಗಳನ್ನೂ ರಚಿಸಿದ್ದಾರೆ. ಅವುಗಳಲ್ಲಿ 1. ಕಿರಣನ ಕವನಗಳು(ಶಿಶುಗೀತೆಗಳ ಸಂಕಲನ)- 2000 2. ಉದಯರಾಗ(ಕವನ ಸಂಕಲನ)- 2000 3. ಮಿಂಚು ಬೆಳಕಿನ ಬಾಲೆ(ಭಾವಗೀತೆಗಳ ಸಂಕಲನ)- 2004 4. ಚಂದಿರನೇತಕೆ ಓಡುವನಮ್ಮಾ....(ಮಕ್ಕಳ ಕಥೆಗಳ ಸಂಕಲನ)-2007 5. ರಜತ ಸಿರಿ(ಸಂಪಾದಿತ ಕೖತಿ) 6. ಶತಮಾನದ ಹೆಜ್ಜೆ(ಸಂಪಾದಿತ ಕೖತಿ) 7. ಮಧುರೆ ಸಿರಿ(ಸಂಪಾದಿತ ಕೖತಿ) 8. ಇಲ್ಲಿ ಪ್ರೀತಿ ಇದೆ ಎಂದರು....(ಕವನ ಸಂಕಲನ) ಮುಖ್ಯವಾದವು. ಉದಯರಾಗ ಕೖತಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಶಸ್ತಿ, ಚಂದಿರನೇತಕೆ ಓಡುವನಮ್ಮಾ ಕೖತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿಯನ್ನು ಪಡೆದಿರುವ ಇವರ ನೂರಾರು ಕವನಗಳು ವಿವಿಧ ಪತ್ರಿಕೆ, ಪುರವಣಿಗಳಲ್ಲಿ ಪ್ರಕಟಿತವಾಗಿವೆ. Example.jpg


೧೦-೩೪

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ