ವಾಸ್ತುಶಾಸ್ತ್ರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ವಾಸ್ತುಶಾಸ್ತ್ರ (ವಾಸ್ತು ವೇದವನ್ನು ನಿರ್ಮಾಣ ವಿಜ್ಞಾನ) ಪುರಾತನ ಹಿಂದೂ ನಿರ್ಮಾಣ ವಿಧಾನ. ವಾಸ್ತುಶಾಸ್ತ್ರ ಪ್ರಮುಖವಾದ ಹಿಂದೂ ಗ್ರಹ ನಿರ್ಮಾಣ ವಿಧಾನವಾಗಿರುತ್ತದೆ. ಇದನ್ನು ದೇವಸ್ಥಾನ ನಿರ್ಮಾಣದಲ್ಲಿ ಅತೀ ಮುಖ್ಯವಾದ ಅಂಶ ಎಂದು ಭಾವಿಸಲಾಗುತ್ತದೆ. ವಾಸ್ತುಶಾಸ್ತ್ರವನ್ನು ಕೇವಲ ದೇವಸ್ಥಾನ ನಿರ್ಮಾಣದಲ್ಲಿ ಅನುಸರಿಸುತ್ತಿದ್ದರೂ, ಇತ್ತೀಚಿನ ದಶಕಗಳಲ್ಲಿ ಅದು ಪುನಶ್ಚೇತರಿಕೆ ಪಡೆಯಿತು. ಆದರ ಪುನಶ್ಚೇತರಿಕೆಗೆ ಪ್ರಮುಖ ಕಾರಣಕರ್ತರು ಚೆನ್ನೈ, ತಮಿಳುನಾಡಿನ ವಿ. ಗಣಪತಿ ಸ್ತಪತಿ, ಅವರು ೧೯೬೦ರಿಂದಲೂ ವಾಸ್ತುಶಾಸ್ತ್ರದ ಬಳಕೆಯನ್ನು ಆಧುನಿಕ ಭಾರತದ ಸಮುದಾಯದಲ್ಲಿ ಪುನಃಸ್ಥಾಪನೆಗಾಗಿ ಚಳವಳಿ ನಡೆಸುತ್ತಿದ್ದರು.

ಪರಿವಿಡಿ

[ಬದಲಾಯಿಸಿ] ಪರಿಭಾಷೆ

ಸಂಸ್ಕೃತದಲ್ಲಿ ವಾಸ್ತು ಅಂದರೆ ಯಾವುದೇ ಸ್ಥಿರವಾದ ವಸ್ತು, ಪದಾರ್ಥ, ಭೌತಿಕವಸ್ತು, ಅಥವಾ ಸರಕು; ಸಾಮಾನು, ಸಂಪತ್ತು ಅಥವಾ ಆಸ್ತಿ, ಸ್ವತ್ತು, ಸಂಪತ್ತು. ಸಂಸ್ಕೃತದಲ್ಲಿ ಶಾಸ್ತ್ರ ಅಂದರೆ ವಿಜ್ಞಾನ, ವೈಜ್ಞಾನಿಕ ಅಥವಾ ಬೋಧನೆ ಎನ್ನಬಹುದು[೧].

[ಬದಲಾಯಿಸಿ] ವಾಸ್ತುಶಾಸ್ತ್ರ ಒಳಗೊಂಡ ಅಂಶಗಳು

ಮಾಯಾಮಟ ಹಾಗೂ ಮಾನಸರ ಶಿಲ್ಪ ಶಾಸ್ತ್ರವನ್ನು ದ್ರಾವಿಡ ಶೈಲಿ ಎನ್ನಲಾಗುತ್ತದೆ ಏಕೆಂದರೆ ಅವರಿಬ್ಬರೂ ದಕ್ಷಿಣ ಭಾರತದವರು ಹಾಗೇ ವಿಶ್ವಕರ್ಮ ವಾಸ್ತುಶಾಸ್ತ್ರವನ್ನು ಆರ್ಯಶೈಲಿ ಎನ್ನಲಾಗುತ್ತದೆ ಎಕೆಂದರೆ ಅವರು ಉತ್ತರ ಭಾರತದವರು.

[ಬದಲಾಯಿಸಿ] ಮೂಲಭೂತ ಪರಿಕಲ್ಪನೆ

ವಾಸ್ತುಶಾಸ್ತ್ರದಲ್ಲಿ ಬಹಳಸ್ಟು ಪರಿಕಲ್ಪನೆ ಹಾಗೂ ಸಿದ್ಧಾಂತ. ಕೆಲವು ಪ್ರಮುಖವಾದ ಸೂತ್ರಗಳು:

[ಬದಲಾಯಿಸಿ] ಪಂಚ ಮಹಾಭೂತಗಳು

  • ಭೂಮಿ
  • ಜಲ
  • ವಾಯು
  • ಅಗ್ನಿ
  • ಆಕಾಶ

[ಬದಲಾಯಿಸಿ] ವಾಸ್ತು ಪುರುಷ ಮಂಡಲ

ವಾಸ್ತು ಪುರುಷ ಮಂಡಲ ಸಿದ್ದಾಂತ

ವಾಸ್ತು ಪುರುಷ ಮಂಡಲ ವಾಸ್ತುಶಾಸ್ತ್ರದಲ್ಲಿ ಅತ್ಯಗತ್ಯವಾದ ಭಾಗ. ವಾಸ್ತುಶಾಸ್ತ್ರದ ಗಣಿತಶಾಸ್ತ್ರ ಹಾಗೂ ಚಿತ್ರಶಾಸ್ತ್ರ ಮೂಲವಾಗಿವೆ. ವಾಸ್ತು ಪುರುಷ ಮಂಡಲದ ವೈಜ್ನಾನಿಕ ಕಟ್ಟಡ ನಿರ್ಮಾಣ ಯೊಜನೆಯು ದೈವ ಶಕ್ತಿ ಹಾಗೂ ಕೆಟ್ಟ ಶಕ್ತಿ ಯನ್ನು ಒಂದಾಗಿಸುವ ಏರ್ಪಾಡು ಆಗಿರುತ್ತದೆ. ಹಿಂದೂ ವಿಶ್ವವಿಜ್ಞಾನದ ಪ್ರಕಾರ ಭೂಮಿಯ ಮೇಲ್ಮೈ ಚೌಕ, ಭೂಮಿಯು ವಾಸ್ತು ಪುರುಷ ಮಂಡಲದ ನಾಲ್ಕು ಬದಿಗಳನ್ನು ದಿಗಂತವೆಂದೂ ಸೂರ್ಯಾಸ್ತ ಹಾಗೂ ಸೂರ್ಯೋದಯ ಹಾಗೂ ಉತ್ತರ ದಕ್ಶಿಣ ದಿಕ್ಕುಗಳೆನ್ನಲಾಗಿದೆ. ವಾಸ್ತು ಪುರುಷ ಮಂಡಲದ ನಂಬಿಕೆಯು ಈ ಪ್ರಕಾರವಾಗಿದೆ. ಒಮ್ಮೆ ಅಗೋಚರ ಶಕ್ತಿಯು ಸ್ವರ್ಗವನ್ನು ಭೂಮಿಯಿಂದ ತಡೆಗಟ್ಟಿದಾಗ ಬ್ರಹ್ಮ ಹಾಗೂ ಇತರೆ ದೇವರುಗಳು ಸೇರಿ ಅವನ್ನನ್ನು ಭೂಮಿಯ ಅಡಿಯಲ್ಲಿ ಬಂದಿಸಿ ಇಡುತ್ತಾರೆ. ಈ ಕಥೆಯ ಪ್ರಕಾರ ವಾಸ್ತು ಪುರುಷ ಮಂಡಲವು ರಚನೆಯಾಗಿದೆ. ವಾಸ್ತು ಪುರುಷ ಮಂಡಲದಲ್ಲಿ ೪೫ ದೇವರುಗಳು ಇವೆ, ಅವರಲ್ಲಿ ೩೨ ಅನ್ಯರು ಸೇರಿವೆ.

[ಬದಲಾಯಿಸಿ] ಪ್ರಾಣ

ವಾಸ್ತುಶಾಸ್ತ್ರವು ವೈಶಿಷ್ಟ್ಯವು ಕಟ್ಟಡ ಹಾಗೂ ಸ್ಠಳದ ಮೂಲಕ ಶಕ್ತಿಯ ಹರಿವನ್ನು ನಿರ್ಧರಿಸುವುದಾಗಿದೆ.

[ಬದಲಾಯಿಸಿ] ನಿರ್ಮಾಣದಲ್ಲಿ ಮಂಡಲದ ಪಾತ್ರ

ಮಂಡಲದಲ್ಲಿರುವ ದೇವರುಗಳು ನೆಲಸಿದ ಪ್ರಕಾರ ಕಟ್ಟಡ ನಿರ್ಮಾಣ ಕೈಗೊಳ್ಳಲಾಗುತ್ತದೆ. ಅದರ ಪ್ರಕಾರ ಕಟ್ಟಡದ ಕೊಣೆಗಳನ್ನು ಕಟ್ಟಲಾಗುತ್ತದೆ. ಕೆಳಗಿನವು ಕೆಲವು ಉದಾಹರಣೆ:

  • ಉತ್ತರ - ಖಜಾನೆ, ಬೊಕ್ಕಸ, ಕೋಶಾಗಾರ, ಭಂಡಾರ
  • ಈಶಾನ್ಯ - ಪೂಜಾ ಸ್ಥಳ
  • ಪೂರ್ವ - ಬಚ್ಚಲು ಮನೆ
Vastu floorplan.jpg
  • ಆಗ್ನೇಯ - ಅಡುಗೆ ಮನೆ
  • ದಕ್ಷಿಣ - ಮಲಗುವ ಕೋಣೆ, ಶಯನಗೃಹ
  • ನೈಋತ್ಯ - ಶಸ್ತ್ರಾಗಾರ
  • ಪಶ್ಚಿಮ - ಊಟದ ಕೊಣೆ
  • ಬಡಗುವಡುವಣ - ದನದ ಕೊಟ್ಟಿಗೆ

[ಬದಲಾಯಿಸಿ] References

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ