ವರ್ಗ ಚರ್ಚೆಪುಟ:ಮೈಸೂರು ಜಿಲ್ಲೆಯ ತಾಲೂಕುಗಳು

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೃಷ್ಣರಾಜನಗರ

ಕೃಷ್ಣರಾಜನಗರ ೧೯೨೫ ರಿಂದ ೧೯೩೦ ರಲ್ಲಿ ನಿರ್ಮಿಸಲ್ಪಟ್ಟ ನವ ನಗರ. ಇದಕ್ಕೂ ಮುಂಚೆ ಪ್ರಸ್ತುತ ಕೃಷ್ಣರಾಜನಗರದಿಂದ ೦೩ ಕಿಲೋ ಮೀಟರ್ ದೂರದಲ್ಲಿ ಯಡತೊರೆ ಎಂಬ ಪಟ್ಟಣವಿತ್ತು, ಕೃಷ್ಣರಾಜಸಾಗರ ಜಲಾಶಯ ನಿರ್ಮಾಣದಿಂದಾಗಿ ಜಲಷಾಯದ ಹಿನ್ನೀರು ಯಡತೊರೆಯನ್ನು ಮುಳುಗಿಸಿತು. ತದ ನಂತರ ಅಂದಿನ ಮಹಾರಾಜರಾದ ಶ್ರೀ ಕೃಷ್ಣರಾಜ ಒಡೆಯರ್ ಯಡತೊರೆಯನ್ನು ದತ್ತು ತೆಗೆದುಕೊಂಡು, ಅಲ್ಲಿಂದ ಎತ್ತರ ಪ್ರದೇಶಕ್ಕೆ ಹೊಸ ನಗರವನ್ನು ಅತ್ಯಂತ ಯೋಜನಬದ್ದವಾಗಿ ನಿರ್ಮಿಸಿದರು. ಈ ಕಾರಣದಿಂದಾಗಿ ಈ ಊರಿನ ಹೆಸರು ಕೃಷ್ಣರಾಜನಗರವೆಂದು ಕರೆಯಲಾಯಿತು.

ಕೃಷ್ಣರಾಜನಗರವನ್ನು ಚಿಕ್ಕದಾಗಿ ಕೆ.ಆರ್.ನಗರ ಎಂದು ಕರೆಯಲಾಗುವುದು.

ಕೃಷ್ಣರಾಜನಗರವು ಮೈಸೂರು-ಹಾಸನ ರಾಜ್ಯ ಹೆದ್ದಾರಿ ೫೭ ರಲ್ಲಿದ್ದು ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ ಮತ್ತು ಮೈಸೂರು-ಅರಸೀಕೆರೆ ರೈಲು ಮಾರ್ಗವಿದ್ದು ಎಲ್ಲಾ ರೈಲುಗಳ ನಿಲುಗಡೆ ಇದೆ.

ಕೃಷ್ಣರಾಜನಗರದಲ್ಲಿ ಅತ್ಯಂತ ವಿಶಾಲವಾದ ರಸ್ತೆಗಳಿವೆ. ಕೃಷ್ಣರಾಜನಗರವು ಮೈಸೂರು ಜಿಲ್ಲೆಗೆ ಸೇರಿದ್ದು, ಮೈಸೂರು ಜೆಲ್ಲೆಯ ಭತ್ತದ ಕಣಜವೆಂದು ಪ್ರಸಿದ್ದಿಯಾಗಿದೆ. ಕೃಷ್ಣರಾಜನಗರ ತಾಲೂಕು ಚುಂಚನಕಟ್ಟೆ ಜಲಾಶಯದಿಂದ ಅತಿ ಹೆಚ್ಚು ನೀರಾವರಿ ಪ್ರಯೊಜನವನ್ನು ಪಡೆದಿದ್ದು, ಕಾವೇರಿ ನದಿಗೆ ಅಡ್ಡಲಾಗಿ ಚುಂಚನಕಟ್ಟೆಯಲ್ಲಿ ಸಣ್ಣ ಜಲಾಶಯ ನಿರ್ಮಿಸಲಾಗಿದೆ.

ಚುಂಚನಕಟ್ಟೆಯಲ್ಲಿ ಕೋದಂಡ ರಾಮನ ದೇವಾಲಯವಿದ್ದು, ಪಕ್ಕದಲ್ಲಿಯೇ ಪ್ರಸಿದ್ದ ಜಲಪಾತವಿದ್ದು ಅತ್ಯಂತ ಹತ್ತಿರದಿಂದ ಇದನ್ನು ವೀಕ್ಷಿಸಬಹುದಾಗಿದೆ.

ಕೃಷ್ಣರಾಜನಗರ ತಾಲೂಕಿನ ಪ್ರಸಿದ್ದ ಪ್ರವಾಸಿ ಸ್ತಳಗಳೆಂದರೆ ಶ್ರೀ ಅರ್ಕೇಶ್ವರ ದೇವಾಲಯ(ಯಡತೊರೆ), ಶ್ರಿ ಕಪ್ಪಡಿ ಕ್ಷೇತ್ರ, ಚುಂಚನಕಟ್ಟೆ, ಡೋರನಹಳ್ಳಿ, ಹನಸೋಗೆ, ಸಾಲಿಗ್ರಾಮ ಇತ್ಯಾದಿಗಳು.