ವರದರಾಜ ಆದ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

(೧೯೨೩-೧೯೮೮)

ವರದರಾಜ ಆದ್ಯ
ಚಿತ್ರ:VA.jpg
ವರದರಾಜ ಆದ್ಯ
Born
ವರದರಾಜ

೧೯೨೩
Died೧೯೮೮
ಮುಂಬಯಿ
Occupation(s)ಕನ್ನಡಾಂಬೆಯ ಪರಿಚಾರಕರು, ಅತ್ಯುತ್ತಮ ಸಂಘಟಕ, ಮುಂಬಯಿನಗರದ, 'ಸರ್.ಎಂ.ವಿಶ್ವೇಶ್ವರಯ್ಯ ಸ್ಮಾರಕ ಮಂದಿರದ ಶಿಲ್ಪಿ'ಯೆಂದು ಹೆಸರಾಗಿದ್ದಾರೆ. ಮುಂಬಯಿನ 'ಮಫತ್ ಲಾಲ್ ಸಂಸ್ಥೆ'ಯಲ್ಲಿ ಉನ್ನತ ಅಧಿಕಾರಿಯಾಗಿ ದುಡಿಯುತ್ತಿದ್ದರು.
Years active೧೯೬೦–೧೯೮೮
Known for
  • ೧೯೬೯ ರಿಂದ ೧೯೮೮ ರವರೆಗೆ 'ಕರ್ನಾಟಕ ಸಂಘ,ಮುಂಬಯಿನ ಅಧ್ಯಕ್ಷ'ರಾಗಿದ್ದರು.
  • ಮುಂಬಯಿವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಸ್ಥಾಪನೆ'
  • ಮುಂಬಯಿನಗರದಲ್ಲಿರುವ ಮಹಾರಾಷ್ಟ್ರ ಘಟಕದ ಕನ್ನಡ ಸಾಹಿತ್ಯ ಪರಿಷದ್ ನ ಸ್ಥಾಪನೆಯಲ್ಲಿ ಬಹಳ ಆಸಕ್ತಿವಹಿಸಿದ್ದರು.

ಮುಂಬಯಿನಗರದಲ್ಲಿ ವಾಸಿಸುತ್ತಿದ್ದ, 'ಶ್ರೀ ವರದರಾಜ ಆದ್ಯರಿಗೆ, [೧] ಕನ್ನಡ ನಾಡಿನ ಜನ,ನುಡಿ, ಸಂಸ್ಕೃತಿ,ಸಾಹಿತ್ಯಗಳ ಬಗ್ಗೆ ಅಪಾರ ಕಾಳಜಿಯಿತ್ತು. ಅವರೊಬ್ಬ 'ಸಂಘಟಕರು'; 'ಮುಂಬಯಿನ ಕರ್ನಾಟಕ ಸಂಘದ ಸರ್.ಎಂ.ವಿಶ್ವೇಶ್ವರಯ್ಯ ಸ್ಮಾರಕ ಮಂದಿರದ ಸ್ಥಾಪಕರಲ್ಲೊಬ್ಬರು.ಮುಂಬಯಿ ಕನ್ನಡಿಗರ ಸಾಂಸ್ಕೃತಿಕ ಬದುಕಿಗೆ ಹೊಸತಿರುವನ್ನು ನೀಡಿದ ನೇತಾರರು. ಸನ್, ೧೯೬೯ ರಿಂದ ೧೯೮೮ ರ ವರೆಗೆ 'ಕರ್ನಾಟಕ ಸಂಘ,ಮುಂಬಯಿನ ಅಧ್ಯಕ್ಷ'ರಾಗಿದ್ದರು.

ಆದ್ಯರು ಮುಂಬಯಿನ 'ಮಫತ್ ಲಾಲ್ ಸಂಸ್ಥೆ'ಯಲ್ಲಿ ಉನ್ನತ ಅಧಿಕಾರಿಯಾಗಿ ದುಡಿಯುತ್ತಿದ್ದರು. ಮುಂಬಯಿನಗರದಲ್ಲಿ ಜರುಗಿದ 'ಅಖಿಲಬಾರತ ಕನ್ನಡಸಾಹಿತ್ಯ ಸಮ್ಮೇಳನ'ಗಳೂ ಸೇರಿದಂತೆ ಹಲವಾರು ಮಹತ್ವದ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿದ್ದರು.'ಮುಂಬಯಿವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಸ್ಥಾಪನೆ'ಯಲ್ಲಿ ಅವರು ವಿಶೇಷ ಶ್ರಮವಹಿಸಿ ಅದರಲ್ಲಿ ಯಶಸ್ಸನ್ನು ಗಳಿಸಿದರು. 'ಮುಂಬಯಿನಗರದಲ್ಲಿರುವ ಮಹಾರಾಷ್ಟ್ರ ಘಟಕದ ಕನ್ನಡ ಸಾಹಿತ್ಯ ಪರಿಷದ್',ನ ಸ್ಥಾಪನೆಯಲ್ಲೂ ಅವರ ಅವರ ವಿಶೇಷ ಯೋಗದಾನವಿತ್ತು.

ಉಲ್ಲೇಖಗಳು[ಬದಲಾಯಿಸಿ]

  1. ಶಾಲೆಯೆಂಬ ಇರುಳ ಬೆಳಕು-೮', ಮೊಗವೀರ, ಡಾ. ಕೆ.ರಘುನಾಥ್, ಮುಂಬಯಿ, ಜೂನ್,೨೦೨೨[ಶಾಶ್ವತವಾಗಿ ಮಡಿದ ಕೊಂಡಿ]