ಲಕ್ರೊಸ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲಕ್ರೊಸ್ಸ್ ಆಟದ ಒಂದು ದೃಶ್ಯ
ಮಹಿಳೆಯರ ಲಕ್ರೊಸ್ಸ್ ಆಟ

ಲಕ್ರೊಸ್ಸ್ ಆಟವನ್ನು ಮೂಲತಹ ಅಮೆರಿಕ ನಾಡಿನ ಉತ್ತರ ಭಾಗದಲ್ಲಿ ಆಡಲಾಗಿದ್ದು ಈಗಲು ಸಹ ಇದನ್ನು ಅಲ್ಲಿನ ಜನರು ಲಕ್ರೊಸ್ಸ್ ಎಂಬ ಆಟವನ್ನು ಆಡುವ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಈ ಆಟದಲ್ಲಿ ಒಂದು ರಬ್ಬರ್ ಚೆಂಡು ಹಾಗು ಉದ್ದವಾದ ಹಿಡಿಯನ್ನು ಹೊಂದಿರುವ ಕೋಲನ್ನು ಬಳಿಸಲಗುತ್ತದೆ.ಇದನ್ನು " ಲಕ್ರೊಸ್ಸ್ ಕಡ್ಡಿ " ಎಂದೇ ಕರೆಯಲಗುತ್ತದೆ. ಈ ಆಟವನ್ನು ಯಾವ ಬುಡಕಟ್ಟಿನವರು ಆಡುತ್ತಿದ್ದಾರೆ ಎಂಬುದರ ಮೇಲೆ ಆಟವನ್ನು ಬೇರೆ ಬೇರೆ ರೀತಿಯಲ್ಲಿ ಕರೆಯುತ್ತಿದ್ದರು. ಮೋಹಾಕ್ ಎಂಬ ಭಾಶೆಯಲ್ಲಿ ಈ ಆಟವನ್ನು " ಟೀವಾರಥೊನ್ " ಎಂದು ಕರೆಯುತ್ತಿದ್ದರು. ಪುರುಶರ ಆಟ ಸಂಪರ್ಕ ಕ್ರೀಡೆಯಾಗಿತ್ತು ಆದರೆ ಮಹಿಳೆಯರ ಪಂದ್ಯಗಳಲ್ಲಿ ಇಂತಹ ಸಂಪರ್ಕದ ಅವಕಾಶ ಇರಲಿಲ್ಲ. ಪುರುಶರ ಪಂದ್ಯಗಳು ನಡೆಯುತ್ತಿರುವಾಗ ಅವರಿಗೆ ಹಲವಾರು ರಕ್ಶಣಾತ್ಮಕ ಉಪಕರಣಗಳ ಅಗತ್ಯವಿತ್ತು. ಶಿರಸ್ತ್ರಾಣ ಹಾಗು ತೋಲಳು ಬಂಧಗಳ ಬಳಕೆ ಪುರುಶರ ಕ್ರೀಡೆಯಲ್ಲಿ ಮಹತ್ವವನ್ನು ಪಡೆಯುತ್ತದೆ. ಮಹಿಳೆಯರ ಆಟದಲ್ಲಿ ಇತರ್ ಆಟಗಾರರ ಮ್ಯೈ ಮುಟ್ಟುವುದು ನಿಶಿದ್ಡ. ಆಟದ ಮುಖ್ಯ ಉದ್ದೇಶ ವಿರೋಧ ತಂಡದ ಗುರಿಗಂಬದೊಳಗೆ ಚೆಂಡನ್ನು ತಲುಪಿಸುವುದು. ಲಕ್ರೊಸ್ಸ್ ಕಡ್ಡಿಯನ್ನು ಚೆಂಡನ್ನು ಹಿಡಿಯುವುದಕ್ಕಾಗಿ ಹಾಗು ತಂಡದ ಇತರ ಸದಸ್ಯರಿಗೆ ಸಾಗಿಸಲು ಬಳಸಲಾಗುತ್ತದೆ.


ಇತಿಹಾಸ[ಬದಲಾಯಿಸಿ]

೧೧೦೦ನೇ ಇಸವಿಯಲ್ಲಿ ಅಮೆರಿಕ ದೇಶದಲ್ಲಿ ವಾಸವಾಗಿದ್ದ ಜನರು ಈ ಆಟವನ್ನು ಕಂಡುಹಿಡಿದಿರಬಹುದು ಎಂಬ ಊಹೆ ಇದೆ. ಇದಾದ ನಂತರ ೧೭ನೇ ಶತಮಾನದಲ್ಲಿ ಲಕ್ರೊಸ್ಸ್ ಎಂಬ ಆಟ ನೆಲೆಯೂರಿತ್ತು. ಮೊದಲನೇ ಬಾರಿ ಆಟವನ್ನು ಸೆರೆ ಹಿಡಿದವರು ಕೆನಡಾ ದೇಶದ ಮಿಶಿನರಿಗಳು. ಅಂದಿನ ಕಾಲದಿಂದ ಈಗಿನವರೆಗು ಬಹಳ ಬದಲಾವಣೆಗಳನ್ನು ಕಂಡಿದೆ. ಕೆನಡಾ ದೇಶದಲ್ಲಿ ನಡೆಯುತ್ತಿದ್ದ ಮೊದಲ ಆಟಗಳಲ್ಲಿ ಮೂರು ಕಿಲೋಮೀಟರ್ ಅಶ್ಟು ಉದ್ದವಾದ ಮ್ಯೈದಾನದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ಥದ ವರೆಗೂ ಮೂರು ದಿನಗಳ ಮಟ್ಟಿಗೆ ಆಡುತ್ತಿದ್ದರು. ಆಟವು ಯುದ್ಧದ ಸಂಕೇತವಾಗಿದ್ದು ಸ್ರುಶ್ಟಿಕರ್ತನಿಗೆ ಅರ್ಪಿಸಲಾಗುತ್ತಿತ್ತು. ಲಕ್ರೊಸ್ಸ್ ಬೇರೆ ಬೇರೆ ಬುಡಕಟ್ಟ್ಟಿನವರ ಜೀವನದ ಮೇಲೆ ಬಹಳಾ ಪ್ರಭಾವವನ್ನು ಬೀರಿತ್ತು. ಪ್ರತಿಯೊಬ್ಬರಿಗೂ ತಮ್ಮದೇಯಾದ ಆಧ್ಯಾತ್ಮಿಕ ಭಾವನೆ ಹಾಗು ಯುದ್ಧದ ಚೇತನವನ್ನು ಅಳವಡಿಸಿಕೊಂಡಿದ್ದರು. ಆಟದಲ್ಲಿ ಭಾಗವಹಿಸುತ್ತಿದವರು ತಮ್ಮ ತಮ್ಮ ಬುಡಕಟ್ಟು ಹಾಗು ತಮ್ಮ ಜನರ ಅಭಿವೃದ್ಧಿ ಹಾಗು ವೈಭವಕ್ಕಾಗಿ ತೊಡಗಿಸಿಕೊಳ್ಳುತ್ತಿದ್ದರು. ೨೦ನೇ ಶತಮಾನದ ಪ್ರಾರಂಭದ ವೇಳೆಗೆ ಶಾಲಾ ಕಾಲೇಜುಗಳಲ್ಲೂ ಲಕ್ರೊಸ್ಸ್ ಆಟ ಆಡುವುದರ ಅಭ್ಯಾಸವಾಗಿತ್ತು. ಕೆನಡಾ ಹಾಗು ಅಮೆರಿಕಗಳ ನಡುವೆ ಪಂದ್ಯಗಳೂ ಸಹ ಶುರುವಾದವು. ೧೯೦೪ ನೇ ಇಸವಿಯಲ್ಲಿ ಹಾಗು ೧೯೦೮ನೇ ಇಸವಿಯಲ್ಲಿ ಲಕ್ರೊಸ್ಸ್ ಆಟ ಒಲಿಂಪಿಕ್ಸ್ ನ ಒಂದು ಭಾಗವಾಯಿತು. ೧೯೨೮ ಹಾಗು ೧೯೩೨ ನೇ ಇಸವಿಗಳಲ್ಲಿ ಲಕ್ರೊಸ್ಸ್ ಪ್ರದರ್ಶನ ಕ್ರೀಡೆಯಾಗಿ ಮಾತ್ರ ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡಿತು. ಒಲಿಂಪಿಕ್ಸ್ ನಡೆಯುವ ಮುನ್ನ ಒಣ್ದು ಸ್ಪರ್ಧೆಯನ್ನು ನದಡೆಸಿ ಯಾವ ತಂಡ ವಿಜಯವನ್ನು ಸಾಧಿಸುತ್ತದೆಯೋ ಆ ತಂಡ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವುದು ಎಂದು ನಿರ್ಧಾರ ಮಾಡಲಾಗಿತ್ತು. ಪ್ರತಿ ಬಾರಿ ಪಂದ್ಯ ನಡೆದಾಗ " ಜಾನ್ ಹಾಪ್ಕಿನ್ಸ್ ಬ್ಲು ಜೇಸ್" ಅಥವ " ಬಾಲ್ಟಿಮೊರ್, ಮೇರಿಲ್ಯಾಂಡ್ " ಗೆಲ್ಲುತ್ತಿದ್ದರು. ೧೯೦೦ನೇ ಶತಮಾನದಲ್ಲಿ ಲಕ್ರೊಸ್ಸ್ ಕೇವಲ ಅಮೆರಿಕ ದೇಶದ ಪೂರ್ವ ಭಾಗದಲ್ಲಿ ಪ್ರಾಮುಖ್ಯತೆಯನ್ನು ಹೊಂದಿತ್ತು ಆದರೆ ನಿಧಾನವಾಗಿ ಈ ಕ್ರೀಡೆ ಪಶ್ಚಿಮ ಭಾಗಕ್ಕೂ ಪಸರಿಸಿತು.

ಮಹಿಳೆಯರ ಲಕ್ರೊಸ್ಸ್[ಬದಲಾಯಿಸಿ]

ಮಹಿಳೆಯರ ಲಕ್ರೊಸ್ಸ್ ಹಾಗು ಪುರುಶರ ಲಕ್ರೊಸ್ಸ್ ನ ನಡುವೆ ಬಹಳ ವ್ಯತ್ಯಾಸಗಳಿವೆ. ಮುಖ್ಯವಾಗಿ ಆಟದಲ್ಲಿ ಬಳಸುವ ಉಪಕರಣಗಳು ಹಾಗು ಆಟಗಾರರ ನಡುವಿನ ಸಂಪರ್ಕದಲ್ಲಿ ಬಹಳ ವಿಭಿನ್ನತೆ ಕಂಡು ಬರುತ್ತದೆ. ಮಹಿಳೆಯರ ಆಟ ಸಂಪರ್ಕ ಕ್ರೀಡೆಯಲ್ಲ, ಇದಕ್ಕೆ ಕಾರಣ ಮಹಿಳೆಯರ ಆಟದಲ್ಲಿ ಬಾಯಿ ಸಿಬ್ಬಂದಿಯ ಬಳಾಕೆಯಗುತ್ತದೆಯೇ ಹೊರತು ಇನ್ನಿತರ ಯಾವುದೇ ಉಪಕರಣಗಳ ಬಳಕೆ ಆಗುವುದಿಲ್ಲ. ಪುರುಶರ ಆಟದಲ್ಲ್ಲಿ ಅವರನ್ನು ಸಂಪೂರ್ಣವಾಗಿ ಪರಿಶೀಲನೆಗೆ ಒಳ ಪಡಿಸಲಾಗುತ್ತದೆ ಆದರೆ ಮಹಿಳೆಯರ ಲಕ್ರೊಸ್ಸ್ ಕಡ್ಡಿಗಳನ್ನು ಮಾತ್ರ ಪರೀಕ್ಶಿಸಲಾಗುತ್ತದೆ. ಮೊದಲನೇ ಬಾರಿ ಲಕ್ರೊಸ್ಸ್ ಆಟವಾಡಿದ್ದು ಸ್ಕಾಟ್ಲಾಂಡ್ ನಾಡಿನ ಸಂತ ಲಿಯೊನಾರ್ಡ್ ಶಾಲೆಯಲ್ಲಿ.ಶಾಲೆಯ ಮುಖ್ಯೋಪಾಧ್ಯಾಯಿನಿ ಕೆನಡಾದಲ್ಲಿ ಈ ಆಟವನ್ನು ಆಡುತ್ತಿರುವುದನ್ನೌ ನೋಡಿ ತಮ್ಮ ಶಾಲೆಯಲ್ಲೂ ಈ ಕ್ರೀಡೆಯನ್ನು ಪರಿಚಯಿಸಿದರು. ಅಮೆರಿಕ ದೇಶದ ಮೊದಲ ಮಹಿಳೆಯರ ಕ್ರೀಡಾ ತಂಡ ಮೇರಿಲ್ಯಾಂಡ್ ಶಾಲೆಯದಾಗಿತ್ತು.೧೯೨೬ನೇ ಇಸವಿಯಲ್ಲಿ ಪುರುಶರು ಹಾಗು ಮಹಿಳೆಯರ ಆಟಗಳಲ್ಲಿ ಯಾವುದೇ ವ್ಯತ್ಯಾಸಗಳಿರಲಿಲ್ಲ. ನಿಯಮಗಳೂ ಸಹ ಒಂದೇ ಆಗಿದ್ದವು, ಇಶ್ಟೇ ಅಲ್ಲದೆ ಯಾವುದೇ ರಕ್ಶಣಾತ್ಮಕ ಉಪಕರಣದ ಬಳಕೆಯೂ ಇರಲಿಲ್ಲ. ಮಹಿಳೆಯರ ಆಟದ ಪ್ರತಿ ತಂಡದಲ್ಲಿ ೧೨ ಜನ ಆಟಗಾರರಿರುತ್ತಾರೆ. ಅದರಲ್ಲಿ ೪ ಜನ ' ಡಿಫ಼ೆನ್ಸ್ ' ಆಟಗಾರರು , ೩ ಜನ ಕ್ಶೇತ್ರ ರಕ್ಶಣೆಗಾರರು , ೪ ಜನ ಆಕ್ರಮಣ ಮಾಡಿ ಗುರಿ ತಲುಪಲು ಸಹಾಯ ಮಾಡುವವರು ಮತ್ತು ಒಬ್ಬ ಗೋಲ್ ಕೀಪರ್. ಮಹಿಳಾ ಆಟಗಾರರು ಕೆಲವು ನಿಯಮಗಳನ್ನು ಪಾಲಿಸಲೇಬೇಕೆಂಬ ಅಪ್ಪಣೆಯಿದೆ. ಗುರಿಯ ಸುತ್ತ ಒಂದು ವೃತ್ತವಿದ್ದು ಅದರೊಳಗೆ ಯಾವುದೇ ಆಟಗಾರತಿ ಪ್ರವೇಶ ಮಾಡುವಹಾಗಿಲ್ಲ. ಮಹಿಳೆಯರ ಲಕ್ರೊಸ್ಸ್ ಬ್ರಿಟನ್ ನಲ್ಲಿ ಪ್ರಾಮುಖ್ಯತೆಯನ್ನು ಪಡೆದಿದ್ದು ಆಸ್ಟ್ರೇಲಿಯಾದಾಲ್ಲೂ ಸಹ ಸ್ವಲ್ಪ ಆಡಲಾಗುತ್ತದೆ. ಯೂರೋಪಿನ ದೇಶಗಳಾದ ಜರ್ಮನಿ ಹಾಗು ನೆದರ್ ಲ್ಯಾಂಡ್ಸ್ ನಲ್ಲೂ ಕೂಡ ೨೧ನೇ ಶತಮಾನದಲ್ಲಿ ಲಕ್ರೊಸ್ಸ್ ಹೊಸ ನೆಲೆಯನ್ನು ಕಂಡುಕೊಂಡಿದೆ. ೧೯೯೩ನೇ ಇಸವಿಯಲ್ಲಿ ಜಪಾನ್ ಮೊದಲನೇ ಬಾರಿ ಲಕ್ರೊಸ್ಸ್ ವಿಶ್ವ ಕಪ್ ಪ್ರವೇಶಿಸಿತು, ೨೦೦೩ ನೇ ಇಸವಿಯಲ್ಲಿ ಕೊರಿಯಾ ಕೂಡ ವಿಶ್ವ ಕಪ್ ನಲ್ಲಿ ಪಾಲ್ಗೊಂಡಿತು. ೨೦೦೫ ರ ಮಹಿಳೆಯರ ಲಕ್ರೊಸ್ಸ್ ವಿಶ್ವ ಕಪ್ ಗೆದ್ದ ದೇಶ ಆಸ್ಟ್ರೇಲಿಯಾ,೨೦೦೯ರಲ್ಲಿ ಅಮೆರಿಕ ಹಾಗು ೨೦೧೩ ರಲ್ಲಿ ಕೆನಡಾ. ಮುಂದಿನ ಬಾರಿಯ ಲಕ್ರೊಸ್ಸ್ ವಿಶ್ವ ಕಪ್ ೨೦೧೭ ನೇ ಇಸವಿಯಲ್ಲಿ ಬ್ರಿಟನ್ ನಲ್ಲಿ ನಡೆಯಲಿದೆ.

ಮೈದಾನದ ಲಕ್ರೊಸ್ಸ್[ಬದಲಾಯಿಸಿ]

ಲಕ್ರೊಸ್ಸ್ ನಲ್ಲಿ ಮೈದಾನದ ಲಕ್ರೊಸ್ಸ್ ಒಂದು ರೀತಿಯ ಆಟ. ಪ್ರತಿಯೊಂದು ತಂಡದಲ್ಲೂ ಹತ್ತು ಜನ ಆಟಗಾರರು ಇರುತ್ತಾರೆ. ಇವರಲ್ಲಿ ಮೂರು ಜನ ಮಧ್ಯ ಆಟಗಾರರು, ಮೂರು ರಕ್ಶಣೆಗಾರರು ಮತ್ತು ಒಬ್ಬ ಗೋಲ್ಕೀಪರ್ ಇರುತ್ತಾನೆ. ಪ್ರತಿಯೊಬ್ಬ ಆಟಗಾರನೂ ಕೈಯಲ್ಲಿ ಲಕ್ರೊಸ್ಸ್ ಕಡ್ಡಿ (ಕ್ರೊಸ್ಸ್) ಹಿಡಿದು ಚಂಡನ್ನು ವಿರೋಧ ತಂಡದ ಗೋಲ್ ಅತ್ತ ಸಾಗಿಸಲು ಯತ್ನಿಸುತ್ತಾರೆ. ಚಿಕ್ಕ ಕ್ರೊಸ್ಸ್ ಕಡ್ಡಿ ಸುಮಾರು ೪೦ ಇಂಚರಿಂದ(೧ ಮೀಟರ್) ೪೨ ಇಂಚರಷ್ಟು (೧.೧ ಮೀಟರ್) ಉದ್ದ ಇರುತ್ತದೆ. ಇದನ್ನು ಸಹಜವಾಗಿ ಮಧ್ಯ ಆಟಗಾರರು ಅಥವಾ ಆಕ್ರಮಣ ಆಟಗಾರರು ಉಪಯೋಗಿಸುತ್ತರೆ. ದೊಡ್ಡ ಕ್ರೊಸ್ ಕಡ್ಡಿ ಯನ್ನು, ತಂಡದ ನಾಲ್ಕು ಆಟಗಾರರು ಉಪಯೋಗಿಸಬಹುದು. ಇದು ೫೨ ಇಂಚರಿಂದ (೧.೩ ಮೀಟರ್) ಸುಮಾರು ೭೨ ಇಂಚರಷ್ಟು ( ೧.೮ ಮೀಟರ್ ) ಉದ್ದ ಇರುತ್ತದೆ. ಇದನ್ನು ಕ್ಷೇತ್ರ ರಕ್ಷಣೆ ಮಾಡುವವರು ಅಥವಾ ಮಧ್ಯ ಆಟಗಾರರು ಹಿಡಿದು ಆಟಾಡುತ್ತಾರೆ.

ದೊಡ್ಡ ಹಾಗೂ ಚಿಕ್ಕ ಕ್ರೊಸ್ಸ್ ಕಡ್ಡಿಯ ಮೇಲಿನ ಭಾಗ ಸಮವಾಗಿರುತ್ತದೆ. ಇದರ ಅಳತೆ ೬.೫ ಇಂಚು (೦.೭೫ ಮೇಟರ್) ಇರುತ್ತದೆ.ಕಾಲೆಜು ಮಟ್ಟದ ಆಟಗಾರರ ಕ್ರೊಸ್ಸ್ ಕಡ್ಡಿಯು ಸಾಮನ್ಯವಾಗಿ ೩ ಇಂಚು ಅಗಲವಾಗಿರುತ್ತದೆ. ಆದರೆ ಪ್ರೌಢ ಶಾಲೆಯ ಮಟ್ಟಿನ ಆಟಗಾರರಿಗೆ ಕಡ್ಡಿಯ ಅಳತೆಯ ನಿಯಮಗಳು ಅನ್ವಯವಾಗುವುದಿಲ್ಲ, ಆದರೆ ಚ್ಂಡು ಸುಲಭವಾಗಿ ಕಡ್ಡಿ ಯೊಂದಿಗೆ ಸಾಗಬೇಕು. ತಂಡದ ಗೋಲ್ ಕೇಪರ್ ನ ಬಳಿ ಇರುವಂತಹ ಕಡ್ಡಿ ೪೦ ಇಂಚರಿಂದ (೧ ಮೇಟರ್) ೭೨ ಇಂಚರಷ್ಟು (೧.೮ ಮೀಟರ್) ಉದ್ದ ಇದ್ದು ಅದರ ಮೇಲಿನ ಭಾಗ ೧೨ ಇಂಚು (೦.೩ ಮೀಟರ್) ಅಗಲ ಇರುತ್ತದೆ. ಇದು ಬೇರೆ ಆಟಗಾರರ ಕ್ರೊಸ್ಸ್ ಕಡ್ಡಿಗಳಿಗಿಂತ ಅಗಲವಾಗಿದ್ದು ಆಹ್ರಮಣ ಆಟಾಗಾರರು ಚಂಡನ್ನು ಹೊಡೆದಾಗ ರಕ್ಷಿಸುವಲ್ಲಿ ಸಹಕಾರಿಯಾಗುತ್ತದೆ.

ಆಟದ ಕ್ಷೇತ್ರ ಸುಮಾರು ೧೧೦ ಯಾರ್ಡ್ಸ್ (೧೦೦ ಮೀಟರ್) ಉದ್ದವಿದ್ದು ೬೦ ಯಾರ್ಡ್ಸ್ (೫೫ ಮೀಟರ್) ಅಗಲವಿರುತ್ತದೆ. ಗೋಲ್ ಪೋಸ್ಟ್ ಗಳು ೬ ಅಡಿ ಉದ್ದ(೧.೮ ಮೀಟರ್) ಮತ್ತು ೬ ಅಡಿ ಅಗಲವಿರುತ್ತದೆ. ಈ ಗೋಲ್ ಪೋಸ್ಟ್ ಒಂದು ವ್ರುತ್ತಾಕಾರದ ಗೆರೆಯೊಳಗೆ ಇರುತ್ತದೆ. ಇದರ ವ್ಯಾಸದ ಅಳತೆ ೧೮ ಅಡಿ (೫.೫ ಮೀಟರ್). ಪ್ರತಿಯೊಂದು ಆಕ್ರಮಣ ಹಾಗೂ ರಕ್ಷಣಾ ವಿಸ್ತೀರ್ಣದ ಸುತ್ತ "ತಡೆಹಿಡಿಯುವ ಬಾಕ್ಸ್" ಎಂಬ ಬಾಕ್ಸ್ ಆಕಾರದ ಗೆರೆ ಹಾಕಲಾಗಿರುತ್ತದೆ. ಪ್ರತಿಯೊಂದು ಸುತ್ತಿನಲ್ಲಿ, ಚಂಡು ಗೋಲ್ ಪೋಸ್ಟ್ ತಲುಪಿದ ಮೇಲೆ ಆಟವನ್ನು ಮತ್ತೆ ಮುಖಾ ಮುಖಿ ಆರಂಭಿಸುತ್ತರೆ. ಈ ಮುಖಾ ಮುಖಿಯ ನಡುವೆ ಇಬ್ಬರು ಆಟಗಾರರು ತಮ್ಮ ಕಡ್ಡಿಯ ಮೇಲ್ಭಾಗವನ್ನು ಸಮತಲವಾಗಿ ಚಂಡಿನ ಪಕ್ಕ ಇಟ್ಟು , ಕಡ್ಡಿಯು ಮಧ್ಯ ಕ್ಷೇತ್ರದ ಗೆರೆಯತ್ತ ಮುಖವಾಗಿರುತ್ತದೆ. ಮುಖಾ ಮುಖಿಯಲ್ಲಿ ಆಟಾಗಾರರು ಚಂಡನ್ನು ವಷ ಪಡಿಸಿಕೊಂಡು ತಮ್ಮ ತಂಡದ ಆಟಾಗಾರರಿಗೆ ಸಾಗಿಸಲು ಯತ್ನಿಸುತ್ತಾರೆ. ಅಕ್ರಮಣ ಹಾಗೂ ರಕ್ಷಣಾ ಆಟಗಾರರು ತಡೆ ಹಿಡಿಯುವ ಗೆರೆಯನ್ನು ದಾಟುವಹಾಗಿಲ್ಲ. ಯಾವ ಆಟಗಾರನಾದರು ಚಂಡನ್ನು ಮಧ್ಯ ಕ್ಷೇತ್ರದಿಂದ ಸ್ವೀಕರಿಸಿದರೆ ಅಥವಾ ಚಂಡು ಆಟಗಾರರು ಹೊಡೆದ ಮೇಲೆ ತಡೆ ಹಿಡಿಯುವ ಗೆರೆ ದಾಟಿದರೆ ಮಾತ್ರ ಆಕ್ರಮಣ ಹಾಗೂ ರಕ್ಷಣಾ ಆಟಾಗಾರರು ಗೆರೆ ದಾಟಬಹುದು. ಆಟಗಾರರು ಚಂಡನ್ನು ಹೊಡೆದಾಗ ಅದು ಆಟದ ಕ್ಷೇತ್ರದ್ದಿಂದ ಹೊರಗೆ ಹೋದರೆ, ಚಂಡನ್ನು ವಿರೋಧ ತಂಡಕ್ಕೆ ಒಪ್ಪಿಸಿ ಆಟವನ್ನು ಮತ್ತೆ ಪ್ರ್ರಾರಂಭಿಸುತ್ತರೆ.

ಆಟದ ನಡುವೆ ತಂಡಗಳು ಮುಕ್ತವಾಗಿ ತಮ್ಮ ಆಟಗಾರರನ್ನು ಬದಲಾಯಿಸ ಬಹುದು. ಕೆಲವೊಮ್ಮೆ ಇದನ್ನು "ಆನ್ ದ ಫ಼ೈ" ಬದಲಾವಣೆ ಎಂದೂ ಕೂಡ ಕರೆಯುತ್ತಾರೆ. ಆಟಗಾರರ ಬದಲಾವಣೆಯು ಗೊತ್ತುಪದಿಸಿರುವ ಕ್ಷೇತ್ರದಲ್ಲಿ ಮಾತ್ರ ಮಾಡಬಹುದು. ಆಟವಾಡುವಾಗ ಬಹುತೇಕ ಪೆನಾಲ್ಟಿಗಳಲ್ಲಿ, ಅಪರಾಧಿ ಆಟಗಾರನನ್ನು ಪೆನಾಲ್ಟಿ ಬಾಕ್ಸ್ ಗೆ ಕಳುಹಿಸುತ್ತಾರೆ. ಈ ಪೆನಾಲ್ಟಿ ಬಾಕ್ಸ್ ಯೆರಡೂ ತಂಡಗಳ ಬೆಂಚುಗಳ ಮಧ್ಯೆ ಇರುತ್ತದೆ. ಅಪರಾಧಿ ಆಟಗಾರನ ತಂಡವು ಗೊತ್ತುಪಡಿಸಿದ ಸಮಯದ ಮಿತಿಯವರೆಗೂ ಆ ಆಟಗಾರನಿಲ್ಲದೆ ಆಟವನ್ನು ಮುಂದುವರೆಸಿಕೊಂಡು ಹೊಗ ಬೇಕು. ಈ ಸಮಯದ ಮಿತಿಯನ್ನು ತಪ್ಪಾಟದ ಮೇಲೆ ಅವಲಂಭಿಸಲಾಗುತ್ತದೆ. ಬಹುತೇಕ ಪೆನಾಲ್ಟಿಗಳು ತಪ್ಪಾಟದ ಆಟಗಾರನ ವಿರೋಧ ತಂಡವು ಗೋಲ್ ಹೊಡೆದ ಮೇಲೆ ಕೊನೆಯಾಗುತ್ತದೆ.

೧೯೦೪ ಒಲಿಂಪಿಕ್ಸ್ ನ ವಿಜೇತ ತ್ಂಡವಾದ ವಿನ್ನಿಪೆಗ್ ಶಾಮ್ ರಾಕ್ಸ್

ಟೆನ್ಕ್ಕಿಕಲ್ ಫೌಲ್ ಗಳಾದ ಒಫ಼್ ಸೈಡ್ ಮತ್ತು ಚಂಡು ಹಿಡಿತಕ್ಕೆ ೩೦ ಸೆಕೆಂಡ್ ಗಳಶ್ಟು ಆಟಗಾರನ ನಿಲಂಬನಕ್ಕೆ ಪೆನಾಲ್ಟಿ ಸಿಗುತ್ತದೆ ಮತ್ತು ವೈಯಕ್ತಿಕ ಫ಼ೌಲ್ ಗಳಿಗೆ ೧ ನಿಮಿಶದ ಪೆನಾಲ್ಟಿಸಿಗುತ್ತದೆ, ಆದರೆ ಕೆಲವೊಂಮ್ಮೆ ತಪ್ಪಾಟದ ತೀವ್ರತೆಗೆ ೩ ನಿಮಿಶದ ಪೆನಾಲ್ಟಿ ಕೂಡ ಸಿಗಬಹುದು. ಪೆನಾಲ್ಟಿ ಸಿಕ್ಕಿ ಆಡುತ್ತಿರುವ ತಂಡವನ್ನು "ಮ್ಯಾನ್ ಡೌನ್" ಎಂದು ಹಾಗು ಬೆರೇ ತಂಡವನ್ನು "ಮ್ಯಾನ್ ಅಪ್" ಎಂದು ಕರೆಯಲಾಗುತ್ತದೆ. ತಮ್ಮ ಆಟಗಾರನಿಗೆ ಪೆನಾಲ್ಟಿ ಸಿಕ್ಕಿದ್ದಾಗ, ತಂಡವು ಹಲವಾರು ಲಕ್ರೊಸ್ಸ್ ಆಟದ ತಂತ್ರಗಳನ್ನು ಉಪಯೊಗಿಸಿ ಆಕ್ರಮಣ ಹಾಗು ರಕ್ಷಣಾ ದಾರಿಗಳನ್ನು ಹುದುಕುತ್ತದೆ. ರಕ್ಷಣದ ಭಾಗದಲ್ಲಿ ೭ ಜನರಿಗಿಂತ ಹೆಚ್ಚಾಗಿ ಆಟಗಾರರು (೩ ಮಧ್ಯ ಆಟಗಾರರು/ ೩ ರಕ್ಷಣಕಾರರು/ ೧ ಗೋಲ್ ಕೀಪರ್) ಇದ್ದು ಅಥವಾ ೬ ಜನ ಆಟಗಾರರು ಒಂದೇ ತಂಡದವರಾಗಿದ್ದು (೩ ಆಕ್ರಮಣ ಆಟಗಾರರು/ ೩ ಮಧ್ಯ ಆಟಗಾರರು) ಆಕ್ರಮಣ ಕ್ಷೇತ್ರದಲ್ಲಿ ಇದ್ದರೆ ಅದನ್ನು ಒಫ಼್ ಸೈಡ್ ಫೌಲ್ ಯನ್ನುತ್ತಾರೆ, ಇದಕ್ಕೆ ೩೦ ಸೆಕೆಂಡ್ ಪೆನಾಲ್ಟಿ ಇರುತ್ತದೆ. ಈ ವಲಯಗಳು ಮಧ್ಯ ಕ್ಷೆತ್ರದ ಗೆರೆಯಿಂದ ಬೇರೆಯಾಗಿರುತ್ತವೆ. ಲಕ್ರೊಸ್ಸ್ ೧೯೦೪ ಹಾಗು ೧೯೦೮ ಸಮ್ಮರ್ ಒಲಂಪಿಕ್ಸ್ ನಲ್ಲಿ ಪದಕ ಗಳಿಸುವಂತಹ ಕ್ರೀಡೆಯಾಗಿತ್ತು. ನಂತರ ಅದು ಒಂದು ಪ್ರದರ್ಶ ಕ್ರೀಡೆಗಯಾಗಿ ೧೯೨೮, ೧೯೨೮ ಮತ್ತು ೧೯೪೮ ಸಮ್ಮರ್ ಒಲಂಪಿಕ್ಸ್ ನಲ್ಲಿ ಭಾಯಾಗಿತ್ತು. ಪುರುಷರ ವೃತ್ತಿಪರ ಮೇಜರ್ ಲೀಗ್ ಲಕ್ರೊಸ್ಸ್ ಹಲವಾರು ಅಂತರರಾಷ್ಟ್ರೀಯ ಕಾಲೇಜು ಮತ್ತು ಪ್ರೌಢಶಾಲೆಯ ಕಾರ್ಯಕ್ರಮಗಳಿಂದ ಮೈದಾನದ ಲಕ್ರೊಸ್ಸ್ ನಿಯಮಗಳನ್ನು ಉಪಯೋಗಿಸುತ್ತಿದೆ. ಆಟದ ವೇಳೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ತಂಡಗಳು ಪ್ರಯತ್ನಿಸಲಿ ಎಂಬ ಉದ್ದೇಶದಿಂದ ಮೇಜರ್ ಲೀಗ್ ಗಳು ೬೦ ಸೆಕೆಂಡ್ ಗಳ "ಶಾಟ್ ಕ್ಲಾಕ್" ಮತ್ತು ಗೊತ್ತುಪಡಿಸಿದ ಪರಿಧಿಯಿಂದ ಗೋಲ್ ಹೊಡೆದರೆ ೨ ಅಂಕಗಳನ್ನು ಕೊಡುವ ನಿಯಮಗಳನ್ನು ಅಳವಡಿಸಿಕೊಂಡರು. ೨೦೦೭ರಲ್ಲಿ, ಇಎಸ್ ಪ್ ಎನ್ ಚಾನೆಲ್ ಮೇಜರ್ ಲೀಗ್ ಲಕ್ರೊಸ್ಸ್ ವನ್ನು ಒತ್ತಾಯಿಸಿ ಅದರೊಂದಿಗೆ ೧೦ ವರ್ಷದ ದೂರದರ್ಷನ ಒಪ್ಪಂದವನ್ನು ಮಾಡಿಕೊಂಡಿತು.

ಉಲ್ಲೇಖನ[ಬದಲಾಯಿಸಿ]

https://en.wikipedia.org/wiki/Lacrosse