ರೋಧಕ
ವಿಕಿಪೀಡಿಯ ಇಂದ
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ರೋಧಕವು (Resistor) ವಿದ್ಯುತ್ ಚಲಿಸುವುದಕ್ಕೆ ಅಡಚಣೆಯನ್ನು ಉಂಟು ಮಾಡುತ್ತದೆ. ಅಡಚಣೆಯ ಪರಿಮಾಣವನನ್ನು ರೋಧ (Resistance) ಎಂದು ಕರೆಯಲಾಗುತ್ತದೆ. ಇದರ ಅಳತೆಯನ್ನು ಓಮ್ ನಲ್ಲಿ ಅಳೆಯಲಾಗುತ್ತದೆ. ಓಮ್ ನ ಸಂಕೇತ 'Ω'. ಇದು ಕುದುರೆಯ ಲಾಳಾಕೃತಿಯಲ್ಲಿದೆ. ೧ Ω ಎಂದರೆ ೧ವೋಲ್ಟ್ಸ್ ನ್ನು ೧ ಆಂಪಿಯರ್ ನಿಂದ ಭಾಗಿಸಿದಾಗ ಬರುವ ಮೊತ್ತಕ್ಕೆ ಕರೆಯಬಹುದು. ರೋಧವು ಒಂದು Rheostat ಅಥವಾ Resistor ನ ಲಕ್ಷಣ. ಈ ಲಕ್ಷಣವು ಎಲ್ಲಾ ವಸ್ತುಗಳಿಗಿರುತ್ತದೆ.ಲೋಹ ಗಳಲ್ಲಿ ರೋಧವು ಕಡಿಮೆಯಿರುವುದರಿಂದ ವಿದ್ಯುತ್ ಸರಾಗವಾಗಿ ಹರಿಯುತ್ತದೆ. ಒಂದು ಒಣಗಿದ ಮರದ ತುಂಡನ್ನು ತೆಗೆದುಕೊಂಡಾಗ ಅದರಲ್ಲಿ ರೋಧವು ಬಹು ಹೆಚ್ಚಿರುತ್ತದೆ. ಇದರ ಪರಿಮಾಣ ೧ ಮೆಗಾ ಓಮ್ ಗಿಂತಲೂ ಹೆಚ್ಚಿರುವುದರಿಂದ ವಿದ್ಯುತ್ ಹರಿಯಲು ಭಾರಿ ಅಡಚಣೆಯಾಗುತ್ತದೆ. ಈ ಕೆಳಗಿನ ಸೂತ್ರದಂತೆ ರೋಧ, ವಿದ್ಯುತ್ ಪರಿಮಾಣ ಮತ್ತು ವೋಲ್ಟೇಜ್ ಅನ್ನು ಸಂಬಂಧಿಸಬಹುದು.
