ರೋಜರ್ ಫೆಡರರ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ರೋಜರ್ ಫೆಡರರ್ ಇವರು ಸ್ವಿಟ್ಜರ್ಲ್ಯಾಂಡ್ ದೇಶದ ಟೆನ್ನಿಸ್ ಆಟಗಾರರು, ಸಧ್ಯಕ್ಕೆ ಇವರು ವಿಶ್ವದ ೧ನೇಯ ಶ್ರೇಯಾಂಕದ ಆಟಗಾರರು. ಇವರು ಫೆಬ್ರವರಿ ೨, ೨೦೦೪ ರಿಂದ ಅಗಸ್ಟ್ ೧೭, ೨೦೦೮ರ ವರೆಗೆ ದಾಖಲೆಯ ೨೩೭ ವಾರಗಳ ಕಾಲ ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರರಾಗಿದ್ದರು. ಇವರ ಇಂಥ ಸಾಧನೆಯನ್ನು ಕಂಡು ಅನೇಕ ಟೆನ್ನಿಸ್ ವಿಷ್ಲೇಶಕರು ಮತ್ತು ಹಳೆಯ ಟೆನ್ನಿಸ್ ಹುರಿಯಾಳುಗಳು ಇವರನ್ನು ಇತಿಹಾಸದ ಅತ್ಯುತ್ತಮ ಟೆನ್ನಿಸ್ ಪಟುವೆಂದು ಕರೆಯುತ್ತಿದ್ದಾರೆ.

ಇವರು ಈ ವರೆಗೆ ೧೫ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಙೂನ್ ೭, ೨೦೦೯ರಂದು ಸ್ವಿಡನಿನ ರಾಬಿನ್ ಸೊಡರ್ಲಿನ್ಗ್ ಅವರನ್ನು ಸೋಲಿಸಿ ಫ್ರೆಂಚ್ ಮುಕ್ತ ಟೆನ್ನಿಸ್ ಪಂದ್ಯಾವಳಿಯ ಪುರುಷ ಸಿಂಗಲ್ಸ್ ಪ್ರಶಸ್ತಿಯೊಂದಿಗೆ ತಮ್ಮ ೧೪ನೇಯ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ಗೆದ್ದು ,ವಿಶ್ವ ದಾಖಲೆಯನ್ನು ಸಮಗಟ್ಟಿದಾರೆ. ಇದು ಅವರಿಗೆ ಸಿಂಗಲ್ಸನಲ್ಲಿ ೫೯ನೇಯ ಪ್ರಶಸ್ತಿ.

ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳು[ಬದಲಾಯಿಸಿ]

Roger Federer at the 2002 US Open.

ಇದುವರೆಗೆ ರೋಜರ್ ಫೆಡರರ್ ೧೭ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಅದರಲ್ಲಿ ೪ ಆಸ್ಟ್ರೇಲಿಯನ್ ಓಪನ್, ೧ ಫ್ರೆಂಚ್ ಓಪನ್ ,೭ ವಿಂಬಲ್ಡನ್ ಮತ್ತು ೫ ಅಮೇರಿಕನ್ ಮುಕ್ತ ಟೆನ್ನಿಸ್ ಪ್ರಶಸ್ತಿಗಳಾಗಿವೆ.