ರೈಸಿನಾ ಹಿಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Raisina Hill
Country ಭಾರತ
StateDelhi
Languages
ಸಮಯ ವಲಯಯುಟಿಸಿ+5:30 (IST)
ರೈಸಿನಾ ಬೆಟ್ಟದ ಮೇಲಿನ ದಕ್ಷಿಣ ಮತ್ತು ಉತ್ತರ ಬ್ಲಾಕ್‌ಗಳು.

ರೈಸಿನಾ ಹಿಲ್ (ರೈಸಿನಾ ಬೆಟ್ಟ), ಭಾರತ ಸರ್ಕಾರದ ಕಟ್ಟಡಗಳನ್ನು ಹೊಂದಿದೆ. ಇದು ಹೊಸ ದೆಹಲಿಯ ಪ್ರದೇಶವಾಗಿದ್ದು, ಇದು ಭಾರತದ ರಾಷ್ಟ್ರಪತಿ ಭವನ ಸೇರಿದಂತೆ ಭಾರತದ ಪ್ರಮುಖ ಸರ್ಕಾರಿ ಕಟ್ಟಡಗಳು ಇಲ್ಲಿವೆ. [೧] ಅಲ್ಲದೇ, ಭಾರತದ ರಾಷ್ಟ್ರಪತಿಗಳ ಅಧಿಕೃತ ನಿವಾಸ ಮತ್ತು ಪ್ರಧಾನ ಮಂತ್ರಿಗಳ ಕಾರ್ಯಾಲಯ ಮತ್ತು ಇತರ ಹಲವಾರು ಪ್ರಮುಖ ಸಚಿವಾಲಯಗಳನ್ನು ಹೊಂದಿರುವ ಸೆಕ್ರೆಟರಿಯೇಟ್ ಕಟ್ಟಡವಾಗಿದೆ.

ಇದು ಭಾರತದ ಸಂಸತ್ತು, ರಾಜಪಥ ಮತ್ತು ಇಂಡಿಯಾ ಗೇಟ್ ಸೇರಿದಂತೆ ಇತರ ಪ್ರಮುಖ ಕಟ್ಟಡಗಳಿಂದ ಆವೃತವಾಗಿದೆ. ಈ ಸ್ಥಳವನ್ನು ಸ್ಥಳೀಯ ಹಳ್ಳಿಗಳ ೩೦೦ ಕುಟುಂಬಗಳಿಂದ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ನಂತರ "೧೮೯೪ ಭೂ ಸ್ವಾಧೀನ ಕಾಯಿದೆ" ಅಡಿಯಲ್ಲಿ ವೈಸರಾಯ್ ಹೌಸ್ ನಿರ್ಮಾಣವನ್ನು ಪ್ರಾರಂಭಿಸಲು ಸ್ವಾಧೀನಪಡಿಸಿಕೊಳ್ಳಲಾಯಿತು.

ಬೆಟ್ಟ ಸ್ವಲ್ಪ ಎತ್ತರದ ಭಾಗವಾಗಿದ್ದು, ೨೬೬ ಮೀ (೮೭೩ ಅಡಿ) ಎತ್ತರ, ಸುಮಾರು ೧೮ ಮೀ (೫೯ ಅಡಿ) ಸುತ್ತಮುತ್ತಲಿನ ಪ್ರದೇಶಕ್ಕಿಂತ ಹೆಚ್ಚುಹಾಗಾಗಿ ಇದಕ್ಕೆ ರೈಸಿನಾ ಹಿಲ್ ಎಂಬ ಪದವನ್ನು ಇಡಲಾಗಿದೆ.

ಸಹ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "The might of Raisina Hill". Retrieved 18 July 2012.