ರೂಬಿಕ್ ನ ಕ್ಯೂಬ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


ರೂಬಿಕ್ ಕ್ಯೂಬ್

ರೂಬಿಕ್ ಕ್ಯೂಬ್ ಹಂಗೇರಿಯನ್ ಶಿಲ್ಪಿ ಮತ್ತು ವಾಸ್ತುಶಿಲ್ಪ ಪ್ರಾಧ್ಯಾಪಕ ಎರ್ನೊ ರೂಬಿಕ್ ೧೯೭೪ರಲ್ಲಿ ಶೋಧಿಸಿದ ಮೂರು ಆಯಾಮದ ಯಾಂತ್ರಿಕ ಒಗಟಾಗಿದೆ. ಇದರ ಪರವಾನಗಿ ಹೊಂದಿದ ರೂಬಿಕ್ ೧೯೮೦ರಲ್ಲಿ ಇದನ್ನು ಟಿಬೊರ್ ಲಕ್ಷಿ ಮತ್ತು ತಾಮ್ ಕ್ರೆಮರ್ ಮೂಲಕ, ಟಾಯ್ ಕಾರ್ಪ ಕಂಪನಿಯ ಮುಖಾಂತರ ಮಾರುತ್ತಿದ ಮತ್ತು ಇದು ಆ ವರ್ಷದ ಜರ್ಮನ್ ವರ್ಷದ ಒಗಟು ಆಟಿಕೆ ವಿಶೇಷ ಬಹುಮಾನ ಪಡೆದಿತ್ತು. ೨೦೦೯ರ ಜನವರಿ ವರೆಗೆ ವಿಶ್ವಾಧ್ಯಂತ ೩೫೦ ಮಿಲಿಯನ್ ಆಟಿಕೆಗಳು ಮಾರಟವಾಗಿದೆ. ಇದರೊಂದಿಗೆ ಇದು ವಿಶ್ವದ ಅತಿ ಹೆಚ್ಚು ಮಾರಟವಾದ ಒಗಟು ಆಟಿಕೆ ಆಗಿದೆ.ಇದನ್ನು ವ್ಯಾಪಕವಾಗಿ ವಿಶ್ವದ ಉತ್ತಮವಾಗಿ ಮಾರಾಟವಾದ ಆಟಿಕೆ ಎಂದು ಪರಿಗಣಿಸಲಾಗಿದೆ.

ರೂಬಿಕ್ ಕ್ಯೂಬ್ ನ ಎಲ್ಲಾ ಆರು ಮುಖವು ಒಂಬತ್ತು ಸ್ಟಿಕ್ಕರ್ಗಳನ್ನು ಹೊಂದಿದೆ, ಎಲ್ಲಾ ಆರು ಮುಖಗಳಲಿರುವ ಸ್ಟಿಕ್ಕರ್ಗಳು ಬಿಳಿ, ಕೆಂಪು, ನೀಲಿ, ಕಿತ್ತಳೆ, ಹಸಿರು ಮತ್ತು ಹಳದಿ ಬಣ್ಣಗಳನ್ನು ಹೊಂದಿದೆ.