ಯುಟೊಪಿಯ
ವಿಕಿಪೀಡಿಯ ಇಂದ
ಇದೊಂದು ಕಾಲ್ಪನಿಕ ಸಾಮ್ರಾಜ್ಯ.ಯುಟೊಪಿಯ (Utopia) ಎಂಬುದು ಗ್ರೀಕ್ ಭಾಷೆಯ ಶಬ್ದವಾಗಿದೆ.ಎಲ್ಲಿ ಮನುಷ್ಯಜೀವಿ ತನ್ನ ಜೀವ,ಜಂತುಗಳೊಂದಿಗೆ ಸುಖ,ಶಾಂತಿ,ಸಮೃದ್ಧಿಯಿಂದ ಇರುತ್ತಾನೆಯೋ,ಎಲ್ಲಿ ಹಸು-ಹುಲಿಗಳು ಪರಸ್ಪರ ಪ್ರೀತಿಯಿಂದ ಇರಬಲ್ಲವೋ ಅಂತಹ ಸಮಾಜ ಅಥವಾ ವ್ಯವಸ್ಥೆಯನ್ನು ಯುಟೊಪಿಯನ್ ಸಾಮ್ರಾಜ್ಯವೆಂದು ಎಂದು ಕರೆಯಲಾಗುತ್ತದೆ.ಪ್ರಸ್ತುತ ಸನ್ನಿವೇಶದಲ್ಲಿ ಇದು ಅಸಾಧ್ಯವಾಗಿರುವದರಿಂದ ಯುಟೊಪಿಯ ಸಾಮ್ರಾಜ್ಯವನ್ನು ಕಾಲ್ಪನಿಕ ಜಗತ್ತೆಂದೇ ಕರೆಯಲಾಗಿದೆ.ಆದರೂ ಹಿಂದೂ ಧರ್ಮದ ಭಾಗವಾಗಿರುವ ತ್ರೇತಾಯುಗದ ರಾಮರಾಜ್ಯ(ರಾಮಾಯಣ)ವನ್ನು ಯುಟೊಪಿಯನ್ ಸಾಮ್ರಾಜ್ಯಕ್ಕೆ ಹೋಲಿಸಬಹುದೆಂದು ಭಾವಿಸಲಾಗುತ್ತಿದೆ.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |