ಮೋಳೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಮೋಳೆ' ಎಂಬ ಪದಕ್ಕೆ ಕನ್ನಡದಲ್ಲಿ "ಉಪ್ಪು ತಯಾರಿಸಲು ಕಟ್ಟುವ ಒಡ್ಡುಗಳು ಅಥವಾ ಕೆರೆ ಎಂಬ ಅರ್ಥವಿದೆ". "ಚೌಳುಮಣ್ಣು" ಇರುವ ಕಡೆ ಇವರು ಮೋಳೆಗಳ ನಿರ್ಮಾಣ ಮಾಡಿದ್ದಾರೆ. ಚೌಳು ಎಂದರೆ ಉಪ್ಪು ಎಂಬ ಅರ್ಥವಿದೆ.

ಮೋಳೆಗಳು ಚಾಮರಾಜನಗರ ಜಿಲ್ಲೆ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ.. ಮೋಳೆಗಳಲ್ಲಿ ವಾಸಿಸುವವರೆಲ್ಲರೂ ಉಪ್ಪು ತಯಾರಿಸುವ "ಉಪ್ಪಾರ" ಕುಲದ ಸಮುದಾಯದವರು. ಈ ಸಮುದಾಯ ಹಿಂದುಳಿದ ಪ್ರವರ್ಗ ೧ ರಲ್ಲಿ ಬರುತ್ತದೆ. 'ಮೋಳೆ' ಎಂಬ ಪದಕ್ಕೆ "ಉಪ್ಪು ತಯಾರಿಸಲು ಕಟ್ಟುವ ಒಡ್ಡುಗಳು ಅಥವಾ ಕೆರೆ ಎಂದು ಅರ್ಥವಿದೆ". ಇದು ಉಪ್ಪಾರರ ಕುಲಕಸುಬು.ಕೆರೆ ಸಂಸ್ಕೃತಿಗೆ ಇವರು ಅಪಾರವಾದ ಕೊಡುಗೆ ನೀಡಿದ್ದು ಮೀನುಗಾರಿಕೆಯೂ ಕೂಡ ಇವರ ಕುಲಕಸುಬಾಗಿದೆ. ಭಾರತದ ಮೂಲ ಕಸುಬುಗಳಲ್ಲಿ ಉಪ್ಪು ತಯಾರಿಕೆಯೂ ಒಂದು. ಸಮುದ್ರ ತೀರದಲ್ಲಿ ವಾಸವಾಗಿದ್ದೇ ಉಪ್ಪು ತಯಾರಿಸುತ್ತಿದ್ದ ವರ್ಗವಿದು. ಯುದ್ದ, ಪ್ರವಾಹ,ವ್ಯಾಪಾರ, ಮುಂತಾದ ಕಾರಣಗಳಿಂದ ಬಯಲು ಪ್ಸರದೇಶದ ಕಡೆ ಬಂದು ನೆಲೆಸುವ ಇವರುಕೆರೆಗಳನ್ನು ನಿರ್ಮಿಸುವ ಕಾರ್ಯದಲ್ಲಿ ತೊಡಗುತ್ತಾರೆ. ಚೌಳು ಮಣ್ಣು ಇರುವ ಕಡೆ ವಾಸಮಾಡಲು ಆರಂಭಿಸುತ್ತಾರೆ. ಜಗತ್ತಿನ ಬಹುದೊಡ್ಡ ಬೆವರಿನ ಸಂಸ್ಕೃತಿಗಳಲ್ಲಿ ಇದೂ ಒಂದು.

ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದರೆ ನಂಜನಗೂಡು, ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ತಿ.ನರಸೀಪುರ, ಹನೂರು, ಯಳಂದೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಮೋಳೆಗಳು ಅಧಿಕವಾಗಿ ಕಂಡುಬರುತ್ತವೆ. ಮೋಳೆಗಳು ಸ್ವತಂತ್ರವಾಗಿ ರಚನೆಯಾಗಿದ್ದು ಇವು ಈಗಾಗಲೇ ನಿರ್ಮಾಣವಾಗಿರುವ ಊರಿನ ಮಗ್ಗುಲಲ್ಲೇ ಅಥವಾ ಅಣತಿ ದೂರದಲ್ಲಿ ರಚನೆಯಾಗಿವೆ. ಇವುಗಳಿಗೆ ತಮ್ಮದೇ ಆದ ಹೆಸರುಗಳು ಇಲ್ಲ ಉದಾಹರಣೆಗೆ 'ಹೊಸಕೋಟೆ' ಎಂಬ ಊರು ಇದ್ದರೆ ಅದರ ಪಕ್ಕದಲ್ಲಿ ಹೊಸಕೋಟೆ ಮೋಳೆ ಎಂಬ ಊರು ಇರುತ್ತದೆ. ಹೊಸಕೋಟೆಯಲ್ಲಿ ಎಲ್ಲಾ ಕೋಮಿನ ಜನ ವಾಸವಾಗಿದ್ದರೆ, ಹೊಸಕೋಟೆಯಲ್ಲಿ ಕೇವಲ ಉಪ್ಪಾರರು ಮಾತ್ರ ವಾಸವಾಗಿರುತ್ತಾರೆ. ಇದರಂತೆ 'ಹದಿನಾರು' ಮೈಸೂರು ಸಂಸ್ಥಾನದ ಪೂರ್ವಜರು ಇದ್ದರೆಂದು ಹೇಳಲಾಗುವ ಊರು ಇದು. ಇದು ನಂಜನಗೂಡು ತಾಲೂಕಿನಲ್ಲಿದೆ.ಇಲ್ಲಿ ಲಿಂಗಾಯತ, ಗೌಡ, ದಲಿತ ಎಲ್ಲಾ ಸಮುದಾಯದ ಜನ ವಾಸವಾಗಿದ್ದಾರೆ. ಆದರೆ ಇದರ ಪಕ್ಕ ಹದಿನಾರುಮೋಳೆ" ಇದೆ. ಇಲ್ಲಿ ಕೇವಲ ಉಪ್ಪಾರರೇ ವಾಸವಾಗಿರುತ್ತಾರೆ. ಹೀಗೆ ಅನೇಕ ಊರುಗಳನ್ನು ಇಲ್ಲಿ ಹೆಸರಿಸಬಹುದು. ಬಿಳಿಜಗಲಿ-ಬಿಳಿಜಗಲಿಮೋಳೆ. ಹಂಡರಕಳ್ಳಿ- ಹಂಡರಕಳ್ಳಿಮೋಳೆ, ಸರಗೂರು-ಸರಗೂರುಮೋಳೆ,ಯಂಗನಕೆರೆಮೋಳೆ, ದೊಡ್ಡಮೋಳೆ-ಚಿಕ್ಕಮೋಳೆ, ಕೋಡಿಮೋಳೆ ಹಾಗೂ ಉಪ್ಪಾರರು ಕೆರೆಗಳ ನಿರ್ಮಾಣ ಹಾಗೂ ಮೀನುಗಾರಿಕೆ ಇವರ ಕುಲಕಸುಬಾಗಿದ್ದು, ಇಂದಿಗೂ ಮೀನು ಹಿಡಿಯುವ ಕೆಲಸದಲ್ಲಿ ತೊಡಗಿದ್ದಾರೆ.

ನಂಜನಗೂಡಿನಲ್ಲಿ ಗೋಳೂರು, ಹಳೇಪುರ, ಕರಳಪುರ(ಕರಳು ಅಂದರೆ ಉಪ್ಪು), ಹೆಮ್ಮರಗಾಲ, ಗಟ್ವವಾಡಿ, ಡತಲೆ, ಹುಣಸನಾಳು, ಕೂಡ್ಲಾಪುರ, ಮಡುವಿನಹಳ್ಳಿ, ಹುಲ್ಲಹಳ್ಳಿ, ಶಿರಮಳ್ಳಿ, ಹೆಗ್ಗಡಹಳ್ಳಿ ಮುಂತಾದ ಸಾಮಾನ್ಯ ಹೆಸರುಗಳನ್ನು ಹೊಂದಿರುವ ಊರುಗಳಲ್ಲೂ ಇವರು ವಾಸವಾಗಿದ್ದಾರೆ. ಇಲ್ಲೆಲ್ಲಾ ಕೆರೆಗಳು ಇರುತ್ತವೆ.

ಉಪ್ಪಾರ ಜಾತಿಯ ಏಕೈಕ ಶಾಸಕ ಪುಟ್ಟರಂಗಶೆಟ್ಟಿ ಅವರ ಊರು ಯಳಂದೂರು ತಾಲೂಕಿನ ಉಪ್ಪಿನಮೋಳೆ. (ಮೈಸೂರು-ಚಾಮರಾಜನಗರ ಜಿಲ್ಲೆ)

ಚಾಮರಾಜನಗರದ ಕಾವ್ಯಕಾಡಿನಲ್ಲಿ ಮೋಳೆಗಳ ಪಾತ್ರ ಹಿರಿದು. ತಿ.ನರಸೀಪುರದ ಬಳಿ ಇರುವ ಸರಗೂರು ಅಯ್ಯನ ಮಠದಲ್ಲಿ ಉಪ್ಪಾರರ ರಾಮವ್ವ ಹಾಗೂ ಪತಿ ಮೂಗಪ್ಪ ಎಂಬ ಶರಣರು ಇದ್ದು, ಹದಿನಾರನೇ ಶತಮಾನದಲ್ಲಿ ಉತ್ತರದಿಂದ ಬಂದ ಮಾದೇಶ್ವರನಿಗೆ ಉಳಿದುಕೊಳ್ಳಲು ತಮ್ಮ ಮಠದಲ್ಲಿ ಜಾಗಕೊಟ್ಟಿದ್ದರೆಂಬ ಜನಪದ ಕಾವ್ಯವಿದೆ. ಮಾದೇಶ್ವರ ಕಾವ್ಯದಲ್ಲಿ ಸರಗೂರಯ್ಯನ ಸಾಲು ಎಂಬ ಪ್ರತ್ಯೇಕ ಸಾಲಿನಲ್ಲೇ ಹಾಡುತ್ತಾರೆ. ಇತ್ತೀಚೆಗೆ ಅದು ತುಂಡರಿಸಿದೆ. ಹಾಗೂ ಮತ್ತೊಬ್ಬ ಸಾಂಸ್ಕೃತಿಕ ನಾಯಕ ಮಂಟೇಸ್ವಾಮಿ ಕಾವ್ಯದಲ್ಲೂ ಕೂಡ ಇವರ ಪ್ರಸ್ತಾಪ ಇದ್ದು. ಇಬ್ಬರಿಗೂ ಒವರು ಗುಡ್ಡಪ್ಪ, ನೀಲಗಾರರಾಗಿ ನಡೆದುಕೊಳ್ಳುತ್ತಾರೆ.

ಮೋಳೆ', ಒಂದು ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕ ಗ್ರಾಮ. ಇಲ್ಲಿ ಕೃಷಿಯು ಜನರ ಮುಖ್ಯ ಉದ್ಯೊಗ.


- ಗೋಳೂರ ನಾರಾಯಣಸ್ವಾಮಿ.(ನಂಜನಗೂಡು, ಮೈಸೂರು ಜಿಲ್ಲೆ)

"https://kn.wikipedia.org/w/index.php?title=ಮೋಳೆ&oldid=1114656" ಇಂದ ಪಡೆಯಲ್ಪಟ್ಟಿದೆ