ಮೈಲಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಮೈಲಿ ೫,೨೮೦ ಅಡಿಗಳಿಗೆ (೧,೭೬೦ ಗಜಗಳು, ಅಥವಾ ಸುಮಾರು ೧,೬೦೯ ಮೀಟರ್‍ಗಳು) ಸಮಾನವಾದ ಉದ್ದಏಕಮಾನ. ೫,೨೮೦ ಅಡಿಗಳ ಮೈಲಿಯನ್ನು ನಾವಿಕ ಮೈಲಿಯಿಂದ (ಸುಮಾರು ೬,೦೭೬ ಅಡಿಗಳು, ಅಥವಾ ೧,೮೫೨ ಮೀಟರ್‌ಗಳು) ಪ್ರತ್ಯೇಕಿಸಲು ಅದನ್ನು ಭೂ ಮೈಲಿ ಎಂದು ಕರೆಯಬಹುದು. ೧೯೫೯ರ ಅಂತರರಾಷ್ಟ್ರೀಯ ಗಜ ಮತ್ತು ಪೌಂಡ್ ಒಪ್ಪಂದ ಗಜವನ್ನು ನಿಖರವಾಗಿ ೦.೯೧೪೪ ಮೀಟರ್‌ಗಳೆಂದು ಪ್ರಮಾಣೀಕರಿಸುವವರೆಗೆ ಭೂ ಮೈಲಿಯ ನಿಖರವಾದ ಉದ್ದ ಇಂಗ್ಲಿಷ್ ಮಾತನಾಡುವ ದೇಶಗಳಲ್ಲಿ ಬದಲಾಗುತ್ತಿತ್ತು, ಮತ್ತು ಇದಾದ ಮೇಲೆ ಒಂದು ಮೈಲಿ ನಿಖರವಾಗಿ ೧,೬೦೯.೩೪೪ ಮೀಟರ್‌ಗಳೆಂದಾಯಿತು.

"http://kn.wikipedia.org/w/index.php?title=ಮೈಲಿ&oldid=339279" ಇಂದ ಪಡೆಯಲ್ಪಟ್ಟಿದೆ