ಮುಂಬೈನಲ್ಲಿ ಅಳುವ ಶಿಲುಬೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುಂಬೈನಲ್ಲಿರುವ ಅಳುವ ಶಿಲುಬೆ
ಸ್ಥಳಮುಂಬೈ, ಭಾರತ
ಬಳಸಿದ ವಸ್ತುಮರ

  ಮುಂಬೈನಲ್ಲಿನ ಅಳುವ ಶಿಲುಬೆ ಎಂದು ಪ್ರಖ್ಯಾತವಾಗಿರುವುದು ಮುಂಬೈನಲ್ಲಿರುವ ಶಿಲುಬೆಗೆ ಹಾಕಲ್ಪಟ್ಟ ಯೇಸುವಿನ ಪ್ರತಿಮೆ. 2012ರಲ್ಲಿ ಅದರ ಪಾದಗಳಿಂದ ನಿರಂತರವಾದ ನೀರಿನ ಹರಿವು ಹರಿಯಲು ಪ್ರಾರಂಭಿಸಿದಾಗ ಇದು ವ್ಯಾಪಕ ಗಮನವನ್ನು ಸೆಳೆಯಿತು. ಕೆಲವು ಸ್ಥಳೀಯ ಕ್ಯಾಥೊಲಿಕ್ ಕ್ರೈಸ್ತರು ಈ ಘಟನೆಯನ್ನು ಪವಾಡ ಎಂದು ನಂಬಿದ್ದರು.ಸನಲ್ ಎಡಮಾರುಕು ಎಂಬ ಹೆಸರಿನ ಸಂಶಯವಾದಿ-ತರ್ಕವಾದಿ ಮತ್ತು ನಾಸ್ತಿಕ ಲೇಖಕ ದೋಷಯುಕ್ತ ಒಳಚರಂಡಿ ವ್ಯವಸ್ಥೆಯಿಂದ ನೀರು ಉದ್ಭವಿಸಿದೆ ಎಂಬುದಕ್ಕೆ ಪುರಾವೆಗಳನ್ನು ಒದಗಿಸಿದರು. ಇದು ಕ್ಯಾಪಿಲ್ಲರಿ ಕ್ರಿಯೆಯಿಂದ ಸೋರಿಕೆಯಾಗುತ್ತಿದೆ ಎಂದು ಅವರು ನಿರೂಪಿಸಿದರು. ಆದಾಗ್ಯೂ ದೊಡ್ಡ ಮತ್ತು ಹೊಸ ಚರ್ಚುಗಳು ಅಥವಾ ಕಾನ್ವೆಂಟ್ಗಳನ್ನು ನಿರ್ಮಿಸಲು ಬೇಕಾದ ಹಣವನ್ನು ಗಳಿಸಲು ಲ್ಯಾಟಿನ್ ಕ್ರಿಶ್ಚಿಯನ್ ಪಾದ್ರಿಗಳು ನಿಯಮಿತವಾಗಿ ಭಕ್ತರನ್ನು ವಂಚಿಸುತ್ತಿದ್ದಾರೆ ಮತ್ತು ಪವಾಡ ಎಂಬ ಹೆಸರಿನಲ್ಲಿ ವಂಚಿಸುತ್ತಿದ್ದಾರೆ ಎಂದು ಎಡಮಾರುಕು ಆರೋಪಿಸಿದರು. ಇವರು ಪೋಪ್ರನ್ನು "ವಿಜ್ಞಾನ ವಿರೋಧಿ" ಎಂದು ಅಪಹಾಸ್ಯ ಮಾಡಿದರು.[೧][೨] ಇದಾದ ಮೇಲೆ ಅವರು ಕ್ರಿಶ್ಚಿಯನ್ ಕಾರ್ಯಕರ್ತರಿಂದ ಅಪಾರವಾದ ವಿರೋಧವನ್ನು ಎದುರಿಸಬೇಕಾಯಿತು.


ಚರ್ಚ್ನ ಪ್ರತಿನಿಧಿಯೊಬ್ಬರು ಎಡಮಾರುಕು "ಅನುಮಾನಿಸುವ ಹಕ್ಕನ್ನು" ಹೊಂದಿದ್ದರು ಎಂದು ಒಪ್ಪಿಕೊಂಡರು . ಕ್ರಿಶ್ಚಿಯನ್ ಕಾರ್ಯಕರ್ತರು

ಅವರ ಮೇಲಿನ ವಿರೋಧವು ಅವರು "ಪವಾಡ" ವನ್ನು ತಳ್ಳಿಹಾಕದ್ದರಿಂದ ಅಲ್ಲ. ಬದಲಿಗೆ ದೂರದರ್ಶನದಲ್ಲಿನ ಲೈವ್ ಶೋನಲ್ಲಿ ಮಾಡಿದ ಮಾನಹಾನಿಕರ ಹೇಳಿಕೆಗಳಿಗೆ ಸಂಬಂಧಪಟ್ಟಿದ್ದು ಎಂದು ಹೇಳಿದರು.[2] ಅದರ ನಂತರ ಅವರು ಅನೇಕ ಪ್ರಥಮ ಮಾಹಿತಿ ವರದಿಗಳಿಗೆ ಒಳಪಟ್ಟರು (ಧರ್ಮನಿಂದೆಯ ಕಾನೂನುಗಳ ಅಡಿಯಲ್ಲಿ ಎಫ್ಐಆರ್).[೩][೪][೫] ಈ ಹೇಳಿಕೆಗಳಿಗಾಗಿ ಆತ ಕ್ಷಮೆಯಾಚಿಸಬೇಕೆಂದು ಕ್ಯಾಥೊಲಿಕ್ ವಕೀಲರು ಮತ್ತು ಬಾಂಬೆಯ ರೋಮನ್ ಕ್ಯಾಥೊಲಿಕ್ ಆರ್ಚ್ಡಯಸೀಸ್ ಆಗ್ರಹಿಸಿತು. ಹಲವಾರು ಬೆದರಿಕೆಗಳನ್ನು ಸ್ವೀಕರಿಸಿದ ನಂತರ, [ಉಲ್ಲೇಖದ ಅಗತ್ಯವಿದೆ] ಧರ್ಮನಿಂದೆಯ ಕಾನೂನಿನ ಅಡಿಯಲ್ಲಿ ಬಂಧಿಸಲ್ಪಡುವುದನ್ನು ತಪ್ಪಿಸಲು ಅವರು ಫಿನ್ಲ್ಯಾಂಡ್ಗೆ ವಲಸೆ ಹೋದರು.[೬]

ವಿದ್ಯಮಾನ[ಬದಲಾಯಿಸಿ]

2012ರ ಮಾರ್ಚ್ 5ರಂದು ಇರ್ಲಾದಲ್ಲಿ ಚರ್ಚ್ ಆಫ್ ಅವರ್ ಲೇಡಿ ಆಫ್ ವೇಲಂಕಣ್ಣಿ (ಮುಂಬೈ) ಬಳಿ ಶಿಲುಬೆಗೆ ಹಾಕಲಾದ ಯೇಸುವಿನ ಪ್ರತಿಮೆಯ ಪಾದಗಳಿಂದ ನೀರು ತೊಟ್ಟಿಕ್ಕಲು ಪ್ರಾರಂಭಿಸಿದವು ಮತ್ತು ಮಹಿಳೆಯೊಬ್ಬಳು ಅದನ್ನು ಸ್ಥಳೀಯ ಪಾದ್ರಿಗೆ ವರದಿ ಮಾಡಿದಳು. ಮಾರ್ಚ್ 8ರಂದು ತೊಟ್ಟಿಕ್ಕುವುದು ನಿಂತಿತು . ಚರ್ಚ್ನ ಪಾದ್ರಿ ಅಗಸ್ಟೀನ್ ಪಾಲೆಟ್, "ಏನಾಯಿತು ಎಂಬುದನ್ನು ವಿಜ್ಞಾನವು ವಿವರಿಸಬಹುದೇ ಅಥವಾ ಇಲ್ಲವೋ ಗೊತ್ತಿಲ್ಲ. ಆದರೆ ಡಜನ್ಗಟ್ಟಲೆ ಕ್ರಿಶ್ಚಿಯನ್ನರು, ಹಿಂದೂಗಳು ಮತ್ತು ಮುಸ್ಲಿಮರು ಶಿಲುಬೆಯ ಕೆಳಗೆ ಒಟ್ಟಿಗೆ ಪ್ರಾರ್ಥನೆ ಮಾಡುವ ಒಂದು ಪವಾಡ ಇರ್ಲಾದಲ್ಲಿ ನಡೆಯಿತು " ಎಂದು ಹೇಳಿದರು.[೭]

ಮಾರ್ಚ್ 12ರಂದು ಮುಂಬೈನ ಸಹಾಯಕ ಬಿಷಪ್, ಅಗ್ನೆಲೊ ಗ್ರಾಸಿಯಸ್ ಹೀಗೆ ಹೇಳಿದರುಃ "ಇದಕ್ಕೆ ಅಲೌಕಿಕ ಕಾರಣವಿದೆಯೇ ಎಂದು ಯಾರಾದರೂ ಅನುಮಾನಿಸಬಹುದು. ನಾನು ಇನ್ನೂ ಶಿಲುಬೆಯನ್ನು ನೋಡಿಲ್ಲ. ಅದರಿಂದ ನೀರು ತೊಟ್ಟಿಕ್ಕುವಿಕೆಯು ನೈಸರ್ಗಿಕ ವಿವರಣೆಯನ್ನು ಹೊಂದಿರಬಹುದು".[೮]

ವೈಜ್ಞಾನಿಕ ವಿವರಣೆ[ಬದಲಾಯಿಸಿ]

ಭಾರತೀಯ ತರ್ಕವಾದಿ ಸನಲ್ ಎಡಮಾರುಕು ಅವರನ್ನು ಚರ್ಚ್ನ ಅಧಿಕಾರಿಗಳ ಒಪ್ಪಿಗೆಯೊಂದಿಗೆ ಮುಂಬೈನ ಟಿವಿ9 ತನಿಖೆ ನಡೆಸಲು ಆಹ್ವಾನಿಸಿತು. ಆತ ಇಂಜಿನಿಯರ್ನೊಂದಿಗೆ ಪವಾಡ ಸಂಭವಿಸಿದ ಸ್ಥಳಕ್ಕೆ ಹೋದನು ಮತ್ತು ಅದರ ಹಿಂಭಾಗದಲ್ಲಿ ನೀರಿನ ಹನಿ ಸೋರಿಕೆಯಾಗುತ್ತಿದ್ದ ಮೂಲವನ್ನು ಪತ್ತೆಹಚ್ಚಿದನು. ಕ್ಯಾಪಿಲ್ಲರಿ ಕ್ರಿಯೆ ಮತ್ತು ದೋಷಯುಕ್ತ ಕೊಳಾಯಿಗಳಿಂದಾಗಿ ನೀರು ಕಾಲುಗಳ ಮೂಲಕ ಹರಿಯುತ್ತಿದೆ ಎಂದು ಎಡಮಾರುಕು ಕಂಡುಕೊಂಡರು.[೯][೧೦] ಪ್ರತಿಮೆಯನ್ನು ಅಳವಡಿಸಲಾಗಿರುವ ಗೋಡೆಯ ಮೇಲಿನ ತೇವಾಂಶವು ತುಂಬಿ ಹರಿಯುತ್ತಿದ್ದ ಚರಂಡಿಯಿಂದ ಬರುತ್ತಿತ್ತು. ಆ ಚರಂಡಿಗೆ ಹತ್ತಿರದ ಶೌಚಾಲಯದಿಂದ ಹೊರಡುವ ಪೈಪ್ನಿಂದ ಬರುವ ನೀರು ತುಂಬಿಸುತ್ತಿತ್ತು .[೪]

ಟಿವಿ9ನಲ್ಲಿನ ಚರ್ಚೆಯಲ್ಲಿ ಮುಂಬೈನ ಬಿಷಪ್ ಅಗ್ನೆಲೊ ಗ್ರಾಸಿಯಸ್, "ಇದು ಪವಾಡ ಎಂದು ನಾವು ಎಂದಿಗೂ ಹೇಳುವುದಿಲ್ಲ. ಚರ್ಚ್ ಬಹಳ ಎಚ್ಚರಿಕೆಯಿಂದ ತನಿಖೆ ನಡೆಸುತ್ತದೆ" ಎಂದು ಹೇಳಿದರು. ಈ ನಿರ್ದಿಷ್ಟ ಘಟನೆಯು "ನೈಸರ್ಗಿಕ ಕಾರಣಗಳನ್ನು" ಹೊಂದಿರಬಹುದು ಎಂದು ಅವರು ಹೇಳಿದರು ಮತ್ತು ಎಡಮಾರುಕು "ಅನುಮಾನಿಸುವ ಹಕ್ಕನ್ನು" ಹೊಂದಿದ್ದಾರೆ ಎಂದು ಒಪ್ಪಿಕೊಂಡರು.[೧೧]

ಪರಿಣಾಮ[ಬದಲಾಯಿಸಿ]

ಕ್ಯಾಥೋಲಿಕ್ ಚರ್ಚ್ ಮತ್ತು ಪೋಪ್ರನ್ನು ಅಪಹಾಸ್ಯ ಮಾಡಿದ ಎಡಮಾರುಕು ಅವರ ದೂರದರ್ಶನದ ಹೇಳಿಕೆಗಳ ನಂತರ ಕ್ಯಾಥೋಲಿಕ್ ಸೆಕ್ಯುಲರ್ ಫೋರಂ ಭಾರತದ ಧರ್ಮನಿಂದೆಯ ಕಾನೂನಾದ ಐಪಿಸಿ ಸೆಕ್ಷನ್ 295-ಎ ಅಡಿಯಲ್ಲಿ ಎಡಮಾರುಕು ವಿರುದ್ಧ 17 ಪ್ರಥಮ ಮಾಹಿತಿ ವರದಿಗಳನ್ನು ಸಲ್ಲಿಸಿತು.[೧೧][೧೨] ಬಾಂಬೆಯ ರೋಮನ್ ಕ್ಯಾಥೋಲಿಕ್ ಆರ್ಚ್ಡಯಸೀಸ್ ಈ ಕ್ರಿಮಿನಲ್ ಆರೋಪಗಳಲ್ಲಿ ಭಾಗಿಯಾಗಿರಲಿಲ್ಲ. ಆದರೂ ಆತ ಕ್ಷಮೆಯಾಚಿಸುವಂತೆ ಹೇಳಿಕೆಯನ್ನು ನೀಡಿತು. ಅವರು ಆರೋಪಗಳನ್ನು ಕೈಬಿಡುವಂತೆ ಪ್ರಾಸಿಕ್ಯೂಷನ್ ಅನ್ನು ಕೇಳಿದರು. ಈ ಕಾನೂನನ್ನು ತಪ್ಪಾಗಿ ಅನ್ವಯಿಸಲಾಗುತ್ತಿದೆ ಎಂದು ಅಖಿಲ ಭಾರತ ಕ್ಯಾಥೋಲಿಕ್ ಒಕ್ಕೂಟ ಹೇಳಿದೆ.[೧೩] ಇಂಡಿಯಾ ಸೆಂಟರ್ ಫಾರ್ ಹ್ಯೂಮನ್ ರೈಟ್ಸ್ ಅಂಡ್ ಲಾನ ಸಂಸ್ಥಾಪಕ ಕಾಲಿನ್ ಗೊನ್ಸಾಲ್ವೆಸ್ ಇಲ್ಲಿ ಯಾವುದೇ ಕ್ರಿಮಿನಲ್ ಅಪರಾಧ ನಡೆದಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.[೧೪] ವಾಕ್ ಸ್ವಾತಂತ್ರ್ಯವನ್ನು ನಿಗ್ರಹಿಸಲು ಕಾನೂನನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ದೂರುಗಳು ಇನ್ನೂ ಬಂದವು. ವಿಶಾಲ್ ದದ್ಲಾನಿ ಮತ್ತು ಜೇಮ್ಸ್ ರಾಂಡಿ ಎಡಮಾರುಕು ಅವರನ್ನು ಬೆಂಬಲಿಸಿ ಸಾರ್ವಜನಿಕವಾಗಿ ಮಾತನಾಡಿದರು.[೧೫][೧೬] 31 ಜುಲೈ 2012 ರಂದು, ಎಡಮಾರುಕು ಭಾರತವನ್ನು ತೊರೆದು ಫಿನ್ಲ್ಯಾಂಡ್ನಲ್ಲಿ ನೆಲೆಸಿದರು.[1] 2014ರ ಹೊತ್ತಿಗೆ ಕ್ಯಾಥೋಲಿಕ್ ಸೆಕ್ಯುಲರ್ ಫೋರಂ ಅವರು ಭಾರತಕ್ಕೆ ಮರಳಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳುತ್ತಿತ್ತು.[1][೧೧]

ಇದನ್ನೂ ನೋಡಿ[ಬದಲಾಯಿಸಿ]

  • ಅಳುತ್ತಿರುವ ಪ್ರತಿಮೆ

ಉಲ್ಲೇಖಗಳು[ಬದಲಾಯಿಸಿ]

  1. "Water from the cross of Irla. Indian atheist accuses Church of". Archived from the original on 2020-11-12.
  2. "Why Jesus wept in Mumbai: The church versus the rationalist". 28 November 2012. Archived from the original on 2019-09-25.
  3. "Blasphemy law is unworthy of secular democracy". Firstpost. 4 December 2012. Retrieved 2019-10-27.
  4. ೪.೦ ೪.೧ McDonald, Henry (2012-11-23). "Jesus wept … oh, it's bad plumbing. Indian rationalist targets 'miracles'". The Guardian. ISSN 0261-3077. Retrieved 2019-09-25.
  5. "Withdraw case against Sanal – John Dayal, Veteran journalist and member, National Integration Council – The Sunday Indian". www.thesundayindian.com. Archived from the original on 2019-10-27. Retrieved 2019-10-27.
  6. "'Rampal is a fraudster who exploits the gullible common man'". Hindustan Times. 19 November 2014. Retrieved 6 February 2023.
  7. "Miracle in Irla brings Christians, Hindus and Muslims together in prayer". www.asianews.it. 14 March 2012. Retrieved 28 October 2019.
  8. "Church reacts to Irla cross incident | Mumbai News – Times of India". The Times of India (in ಇಂಗ್ಲಿಷ್). The Times of India. 12 March 2012. Retrieved 28 October 2019.
  9. White, Jon. "Miracle buster: Why I traced holy water to leaky drain". New Scientist. Retrieved 2019-09-25.
  10. "Why Jesus wept in Mumbai: The church versus the rationalist". Firstpost. 28 November 2012. Retrieved 2019-09-25.
  11. ೧೧.೦ ೧೧.೧ ೧೧.೨ Dissanayake, Samanthi (2014-06-03). "The miracle-buster afraid to go home". BBC. Retrieved 2019-09-25.
  12. "Indian rationalists use Facebook to fight intolerance". BBC. 2015-10-20. Retrieved 2019-09-25.
  13. Brady, Kathy (July 2012). "Erlich, Radio Utopia: Postwar Audio Documentary in the Public Interest". Journal of Radio & Audio Media. 19 (2): 322–324. doi:10.1080/19376529.2012.722493. ISSN 1937-6529.
  14. Priyanka Dube (4 Dec 2012). "Indian rationalist stays in Finland fearing arrest for hurting religious sentiments". News18. Archived from the original on 8 December 2012. Retrieved 4 November 2019.
  15. "A Matter of Very Great Concern". archive.randi.org. Retrieved 2019-09-25.
  16. "Support pours in for Indian rationalist forced to live in Finland". News18. Retrieved 2019-09-25.