ಮಿಸ್ಸಿಂಗ್ ಲಿಂಕ್
ವಿಕಿಪೀಡಿಯ ಇಂದ
ಪೂರ್ಣಚಂದ್ರ ತೇಜಸ್ವಿಯವರ ಕೃತಿ.
ನಾನು ತೇಜಸ್ವಿಯವರ ಎಲ್ಲಾ ಕೃತಿಗಳ ಅಭಿಮಾನಿ. ಅವರ ಪುಸ್ತಕ ದೊರಕಿತೆಂದರೆ. ಈ ಪ್ರಪಂಚವನ್ನೇ ಮರೆತು ಬಿಡ್ತೀನಿ. ಅವರು ಪರಿಚಯವಾದದ್ದು ಕರ್ವಾಲೋ ಪುಸ್ತಕದ ಮೂಲಕ. ಆಗ ನಾನಿನ್ನೂ ಒಂಭತ್ತನೇ ತರಗತಿ ಓದುತ್ತಿದ್ದೆ. ಆಗ ನನ್ನ ಸ್ನೇಹಿತೆಯ ಅಣ್ಣ ಪಿಯುಸಿ ಓದುತ್ತಿದ್ದರು. ಅವರಿಗೆ ಈ ಪುಸ್ತಕ ಪಠ್ಯವಾಗಿತ್ತು. ಆಗ ಓದಿದ ಪುಸ್ತಕ. ಆಗ ನನಗೆ ಕುವೆಂಪು ಅವರ ಮಗ ಎಂದು ಕೂಡ ಗೊತ್ತಿರಲಿಲ್ಲ. ಆಗಲೇ ನಾನು ಅಭಿಮಾನಿಯಾಗಿ ಬಿಟ್ಟೆ. ಅವರ ಅನೇಕ ಪುಸ್ತಕಗಳು ಪರಿಸರದ ಕಥೆ, ಅಲೆಮಾರಿಯ ಅಂಡಮಾನ್, ಮಿಸ್ಸಿಂಗ್ ಲಿಂಕ್, ಅಣ್ಣನ ನೆನಪು, ಕಿರಗೂರಿನ ಗಯ್ಯಾಳಿಗಳು, ಚಿದಂಬರ ರಹಸ್ಯ ಇನ್ನೂ ಅನೇಕ ಕೃತಿಗಳನ್ನು ಓದಿದ್ದೇನೆ ಮತ್ತೆ ಮತ್ತೆ ಓದುತ್ತಲೇ ಇದ್ದೇನೆ. ಪ್ರತಿದಿನ ಹೊಸದಾಗಿ ಓದಿಸಿಕೊಂಡು ಹೋಗುವ ಶಕ್ತಿ ಹೊಂದಿವೆ. ಹಾಸ್ಯ, ವೈಗ್ನಾನಿಕ, ವಿವರ, ವಿಶೇಷ ಬರೆಯುವ ರೀತಿ ಎಲ್ಲವನ್ನೂ ಒಳಗೊಂಡ ಅಪರೂಪದ ಕೃತಿಗಳು. ಅವರ ಕನ್ನಡ ಸೇವೆ ಇನ್ನೂ ಮುಂದುವರೆಯಬೇಕಿತ್ತು.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |