ಮಾಛ್ಛು ಪಿಛ್ಛು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚೀನಿಯರು ಕ್ರಿ.ಪೂ ೮ನೇ ಶತಮಾನದ ಸುಮಾರಿನ ವಸಂತಋತು ಮತ್ತು ಶರದೃತುವಿನ ಅವಧಿಯ ಹೊತ್ತಿಗಾಗಲೇ ಗೋಡೆ-ಕಟ್ಟುವ ಕಸುಬಿನಲ್ಲಿ ಚೆನ್ನಾಗಿ ಪಳಗಿದ್ದರು. ಕ್ರಿ.ಪೂ. ೫ನೇ ಶತಮಾನದ ಕ್ರಿ.ಪೂ ೨೨೧ರ ಅವಧಿಯ ರಾಜ್ಯಗಳು ಪರಸ್ಪರ ಕಚ್ಚಾಡುತ್ತಿದ್ದ ಅವಧಿಯ ಸಮಯದಲ್ಲಿ, ಕ್ವಿ, ಯಾನ್‌ ಮತ್ತು ಝಾವೋ ಸಂಸ್ಥಾನಗಳೆಲ್ಲವೂ ತಂತಮ್ಮ ಗಡಿಪ್ರದೇಶಗಳನ್ನು ರಕ್ಷಿಸಿಕೊಳ್ಳುವ ಸಲುವಾಗಿ ವ್ಯಾಪಕವಾದ ಕೋಟೆ-ನಿರ್ಮಾಣಗಳಲ್ಲಿ ತೊಡಗಿಸಿಕೊಂಡವು. ಕತ್ತಿಗಳು ಮತ್ತು ಈಟಿಗಳಂಥ ಸಣ್ಣ ಶಸ್ತ್ರಾಸ್ತ್ರಗಳ ದಾಳಿಯನ್ನು ತಡೆದುಕೊಳ್ಳಲು ನಿರ್ಮಿಸಲಾಗಿದ್ದ ಈ ಗೋಡೆಗಳು, ಹಲಗೆಯ ಚೌಕಟ್ಟುಗಳ ನಡುವೆ ಮಣ್ಣು ಮತ್ತು ಜಲ್ಲಿಕಲ್ಲುಗಳನ್ನು ತುಳಿಯುವ ಮೂಲಕ ಪ್ರಾಯಶಃ ರೂಪಿಸಲ್ಪಟ್ಟವು.

ಪರಸ್ಪರ ವಿರೋಧಿಗಳಾಗಿದ್ದ ಎಲ್ಲ ಸಂಸ್ಥಾನಗಳನ್ನು ಗೆಲ್ಲುವ ಮೂಲಕ ಕ್ವಿನ್‌ ಷಿ ಹುವಾಂಗ್‌ ಎಂಬಾತ ಕ್ರಿ.ಪೂ ೨೨೧ರಲ್ಲಿ ಚೀನಾವನ್ನು ಒಗ್ಗೂಡಿಸಿ, ಕ್ವಿನ್‌ ರಾಜವಂಶದ ಸ್ಥಾಪನೆಗೆ ಕಾರಣನಾದ. ಕೇಂದ್ರೀಕೃತ ಆಡಳಿತವನ್ನು ವಿಧಿಸುವ ಹಾಗೂ ಊಳಿಗಮಾನ್ಯ ಮದ್ಧತಿಯ ಧಣಿಗಳು ಮತ್ತೆ ತಲೆಯೆತ್ತುವುದನ್ನು ತಪ್ಪಿಸುವ ಆಶಯದಿಂದ, ಹಿಂದಿದ್ದ ಸಂಸ್ಥಾನದ ಗಡಿಗಳುದ್ದಕ್ಕೂ ತನ್ನ ಸಾಮ್ರಾಜ್ಯವನ್ನು ವಿಭಜಿಸಿದ್ದ ಗೋಡೆಯ ವಿಭಾಗಗಳ ನಾಶಕ್ಕಾಗಿ ಆತ ಆದೇಶಿಸಿದ. ಉತ್ತರ ಭಾಗದಿಂದ ಬರುವ ಕ್ಸಿಯಾಂಗ್ನು ಜನರಿಂದಾಗುವ ಆಕ್ರಮಣಗಳಿಗೆ ಪ್ರತಿಯಾಗಿ ತನ್ನ ಸಾಮ್ರಾಜ್ಯವನ್ನು ರಕ್ಷಿಸಿಕೊಳ್ಳಲು, ಸಾಮ್ರಾಜ್ಯದ ಉತ್ತರ ಭಾಗದ ಹೊಸ ಗಡಿನಾಡಿನ ಉದ್ದಕ್ಕೂ ಇರುವ ಉಳಿದ ಕೋಟೆ-ನಿರ್ಮಾಣಗಳನ್ನು ಸಂಪರ್ಕಿಸಲು ಹೊಸ ಗೋಡೆಯೊಂದನ್ನು ನಿರ್ಮಿಸಲು ಆತ ಆದೇಶಿಸಿದ. ಸದರಿ ನಿರ್ಮಾಣ ಕಾಮಗಾರಿಗಾಗಿ ಅಗತ್ಯವಿರುವ ಬೃಹತ್ ಪ್ರಮಾಣದ ಸಾಮಗ್ರಿಗಳನ್ನು ಸಾಗಣೆಮಾಡುವುದು ತುಂಬಾ ಕಷ್ಟದಾಯಕವಾಗಿತ್ತು. ಆದ್ದರಿಂದ ಕಟ್ಟಡ ನಿರ್ಮಾಣಮಾಡುವವರು ಯಾವಾಗಲೂ ಸ್ಥಳೀಯ ಸಂಪನ್ಮೂಲಗಳನ್ನೇ ಬಳಸಲು ಪ್ರಯತ್ನಿಸಿದರು. ಪರ್ವತಗಳಿಂದ ತರಿಸಲಾದ ಕಲ್ಲುಗಳನ್ನು ಪರ್ವತ ಶ್ರೇಣಿಗಳ ಮೇಲೆ ಬಳಸಲಾದರೆ, ದಮ್ಮಸು ಮಾಡಿದ ಮಣ್ಣನ್ನು ಸಮತಲದ ಭೂಮಿಯಲ್ಲಿನ ನಿರ್ಮಾಣ ಕಾಮಗಾರಿಗಾಗಿ ಬಳಸಲಾಯಿತು. ಕ್ವಿನ್‌ ರಾಜವಂಶದ ಗೋಡೆಗಳ ಕರಾರುವಾಕ್ಕಾದ ಉದ್ದ ಮತ್ತು ನಿರ್ಮಾಪಥವನ್ನು ಸೂಚಿಸುವ ಯಾವುದೇ ಐತಿಹಾಸಿಕ ದಾಖಲೆಗಳು ಈಗ ಉಳಿದಿಲ್ಲ. ಪ್ರಾಚೀನ ಗೋಡೆಗಳ ಬಹುಭಾಗವು ಶತಮಾನಗಳು ಉರುಳುತ್ತಿದ್ದಂತೆ ಸವಕಳಿಗೀಡಾಗಿದ್ದು, ಕೇವಲ ಸ್ವಲ್ಪೇ ಸ್ವಲ್ಪ ವಿಭಾಗಗಳು ಇಂದು ಉಳಿದುಕೊಂಡಿವೆ. ನಂತರದಲ್ಲಿ, ಹಾನ್‌, ಸೂಯಿ, ಉತ್ತರ ಭಾಗದ ಮತ್ತು ಜಿನ್‌ ರಾಜವಂಶಗಳೆಲ್ಲವೂ ಉತ್ತರ ಭಾಗದ ದಾಳಿಕಾರರುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿ, ಅಪಾರ ವೆಚ್ಚದಲ್ಲಿ ಸದರಿ ಮಹಾನ್‌ ಗೋಡೆಯ ವಿಭಾಗಗಳನ್ನು ದುರಸ್ತಿಗೊಳಿಸಿವೆ, ಮರುನಿರ್ಮಾಣ ಮಾಡಿವೆ, ಇಲ್ಲವೇ ವಿಸ್ತರಣೆ ಮಾಡಿವೆ.

ಮಹಾನ್‌ ಗೋಡೆಯ ಪರಿಕಲ್ಪನೆಯು ಮಿಂಗ್‌ ರಾಜವಂಶದ ಅವಧಿಯಲ್ಲಿ ಮತ್ತೊಮ್ಮೆ ಮರುಹುಟ್ಟು ಪಡೆಯಿತು. 1449ರಲ್ಲಿ ನಡೆದ ಟುಮುವಿನ ಕದನದಲ್ಲಿ ಓಯಿರಾಟ್‌ಗಳಿಂದ ಮಿಂಗ್‌ ಸೇನೆಯು ಸೋತ ನಂತರ ಈ ಬೆಳವಣಿಗೆ ಕಂಡುಬಂತು. ಪರಂಪರೆಯ ಕದನಗಳ ನಂತರ, ಮಂಚೂರಿಯಾದ ಮತ್ತು ಮಂಗೋಲಿಯಾದ ಬುಡಕಟ್ಟು ಜನಾಂಗದವರ ಮೇಲೆ ಒಂದು ಸ್ಪಷ್ಟವಾದ ಮೇಲುಗೈ ಸಾಧಿಸುವಲ್ಲಿ ಮಿಂಗ್‌ ರಾಜವಂಶವು ವಿಫಲಗೊಂಡಿತ್ತು, ಮತ್ತು ಸುದೀರ್ಘಾವಧಿಯ ತಿಕ್ಕಾಟವು ಸಾಮ್ರಾಜ್ಯದ ಮೇಲೆ ಒಂದು ದೊಡ್ಡ ನಷ್ಟವನ್ನುಂಟುಮಾಡುತ್ತಿತ್ತು. ಚೀನಾದ ಉತ್ತರ ಭಾಗದ ಗಡಿಯ ಉದ್ದಕ್ಕೂ ಗೋಡೆಗಳನ್ನು ನಿರ್ಮಿಸುವ ಮೂಲಕ ಅಲೆಮಾರಿ ಬುಡಕಟ್ಟು ಜನಾಂಗದವರನ್ನು ಆಚೆಯಲ್ಲೇ ಇಡಲು ಮಿಂಗ್‌ ರಾಜವಂಶವು ಒಂದು ಹೊಸ ಸಮರತಂತ್ರವನ್ನು ಅಳವಡಿಸಿಕೊಂಡಿತು. ಓರ್ಡಸ್‌ ಮರುಭೂಮಿಯಲ್ಲಿ ನೆಲೆಗೊಂಡಿದ್ದ ಮಂಗೋಲರ ನಿಯಂತ್ರಣವನ್ನು ಪರಿಗಣಿಸಿ, ಹುವಾಂಗ್‌ ಹಿಯ ತಿರುವನ್ನು ತನ್ನೊಂದಿಗೆ ಸಂಯೋಜಿಸಿಕೊಳ್ಳುವ ಬದಲು ಮರುಭೂಮಿಯ ದಕ್ಷಿಣ ಭಾಗದ ಅಂಚನ್ನು ಸದರಿ ಗೋಡೆಯು ಅನುಸರಿಸಿತು. 1907ರಲ್ಲಿನ ಮಹಾನ್‌ ಗೋಡೆಯ ಛಾಯಾಚಿತ್ರ

ಮುಂಚಿನ ಕ್ವಿನ್‌ ಕೋಟೆ-ನಿರ್ಮಾಣಗಳಿಗಿಂತ ಭಿನ್ನವಾಗಿದ್ದ ಮಿಂಗ್‌ ನಿರ್ಮಾಣ ಕಾಮಗಾರಿಯು ಸದೃಢವಾಗಿತ್ತು ಮತ್ತು ಹೆಚ್ಚು ವಿಸ್ತಾರವಾಗಿತ್ತು. ದಮ್ಮಸುಮಾಡಿದ ಮಣ್ಣಿನ ಬದಲಿಗೆ ಇಟ್ಟಿಗೆಗಳು ಮತ್ತು ಕಲ್ಲನ್ನು ಬಳಸಿದ್ದು ಇದಕ್ಕೆ ಕಾರಣವಾಗಿತ್ತು. ವರ್ಷಗಳಾಗುತ್ತಿದ್ದಂತೆ ಮಂಗೋಲರ ಆಕ್ರಮಣಗಳು ಆಗಿಂದಾಗ್ಗೆ ಮುಂದುವರಿಯುತ್ತಲೇ ಹೋಗಿದ್ದರಿಂದ, ಗೋಡೆಗಳನ್ನು ದುರಸ್ತಿ ಮಾಡಲು ಹಾಗೂ ಬಲಪಡಿಸಲು ಮಿಂಗ್‌ ರಾಜವಂಶವು ಗಣನೀಯ ಪ್ರಮಾಣದಲ್ಲಿ ಸಂಪನ್ಮೂಲಗಳನ್ನು ಈಕಡೆಗೆ ವಿನಿಯೋಗಿಸಿತು. ನಿರ್ದಿಷ್ಟವಾಗಿ ಹೇಳುವುದಾದರೆ, ಬೀಜಿಂಗ್‌ನ ಮಿಂಗ್‌ ರಾಜಧಾನಿಗೆ ಸಮೀಪದ ವಿಭಾಗಗಳು ಸದೃಢವಾಗಿದ್ದವು.[ಉಲ್ಲೇಖದ ಅಗತ್ಯವಿದೆ]

1440ರ ದಶಕ–1460ರ ದಶಕದ ಅವಧಿಯಲ್ಲಿ, "ಲಿಯಾವೊಡಾಂಗ್‌ ಗೋಡೆ" ಎಂದು ಕರೆಯಲ್ಪಟ್ಟ ಗೋಡೆಯನ್ನೂ ಸಹ ಮಿಂಗ್ ರಾಜವಂಶವು ನಿರ್ಮಿಸಿತು. ಮಹಾನ್‌ ಗೋಡೆಗೆ (ಒಂದು ಅರ್ಥದಲ್ಲಿ ಈ ಗೋಡೆಯು ಮಹಾನ್‌ ಗೋಡೆಯ ವಿಸ್ತರಣೆಯೇ ಆಗಿತ್ತು) ಹೋಲುವ ರೀತಿಯಲ್ಲಿಯೇ ಕಾರ್ಯಾತ್ಮಕ ಅಥವಾ ಪ್ರಯೋಜನಾತ್ಮಕವಾಗಿದ್ದರೂ ಸಹ, ನಿರ್ಮಾಣಶೈಲಿಯಲ್ಲಿ ಹೆಚ್ಚು ಪ್ರಾಥಮಿಕ ಅಥವಾ ಕೆಳದರ್ಜೆಯನ್ನು ಹೊಂದಿತ್ತು. ಲಿಯಾವೊಡಾಂಗ್‌ ಪ್ರಾಂತ್ಯದ ಕೃಷಿ ಪ್ರಧಾನ ಭೂಭಾಗವನ್ನು ಸುತ್ತುವರಿಯುವ ಮೂಲಕ, ಲಿಯಾವೊಡಾಂಗ್‌ ಗೋಡೆಯು ಅದನ್ನು ವಾಯವ್ಯ ದಿಕ್ಕಿನಿಂದ ಬರುವ ಜರ್ಚೆಡ್‌-ಮಂಗೋಲ್‌ ಓರಿಯಾನ್‌ಘಾನ್‌ ಮತ್ತು ಉತ್ತರ ಭಾಗದಿಂದ ಬರುವ ಜಿಯಾಂಝೌ ಜರ್ಚೆನ್ಸ್‌ರ ಸಂಭಾವ್ಯ ಹಠಾತ್‌ ದಾಳಿಗೆ ಪ್ರತಿಯಾಗಿ ರಕ್ಷಿಸುತ್ತಿತ್ತು. ಲಿಯಾವೊಡಾಂಗ್‌ ಗೋಡೆಯ ಕೆಲವೊಂದು ಭಾಗಗಳಲ್ಲಿ ಕಲ್ಲುಗಳು ಮತ್ತು ಹಾಸುಬಿಲ್ಲೆಗಳನ್ನು ಬಳಸಲಾಗಿತ್ತಾದರೂ, ಅದರ ಬಹುಭಾಗವು ವಾಸ್ತವವಾಗಿ ಒಂದು ಮಣ್ಣಿನ ಮೋಟುಗೋಡೆಯಾಗಿದ್ದು ಎರಡೂ ಪಾರ್ಶ್ವಗಳಲ್ಲಿ ಕಂದಕಗಳನ್ನು ಹೊಂದಿದ್ದವು.[೫]

ಮಿಂಗ್‌ ರಾಜವಂಶದ ಅಂತ್ಯದ ವೇಳೆಗೆ, 1600ರ ಸುಮಾರಿಗೆ ಪ್ರಾರಂಭವಾದ ಮಂಚು ಆಕ್ರಮಣಗಳಿಗೆ ಪ್ರತಿಯಾಗಿ ಸಾಮ್ರಾಜ್ಯವನ್ನು ರಕ್ಷಿಸಿಕೊಳ್ಳುವಲ್ಲಿ ಮಹಾನ್‌ ಗೋಡೆಯು ನೆರವಾಯಿತು. ಯುವಾನ್‌ ಚೊಂಘುವಾನ್‌ ಎಂಬಾತನ ಸೇನಾ ನಾಯಕತ್ವದಡಿಯಲ್ಲಿ, ಅತೀವವಾದ ರಕ್ಷಣೆಯನ್ನು ಒದಗಿಸಲಾಗಿದ್ದ ಷಾನ್‌ಹೈಗುವಾನ್‌ ಕಣಿವೆಯಲ್ಲಿ ಮಂಚುಗಳನ್ನು ಹಿಮ್ಮೆಟ್ಟಿಸುವ ಮೂಲಕ, ಚೀನಾದ ಪ್ರಧಾನ ಭೂಭಾಗಕ್ಕೆ ಮಂಚುಗಳು ಪ್ರವೇಶಿಸುವುದನ್ನು ತಡೆಯಲಾಯಿತು. ಅಂತಿಮವಾಗಿ ಮಂಚುಗಳು 1644ರಲ್ಲಿ ಮಹಾನ್‌ ಗೋಡೆಯನ್ನು ದಾಟಿಬರುವಲ್ಲಿ ಯಶಸ್ವಿಯಾದರು. ಷುನ್‌ ರಾಜವಂಶದ ಆಡಳಿತಗಾರರ ಕಾರ್ಯಚಟುವಟಿಕೆಗಳನ್ನು ಇಷ್ಟಪಡದಿದ್ದ ವು ಸಂಗುಯಿ ಎಂಬ ಓರ್ವ ಮಿಂಗ್‌ ಗಡಿರಕ್ಷಣಾ ಮುಖ್ಯಸ್ಥನಿಂದ ಷಾನ್‌ಹೈಗುವಾನ್‌ನಲ್ಲಿನ ಬಾಗಿಲುಗಳು ತೆರೆಯಲ್ಪಟ್ಟಿದ್ದರಿಂದಾಗಿ, ಮಂಚುಗಳು ಮಹಾನ್‌ ಗೋಡೆಯನ್ನು ದಾಟಲು ಸಾಧ್ಯವಾಯಿತು. ಮಂಚುಗಳು ಕ್ಷಿಪ್ರವಾಗಿ ಬೀಜಿಂಗ್‌ನ್ನು ತಮ್ಮ ವಶಕ್ಕೆ ತೆಗೆದುಕೊಂಡರು, ಮತ್ತು ಹೊಸದಾಗಿ ಸ್ಥಾಪನೆಗೊಂಡಿದ್ದ ಷುನ್‌ ರಾಜವಂಶವನ್ನು ಮತ್ತು ಉಳಿದಿದ್ದ ಮಿಂಗ್‌ ಪ್ರತಿರೋಧಕತೆಯನ್ನು ಸೋಲಿಸಿದರು. ಅಲ್ಲಿಂದ ಕ್ವಿಂಗ್‌ ರಾಜವಂಶವು ಸ್ಥಾಪನೆಯಾಯಿತು.

ಇಲ್ಲಿಯವರೆಗೆ ಕಂಡುಹಿಡಿಯದ, ಮಿಂಗ್‌ ರಾಜವಂಶದ ಅವಧಿಯಲ್ಲಿ ಕಟ್ಟಲಾದ ಹೆಚ್ಚುವರಿ 290 ಕಿಲೋಮೀಟರುಗಳಷ್ಟು (180 ಮೈಲುಗಳು) ಗೋಡೆಯ ಭಾಗಗಳು 2009ರಲ್ಲಿ ಪತ್ತೆಯಾದವು. ಹೊಸದಾಗಿ ಕಂಡುಹಿಡಿಯಲ್ಪಟ್ಟ ವಿಭಾಗಗಳು ಉತ್ತರ ಭಾಗದ ಲಯೋನಿಂಗ್‌ ಪ್ರಾಂತ್ಯದಲ್ಲಿರುವ ಹುಷಾನ್‌ ಪರ್ವತಗಳಿಂದ ಪಶ್ಚಿಮ ಭಾಗದ ಗನ್ಸು ಪ್ರಾಂತ್ಯದಲ್ಲಿನ ಜಿಯಾಯುಗುವಾನ್‌ವರೆಗೂ ಹಬ್ಬಿವೆ. ಶುಷ್ಕ ವಲಯದಾದ್ಯಂತ ಬೀಸಿದ ಮರಳ ಬಿರುಗಾಳಿಗಳಿಂದಾಗಿ ಕಾಲಾನಂತರದಲ್ಲಿ ಈ ವಿಭಾಗಗಳು ಮುಳುಗಿಹೋದವು.[೬]

ಕ್ವಿಂಗ್‌ ಆಡಳಿತದಡಿಯಲ್ಲಿ, ಚೀನಾದ ಗಡಿಗಳು ಗೋಡೆಗಳಿಂದಾಚೆಗೆ ವಿಸ್ತರಣೆಗೊಂಡವು ಮತ್ತು ಸಾಮ್ರಾಜ್ಯಕ್ಕೆ ಮಂಗೋಲಿಯಾವು ಸೇರ್ಪಡೆಗೊಂಡಿತು. ಆದ್ದರಿಂದ ಮಹಾನ್‌ ಗೋಡೆಯ ನಿರ್ಮಾಣ ಕಾಮಗಾರಿ ಮತ್ತು ದುರಸ್ತಿ ಕಾರ್ಯಗಳು ಸ್ಥಗಿತಗೊಂಡವು.