ಮಲಾಲ ಯೂಸಫ್ ಝಾಯಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮಲಾಲ್ ಯೂಸಫ್ ಝಾಯಿ
ಜನನ ೧೨ ಜುಲೈ ೧೯೯೭
ಮಿಂಗೋರ, ಪಾಕಿಸ್ತಾನ್
ವಾಸ ಸ್ಥಳ ಬರ್ಮಿಂಘಮ್, ಇಂಗ್ಲಂಡ್, ಯು.ಕೆ
ರಾಷ್ಟ್ರೀಯತೆ ಪಾಕಿಸ್ತಾನಿ
ವೃತ್ತಿ ಹೆಣ್ಣಿನ ಹಕ್ಕುಗಳ ಬೆಂಬಲ, ಶಿಕ್ಷಣ ಕಾರ್ಯಕರ್ತೆ
ಧಾರ್ಮಿಕತೆ ಸನ್ನಿ ಇಸ್ಲಾಮ್
ಪೋಷಕರು ಜ಼ಿಯಯುದ್ದಿನ್ ಯೂಸಫ್ ಝಾಯಿ
ಪ್ರಶಸ್ತಿ(ಗಳು) ನ್ಯಾಷಿನಲ್ ಯುತ್ ಪೀಸ್ ಪ್ರೈಜ್
ಸಖರೊವ್ ಪ್ರೈಜ್
ಸಿಮೊನ್ ದೆ ಬ್ಯುವಿಯರ್ ಪ್ರೈಜ್

'ಮಲಾಲ ಯೂಸಫ್ ಝಾಯಿ',(ಜ: ೧೨ ಜುಲೈ, ೧೯೯೭)[೧] ಪಾಕಿಸ್ತಾನದ ಖೈಬರ್ ಪಖ್ತೂನ್ಖ್ವಾ ಪ್ರಾಂತ್ಯದ 'ಸ್ವಾತ್ ಜಿಲ್ಲೆ'ಯ ಮಿಂಗೋರಗ್ರಾಮದ ಒಂದು ಶಾಲೆಯ ವಿದ್ಯಾರ್ಥಿನಿ,ಮತ್ತು ಶಿಕ್ಷಣ ಕಾರ್ಯಕರ್ತೆ. ಹೆಣ್ಣುಮಕ್ಕಳು ಶಾಲೆಗೆ ಹೋಗುವುದನ್ನು ತಾಲಿಬಾನ್ ಸಂಘಟನೆಯು ನಿಷೇಧಿಸಿರುವ 'ಸ್ವಾತ್ ಕಣಿವೆ'ಯಲ್ಲಿನ ಹುಡುಗಿಯರ ಶಿಕ್ಷಣ, ಮತ್ತು ಮಹಿಳಾ ಹಕ್ಕುಗಳಪರ ತನ್ನ ಕ್ರಿಯಾತ್ಮಕ ಹೋರಾಟಕ್ಕಾಗಿ ಅವಳು ಹೆಸರುವಾಸಿಯಾಗಿದ್ದಾಳೆ. ೨೦೧೩ರಲ್ಲಿ ಮಲಾಲ ಸಖರೊವ್ ಪ್ರೈಜ್ ಫಾರ್ ಫ್ರೀಡಮ್ ಆಫ್ ಥಾಟ್(ಯೋಚನೆಯ ಸ್ವಾತಂತ್ರ್ಯಕ್ಕೆ ಸಖರೊವ್ ಪ್ರಶಸ್ತಿ) ದೊರಕಿತು.[೨]

ಮಹಿಳೆಯರ ಹಕ್ಕುಗಳ ಪರ ಹೋರಾಟಗಾರ್ತಿ[ಬದಲಾಯಿಸಿ]

೨೦೦೯ ರ ಆರಂಭದಲ್ಲಿ, ತನ್ನ ೧೧-೧೨ನೇ ವಯಸ್ಸಿನಲ್ಲಿ, ಅವಳು'ಬಿಬಿಸಿ'ಗಾಗಿ ಒಂದು ಗುಪ್ತನಾಮದ ಅಡಿಯಲ್ಲಿ ತಾಲಿಬಾನ್ ಆಡಳಿತದಲ್ಲಿ ತನ್ನ ಜೀವನವನ್ನು ವಿವರಿಸುತ್ತ ಕಣಿವೆಯ ಹಿಡಿತಕ್ಕಾಗಿ ತಾಲಿಬಾನಿಗಳ ಪ್ರಯತ್ನಗಳನ್ನು ಮತ್ತು ಬಾಲಕಿಯರ ಶಿಕ್ಷಣದ ಪ್ರಚಾರದ ಕುರಿತು ತನ್ನ ಅನಿಸಿಕೆಗಳನ್ನು ತಿಳಿಸುವ ಒಂದು ಬ್ಲಾಗ್ ಬರೆದಳು. [೩]

ನೋಬೆಲ್ ಶಾಂತಿ ಪ್ರಶಸ್ತಿಗೆ ಸೂಚನೆ[ಬದಲಾಯಿಸಿ]

ಮುಂದಿನ ಬೇಸಿಗೆಯಲ್ಲಿ, ಅವಳ ಬದುಕನ್ನು ಚಿತ್ರೀಕರಿಸಿದ 'ನ್ಯೂಯಾರ್ಕ್ ಟೈಮ್ಸ್ ನ ಸಾಕ್ಷ್ಯಚಿತ್ರ'ವು ಸಿದ್ಧವಾಯಿತು. ಮಲಾಲಳು ಮುದ್ರಣ ಮತ್ತು ದೂರದರ್ಶನ ಮಾಧ್ಯಮಗಳಲ್ಲಿ ಸಂದರ್ಶನಗಳನ್ನು ಕೊಡುತ್ತ ಪ್ರಾಮುಖ್ಯತೆ ಪಡೆದಳು.ಸ್ವಾತ್ ಜಿಲ್ಲಾ ಮಕ್ಕಳ ಸಭೆಯ ಅಧ್ಯಕ್ಷಸ್ಥಾನವನ್ನು ಪಡೆದಳು. ಅವಳ ಹೆಸರನ್ನು ಡೆಸ್ಮಂಡ್ ಟುಟುರವರು ಅಂತಾರಾಷ್ಟ್ರೀಯ ಮಕ್ಕಳ ಶಾಂತಿ ಪ್ರಶಸ್ತಿಗೆ ಸೂಚಿಸಿದರು. ಅವಳು ಪಾಕಿಸ್ತಾನದ ಮೊದಲ ರಾಷ್ಟ್ರೀಯ ಯುವ ಶಾಂತಿ ಪ್ರಶಸ್ತಿ ಗಳಿಸಿದಳು .ಕೆನಡಾದ ಮಂತ್ರಿ ಸೇರಿದಂತೆ ಅನೇಕ ಪ್ರಮುಖ ವ್ಯಕ್ತಿಗಳು,ನೊಬೆಲ್ ಶಾಂತಿ ಪ್ರಶಸ್ತಿಗೆ ಅವಳ ಹೆಸರು ಸೂಚಿಸುವ ಮನವಿಯನ್ನು ಬೆಂಬಲಿಸಿದ್ದಾರೆ.

ತಾಲಿಬಾನ್ ಬಂದೂಕಧಾರಿಗಳಿಂದ ಘಾಸಿ[ಬದಲಾಯಿಸಿ]

'ಮಲಾಲ ಯೂಸಫ್ ಝಾಯಿ ಓವೆಲ್ ಆಫೀಸಿನಲ್ಲಿ' ೧೧.೧೦.೨೦೧೩

೯ ಅಕ್ಟೋಬರ್ ೨೦೧೨ ರಂದು ಅವಳು ಒಂದು ಶಾಲಾ ಬಸ್ ನಲ್ಲಿ ಮನೆಗೆ ಹಿಂದಿರುಗುತ್ತಿರುವಾಗ ,ತಾಲಿಬಾನ್ ಬಂದೂಕುಧಾರಿಗಳು ಅವಳನ್ನು ಕೊಲ್ಲುವ ಪ್ರಯತ್ನದಲ್ಲಿ ತಲೆ ಮತ್ತು ಕುತ್ತಿಗೆಗೆ ಗುಂಡು ಹಾರಿಸಿದರು.[೪]ನಂತರದ ದಿನಗಳಲ್ಲಿ, ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಮತ್ತು ತುಂಬಾ ವಿಷಮಸ್ಥಿತಿಯಲ್ಲಿ ಇದ್ದಳು. , ಯುನೈಟೆಡ್ ಕಿಂಗ್ಡಮ್ ನ ಒಂದು ಆಸ್ಪತ್ರೆಗೆ ಸಾಗಿಸಲು ಅನುವಾಗುವಷ್ಟು ಅವಳ ಸ್ಥಿತಿ ಸಾಕಷ್ಟು ಸುಧಾರಿಸಿತು. ಅಕ್ಟೋಬರ್ ೧೨ ರಂದು , ಪಾಕಿಸ್ತಾನದಲ್ಲಿ 50 ಇಸ್ಲಾಮಿಕ್ ಪಾದ್ರಿಗಳ ಒಂದು ಗುಂಪು, ಅವಳ ಕೊಲ್ಲಲು ನಡೆಸಿದ ಪ್ರಯತ್ನದ ವಿರುದ್ಧ ಫತ್ವಾ ಒಂದನ್ನು ಹೊರಡಿಸಿತು. ಆದರೆ ತಾಲಿಬಾನು ಮಲಾಲ ಮತ್ತು ಅವಳ ತಂದೆ, ಝಿಯಾಉದ್ದೀನರನ್ನು ಕೊಲ್ಲುವ ತನ್ನ ಉದ್ದೇಶವನ್ನು ಪುನರುಚ್ಚರಿಸಿದೆ.

ವಿಶ್ವದ ಚಿಂತಕರ ಪಟ್ಟಿಯಲ್ಲಿ[ಬದಲಾಯಿಸಿ]

ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕಿಗೆ ಹೋರಾಡುತ್ತಿರುವ ಪಾಕೀಸ್ತಾನದ ಬಾಲಕಿ,' ಮಲಾಲಾ ಯೂಸುಫ್ ಝಾಯಿ', ವಿಶ್ವದ ೧೦೦ ಚಿಂತಕರ ಪಟ್ಟಿಯಲ್ಲಿ ೬ ನೆಯ ಸ್ಥಾನದಲ್ಲಿದ್ದಾರೆ.'ಮಯನ್ಮಾರ್ ದೇಶದ ಪ್ರಜಾಪ್ರಭುತ್ವಪರ ಹೋರಾಟಗಾರ್ತಿ ಆಂಗ್ ಸಾಂಗ್ ಸೂಕಿ,' ಮೊದಲಸ್ಥಾನದಲ್ಲಿ, ಹಾಗೂ ವಿದೇಶಾಂಗ ನೀತಿಗೆ ಸಂಬಂಧಿಸಿದ ನಿಯತಕಾಲಿಕೆಯ ಪಟ್ಟಿಯಲ್ಲಿ 'ಅಮೆರಿಕದ ಮೈಕ್ರೋಸಾಫ್ಟ್ ಕಂಪೆನಿಯ ಸ್ಥಾಪಕ, ಬಿಲ್ ಗೇಟ್ಸ್ ೫ ನೆಯ ಸ್ಥಾನದಲ್ಲಿ' ಮತ್ತು '೭ ನೆಯ ಸ್ಥಾನದಲ್ಲಿ ಅಮೆರಿಕದ ಪ್ರಸಕ್ತ ಅಧ್ಯಕ್ಷ ಬರಾಕ್ ಒಬಾಮ', ಇದ್ದಾರೆ.

ಮಲಾಲ ದಿನಾಚರಣೆ[ಬದಲಾಯಿಸಿ]

ಮಾಜಿ ಬ್ರಿಟಿಷ್ ಪ್ರಧಾನಮಂತ್ರಿ, ಮತ್ತು ಪ್ರಸ್ತುತದಲ್ಲಿ ವಿಶ್ವಸಂಸ್ಥೆಯ ಜಾಗತಿಕ ಶಿಕ್ಷಣದ ವಿಶೇಷ ರಾಯಭಾರಿ 'ಗೋರ್ಡನ್ ಬ್ರೌನ್'ಘೋಷಣೆಯ ಪ್ರಕಾರ, "ನಾನು ಮಲಾಲ," ಎಂಬ ಘೋಷಣೆಯನ್ನು ಬಳಸಿಕೊಂಡು ಪ್ರಪಂಚದಾದ್ಯಂತ ಎಲ್ಲಾ ಮಕ್ಕಳು ೨೦೧೫ ರ ಕೊನೆಯಲ್ಲಿ ಶಾಲೆಗೆ ಹೋಗುವಂತಾಗಬೇಕು" ಎಂದು ಆಗ್ರಹಿಸಿ, 'ಮಲಾಲ ಯೂಸಫ್ ಝಾಯಿ'ಯ ಹೆಸರಿನಲ್ಲಿ 'ವಿಶ್ವಸಂಸ್ಥೆಯ ಮನವಿ'ಯೊಂದನ್ನು ಆರಂಭಿಸಿದರು.[೫] 'ಬ್ರೌನ್' ಅವರು ನವೆಂಬರ್, ೧೦ ರಂದು, ಪಾಕಿಸ್ತಾನದ ಅಧ್ಯಕ್ಷ,'ಅಸಿಫ್ ಅಲಿ ಜರ್ದಾರಿ' ಅವರ ಕೈಗೆ ಈ ಮನವಿಯನ್ನು ಸಲ್ಲಿಸಲಿದ್ದಾರೆ.ವಿಶ್ವಸಂಸ್ಥೆಯ ಕಾರ್ಯದರ್ಶಿ,'ಜನರಲ್ ಬಾನ್ ಕಿ ಮೂನ್', ರವರು July 12 ಅನ್ನು "ಮಲಾಲಾ ದಿನ" ಎಂದು ಆಚರಿಸಲಾಗುತ್ತದೆ,ಎಂದು ಘೋಷಿಸಿದ್ದಾರೆ.

ಮಲಾಲ ಶಾಲೆಗೆ[ಬದಲಾಯಿಸಿ]

ಸುಮಾರು ೨ ತಿಂಗಳು ಆಸ್ಪತ್ರೆಯಲ್ಲಿ ಅತ್ಯಂತ ದಾರುಣ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ೧೫ ವರ್ಷದ 'ಮಲಾಲ,' ಈಗ ಸಂಪೂರ್ಣಗುಣಹೊಂದಿ ಸನ್.೨೦೧೩ ರ, ಮಾರ್ಚ್ ೧೯ ರಿಂದ, ಶಾಲೆಗೆ ಹೋಗಲು ಪ್ರಾರಂಭಿಸಿದ್ದಾಳೆ. ಅವಳು ಹೋಗುತ್ತಿರುವುದು, ಅವಳು ವಾಸವಾಗಿರುವ ಮನೆಯ ಸಮೀಪದ ಮಧ್ಯ ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಮ್ ಉಪನಗರದಲ್ಲಿರುವ ಎಡ್ಗ್ ಬ್ಯಾಸ್ಟನ್ ಬಾಲಕಿಯರ ಶಾಲೆಗೆ. ಅವಳ ಶಾಲೆಗೆ ಹೋಗುವ ಕನಸು ಈಗ ನನಸಾಗಿದೆ. ಆಂಗ್ಲ ಶಾಲಾಮಕ್ಕಳು ತಮ್ಮ ೧೬ ನೆಯ ವಯಸ್ಸಿನಲ್ಲಿ, ಬರೆಯುವ ಪರೀಕ್ಷೆಗೆ ಪೂರ್ವಸಿದ್ಧವಾಗುವ ಆಶೆಯಿಂದ ಈಕ್ರಮ ಕೈಗೊಳ್ಳಲಾಗಿದೆ.[೬]

ಮಕ್ಕಳ ನೋಬೆಲ್ ಪ್ರಶಸ್ತಿಗೆ ನಾಮಾಂಕಿತ[ಬದಲಾಯಿಸಿ]

ಸನ್. ೨೦೦೦ ನೇ ಇಸವಿಯಿಂದ ಮಕ್ಕಳ ನೋಬೆಲ್ ಪ್ರಶಸ್ತಿಯೆಂದೇ ಗುರುತಿಸಲ್ಪಡುವ ವಿಶ್ವಮಕ್ಕಳ ಫ್ರಶಸ್ತಿಯನ್ನು ನೀಡಲಾಗುತ್ತಿದೆ. ಒಟ್ಟಾರೆ ೧೧೦ ವಿಶ್ವದ ರಾಷ್ಟ್ರಗಳ ೬೦ ಸಾವಿರ ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿಮೂಡಿಸುವ ದೃಷ್ಟಿಯಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. [೭]

ಪ್ರಶಸ್ತಿ ಪುರಸ್ಕಾರಗಳು[ಬದಲಾಯಿಸಿ]

  1. ನ್ಯಾಷಿನಲ್ ಯೂತ್ ಪೀಸ್ ಪ್ರೈಜ್, ೨೦೧೧[೮]
  2. ಸಿತಾರ-ಎ-ಶುಜಾತ್ (ಪಾಕಿಸ್ತಾನ್ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ), ೨೦೧೨[೯]
  3. ಮದರ್ ತೆರೇಸ ಗ್ಲೋಬಲ್ ಅವಾರ್ಡ್, ೨೦೧೨[೧೦]
  4. ನೊಬೆಲ್ ಪೀಸ್ ಪ್ರೈಜ್ ನಾಮನಿರ್ದೇಶನ, ೨೦೧೩[೧೧]
  5. ಇಂಟರ್ನ್ಯಾಷಿನಲ್ ಚಿಲ್ರನ್'ಸ್ ಪೀಸ್ ಪ್ರೈಜ್, ೨೦೧೩[೧೨]
  6. ೨೦೧೩ರ ಕ್ಲಿಂಟನ್ ಗ್ಲೋಬಲ್ ಸಿತಿಜ಼ನ್ ಅವಾರ್ಡ್[೧೩]
  7. ಹಾರ್ವರ್ಡ್ ಯುನಿವರ್ಸಿತಿಯ ಪೀಟರ್ ಗೋಮ್ಸ್ ಹ್ಯೂಮಾನಿಟೇರಿಯನ್ ಅವಾರ್ಡ್[೧೪]
  8. ೨೦೧೩ರ ಅಣ್ಣ ಪೊಲಿಟ್ಕೊವ್ಸ್ಕಯ ಅವಾರ್ಡ್
  9. ಯೂರೋಪ್ ಖಂಡದ ೨೦೧೩ರ ಸಖರೋವ್ ಪ್ರಶಸ್ತಿ[೧೫]
  10. ೨೦೧೩ ರ, ನವೆಂಬರ್, ೧೨ ರಂದು ನ್ಯೂಯಾರ್ಕ್ ನಗರದಲ್ಲಿ ಜರುಗಿದ '೨೦೧೩ ರ ಸಾಲಿನ ಗ್ಲಾಮರ್ ವಿಮೆನ್ ಆಫ್ ದ ಯಿಯರ್ ಪ್ರಶಸ್ತಿ'ಯನ್ನು ಪ್ರದಾನ ಮಾಡಲಾಯಿತು.

ಉಲ್ಲೇಖಗಳು[ಬದಲಾಯಿಸಿ]