ಬೀಟೆ
| ಬೀಟೆ | |||||||||||||
|---|---|---|---|---|---|---|---|---|---|---|---|---|---|
| ವೈಜ್ಞಾನಿಕ ವಿಂಗಡಣೆ | |||||||||||||
|
|||||||||||||
|
|
|||||||||||||
| ಡಾಲ್ಬರ್ಜಿಯ ಲಾಟಿಫೋಲಿಯ ಡಾಲ್ಬರ್ಜಿಯ ನಿಯಾಗ್ರ |
ಬೀಟೆ (Rose wood)ಅತ್ಯುತ್ತಮ ಜಾತಿಯ ಮರಗಳಲ್ಲಿ ಒಂದು.ಶ್ರೀಗಂಧವನ್ನು ಬಿಟ್ಟರೆ ಅತ್ಯಂತ ಬೆಲೆಬಾಳುವ ಮರವಾಗಿದೆ.
ಪರಿವಿಡಿ |
ವೈಜ್ಞಾನಿಕ ವರ್ಗೀಕರಣ [ಬದಲಾಯಿಸಿ]
ಇದು ಫಾಬಸಿಯೆ(Fabaceae)ಕುಟುಂಬದಲ್ಲಿದೆ.ಡಲ್ಬೇರ್ಜಿಯ(Dalbergia)ವರ್ಗದಲ್ಲಿ ಹಲವಾರು ಪ್ರಭೇದಗಳಿದ್ದು, ಡಲ್ಬೇರ್ಜಿಯ ನಿಯಗ್ರ ಮತ್ತು ಡಲ್ಬೇರ್ಜಿಯ ಲಾಟಿಫೊಲಿಯ ಎಂಬ ಎರಡು ಪ್ರಭೇದಗಳನ್ನಷ್ಟೇ ಬೀಟೆ ಎನ್ನಬಹುದು.ಭಾರತದಲ್ಲಿ ಡಲ್ಬೇರ್ಜಿಯ ಲಾಟಿಫೊಲಿಯ ಪ್ರಭೇದ ಕಂಡುಬರುತ್ತದೆ.
ವೈಶಿಷ್ಟ್ಯಗಳು [ಬದಲಾಯಿಸಿ]
ಬೀಟೆ ಒಂದು ಪರ್ಣಪಾತಿ ಮರ.ಕರ್ನಾಟಕದಲ್ಲಿ ಸುಮಾರು ೧೦೦ ರಿಂದ ೨೦೦ ಸೆ.ಮೀ.ಮಳೆಯಾಗುವ ಪ್ರದೇಶದಲ್ಲಿ ಕಂಡು ಬರುತ್ತದೆ.ತೇವಾಂಶ ಹೆಚ್ಚಿರುವ ಪ್ರದೇಶಗಳಲ್ಲಿ ನಿತ್ಯಹರಿದ್ವರ್ಣ ವೃಕ್ಷವಾಗಿರುತ್ತದೆ.ಬಿಳಿಯ ಬಣ್ಣದ ಹೂ ಬಿಡುವುದು.ಇದರ ದಾರುವು ಗಡಸಾಗಿದ್ದು,ಬಲಯತವಾಗಿದೆ.ಚೇಗುವು ಕರಿನೇರಳೆ ಬಣ್ಣದ್ದಾಗಿ ಕರಿಗೆರೆಗಳೊಂದಿಗೆ ಅತ್ಯಂತ ಅಂದವಾಗಿರುತ್ತದೆ. ಉತ್ತಮವಾಗಿ ಹೊಳಪಿಗೆ ಬರುತ್ತದೆ.
ಉಪಯೋಗಗಳು [ಬದಲಾಯಿಸಿ]
ಬೀಟೆ ಬಹುಕಾಲ ಬಾಳಿಕೆ ಬರುವ ಮರ.ಇದು ಕೆತ್ತನೆ ಕೆಲಸಗಳಿಗೆ,ಅಲಂಕಾರಿಕ ಫಲಕಗಳ ತಯಾರಿಕೆಗೆ,ಬಿತ್ತಿಫಲಕಗಳು,ಅಲಮಾರುಗಳು ಇತ್ಯಾದಿಗಳಲ್ಲಿ ಉಪಯೋಗಿಸಲ್ಪಡುತ್ತದೆ.ಇದರ ತೆಳು ಹಾಳೆಗಳು (Veeners)ಅತ್ಯಂತ ಬೇಡಿಕೆಯ ವಸ್ತುವಾಗಿದೆ.ಇತ್ತೀಚೆಗೆ ಒಳಾಂಗಣ ಅಲಂಕಾರದಲ್ಲಿ ಹೆಚ್ಚಾಗಿ ಉಪಯೋಗದಲ್ಲಿದೆ.
ಆಧಾರ [ಬದಲಾಯಿಸಿ]
೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ