ಬಿ. ಜಯಾ
ಬಿ. ಜಯಾ | |
---|---|
Born | ೩ ಸೆಪ್ಟೆಂಬರ್ ೧೯೪೪ |
Died | ೦೩, ಜೂನ್ ೨೦೨೧ (ವಯಸ್ಸು ೭೬) ಬೆಂಗಳೂರು |
Occupation | ನಟಿ |
Awards | ಕರ್ನಾಟಕ ರಾಜ್ಯ ಅತ್ತ್ಯುತ್ತಮ ಪೋಷಕ ನಟಿ ಪ್ರಶಸ್ತಿ |
ಬಸಪ್ಪ ಜಯಾ (೩ ಸೆಪ್ಟೆಂಬರ್೧೯೪೪ – ೦೩ ಜೂನ್ ೨೦೨೧), ಬಿ. ಜಯಾ ಎಂದೇ ಪರಿಚಿತರಾದ ಭಾರತೀಯ ಕನ್ನಡ ಚಿತ್ರನಟಿ ಮತ್ತು ರಂಗಭೂಮಿ ಕಲಾವಿದೆ. ಸುಮಾರು ೩೫೦ಕ್ಕೂ ಹೆಚ್ಚಿನ ಚಲನಚಿತ್ರಗಳಲ್ಲಿ ಹಾಸ್ಯ-ಪೋಷಕ ಪಾತ್ರಗಳಲ್ಲಿ ನಟಿಸಿರುವ ಜಯಾ ಅವರಿಗೆ, ಗೌಡ್ರು ಚಿತ್ರದ ಅಭಿನಯಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿ-ಅತ್ತ್ಯುತ್ತಮ ಪೋಷಕ ನಟಿ ೨೦೦೪-೦೫ನೆ ಸಾಲಿನಲ್ಲಿ ದೊರೆತಿದೆ.
೧೯೫೬ ರಲ್ಲಿ ಬಾಲನಟಿಯಾಗಿ ’ಭಕ್ತ ಪ್ರಹ್ಲಾದ ಚಿತ್ರದಲ್ಲಿ ಸಿನಿಮಾರಂಗಕ್ಕೆ ಪಾದಾರ್ಪಣೆಮಾಡಿದ 'ಜಯ'ರವರು, ಹಲವಾರು ನಟರ ಜೊತೆ ನಟಿಸಿದ್ದಾರೆ. ದೈವಲೀಲೆ ನಟ ಬಾಲಕೃಷ್ಣರ ಜೊತೆ, ನರಸಿಂಹರಾಜು ಜೊತೆ, ವಿಧಿವಿಲಾಸ, ಮತ್ತೊಬ್ಬ ನಟಿ ಆರ್.ಟಿ.ರಮಾ ನಂತರ ಬಂದರು. 'ಜಯ' ಚಿತ್ರರಂಗಕ್ಕೆ ಬರುವ ಮೊದಲೇ ಎಂ.ಎನ್. ಲಕ್ಶ್ಮೀದೇವಿಯವರು, ನರಸಿಂಹರಾಜು, ಮತ್ತು ಬಾಲಣ್ಣನವರ ಜೊತೆ ಅಭಿನಯಿಸುತ್ತಿದ್ದರು. ಜಯ' ಚಲನಚಿತ್ರ ನಟ ನರಸಿಂಹರಾಜುರವರ ಜೊತೆಯಲ್ಲಿ ಸುಮಾರು ೩೫೦-೪೦೦ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ನಟರೆಲ್ಲಾ ಜೊತೆಯಾಗಿ ಕನ್ನಡ ಚಲನ ಚಿತ್ರದ ಹಾಸ್ಯದ ಪಾತ್ರಗಳನ್ನು ಜೀವಂತವಾಗಿರಿಸಿದ್ದಾರೆ. 1944 ರಲ್ಲಿ ಜನಿಸಿದ್ದ ಅವರು ಆದರೆ ಬಿ. ಜಯ ಅವರು ದಿನಾಂಕ 04-06-2021 ದಂದು ಬೆಂಗಳೂರಿನ ಅವರ ನಿವಾಸದಲ್ಲಿ ಇಂದು ನಿಧನರಾದರು.
ಮನೆತನ,ಬಾಲ್ಯ
[ಬದಲಾಯಿಸಿ]'ಜಯ'ರವರ ತಂದೆ ಬಸಪ್ಪನವರು. 'ಬಸಪ್ಪ'ನವರ ಹಿರಿಯರು, ಸುಮಾರು ೭೦-೮೦ ವರ್ಷಗಳ ಹಿಂದೆಯೇ ಕೊಳ್ಳೇಗಾಲದಿಂದ ಬೆಂಗಳೂರಿಗೆ ಬಂದು ವಾಸ್ತವ್ಯ ಹೂಡಿದ್ದರು. ಬಸಪ್ಪನವರು ಒಳ್ಳೆಯ ನಟರು. ಅವರು ಸಿನಿಮಾಗಳಲ್ಲಿ 'ರಾಕ್ಷಸ','ಜಲಂದರ' ಮುಂತಾದ ಪಾತ್ರಗಳಲ್ಲಿ ಅಭಿನಯಿಸಿ ಹೆಸರುವಾಸಿಯಾಗಿದ್ದರು. ಅವರ ಕೆಲವು ಚಿತ್ರಗಳು
- 'ಎಮ್ಮೆತಮ್ಮಣ್ಣ'
- 'ಬೀದಿ ಬಸವಣ್ಣ' ಮೊದಲಾದವುಗಳು.
'ಜಯರವರಿಗೆ ಸಂದ ಗೌರವ ಪ್ರಶಸ್ತಿಗಳು'
[ಬದಲಾಯಿಸಿ]- 'ಗೌಡ್ರು' ಸಿನಿಮಾಕ್ಕೆ 'ರಾಜ್ಯ ಪ್ರಶಸ್ತಿ'
- 'ಚಿತ್ರಪ್ರೇಮಿಗಳ ಸಂಘದಿಂದ ಹಲವಾರು ಪ್ರಶಸ್ತಿಗಳು' : ೧೯೬೪, ೬೫, ೭೧, ೭೫ ರಲ್ಲಿ
ಸಿನಿಮಾರಂಗದಲ್ಲಿ ಇನ್ನೂ ಬೇಡಿಕೆ ಇದ್ದಾಗಲೇ ಜಯ, 'ಟೆಲಿವಿಶನ್ ಕ್ಷೇತ್ರ'ಕ್ಕೆ ಬಂದರು. ಅಂದಿನ ದಿನಗಳಲ್ಲಿ ಮನೆಮಾತಾಗಿದ್ದ, ದೂರದರ್ಶನದಲ್ಲಿ, ಮನೆತನ ವೆಂಬ 'ಮೊದಲ ಧಾರಾವಾಹಿ'ಯಲ್ಲಿ ಕೆಲಸಮಾಡಿದರು. ಜಯ, ಪಂಡರಿಬಾಯಿಯವರ ನಾಟಕ ತಂಡದಲ್ಲಿ ಕೆಲಸಮಾಡಿದ್ದರು. ಹೀಗೆ, ಪಂಡರಿಬಾಯಿಯವರು, ತಮ್ಮ ಸ್ವಂತ ನಾಟಕ ಕಂಪೆನಿಯನ್ನು ಸುಮಾರು ೧೦ ವರ್ಷ ನಡೆಸಿದರು.
ಬಿ.ಜಯರವರ ಅನಿಸಿಕೆಗಳು
[ಬದಲಾಯಿಸಿ]೭೦ ವರ್ಷಕ್ಕೆ ಸುಮಾರು ೧೨೦ ವರ್ಷದ ನಟನೆಯ ಅನುಭವ ಸಿಕ್ಕಿದೆಯೆಂದು 'ಜಯ' ಹೆಮ್ಮೆಯಿಂದ ಹೇಳುತ್ತಾರೆ. ಕೈಲಾಗುವಷ್ಟು ದಿನ ತಮಗೆ ದೊರೆತ ಅವಕಾಶಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಆಶೆ ಅವರದು.