ಬಾಳೆ ಹೊನ್ನೂರು
ವಿಕಿಪೀಡಿಯ ಇಂದ
| ಬಾಳೆ ಹೊನ್ನೂರು | |
| ರಾಜ್ಯ - ಜಿಲ್ಲೆ |
ಕರ್ನಾಟಕ - ಚಿಕ್ಕಮಗಳೂರು |
| ನಿರ್ದೇಶಾಂಕಗಳು | |
| ವಿಸ್ತಾರ - ಎತ್ತರ |
km² - 714 ಮೀ. |
| ಸಮಯ ವಲಯ | IST (UTC+5:30) |
| ಜನಸಂಖ್ಯೆ - ಸಾಂದ್ರತೆ |
- /ಚದರ ಕಿ.ಮಿ. |
| ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 577 112 - +08266 - |
ಬಾಳೆ ಹೊನ್ನೂರು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಒಂದು ಊರು. ಈ ಊರು ಭದ್ರಾ ನದಿಯ ತೀರದಲ್ಲಿ ಸ್ಥಿತವಾಗಿದ್ದು ಒಳ್ಳೆಯ ಪ್ರಕೃತಿಯನ್ನು ಹೊಂದಿದೆ. ವೀರಶೈವ ಪಂಥದ ಪ್ರಮುಖ ಮಠಗಳಲ್ಲಿ ಒಂದಾದ ಶ್ರೀ ರಂಭಾಪುರಿ ಮಠವು ಇಲ್ಲಿಯೆ ಇದೆ. ಇದು ಕರ್ನಾಟಕದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಬಾಳೆ ಹೊನ್ನೂರಲ್ಲಿ ಸುಮಾರು ೮೦ ಇಂಚಿನ ಪ್ರತಿ ವರ್ಷ ಮಳೆಯಾಗುತ್ತಿದ್ದು, ಪ್ರಮುಖವಾಗಿ ಕಾಫಿ ಎಸ್ಟೆಟ್‌ಗಳು, ಅಡಿಕೆ, ಮೆಣಸು, ವೆನಿಲಾ ಹಾಗೂ ಇತರೆ ಮಸಾಲೆ ಪದಾರ್ಥಗಳನ್ನು ಬೆಳೆಯುತ್ತಾರೆ. ಇಲ್ಲಿಂದ ಚಿಕ್ಕಮಗಳೂರು, ಕುದುರೆಮುಖ, ಶ್ರಿಂಗೇರಿ , ಶಿವಮೊಗ್ಗಕ್ಕೆ ಒಳ್ಳೆಯ ಸಂಪರ್ಕಹೊಂದಿದೆ.
ಬಾಳೆ ಹೊನ್ನುರು ಸೇತುವೆ[ಬದಲಾಯಿಸಿ]
ಬಾಳೆ ಹೊನ್ನುರು ಸೇತುವೆಯು ಮೈಸೂರು ರಾಜ್ಯದ ಮೊದಲ ಯೊಜನೆವಾಗಿದ್ದು, ೧೯೪೬ರಲ್ಲಿ ಭದ್ರನದಿಯ ಅಡ್ಡವಾಗಿ ಕಟ್ಟಲಾಗಿದೆ.