ಬಾಟಲಿ
ವಿಕಿಪೀಡಿಯ ಇಂದ
ಬಾಟಲಿಯು ಪ್ರಧಾನಭಾಗಕ್ಕಿಂತ ಕಿರಿದಾದ ಕಂಠಭಾಗ ಮತ್ತು ಒಂದು "ಬಾಯಿ"ಯನ್ನು ಹೊಂದಿರುವ ಗಡುಸಾದ ಧಾರಕ. ಇದಕ್ಕೆ ಪ್ರತಿಯಾಗಿ, ಜಾಡಿ ಅಥವಾ ಹೂಜಿಯು ತುಲನಾತ್ಮಕವಾಗಿ ದೊಡ್ಡದಾದ ಬಾಯಿ ಅಥವಾ ರಂಧ್ರವನ್ನು ಹೊಂದಿರುತ್ತದೆ. ಬಾಟಲಿಗಳು ಹೆಚ್ಚಾಗಿ ಗಾಜು, ಜೇಡಿಮಣ್ಣು, ಪ್ಲಾಸ್ಟಿಕ್, ಆಲ್ಯಮಿನೀಯಂ ಅಥವಾ ಇತರ ಅಭೇದ್ಯ ವಸ್ತುಗಳಿಂದ ನಿರ್ಮಿಸಲಾಗಿರುತ್ತವೆ, ಮತ್ತು ಸಾಮಾನ್ಯವಾಗಿ ನೀರು, ಹಾಲು, ಅಮಾದಕ ಪಾನೀಯಗಳು, ಬಿಯರ್, ವೈನ್, ಅಡುಗೆ ಎಣ್ಣೆ, ಔಷಧಿ, ಶ್ಯಾಂಪೂ, ಶಾಯಿ, ಮತ್ತು ರಾಸಾಯನಿಕಗಳಂತಹ ದ್ರವಗಳನ್ನು ಶೇಖರಿಸಿಡಲು ಬಳಸಲ್ಪಡುತ್ತವೆ.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |