ವಿಷಯಕ್ಕೆ ಹೋಗು

ಬದುಕು ಬದಲಿಸಬಹುದು (ಪುಸ್ತಕ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬದುಕು ಬದಲಿಸಬಹುದು
ಚಿತ್ರ:Cover image
ಬದುಕು ಬದಲಿಸಬಹುದು
ಲೇಖಕರುನೇಮಿಚಂದ್ರ (ಲೇಖಕಿ)
ದೇಶಭಾರತ
ಭಾಷೆಕನ್ನಡ
ವಿಷಯಲೇಖನಗಳು
ಪ್ರಕಾಶಕರುನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್
ಪ್ರಕಟವಾದ ದಿನಾಂಕ
೨೦೧೪, ೧೦ನೇ ಮುದ್ರಣ
ಪುಟಗಳು೧೭೨
ಐಎಸ್‍ಬಿಎನ್978-81-7302-700-0

ಬದುಕು ಮುಗಿಯದ ಪಯಣ, ಅಲ್ಲಿ ಸೋಲಿಗಿಂತ ಗೆಲುವು ಮುಖ್ಯ ಎನ್ನುವುದೇ ನೇಮಿಚಂದ್ರ ಅವರು ಬರೆದ ಈ ಕೃತಿಯ ಮುಖ್ಯ ತಾತ್ಪರ್ಯ.

ಈ ಸಂಕಲನದ ಒಂದೊಂದೇ ಲೇಖನ ಓದುತ್ತ ಹೋದಂತೆ ಬದುಕಿನ ಹಲವು ಮುಖಗಳ ಪರಿಚಯವಾಗುತ್ತದೆ. ನೋವು ನಲಿವಿನ, ನಿಟ್ಟುಸಿರಿನ ತುಣುಕುಗಳು ಸೇರಿಯೇ ಈ ಬದುಕು ನಡೆಯುತ್ತದೆ ಎಂಬುದನ್ನು, ಸೋಲನ್ನು, ನೋವನ್ನು, ನಿರಾಶೆಯನ್ನು ಕೆಲವೊಮ್ಮೆ ತನ್ನ ತಪ್ಪಿಲ್ಲದಿದ್ದರೂ ಒದಗಿಬರುವ ಅಪಮಾನವನ್ನು ಹೇಗೆ ಎದುರಿಸಬೇಕೆಂಬುದನ್ನು, ಮುಗ್ಗರಿಸಿ ಬಿದ್ದರೂ ಎದ್ದು ಕೊಡವಿ ನಡೆಯುವ ತಾಕತ್ತನ್ನು, ಸತ್ತು ಮುಗಿಸದೆ ಇದ್ದು ಬದುಕುವ ದಿಟ್ಟತನವನ್ನೂ, ಮತ್ತೆ ಮತ್ತೆ ಪ್ರಾರಂಭಿಸಬಲ್ಲ ಛಲವನ್ನು ಓದುಗರ ತಲೆಗೂ ಹೊಗಿಸುವ ಲೇಖನಗಳಿವು.

ಈ ಕೃತಿಯ ಲೇಖಕಿ ನೇಮಿಚಂದ್ರ ವೃತ್ತಿಯಿಂದ ಎಂಜಿನಿಯರ್. ಪ್ರವೃತ್ತಿಯಿಂದ ಲೇಖಕಿ. ಬರಹದಲ್ಲಿ ವಿಶಿಷ್ಟ ಶೈಲಿಯನ್ನು ರೂಢಿಸಿಕೊಂಡವರು. ಸಮಾಜದ ಬಗ್ಗೆ, ಅದರಲ್ಲೂ ಮಹಿಳೆಯರ ಬಗ್ಗೆ ವಿಶೇಷ ಕಳಕಳಿ. ಪ್ರವಾಸಾಸಕ್ತ ಸಾಹಸಿ. ಕತೆಗಾರ್ತಿಯಾಗಿ ಅಂಕಣಕಾರ್ತಿಯಾಗಿ ಪರಿಚಿತರು.[]

  • ಬದುಕು ಬದಲಿಸಬಹುದು ಪ್ರತಿಷ್ಠಿತ ಡಾ|| ಹಾ. ಮಾ. ನಾ. ಪ್ರಶಸ್ತಿ ಪುರಸ್ಕೃತ ಕೃತಿ.

ಉಲ್ಲೇಖ

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2016-03-15. Retrieved 2014-06-05.