ವಿಷಯಕ್ಕೆ ಹೋಗು

ಬಕುಲದ ಹಣ್ಣು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ

[ಬದಲಾಯಿಸಿ]
ಬಕುಲದ ಹಣ್ಣು

ಪ್ರಕೃತಿ ನಮಗೆ ಹತ್ತಾರು ಹಣ್ಣು ಹಂಪಲುಗಳನ್ನು ನೀಡಿದೆ.ಅವುಗಳಲ್ಲಿ ಬಕುಲದ ಹಣ್ಣು ಸಹ ಒಂದು.ಜನವರಿಯಿಂದ ಮೇ ತಿಂಗಳವರೆಗೆ ದೊರಕುವ ಬಕುಲದ ಹಣ್ಣನ್ನು ಆಂಗ್ಲ ಭಾಷೆಯಲ್ಲಿ 'ಸ್ಪ್ಯಾನಿಷ್ ಚೆರ್ರಿ ಎಂದು ಕರೆಯುತ್ತಾರೆ.ಇದರ ಸಸ್ಯ ಶಾಸ್ತ್ರೀಯ ಹೆಸರು 'ಮಿಮುಸೋಪ್ಸ್ ಎಲಂಗಿ'. ಭಾರತವೇ ಮೂಲ ಆದ ಬಕುಲವನ್ನು ರಂಜಲು,ಪಗಡೆ ಮರ,ಕೇಸರ ಏಲಂಗಿ ಎಂದೂ ಕರೆಯುತ್ತಾರೆ.[]

ಸ್ವರೂಪ

[ಬದಲಾಯಿಸಿ]

ನಕ್ಷ್ಹತ್ರಾಕಾರದ ಸುಗಂದಿ ಬಿಳಿ ಹೂಗಳೂ,ಹೊಳಪಿನ ಹಸಿರು ಕಾಯಿಗಳು ಪಕ್ವಗೊಂಡು ಕೇಸರಿ ಹಣ್ಣಾಗುತ್ತದೆ.ಇವು ಸವಿಯಾಗಿರುತ್ತವೆ.ಪ್ರತೀ ಹಣ್ಣಿನಲ್ಲು ಸಪೊಟಾ ಬೀಜಾಕ್ರುತಿಯ ಕಂದು ಬಣ್ಣದ ಬೀಜವಿರುತ್ತದೆ.ಚೆಂದದ ಹೂಗಳನ್ನು ಮಾಲೆ ಮಾಡಿ ಬಿಟ್ಟರೆ ಬಹಳ ದಿನದವರೆಗೂ ಬಾಡುವುದಿಲ್ಲ.

ಉಪಯೋಗ

[ಬದಲಾಯಿಸಿ]
  1. ಮಲೆನಾಡಿನ ಜನರು ಇಷ್ಟಪಟ್ಟು ತಿನ್ನುವ ಬಕುಲದಲ್ಲಿ ಹಲವಾರು ಔಷಧಿಯ ಗುಣಗಳಿವೆ.ಹಣ್ಣುಗಳು ಸಸಾರಜನಕ,ಸುಣ್ಣ,ರಂಜಕವನ್ನು ಒಳಗೊಂಡಿದೆ.ಇದರ ರೆಂಬೆ ಮತ್ತು ಕಡ್ಡಿಯನ್ನು ಹಲ್ಲುಜ್ಜಲು ಉಪಯೋಗಿಸಬಹುದು.ತೊಗಟೆಯು ಅತಿಸಾರ ಮತ್ತು ಆಮಶಂಕೆ ಕಾಯಿಲೆ ಗುಣಪಡಿಸಲು ಬಳಕೆಯಾಗುತ್ತದೆ.ಹೂವನ್ನು ಒಣಗಿಸಿ ತಲೆನೋವಿಗೆ ಮದ್ದು ತಯಾರಿಸುತ್ತಾರೆ.ಇದರ ಬೀಜದಿಂದ ಮಲಬದ್ದತೆಗೆ,ತೊಗಟೆಯಿಂದ ಹುಳುಕುಹಲ್ಲು ಮತ್ತು ಗಾಯಕ್ಕೆ ಔಷಧ ತಯಾರಿಸಬಹುದು.
  2. ಹೂವನ್ನು ಸುಗಂಧ ದ್ರವ್ಯದ ತಯಾರಿಕೆಗೂ ಬಳಸಬಹುದು.ಬೀಜಗಳಿಂದ ಸಸ್ಯಾಭಿವೃದ್ಧಿ ಮಾಡಬಹುದು.ಒಣಹವೆಯಲ್ಲಿ ಬೆಳವಣಿಗೆ ತಡವಾಗುತ್ತದೆ.ಒಂದೇ ಬಗೆಯ ಸಸಿಗಳನ್ನು ಬೆಳೆಸಿ ಒದಗಿಸುವ ಅರಣ್ಯ ಇಲಾಖೆ ಇವುಗಳ ಕಡೆಯೂ ಗಮನ ಹರಿಸಿದರೆ ಅಳಿವಿನ ಅಂಚಿನಲ್ಲಿರುವ ಸಸ್ಯಗಳ ಸಂರಕ್ಷಣೆ ಮಾಡಿದಂತಾಗುತ್ತದೆ.

ಉಲ್ಲೇಖ

[ಬದಲಾಯಿಸಿ]
  1. "ಕಾಡು ಹಣ್ಣು ಬಕುಲ". prajavani.net. 2012-02-14. Retrieved 2015-03-19.[ಶಾಶ್ವತವಾಗಿ ಮಡಿದ ಕೊಂಡಿ]