ರಂಜ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Mimusops elengi
Scientific classification
ಸಾಮ್ರಾಜ್ಯ:
plantae
Division:
ವರ್ಗ:
ಗಣ:
ಕುಟುಂಬ:
ಕುಲ:
ಮಿಮುಸೋಪ್ಸ್
ಪ್ರಜಾತಿ:
M. elengi L.
Binomial name
Mimusops elengi
L.


ರಂಜ(ಪಗಡೆಮರ)ಎಂಬುದು ಮುಖ್ಯವಾಗಿ ಪಶ್ಚಿಮ ಘಟ್ಟ ಹಾಗೂ ಸಹ್ಯಾದ್ರಿಪ್ರದೇಶದ ನಿತ್ಯಹರಿದ್ವರ್ಣಕಾಡುಗಳಲ್ಲಿ ಕಂಡುಬರುವ ಒಂದು ದೊಡ್ಡ ಪ್ರಮಾಣದ ಮರ.ಸುಂದರವಾಗಿ ದಟ್ಟ ಹಂದರ ಹೊಂದಿದ ಇದನ್ನು ಉದ್ಯಾನವನಗಳಲ್ಲಿಯೂ ಬೆಳೆಸುತ್ತಾರೆ. ಶುಷ್ಕ ನಿತ್ಯಹರಿದ್ವರ್ಣ ಕಾಡುಗಳ, ಜಂಬಿಟ್ಟಿಗೆ ಪ್ರದೇಶಗಳಲ್ಲಿ ಇದು ಬೆಳೆದಾಗ ಬೆಳವಣಿಗೆ ಅಷ್ಟು ಹುಲುಸಾಗಿರುವುದಿಲ್ಲ. ಮೈದಾನ ಪ್ರದೇಶಗಳಲ್ಲಿ ಇದು ಕಂಡು ಬರುವುದಿಲ್ಲ. ಬಿಳಿಯ ನಕ್ಷತ್ರಾಕಾರದ ಕಂಪಿನ ಹೂಗಳು ಫೆಬ್ರವರಿ-ಎಪ್ರಿಲ್ ತಿಂಗಳುಗಳಲ್ಲಿ ಮೂಡಿ ಕಾಯಿಗಳು ಆಗಸ್ಟ್-ಸೆಪ್ಟೆಂಬರ್‍ಗಳಲ್ಲಿ ಬಂದು ಮುಂಬರುವ ಫೆಬ್ರವರಿ-ಜೂನ್‍ವರೆಗೆ ಬೆಳೆಯುವುವು. ಕರ್ನಾಟಕದಲ್ಲಿ, ನಿತ್ಯ ಹರಿದ್ವರ್ಣ ಹಾಗೂ ತೇವ ಪರ್ಣಪಾತಿ ಕಾಡುಗಳಲ್ಲಿ ಹಳ್ಳಗಳ ಆಸುಪಾಸು ಕಂಡುಬರುತ್ತದೆ. ಸುವರ್ಣ ಕೇದಿಗೆ ಮತ್ತು ಮುಂಡಗ ಇವು ಕರ್ನಾಟಕದಲ್ಲಿ ಆಗುಂಬೆ ವರಾಹಿ,ಹುಲಿಕಲ್ ಕಂಡುಬರುವ ಇತರ ಪ್ರಭೇದಗಳು.

ಇದಕ್ಕೆ ಬಕುಳ ಎಂಬ ಹೆಸರೂ ಇದೆ , ಬಕುಲ, ಚಿರಪುಷ್ಪ, ಮಧುಗಂಧ ಮೊದಲಾದ ಸಂಸ್ಕೃತದ ಹೆಸರನ್ನು ಹೊಂದಿದೆ. ಇಂಗ್ಲೀಷಿನಲ್ಲಿ ಬುಲೆಟ್ ವುಡ್ ಟ್ರೀ ಎಂಬ ಹೆಸರಿದೆ

ಇದು ಭಾರತದ ಎಲ್ಲೆಡೆ ಕಾಣಸಿಗುತ್ತವೆ. ಬುಲೆಟ್ ವುಡ್ ಟ್ರೀ ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ಉತ್ತರ ಆಸ್ಟ್ರೇಲಿಯಾದಲ್ಲಿ ನಾವು ಕಾಣಬಹುದು. ತೋಟಗಳಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಹೆಚ್ಚಾಗಿ ಕಂಡುಬರುವಕ ಈ ಮರದ ಹೂಗಳು ಪರಿಮಳಭರಿತವಾಗಿದ್ದು ಆಹ್ಲಾದಕರವಾಗಿದೆ.ಹಿಂದಿಯಲ್ಲಿ ಮೌಲ್ಯಶ್ರೀಅನ್ನುವರು

ಸಸ್ಯಶಾಸ್ತ್ರೀಯ ವರ್ಗೀಕರಣ[ಬದಲಾಯಿಸಿ]

ಇದು ಸಪೋಟಾಸಿಯೆ ಕುಟುಂಬಕ್ಕೆ ಸೇರಿದ್ದು,ಮಿಮುಸೊಪ್ಸ್ ಎಲಂಗಿ ಎಂಬ ಸಸ್ಯಶಾಸ್ತ್ರೀಯ ಹೆಸರಿದೆ.ತುಳು ಬಾಷೆಯಲ್ಲಿ 'ರೆಂಜ' ಎಂದು ಹೆಸರು.

ಸಸ್ಯದ ಗುಣಲಕ್ಷಣಗಳು[ಬದಲಾಯಿಸಿ]

ದೊಡ್ಡಪ್ರಮಾಣದ ಹೊಳಪಿನ ಎಲೆಗಳಿಂದ ಕೂಡಿದ ಮರ.ಬಿಳಿಯ ನಕ್ಷತ್ರಾಕಾರದ ಹೂವುಗಳಿವೆ.ಹೂವಿಗೆ ನವಿರಾದ ಒಳ್ಳೆಯ ಪರಿಮಳವಿದೆ.ದಾರುವು ಬಹಳ ಗಡುಸಾಗಿದ್ದು ತೂಕವುಳ್ಳದ್ದಾಗಿದೆ.ಒಳ್ಳೆಯ ಬಾಳಿಕೆ ಬರುತ್ತದೆ.

ರಂಜ ಮರದ ಕಾಂಡ.

ಹಾಗೆ ತೊಗಟೆ ಬೂದು ಕಪ್ಪು; ಚಿಪ್ಪು ಚಿಪ್ಪಾಗಿರುವುದು. ಉತ್ತಮ ಸ್ಥಳ ಗುಣಗಳಲ್ಲಿ ಹುಲುಸಾಗಿ ಬೆಳೆದು ನೇರಕಾಂಡವನ್ನು ಹೊಂದಿರುವುದು ತಿರುಳ್ಗಾಯಿಗಳು ಸುಮಾರು 2.5 ಸೆ.ಮೀ ಉದ್ದವಿದ್ದು ಕಿತ್ತಳೆ ಹಳದಿ ಬಣ್ಣದಿಂದ ಕೂಡಿ ಒಂದು ಬೀಜವನ್ನು ಹೊಂದಿರುತ್ತವೆ. ಬೀಜಗಳು ಕಂದು ಬಣ್ಣ ಹೊಂದಿ ಗಡುಸಾದ ಸಿಪ್ಪೆಯಿಂದ ಕೂಡಿ ನುಣುಪಾಗಿ ಹೊಳೆಯುತ್ತಿರುವುವು. ಇವುಗಳು ಗೀವಶಕ್ತಿ ಕಡಿಮೆ. ನೆರಳು ಸಹಿಸುವ ಮರ ನಿಧಾನದ ಬೆಳೆಯ ಗತಿ.

ಒಗರು ರಸಾಧಿಕ್ಯತೆಯನ್ನು ಹೊಂದಿದೆ. ಇದರ ಎಲೆಗಳು ನೇರಳೆ ಹಣ್ಣಿನ ಎಲೆಗಳಂತಿವ ಕಾಯಿಯು ಹಸಿರು ಬಣ್ಣದಾಗಿದ್ದು, ಹಣ್ಣಾದಾಗ ಕಿತ್ತಲೆ ಅಥವಾ ಹಳದಿ ಬಣ್ಣ ಪಡೆಯುತ್ತದೆ. ಹೂವಿನಲ್ಲಿ ತೈಲಾಂಶವಿದೆ. ಇದರ ತೊಗಟೆಯಲ್ಲಿ ಟ್ಯಾನಿನ್ ಅಂಶವಿದೆ. ಶರ್ಕರ ಪಿಷ್ಟದ ಅಂಶವು ವಿಫುಲವಾಗಿದೆ. ಹಣ್ಣು ಸಕ್ಕರೆಯ ಅಂಶ ಹಾಗೂ ಸೆಪೊನಿನ್ ಹೊಂದಿದೆ. ಬೀಜದಲ್ಲಿಯೂ ತೈಲಾಂಶವಿದೆ.[೧]

ಬಕುಲ ಹಣ್ಣು

ಉಪಯೋಗಗಳು[ಬದಲಾಯಿಸಿ]

ದಾರುವು ಕಟ್ಟಡ ನಿರ್ಮಾಣದಲ್ಲಿ ಉಪಯೋಗವಾಗುತ್ತದೆ.ಇದರ ಬೀಜದಿಂದ ಸಿಗುವ ಎಣ್ಣೆಯನ್ನು ಅಡಿಗೆಗೆ,ಔಷಧಿಗಳಿಗೆ ಉಪಯೋಗಿಸುತ್ತಾರೆ.ತೊಗಟೆ ಹಳ್ಳಿಮದ್ದಿನಲ್ಲಿ ಉಪಯೋಗವಾಗುತ್ತದೆ. ಹೂವಿನಿಂದ ಸುಗಂಧದ್ರವ್ಯದೊರೆಯುತ್ತದೆ. ಮುಖ್ಯವಾಗಿ ಬಕುಲವು ಕಫ ಪಿತ್ತ ಶಾಮಕವಾಗಿದೆ.

ಆಧಾರ ಗ್ರಂಥಗಳು[ಬದಲಾಯಿಸಿ]

೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ

  1. https://www.google.co.in/search?q=bullet+wood+tree&biw=1116&bih=493&tbm=isch&tbo=u&source=univ&sa=X&ei=PqMJVayqGMGP7Abph4CQAg&sqi=2&ved=0CCgQsAQ
"https://kn.wikipedia.org/w/index.php?title=ರಂಜ&oldid=1029806" ಇಂದ ಪಡೆಯಲ್ಪಟ್ಟಿದೆ