ಫೆರಿಟ್ ಒರ್ಹಾನ್ ಪಾಮುಕ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಒರ್ಹಾನ್ ಪಾಮುಕ್

Orhan Pamuk in 2008
ಜನನ ಫೆರಿಟ್ ಒರ್ಹಾನ್ ಪಾಮುಕ್
ಜೂನ್ ೭, ೧೯೫೨ (1952-06-07) (ವಯಸ್ಸು ೬೦)
ಇಸ್ತಾಂಬುಲ್, ಟರ್ಕಿ
ವೃತ್ತಿ ಕಾದಂಬರಿಕಾರ,
ಚಿತ್ರಕಥೆ ರಚನಕಾರ,
ಪ್ರಾದ್ಯಾಪಕ (ಕೊಲಂಬಿಯಾ ವಿಶ್ವವಿದ್ಯಾಲಯ)
ರಾಷ್ಟ್ರೀಯತೆ ಟರ್ಕಿಶ್
Period ೧೯೭೪-ಪ್ರಸ್ತುತ
ಪ್ರಕಾರ/ಶೈಲಿ ಕಾದಂಬರಿ
ವಿಷಯ East–West dichotomy, literature, painting
ಸಾಹಿತ್ಯ ಚಳುವಳಿ Postmodern literature
ಪ್ರಮುಖ ಕೆಲಸ(ಗಳು) ಟೆಂಪ್ಲೇಟು:Ubl
ಪ್ರಮುಖ ಪ್ರಶಸ್ತಿ(ಗಳು) ಟೆಂಪ್ಲೇಟು:Awd ಟೆಂಪ್ಲೇಟು:Awd
Spouse(s) Aylin Türegün
(m. 1982, div. 2001)
ಪಾಲುದಾರ(ರು) ಕಿರಣ್ ದೇಸಾಯಿ
Relative(s) Şevket Pamuk (brother)
Hümeyra Pamuk (half-sister)


www.orhanpamuk.net

ಒಬ್ಬ ಕಾದಂಬರಿಕಾರ ಹಾಗು 'ಅಮೆರಿಕದ ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ತೌಲನೊಕ ಸಾಹಿತ್ಯದ ಪ್ರಾಧ್ಯಾಪಕ'ರಾಗಿ ದುಡಿಯುತ್ತಿರುವ 'ಫೆರಿಟ್ ಒರ್ಹಾನ್ ಪಾಮುಕ್' (Ferit Orhan Pamuk) ಹುಟ್ಟಿ ಬೆಳೆದದ್ದು ಇಸ್ತಾಂಬುಲ್ ಶಹರಿನ ಒಂದು ಶ್ರೀಮಂತ ಕುಟುಂಬದಲ್ಲಿ. ಅವರ ಕುಟುಂಬದಲ್ಲಿ ಪಾಶ್ಚಾತ್ಯ ಸಂಸ್ಕತಿಗೆ ಹೆಚ್ಚಿಗೆ ಆದ್ಯತೆ ಕೊಡುತ್ತಿದ್ದರು. ಅದಲ್ಲದೆ ಇಸ್ತಾಂಬುಲ್ ಪಟ್ಟಣವೂ ಇಸ್ಲಾಂ ಮತ್ತು ಪಾಶ್ಚಾತ್ಯ ಸಂಸ್ಕ್ರುತಿಯ ಆಗರವಾಗಿತ್ತು. ಪಾಮುಕ್ ರವರ ಕೃತಿಗಳಲ್ಲಿ ಈ ಸಂಗಮ ಕೊಡುಕೊಳ್ಳುವಿಕೆಯ ಕಥನ ಪ್ರಧಾನವಾಗಿ ಕಾಣಬರುತ್ತದೆ.

ಪರಿವಿಡಿ

ಜನನ ಮತ್ತು ವಿದ್ಯಾಭ್ಯಾಸ [ಬದಲಾಯಿಸಿ]

ಪಾಮುಕ್, ಮೂಲತಃ ಒಬ್ಬ ಇಂಜಿನಿಯರ್, ೧೯೫೨ ರಲ್ಲಿ ಜನಿಸಿದರು. ಆದರೆ ಅದನ್ನು ಮದ್ಯದಲ್ಲೇ ಕೈಬಿಟ್ಟು, ಪತ್ರಿಕೋದ್ಯಮದ ಕಡೆವಾಲಿದರು. ೯೮೨ ರಲ್ಲಿ ಅವರು ಪ್ರಕಟಿಸಿದ ಕಾದಂಬರಿ 'ಕೆವ್ ಡೆಟ್ ಬೇ ವ್ ಒಗುಲ್ಲರಿ' ದೇಶೀಯ ಪ್ರಶಸ್ತಿಯೊಂದನ್ನು ಗಳಿಸಿದರು. ೧೯೮೩ ರಲ್ಲಿ ಬರೆದ ಎರಡನೆಯ ಕಾದಂಬರಿ, 'ಸೀಸ್ಸಿವ್ ಎವ್'ಸಹಿತ ಪ್ರಶಸ್ತಿಗೆ ಪಾತ್ರವಾಯಿತು.

'ಬೆಯಾಜ್ ಕಾಲೆ' [ಬದಲಾಯಿಸಿ]

'ಪಾಮುಕ್ 'ರಿಗೆ ಅತ್ಯಂತ ವ್ಯಾಪಕವಾದ ಹೆಸರನ್ನು ತಂದುಕೊಟ್ಟ ಕಾದಂಬರಿ,'ಬೆಯಾಜ್ ಕಾಲೆ' (ಬಿಳಿಯ ಕೋಟೆ ಮನೆ) ೧೯೮೫ ರಲ್ಲಿ ಬರೆದದ್ದು. ಇದು ಟರ್ಕಿದೇಶದ ಸಾಂಸ್ಕೃತಿಕ ಕಥನವೆನ್ನುವಷ್ಟು ವಸ್ತುನಿಷ್ಠವಾಗಿದೆ. ಈ ಕೃತಿಯ ನಿರೂಪಕ ೧೭ ನೆಯ ಶತಮಾನದ ಇಟಲಿದೇಶದ ಯುವ ವಿದ್ವಾಂಸ. ಈತ ತುರುಷ್ಕರ ದಂಡನಾಯಕ,'ಹೋಜಾ' ಎಂಬುವರ ಗುಲಾಮರಾಗಿದ್ದರು. ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹಕ್ಕೆ ಸಿಲುಕಿದ್ದ 'ಹೋಜಾ' ತನ್ನ ಗುಲಾಮನ ಹತ್ತಿರವೇ ಶಿಷ್ಯವೃತ್ತಿಯನ್ನು ಅಭ್ಯಾಸಮಾಡಿದ.

ಕಾದಂಬರಿಗಳು [ಬದಲಾಯಿಸಿ]

'ದ ಬ್ಲ್ಯಾಕ್ ಬುಕ್' 'ಮೈ ನೇಮ್ ಈಸ್ ರೆಡ್' 'ನ್ಯೂ ಲೈಫ್' 'ಸ್ನೋ' 'ಮ್ಯೂಸಿಯಮ್ ಆಫ್ ಇನೊಸೆನ್', ಇವು ಪಾಮುಕ್ ಬರೆದ ಕೆಲವು ಕಾದಂಬರಿಗಳ ಇಂಗ್ಲೀಷ್ ಅನುವಾದಗಳು. ಟರ್ಕಿಯಲ್ಲಿ ಹಿಂದೆ ನಡೆದ ೩೦ ಸಾವಿರ ಕುರ್ಡಿಷ್ ಜನರ ಹತ್ಯೆ ಮತ್ತು ೧೦ ಲಕ್ಷ ಆರ್ಮೇನಿಯನ್ನರ ಹತ್ಯೆಗೆ 'ಒರ್ಹಾನ್ ಪಾಮುಕ್' ಹೇಳಿಕೆ ನೀಡಿದ ಕಾರಣ ಅವರ ವಿರುದ್ಧ ಸರಕಾರ ಕಾನೂನು ಕ್ರಮ ಜರುಗಿಸಿ ಸೆರೆಮನೆವಾಸ ವಹಿಸಲು ಮುಂದಾಯಿತು. ಆಗ ಜಗತ್ತಿನ ಮುಖ್ಯ ಸಾಹಿತಿಗಳು ಅದರ ಪರವಾಗಿ ಟರ್ಕಿಯ ಸರಕಾರಕ್ಕೆ ಪತ್ರ ಬರೆದಿದ್ದರು. ಟರ್ಕಿ ಸರಕಾರ ಕೊನೆಗೆ ಪಾಮುಕ್ ರವರನ್ನು ಶಿಕ್ಷಿಸುವ ವಿಚಾರವನ್ನು ಕೈಬಿಟ್ಟರು. ಒರ್ಹಾನ್ ಪಾಮುಕ್ ಇಂದಿನ ದಿನಗಳಲ್ಲಿ ಪ್ರಚಲಿತದಲ್ಲಿರುವ ಪ್ರಮುಖ ಕಾದಂಬರಿಕಾರರಲ್ಲಿ ಮುಖ್ಯರೆಂದು ಪರಿಗಣಿಸಲ್ಪಟ್ಟಿದ್ದಾರೆ.

'ಸಾಹಿತ್ಯದ ನೋಬೆಲ್ ಪ್ರಶಸ್ತಿ ವಿಜೇತ' [ಬದಲಾಯಿಸಿ]

ಸನ್ ೨೦೦೬ ರಲ್ಲಿ 'ಒರ್ಹಾನ್ ಪಾಮುಕ್ 'ರಿಗೆ 'ಸಾಹಿತ್ಯದ ನೋಬೆಲ್ ಪ್ರಶಸ್ತಿ' ದೊರೆಯಿತು. ತಮ್ಮ ಮಾತೃಭೂಮಿ ಟರ್ಕಿಗೆ ಮೊದಲನೆಯ ಮತ್ತು 'ಇದುವರೆವಿಗೆ ಏಕೈಕ ನೋಬೆಲ್ ಪ್ರಶಸ್ತಿ ತಂದುಕೊಟ್ಟ ಹೆಗ್ಗಳಿಕೆ'ಯನ್ನು 'ಒರ್ಹಾನ್ ಪಾಮುಕ್, ಗಳಿಸಿದ್ದಾರೆ.

ಬಾಹ್ಯ ಸಂಪರ್ಕ [ಬದಲಾಯಿಸಿ]